Audi: ಶ್ರೀಮಂತರ ಅಂಬಾರಿ ಹೊಸ ಸಿಗ್ನೇಚರ್ ಎಡಿಷನ್ ಅವತಾರದಲ್ಲಿ ಬಿಡುಗಡೆ: ಚಲಿಸುವ ಸ್ವರ್ಗ!

ಜರ್ಮನ್ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ, ಇಂದು ಆಡಿ Q7 ಸಿಗ್ನೇಚರ್ ಎಡಿಷನ್ (Audi Q7 Signature Edition) ಅನ್ನು ಬಿಡುಗಡೆಗೊಳಿಸಿದೆ. ಇದು ಪ್ರೀಮಿಯಂ ವಿನ್ಯಾಸ ಮತ್ತು ಐಷಾರಾಮಿ ಸೌಕರ್ಯವನ್ನು ಒಳಗೊಂಡಿರುವ ವಿಶೇಷ ಆವೃತ್ತಿಯಾಗಿದೆ. ಸಿಗ್ನೇಚರ್ ಆವೃತ್ತಿಯು ಹೊಸ ಆಡಿ ರಿಂಗ್ಸ್ ಎಂಟ್ರಿ LED ಲ್ಯಾಂಪ್‌ಗಳು, ಡೈನಾಮಿಕ್ ವೀಲ್ ಹಬ್ ಕ್ಯಾಪ್‌ಗಳು ಮತ್ತು ಎಸ್‌ಪ್ರೆಸೊ ಮೊಬೈಲ್ ಇನ್-ವೆಹಿಕಲ್ ಕಾಫಿ ಸಿಸ್ಟಮ್ ಸೇರಿದಂತೆ ಆಕರ್ಷಕ ಅಪ್‌ಡೇಟ್‌ಗಳನ್ನು ಪಡೆದುಕೊಂಡಿದೆ. ಹೊಸ ಆಡಿ Q7 ಸಿಗ್ನೇಚರ್ ಎಡಿಷನ್ ಸೀಮಿತ ಕಾರುಗಳು ಮಾತ್ರ ಖರೀದಿಗೆ ಲಭ್ಯವಿರುವುದಾಗಿ ಕಂಪನಿ ತಿಳಿಸಿದೆ.

ಹೊಸ ಆಡಿ Q7 ಸಿಗ್ನೇಚರ್ ಎಡಿಷನ್ ಬೆಲೆಯು ರೂ. 99,81,000 (ಎಕ್ಸ್-ಶೋರೂಂ) ನಿಂದ ಪ್ರಾರಂಭವಾಗುತ್ತದೆ. ಪ್ರೀಮಿಯಂ SUV ಮಾಲೀಕತ್ವದಲ್ಲಿ ವಿಶೇಷತೆಯನ್ನು ಬಯಸುವ ಗ್ರಾಹಕರಿಗೆ ಬೆಸ್ಪೋಕ್ ಐಷಾರಾಮಿ ಅನುಭವಗಳನ್ನು ಈ ಕಾರು ಒದಗಿಸಲಿದೆ. ಇದು ಸಖೀರ್ ಗೋಲ್ಡ್, ವೈಟೊಮೊ ಬ್ಲೂ, ಮಿಥೋಸ್ ಬ್ಲ್ಯಾಕ್, ಗ್ಲೇಸಿಯರ್ ವೈಟ್ ಮತ್ತು ಸಮುರಾಯ್ ಗ್ರೇ ಎಂಬ ಐದು ಬಣ್ಣಗಳ ಆಯ್ಕೆಯನ್ನು ಹೊಂದಿದೆ.

audi-q7-signature-edition-launched-in-india

ಸಿಗ್ನೇಚರ್ ಎಡಿಷನ್ ಮುಖ್ಯಾಂಶಗಳು

ಸಿಗ್ನೇಚರ್ ಆವೃತ್ತಿ ಪ್ಯಾಕೇಜ್ ಭಾಗವಾಗಿ ಆಡಿ ಕ್ಯೂ7 ನಲ್ಲಿ ಬೆಸ್ಪೋಕ್ ಸ್ಟೈಲಿಂಗ್ ಅಪ್‌ಡೇಗಳನ್ನು ನೀಡಲಾಗಿದೆ. ಆಡಿ ರಿಂಗ್ಸ್ ಎಂಟ್ರಿ ಎಲ್ಇಡಿ ಲ್ಯಾಂಪ್‌ಗಳು ವೆಲ್‌ಕಮ್ ಲೈಟ್ ಪ್ರೊಜೆಕ್ಷನ್ ನೀಡುತ್ತವೆ. ವೀಲ್ ಚಲನೆಯನ್ನು ಲೆಕ್ಕಿಸದೆ ಪರಿಪೂರ್ಣ ಆಡಿ ಲೋಗೋ ದೃಷ್ಟಿಕೋನವನ್ನು ನಿರ್ವಹಿಸುವ ಹೊಸ ಡೈನಾಮಿಕ್ ವೀಲ್ ಹಬ್ ಕ್ಯಾಪ್‌ಗಳನ್ನು ಒದಗಿಸಲಾಗಿದೆ.

ವಾಹನಕ್ಕೆ ಪ್ರವೇಶಿಸುವ ವೇಳೆ ಪ್ರೀಮಿಯಂ ಸ್ಪರ್ಶಕ್ಕಾಗಿ ಲೋಹೀಯ ಕೀ ಕವರ್ ಹಾಗೂ ಸ್ಟೇನ್‌ಲೆಸ್ ಸ್ಟೀಲ್ ಪೆಡಲ್ ಕವರ್‌ಗಳು ಸ್ಪೋರ್ಟಿ ಇಂಟೀರಿಯರ್ ಅನ್ನು ನೀಡುತ್ತವೆ. ಎಸ್ಪ್ರೆಸೊ ಮೊಬೈಲ್ ಕಾಫಿ ಸಿಸ್ಟಮ್, ಆಡಿ ಸಾರ್ವತ್ರಿಕ ಟ್ರಾಫಿಕ್ ರೆಕಾರ್ಡರ್ ಹೊಂದಿರುವ ಆಡಿ ಡ್ಯಾಶ್‌ಕ್ಯಾಮ್ ಕೂಡ ನೀಡಲಾಗಿದ್ದು, ಇದು ಚಾಲನೆ ಮಾಡುವಾಗ ಮತ್ತು ನಿಲ್ಲಿಸಿದಾಗಲೂ ಹೆಚ್ಚುವರಿ ರಕ್ಷಣೆ ನೀಡುತ್ತದೆ.

audi-q7-signature-edition-launched-in-india

ಇತರ ಮುಖ್ಯಾಂಶಗಳು

ಆಡಿ Q7 ಸಿಗ್ನೇಚರ್ ಎಡಿಷನ್ 340 hp ಪವರ್ ಮತ್ತು 500 Nm ಟಾರ್ಕ್ ಅನ್ನು ಹೊರಹಾಕುವ ದೃಢವಾದ 3.0L V6 TFSI ಎಂಜಿನ್‌ ಹೊಂದಿದೆ. ಇದು ಉತ್ತಮ ಪರ್ಫಾಮೆನ್ಸ್ ಮತ್ತು ದಕ್ಷತೆಗಾಗಿ 48V ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿದೆ. ಕೇವಲ 5.6 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ತಲುಪಬಲ್ಲದು. 250 ಕಿಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಎಲ್ಲಾ ಚಾಲನಾ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಟ್ರಾಕ್ಷನ್ ಮತ್ತು ಸ್ಥಿರತೆಗಾಗಿ ಕ್ವಾಟ್ರೋ ಪರ್ಮನೆಂಟ್ ಆಲ್-ವೀಲ್ ಡ್ರೈವ್ ನೀಡಲಾಗಿದೆ. ಬಹುಮುಖ ಚಾಲನಾ ಅನುಭವಕ್ಕಾಗಿ ಆಫ್-ರೋಡ್ ಮೋಡ್ ಸೇರಿದಂತೆ 7 ಚಾಲನಾ ವಿಧಾನಗಳೊಂದಿಗೆ ಅಡಾಪ್ಟಿವ್ ಏರ್ ಸಸ್ಪೆನ್ಷನ್ ಮತ್ತು ಆಡಿ ಡ್ರೈವ್ ಸೆಲೆಕ್ಟ್‌ನೊಂದಿಗೆ ಆಡಿ Q7 ಸಿಗ್ನೇಚರ್ ಎಡಿಷನ್ ಸಜ್ಜುಗೊಂಡಿದೆ.

audi-q7-signature-edition-launched-in-india

ಸುಗಮ-ಶಿಫ್ಟಿಂಗ್ 8-ಸ್ಪೀಡ್ ಟಿಪ್‌ಟ್ರಾನಿಕ್ ಟ್ರಾನ್ಸ್‌ಮಿಷನ್, ಮೂರನೇ ಸಾಲಿನ ಆಸನಗಳೊಂದಿಗೆ ಏಳು-ಆಸನಗಳ ಸಂರಚನೆ, ಆಡಿ ವರ್ಚುವಲ್ ಕಾಕ್‌ಪಿಟ್ ಪ್ಲಸ್ ಸಂಪೂರ್ಣ ಡಿಜಿಟಲ್ ಮತ್ತು ಕಸ್ಟಮೈಸ್ ಮಾಡಬಹುದಾದ ಕ್ಲಸ್ಟರ್, ಆಡಿಯೊ ಅನುಭವಕ್ಕಾಗಿ 19 ಸ್ಪೀಕರ್‌ಗಳು ಮತ್ತು 730 ವ್ಯಾಟ್‌ಗಳ ಔಟ್‌ಪುಟ್‌ನೊಂದಿಗೆ ಒಲುಫ್ಸೆನ್ ಪ್ರೀಮಿಯಂ 3D ಸೌಂಡ್ ಸಿಸ್ಟಮ್ ನೀಡಲಾಗಿದೆ.

ಇವಿಷ್ಟೆ ಅಲ್ಲದೆ MMI ನ್ಯಾವಿಗೇಷನ್ ಜೊತೆಗೆ ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಆಡಿ ಫೋನ್ ಬಾಕ್ಸ್, 360-ಡಿಗ್ರಿ ಕ್ಯಾಮೆರಾದೊಂದಿಗೆ ಪಾರ್ಕ್ ಅಸಿಸ್ಟ್ ಪ್ಲಸ್, ಸೆನ್ಸರ್-ನಿಯಂತ್ರಿತ ಬೂಟ್ ಲಿಡ್ ಕಂಫರ್ಟ್ ಕೀ, ಏರ್ ಅಯಾನೈಸರ್ ಮತ್ತು ಆರೊಮ್ಯಾಟೈಸೇಶನ್‌ನೊಂದಿಗೆ 4-ಝೋನ್ ಕ್ಲೈಮೆಟ್ ಕಂಟ್ರೋಲ್, ಅಡಾಪ್ಟಿವ್ ವಿಂಡ್‌ಸ್ಕ್ರೀನ್ ವೈಪರ್‌ಗಳು, ಲೇನ್ ಎಕ್ಸಿಟ್ ವಾರ್ನಿಂಗ್ ಸಿಸ್ಟಮ್ ಒಳಗೊಂಡಿದೆ. ಹಾಗೆಯೇ ಎಂಟು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ.

More from DriveSpark

Article Published On: Monday, June 23, 2025, 13:22 [IST]
English summary
Audi q7 signature edition launched in india
Read more on audi new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+