Audi: ಇತ್ತೀಚೆಗೆ ಬಿಡುಗಡೆಯಾದ ಆಡಿ A4 ಸಿಗ್ನೇಚರ್ ಎಡಿಷನ್‌ಗೆ ಮನಸೋತ ಶ್ರೀಮಂತರು!

ಆಡಿ A4 ಸಿಗ್ನೇಚರ್ ಎಡಿಷನ್ ಕಾರಿನಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗಾಗಿ ವೈರ್‌ಲೆಸ್ ಚಾರ್ಜಿಂಗ್ ಹೊಂದಿರುವ ಆಡಿ ಫೋನ್ ಬಾಕ್ಸ್, ಲೆದರೆಟ್ ಪ್ರೀಮಿಯಂ ಕ್ಯಾಬಿನ್, ಪವರ್ಡ್ ಡ್ರೈವರ್ ಮೆಮೊರಿ ಸೀಟ್, 3-ಝೋನ್ ಕ್ಲೈಮೆಟ್ ಕಂಟ್ರೋಲ್ ಒದಗಿಸಲಾಗಿದೆ. ಅಲ್ಲದೆ ಆಂಬಿಯೆಂಟ್ ಲೈಟಿಂಗ್ ಪ್ಯಾಕೇಜ್ ಪ್ಲಸ್ 30 ನೊಂದಿಗೆ ಇಂಟೀರಿಯರ್‌ಗೆ ದೊಡ್ಡ ಹೈಲೈಟ್‌ ಆಗಿ ಕೀಲೆಸ್ ಎಂಟ್ರಿ ಮತ್ತು ಗೆಸ್ಚರ್ ಆಧಾರಿತ ಬೂಟ್ ಮುಚ್ಚಳವನ್ನು ತೆರೆಯಲು ಕಂಫರ್ಟ್ ಕೀ ನೀಡಲಾಗಿದೆ. ಈ ಕಾರು ಸದ್ಯ ಪ್ರೀಮಿಯಂ ವಿಭಾಗದಲ್ಲಿ ಸದ್ದು ಮಾಡುತ್ತಿದ್ದು, ಇದರ ಹೆಚ್ಚಿನ ವಿಶೇಷತೆಗಳನ್ನು ಇಲ್ಲಿ ವಿವರಿಸಲಾಗಿದೆ.

"ಆಡಿ A4 ನಮ್ಮ ಸರಣಿಯಲ್ಲಿ ಹೆಚ್ಚು ಮಾರಾಟವಾಗುವ ಸೆಡಾನ್‌ಗಳಲ್ಲಿ ಒಂದಾಗಿದೆ. ಇದೀಗ ಸಿಗ್ನೇಚರ್ ಆವೃತ್ತಿಯ ಬಿಡುಗಡೆಯೊಂದಿಗೆ, ನಾವು ನಮ್ಮ ಗ್ರಾಹಕರಿಗೆ ಇನ್ನೂ ಹೆಚ್ಚು ವಿಶೇಷವಾದ ವೇರಿಯೆಂಟ್ ನೀಡುತ್ತಿದ್ದೇವೆ ಎಂದು ಹೊಸ A4 ಸಿಗ್ನೇಚರ್ ಎಡಿಷನ್ ಬಿಡುಗಡೆಯ ಬಗ್ಗೆ ಆಡಿ ಇಂಡಿಯಾ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

audi-a4-signature-edition-price-features-engine-details

ಪ್ರಮುಖ ಕಾರು ತಯಾರಕ ಕಂಪನಿಯಾದ ಆಡಿ (Audi), ತನ್ನ 'A4 ಸಿಗ್ನೇಚರ್ ಎಡಿಷನ್' ಅನ್ನು ಭಾರತದಲ್ಲಿ ರೂ. 57,11,000 (ಎಕ್ಸ್ - ಶೋರೂಂ)ಗೆ ಬಿಡುಗಡೆ ಮಾಡಿದೆ. ಆಡಿ A4 ಸಿಗ್ನೇಚರ್ ಆವೃತ್ತಿಯು ಸ್ಪೆಷಲ್ ಎಡಿಷನ್ ಕಾರಾಗಿರುವುದರಿಂದ ಕೆಲವನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಹೊಸ ಸಿಗ್ನೇಚರ್ ಆವೃತ್ತಿಯನ್ನು ಇತರ ಆಡಿ ಕಾರುಗಳಿಗಿಂತ ಪ್ರತ್ಯೇಕತೆ ಮತ್ತು ವ್ಯತ್ಯಾಸವನ್ನು ಬಯಸುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಈ ಕಾರು ನವರ್ರಾ ಬ್ಲೂ ಮೆಟಾಲಿಕ್, ಪ್ರೋಗ್ರೆಸಿವ್ ರೆಡ್ ಮೆಟಾಲಿಕ್, ಗ್ಲೇಸಿಯರ್ ವೈಟ್ ಮೆಟಾಲಿಕ್, ಮಿಥೋಸ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಮ್ಯಾನ್‌ಹ್ಯಾಟನ್ ಗ್ರೇ ಮೆಟಾಲಿಕ್ ಎಂಬ ಐದು ಗಮನಾರ್ಹವಾದ ಬಾಹ್ಯ ಬಣ್ಣಗಳ ಆಯ್ಕೆಯನ್ನು ನೀಡುತ್ತದೆ. ಇದರಲ್ಲಿ ಆಕರ್ಷಕ ಆಡಿ ರಿಂಗ್ಸ್, ಡೈನಾಮಿಕ್ ವೀಲ್ ಹಬ್ ಕ್ಯಾಪ್‌, ಎಂಟ್ರಿ ಎಲ್ಇಡಿ ಲ್ಯಾಂಪ್‌ಗಳಂತಹ ಹಲವು ಡಿಸೈನ್ ಅಂಶಗಳನ್ನು ಒಳಗೊಂಡಿದೆ.

ಕಾರಿನ ವಿಶೇಷತೆಗಳು: ಡೈನಾಮಿಕ್ ವೀಲ್ ಹಬ್ ಕ್ಯಾಪ್‌ಗಳು, ಏರೋಡೈನಾಮಿಕ್ ಸ್ಪಾಯ್ಲರ್ ಲಿಪ್, ಸ್ಪರ್ಶಕ್ಕಾಗಿ ಕಸ್ಟಮೈಸ್ ಮಾಡಬಹುದಾದ ಬಣ್ಣ ಆಯ್ಕೆಗಳಲ್ಲಿ ಕೀ ಕವರ್, 360-ಡಿಗ್ರಿ ಕ್ಯಾಮೆರಾದೊಂದಿಗೆ ಪಾರ್ಕ್ ಅಸಿಸ್ಟ್, ಆಡಿ ರಿಂಗ್ಸ್ ಎಂಟ್ರಿ ಎಲ್‌ಇಡಿ ಲ್ಯಾಂಪ್‌ಗಳು, ವಿಶಿಷ್ಟವಾದ ಆಡಿ ರಿಂಗ್ಸ್ ಡೆಕಲ್‌ಗಳು, ಸ್ಟೇನ್‌ಲೆಸ್ ಸ್ಟೀಲ್ ಪೆಡಲ್ ಕವರ್‌ಗಳು, ವಿಶೇಷ ಅಲಾಯ್ ವೀಲ್ ಪೇಂಟ್ ಡಿಸೈನ್ ಹೊಂದಿದೆ.

3-ಸ್ಪೋಕ್, ಫ್ಲಾಟ್-ಬಾಟಮ್, ಸ್ಪೋರ್ಟ್ಸ್ ಕಾಂಟೂರ್ ಲೆದರ್‌ನ ಮಲ್ಟಿ-ಫಂಕ್ಷನ್ ಪ್ಲಸ್ ಸ್ಟೀರಿಂಗ್ ವೀಲ್ ಹೊಂದಿದೆ. 3D B&O ಪ್ರೀಮಿಯಂ ಸೌಂಡ್ ಸಿಸ್ಟಮ್ ಹೊಂದಿದ್ದು, ಇದು ಸೆಂಟರ್ ಸ್ಪೀಕರ್ ಮತ್ತು ಸಬ್ ವೂಫರ್ ಸೇರಿದಂತೆ 19 ಸ್ಪೀಕರ್‌ಗಳು, 16-ಚಾನೆಲ್ ಆಂಪ್ಲಿಫಯರ್ ಮತ್ತು 755 ವ್ಯಾಟ್‌ಗಳ ಔಟ್‌ಪುಟ್ ನೀಡುತ್ತದೆ.

ಆಡಿ A4 2.0L TFSI ಎಂಜಿನ್‌ ಹೊಂದಿದ್ದು, ಇದು 204 hp (150kW) ಪವರ್ ಮತ್ತು 320 Nm ಟಾರ್ಕ್ ಉತ್ಪಾದಿಸುತ್ತದೆ. ಇದರ 12V ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಇಂಧನ ಬಳಕೆಯನ್ನು ಕಡಿಮೆ ಮಾಡಿ ಮೈಲೇಜ್ ಹೆಚ್ಚಿಸುತ್ತದೆ. ಕೇವಲ 7.1 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಗಂಟೆಗೆ 241 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಆಡಿ ಸ್ಮಾರ್ಟ್‌ಫೋನ್ ಇಂಟರ್ಫೇಸ್, ನೈಸರ್ಗಿಕ-ಭಾಷೆಯ ಧ್ವನಿ ನಿಯಂತ್ರಣವು ದೈನಂದಿನ ಭಾಷೆಗಳಲ್ಲಿ ಬಳಸುವ ನುಡಿಗಳನ್ನು ಅರ್ಥಮಾಡಿಕೊಳ್ಳುತ್ತದೆ. ಇದರಲ್ಲಿ MMI ಟಚ್ ಡಿಸ್ಪ್ಲೇ 25.65 ಸೆಂ.ಮೀ ಅಳತೆಯ ಹೈ-ರೆಸಲ್ಯೂಶನ್ TFT ಡಿಸ್ಪ್ಲೇಯನ್ನು ಹೊಂದಿದೆ. MMI ನ್ಯಾವಿಗೇಷನ್ ಪ್ಲಸ್ ಆಲ್-ಡಿಜಿಟಲ್ ಆಡಿ ವರ್ಚುವಲ್ ಕಾಕ್‌ಪಿಟ್ ಪ್ಲಸ್ ಅನ್ನು ಒಳಗೊಂಡಿದೆ.

More from DriveSpark

Article Published On: Friday, June 13, 2025, 10:20 [IST]
English summary
Audi a4 signature edition price features engine details
Read more on audi india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+