ಬೆಂಗಳೂರು ಬ್ರ್ಯಾಂಡ್‌ನ ಜೋರು.. ಹೆಚ್ಚಾಯ್ತು ಡಿಮ್ಯಾಂಡ್.. 20 ತಿಂಗಳಲ್ಲಿ 2 ಲಕ್ಷ ಇ-ಸ್ಕೂಟರ್‌ಗಳು ಮಾರಾಟ!

ಬೆಂಗಳೂರು ಮೂಲದ ಎಥರ್ ಎನರ್ಜಿ, ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ 'ರಿಜ್ಟಾ' ಇ-ಸ್ಕೂಟರ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸದ್ಯ, ಈ ಸ್ಕೂಟರ್‌ನ ಮಾರಾಟದಲ್ಲಿ ಕಂಪನಿಯು ಹೊಸದೊಂದು ಇತಿಹಾಸ ಬರೆದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ನೂತನ ಎಥರ್ ರಿಜ್ಟಾ (Ather Rizta) ಇ-ಸ್ಕೂಟರ್‌ನ್ನು 2024ರ ಏಪ್ರಿಲ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಅಂದಿನಿಂದಲೇ ಖರೀದಿದಾರರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈವರೆಗೆ ಕೇವಲ 20 ತಿಂಗಳಲ್ಲಿ 2 ಲಕ್ಷ ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಇದರೊಂದಿಗೆ ಐತಿಹಾಸಿಕ ಮೈಲಿಗಲ್ಲೊಂದನ್ನು ಸಾಧಿಸಲಾಗಿದೆ. ಇದಕ್ಕೂ ಮೊದಲು, ಈ ವರ್ಷದ ಜೂನ್‌ವರೆಗೆ 1 ಲಕ್ಷ ಯುನಿಟ್‌ಗಳನ್ನು ಮಾರಲಾಗಿತ್ತು.

Ather Rizta Electric Scooter Reaches 2 Lakh Sales Milestone Details

'ಎಥರ್ ರಿಜ್ಟಾ' ವಿಶೇಷತೆಗಳೇನು:

ಈ ಎಲೆಕ್ಟ್ರಿಕ್ ಸ್ಕೂಟರ್, ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಕನಿಷ್ಠ ರೂ.1.15 ಲಕ್ಷ ಹಾಗೂ ಗರಿಷ್ಠ ರೂ.1.32 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ರಿಜ್ಟಾ ಎಸ್ (Rizta S) ಹಾಗೂ ರಿಜ್ಟಾ ಝಡ್ (Rizta Z) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ಇದು ಹೆಚ್ಚು ಅತ್ಯಾಧುನಿಕವಾದ ಬಾಕ್ಸಿ ವಿನ್ಯಾಸವನ್ನು ಹೊಂದಿದೆ. ಉತ್ತಮವಾದ ಹೆಡ್‌ಲ್ಯಾಂಪ್‌ ಹಾಗೂ ಟೈಲ್‌ಲೈಟ್‌ನ್ನು ಪಡೆದಿದೆ. ಸಿಯಾಚಿನ್ ವೈಟ್, ಡೆಕ್ಕನ್ ಗ್ರೇ, ಕಾರ್ಡಮೊಮ್ ಗ್ರೀನ್, ಟೆರಾಕೋಟಾ ರೆಡ್ ಹಾಗೂ ಪ್ಯಾಂಗೊಂಗ್ ಬ್ಲೂ ಒಳಗೊಂಡಂತೆ ನಾನಾ ಬಗೆಯ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.

Ather Rizta Electric Scooter Reaches 2 Lakh Sales Milestone Details

ಹೊಸ 'ಎಥರ್ ರಿಜ್ಟಾ' ಸಾಕಷ್ಟು ವಿಶಾಲ ಗಾತ್ರದಲ್ಲಿದೆ. 1,850 ಮಿ.ಮೀ ಉದ್ದ, 750 ಮಿ.ಮೀ ಅಗಲ ಮತ್ತು 1,140 ಮಿ.ಮೀ ಎತ್ತರವಿದೆ. 150 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,285 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ. ಸರಿ ಸುಮಾರು 125 ಕೆಜಿ ತೂಕವಿದೆ.

ಈ ಸ್ಕೂಟರ್ ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿದೆ. 2.9 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯ ಬ್ಯಾಟರಿ ಪ್ಯಾಕ್‌ಗಳನ್ನು ತನ್ನದಾಗಿಸಿಕೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 123 ರಿಂದ 160 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 4.7 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

Ather Rizta Electric Scooter Reaches 2 Lakh Sales Milestone Details

ಇದು 7-ಇಂಚಿನ ಎಲ್‌ಸಿಡಿ ಸ್ಕ್ರೀನ್, ಮಲ್ಟಿ ಪರ್ಪಸ್ ಚಾರ್ಜರ್ ಹಾಗೂ ಪಿಲಿಯನ್ ಬ್ಯಾಕ್‌ರೆಸ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸ್ಮಾರ್ಟ್, ಇಕೋ ಮತ್ತು ಜಿಪ್ ಎಂಬ 3 ಆಕರ್ಷಕವಾದ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. 34 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್‌ನ್ನು ಒಳಗೊಂಡಿದೆ. 12 ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ.

ಹೊಸ 'ಎಥರ್ ರಿಜ್ಟಾ' ಎಲೆಕ್ಟ್ರಿಕ್ ಸ್ಕೂಟರ್, ಸವಾರರಿಗೂ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಓಲಾ ಎಸ್1 ಎಕ್ಸ್ (Ola S1 x), ಬಜಾಜ್ ಚೇತಕ್ (Bajaj Chetak), ಹೀರೋ ವಿಡಾ ವಿಎಕ್ಸ್2 (Hero Vida VX2) ಹಾಗೂ ಟಿವಿಎಸ್ ಐಕ್ಯೂಬ್ (TVS iQube) ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Thursday, December 11, 2025, 15:47 [IST]
English summary
Ather rizta electric scooter reaches 2 lakh sales milestone details
Read more on ather energy india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+