New car launches: ಹೊಸ ಕಾರು ಖರೀದಿಸುತ್ತಿದ್ದೀರಾ? ಏಪ್ರಿಲ್‌ನಲ್ಲಿ 5 ಎಸ್‌ಯುವಿಗಳು ಬಿಡುಗಡೆಗೆ ಸಜ್ಜು!
New car launches: ಭಾರತದಲ್ಲಿ ಕಾರು ಖರೀದಿಸುವವರ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ. ಮಧ್ಯಮ ವರ್ಗದವರಿಗಾಗಿ ಕೈಗೆಟುಕುವ ಬೆಲೆಯ ಕಾರುಗಳನ್ನು ತಯಾರಕರು ಪರಿಚಯಿಸುತ್ತಿದ್ದು, ಸದ್ಯ ದೇಶದಲ್ಲಿ ಬಹುತೇಕ ಎಲ್ಲಾ ಬ್ರಾಂಡ್‌ಗಳು ಲಾಭದಲ್ಲಿವೆ. ಕಳೆದ ತಿಂಗಳು (ಮಾರ್ಚ್) ಕೂಡ ಹೆಚ್ಚಾಗಿ ಐಷಾರಾಮಿ ಕಾರುಗಳು ಬಿಡುಗಡೆಯಾಗಿದ್ದವು. ಆದರೆ ಈಗ ಏಪ್ರಿಲ್ ತಿಂಗಳು ಸಾಮೂಹಿಕ ಮಾರುಕಟ್ಟೆ ಬ್ರಾಂಡ್‌ಗಳಿಂದ ಅನೇಕ ಎಸ್‌ಯುವಿಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಲ್ಲಿ ಮಾರುತಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಸೇರಿದಂತೆ ಕಿಯಾ, ಸ್ಕೋಡಾ, ಫೋಕ್ಸ್‌ವ್ಯಾಗನ್ ಸೇರಿದಂತೆ ಬಿಎಂಡಬ್ಲ್ಯು ಬ್ರಾಂಡ್‌ಗಳ ಕಾರುಗಳು ಬಿಡುಗಡೆಗೆ ಸಜ್ಜಾಗಿವೆ.
ಮಾರುತಿ ಇ-ವಿಟಾರಾ: ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡುವ ಮಾರುತಿ ಸುಜುಕಿ ಇ - ವಿಟಾರಾ 2025 ರ ಏಪ್ರಿಲ್ ಅಂತ್ಯದ ವೇಳೆಗೆ ಪಾದಾರ್ಪಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಈಗಾಗಲೇ ದೇಶಾದ್ಯಂತ ಕೆಲವು ಡೀಲರ್‌ಶಿಪ್‌ಗಳನ್ನು ತಲುಪಿದೆ, ಆದರೆ ಅಧಿಕೃತ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಇದರ ನಿರೀಕ್ಷಿತ ಬೆಲೆಯು ರೂ. 17 ಲಕ್ಷ (ಎಕ್ಸ್ ಶೋರೂಂ) ಇರಬಹುದು.

ಮಾರುತಿ ಇ-ವಿಟಾರಾವನ್ನು 48.8 ಕಿಲೋವ್ಯಾಟ್ ಮತ್ತು 61.1 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರಲಿದೆ. ಇದು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ.ಗಿಂತ ಹೆಚ್ಚಿನ ರೇಂಜ್ ನೀಡುತ್ತದೆ. ತ್ರೀ - ಪೀಸ್ ಎಲ್ಇಡಿ ಡಿಆರ್ಎಲ್‌ಗಳು, ಏರೋ - ಫ್ರೆಂಡ್ಲಿ 18 - ಇಂಚಿನ ಅಲಾಯ್ ವೀಲ್‌ಗಳು, ಕನೆಕ್ಟೆಡ್ ಎಲ್ಇಡಿ ಟೈಲ್ ಲೈಟ್‌ಗಳಂತಹ ಆಧುನಿಕ ಅಂಶಗಳನ್ನು ಹೊಂದಿದೆ.
2025 ಸ್ಕೋಡಾ ಕೊಡಿಯಾಕ್: ಸ್ಕೋಡಾ 2025ರ ಕೊಡಿಯಾಕ್ ಅನ್ನು ಏಪ್ರಿಲ್ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಹೊಸ ತಲೆಮಾರಿನ ಕೊಡಿಯಾಕ್ ವಿನ್ಯಾಸವು ಸಣ್ಣ ನವೀಕರಣಗಳನ್ನು ಹೊಂದಿದ್ದರೂ, ಕ್ಯಾಬಿನ್ ಹೊಸ ವಿನ್ಯಾಸ ಮತ್ತು ಹೊಸ ಫೀಚರ್‌ಗಳೊಂದಿಗೆ ಬರಲಿದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 40 ಲಕ್ಷಗಳಾಗಲಿದ್ದು, ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿರಲಿದೆ.

2025ರ ಕೊಡಿಯಾಕ್ ಕಾರು 204 ಪಿಎಸ್ ಪವರ್ 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. 7 - ಸ್ಪೀಡ್ ಡಿಸಿಟಿ ಮತ್ತು ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರಲಿದೆ. ಇದರಲ್ಲಿ 13 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ನವೀಕರಿಸಿದ ಎಸಿ ಕಂಟ್ರೋಲ್ ಡಯಲ್‌ಗಳು ಮತ್ತು ರಿಫ್ರೆಶ್ಡ್ ಸೀಟ್ ಅಪ್ ಹೋಲ್ಸ್ಟರಿ ಸೇರಿವೆ.
ಫೋಕ್ಸ್ ವ್ಯಾಗನ್ ಟಿಗುವಾನ್ ಆರ್-ಲೈನ್: ಫೋಕ್ಸ್ ವ್ಯಾಗನ್ ತನ್ನ ಸ್ಪೋರ್ಟಿಯರ್ 'ಆರ್ - ಲೈನ್' ಆವೃತ್ತಿಯಲ್ಲಿ ಹೊಸ ತಲೆಮಾರಿನ ಟಿಗುವಾನ್ ಅನ್ನು ಏಪ್ರಿಲ್ 14, 2025 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು 50 ಲಕ್ಷ ರೂ. (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಸಂಪೂರ್ಣ ರ್ನಿರ್ಮಿತ ಘಟಕವಾಗಿ (ಸಿಬಿಯು) ಭಾರತಕ್ಕೆ ಬರುವ ಸಾಧ್ಯತೆಯಿದೆ.

ಒಳಭಾಗದಲ್ಲಿ, ಕ್ಯಾಬಿನ್ ರೆಡ್ ಆಕ್ಸೆಂಟ್‌ನೊಂದಗೆ ಸಂಪೂರ್ಣ ಬ್ಲಾಕ್ ಥೀಮ್ ಹೊಂದಿದೆ. ಟಿಗ್ವಾನ್ ಆರ್ - ಲೈನ್ 190 ಪಿಎಸ್ ಪವರ್ ಹಾಗೂ 320 ಎನ್ಎಂ ಟಾರ್ಕ್ ಹೊರಹಾಕುತ್ತದೆ. 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಪಡೆಯುವ ನಿರೀಕ್ಷೆಯಿದೆ. 7 -ಸ್ಪೀಡ್ ಡ್ಯುಯಲ್ - ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೀಡಲಾಗಿದೆ. ಭಾರತದಲ್ಲಿ ಮಾರಾಟವಾದ ಹಿಂದಿನ ಮಾಡಲ್‌ಗೆ ಹೋಲಿಸಿದರೆ, ಆರ್-ಲೈನ್ 'ಆರ್' ಬ್ಯಾಡ್ಜ್ ಜೊತೆಗೆ ನವೀಕರಿಸಿದ ವಿನ್ಯಾಸವನ್ನು ಹೊಂದಿದೆ.
2025 ಬಿಎಂಡಬ್ಲ್ಯು 2 ಸೀರಿಸ್: ಬಿಎಂಡಬ್ಲ್ಯು ಜಾಗತಿಕವಾಗಿ ಅಕ್ಟೋಬರ್ 2024 ರಲ್ಲಿ ಹೊಸ ತಲೆಮಾರಿನ 2 ಸೀರಿಸ್ ಅನ್ನು ಬಹಿರಂಗಪಡಿಸಿತ್ತು. ಈಗ ಬ್ರಾಂಡ್‌ನ ಎಂಟ್ರಿ ಲೆವೆಲ್ ಸೆಡಾನ್ ಏಪ್ರಿಲ್ ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ರೂ. 46 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಇದು ಟ್ವೀಕ್ ಮಾಡಿದ ಕಿಡ್ನಿ ಗ್ರಿಲ್, ನವೀಕರಿಸಿದ 18-ಇಂಚಿನ ಅಲಾಯ್ ಚಕ್ರಗಳು (ಜಾಗತಿಕವಾಗಿ 19 - ಇಂಚಿಗೆ ನವೀಕರಿಸಬಹುದು) ಮತ್ತು ಪರಿಷ್ಕೃತ ಎಲ್ಇಡಿ ಟೇಲ್ ಲೈಟ್ ವ್ಯವಸ್ಥೆ ಸೇರಿದಂತೆ ಪ್ರಮುಖ ವಿನ್ಯಾಸ ನವೀಕರಣಗಳನ್ನು ಹೊಂದಿದೆ. ನವೀಕರಿಸಿದ 2 ಸೀರಿಸ್ ನ ಉದ್ದ ಮತ್ತು ಎತ್ತರವು ಕ್ರಮವಾಗಿ 20 ಎಂಎಂ ಮತ್ತು 25 ಎಂಎಂ ಹೆಚ್ಚಾಗಿದೆ.
2025ರ ಬಿಎಂಡಬ್ಲ್ಯು 2 ಸೀರಿಸ್ ಕಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನೇಕ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಆದರೆ ಭಾರತ-ಸ್ಪೆಕ್ ಮಾದರಿಯು ಪ್ರಸ್ತುತ 2 - ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡುವ ನಿರೀಕ್ಷೆಯಿದೆ. ಒಳಭಾಗದಲ್ಲಿ, ಇದು 10.25 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಮಲ್ಟಿ-ಕಲರ್ ಆಂಬಿಯೆಂಟ್ ಲೈಟಿಂಗ್ ಮತ್ತು ಪವರ್ಡ್ ಮುಂಭಾಗದ ಸಾಲಿನ ಆಸನಗಳಂತಹ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ ಕ್ಯಾಬಿನ್ ಅನ್ನು ಪಡೆದಿದೆ.
2025ರ ಬಿಎಂಡಬ್ಲ್ಯು 2 ಸೀರಿಸ್ ಕಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನೇಕ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಆದರೆ ಭಾರತ-ಸ್ಪೆಕ್ ಮಾದರಿಯು ಪ್ರಸ್ತುತ 2 - ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡುವ ನಿರೀಕ್ಷೆಯಿದೆ. ಒಳಭಾಗದಲ್ಲಿ, ಇದು 10.25 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಮಲ್ಟಿ-ಕಲರ್ ಆಂಬಿಯೆಂಟ್ ಲೈಟಿಂಗ್ ಮತ್ತು ಪವರ್ಡ್ ಮುಂಭಾಗದ ಸಾಲಿನ ಆಸನಗಳಂತಹ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ ಕ್ಯಾಬಿನ್ ಅನ್ನು ಪಡೆದಿದೆ.
2025 ಕಿಯಾ ಕ್ಯಾರೆನ್ಸ್: 2025ರ ಕಿಯಾ ಕಾರೆನ್ಸ್ ಫೇಸ್‌ಲಿಫ್ಟ್ ಕಾರು ಏಪ್ರಿಲ್ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗಲಿದ್ದು, 2025ರ ಜೂನ್ ವೇಳೆಗೆ ಬೆಲೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ನಿರೀಕ್ಷಿತ ಬೆಲೆ ರೂ.11 ಲಕ್ಷ (ಎಕ್ಸ್ ಶೋರೂಂ) ಇರಬಹುದು. 2025ರ ಕಾರೆನ್ಸ್ ಕಾರಿನಲ್ಲಿ ಎರಡು ಪೆಟ್ರೋಲ್ ಪವರ್ ಟ್ರೇನ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಂತೆ ಒಂದೇ ಎಂಜಿನ್ ಆಯ್ಕೆಗಳಲ್ಲಿ ಮುಂದುವರಿಯಲಿದೆ.
ಬಿಡುಗಡೆಯಾದ ನಂತರ, 2025ರ ಫೇಸ್‌ಲಿಫ್ಟ್ ಕಾರೆನ್ಸ್ ಟೊಯೊಟಾ ರುಮಿಯಾನ್, ಮಾರುತಿ ಎರ್ಟಿಗಾ, ಮಾರುತಿ XL6 ಗೆ ಪೈಪೋಟಿ ನೀಡಲಿದೆ. ನವೀಕರಣದ ಭಾಗವಾಗಿ, ಕಾರೆನ್ಸ್ ಮರುವಿನ್ಯಾಸಗೊಳಿಸಿದ ಎಲ್ಇಡಿ ಡಿಆರ್‌ಎಲ್‌ಗಳು, ಪರಿಷ್ಕೃತ ಮುಂಭಾಗದ ಬಂಪರ್, ನವೀಕರಿಸಿದ ಅಲಾಯ್ ವೀಲ್‌ಗಳು ಮತ್ತು ಎಲ್ಇಡಿ ಟೈಲ್‌ಲೈಟ್ ಸೇರಿದಂತೆ ಬಾಹ್ಯ ಬದಲಾವಣೆಗಳನ್ನು ಪಡೆಯಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications