Audi: ಹೊಸ ಸಿಗ್ನೇಚರ್ ಎಡಿಷನ್ ಅವತಾರದಲ್ಲಿ ಪಾದಾರ್ಪಣೆ ಮಾಡಿದೆ ಆಡಿ Q7: ವಿಶೇಷತೆಗಳೇನು?
ಪ್ರಮುಖ ಪ್ರೀಮಿಯಂ ಕಾರು ತಯಾರಕ ಕಂಪನಿಯಾಗಿರುವ ಆಡಿ, ಇತ್ತೀಚೆಗಷ್ಟೆ ತನ್ನ ಬಹುನಿರೀಕ್ಷಿತ Q7 ಸಿಗ್ನೇಚರ್ ಎಡಿಷನ್ (Audi Q7 Signature Edition) ಅನ್ನು ರೂ. 99,81,000 (ಎಕ್ಸ್-ಶೋರೂಂ) ಗೆ ಬಿಡುಗಡೆಗೊಳಿಸಿದೆ. ಇದು ಮಿಥೋಸ್ ಬ್ಲ್ಯಾಕ್, ಗ್ಲೇಸಿಯರ್ ವೈಟ್, ಸಖೀರ್ ಗೋಲ್ಡ್, ವೈಟೊಮೊ ಬ್ಲೂ ಮತ್ತು ಸಮುರಾಯ್ ಗ್ರೇ ಎಂಬ ಐದು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇದು ಪ್ರೀಮಿಯಂ ವಿನ್ಯಾಸ ಮತ್ತು ಐಷಾರಾಮಿ ಸೌಕರ್ಯವನ್ನು ಒಳಗೊಂಡಿರುವ ವಿಶೇಷ ಆವೃತ್ತಿಯಾಗಿದೆ. ಇದರ ಟಾಪ್ ವಿಶೇಷತೆಗಳು ಇಲ್ಲಿವೆ.
ಮೊದಲನೆಯದಾಗಿ ಈ ಕಾರು ವಿಶೇಷ ಸಿಗ್ನೇಚರ್ ಎಡಿಷನ್ ಆಗಿರುವುದರಿಂದ ಸೀಮಿತ ಕಾರುಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಹಾಗೆಯೇ ಪ್ರೀಮಿಯಂ SUV ಮಾಲೀಕತ್ವದಲ್ಲಿ ವಿಶೇಷತೆಯನ್ನು ಬಯಸುವ ಗ್ರಾಹಕರಿಗೆ ಬೆಸ್ಪೋಕ್ ಐಷಾರಾಮಿ ಅನುಭವಗಳನ್ನು ಈ ಕಾರು ಒದಗಿಸಲಿದೆ. ಆಡಿ ರಿಂಗ್ಸ್ ಎಂಟ್ರಿ LED ಲ್ಯಾಂಪ್‌ಗಳು, ಎಸ್‌ಪ್ರೆಸೊ ಮೊಬೈಲ್ ಇನ್-ವೆಹಿಕಲ್ ಕಾಫಿ ಸಿಸ್ಟಮ್, ಡೈನಾಮಿಕ್ ವೀಲ್ ಹಬ್ ಕ್ಯಾಪ್‌ಗಳು ಸೇರಿದಂತೆ ಆಕರ್ಷಕ ಅಪ್‌ಡೇಟ್‌ಗಳನ್ನು ಪಡೆದುಕೊಂಡಿದೆ.

ಮೂರನೇ ಸಾಲಿನ ಆಸನಗಳೊಂದಿಗೆ ಏಳು-ಆಸನಗಳ ಸಂರಚನೆ, ಆಡಿಯೊ ಅನುಭವಕ್ಕಾಗಿ 19 - ಸ್ಪೀಕರ್‌ಗಳು ಮತ್ತು 730 ವ್ಯಾಟ್‌ಗಳ ಔಟ್‌ಪುಟ್‌ನೊಂದಿಗೆ ಒಲುಫ್ಸೆನ್ ಪ್ರೀಮಿಯಂ 3D ಸೌಂಡ್ ಸಿಸ್ಟಮ್, ಆಡಿ ವರ್ಚುವಲ್ ಕಾಕ್‌ಪಿಟ್ ಪ್ಲಸ್ ಸಂಪೂರ್ಣ ಡಿಜಿಟಲ್ ಮತ್ತು ಕಸ್ಟಮೈಸ್ ಮಾಡಬಹುದಾದ ಕ್ಲಸ್ಟರ್ ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಎಂಟು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ.
ಇವಿಷ್ಟೆ ಅಲ್ಲದೆ MMI ನ್ಯಾವಿಗೇಷನ್ ಜೊತೆಗೆ ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಆಡಿ ಫೋನ್ ಬಾಕ್ಸ್, ಏರ್ ಅಯಾನೈಸರ್ ಮತ್ತು ಆರೊಮ್ಯಾಟೈಸೇಶನ್‌ನೊಂದಿಗೆ 4-ಝೋನ್ ಕ್ಲೈಮೆಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾದೊಂದಿಗೆ ಪಾರ್ಕ್ ಅಸಿಸ್ಟ್ ಪ್ಲಸ್, ಸೆನ್ಸರ್-ನಿಯಂತ್ರಿತ ಬೂಟ್ ಲಿಡ್ ಕಂಫರ್ಟ್ ಕೀ, ಅಡಾಪ್ಟಿವ್ ವಿಂಡ್‌ಸ್ಕ್ರೀನ್ ವೈಪರ್‌ಗಳು, ಲೇನ್ ಎಕ್ಸಿಟ್ ವಾರ್ನಿಂಗ್ ಸಿಸ್ಟಮ್ ಒಳಗೊಂಡಿದೆ.
ಎಲ್ಲಾ ಚಾಲನಾ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಟ್ರಾಕ್ಷನ್ ಮತ್ತು ಸ್ಥಿರತೆಗಾಗಿ ಕ್ವಾಟ್ರೋ ಪರ್ಮನೆಂಟ್ ಆಲ್-ವೀಲ್ ಡ್ರೈವ್ ನೀಡಲಾಗಿದೆ. ಬಹುಮುಖ ಚಾಲನಾ ಅನುಭವಕ್ಕಾಗಿ ಆಫ್-ರೋಡ್ ಮೋಡ್ ಸೇರಿದಂತೆ 7 ಚಾಲನಾ ವಿಧಾನಗಳೊಂದಿಗೆ ಅಡಾಪ್ಟಿವ್ ಏರ್ ಸಸ್ಪೆನ್ಷನ್, ಸುಗಮ-ಶಿಫ್ಟಿಂಗ್ 8-ಸ್ಪೀಡ್ ಟಿಪ್‌ಟ್ರಾನಿಕ್ ಟ್ರಾನ್ಸ್‌ಮಿಷನ್ ಮತ್ತು ಆಡಿ ಡ್ರೈವ್ ಸೆಲೆಕ್ಟ್‌ನೊಂದಿಗೆ ಆಡಿ Q7 ಸಿಗ್ನೇಚರ್ ಎಡಿಷನ್ ಸಜ್ಜುಗೊಂಡಿದೆ.
ಸಿಗ್ನೇಚರ್ ಆವೃತ್ತಿ ಪ್ಯಾಕೇಜ್ ಭಾಗವಾಗಿ ಆಡಿ ಕ್ಯೂ7 ನಲ್ಲಿ ಬೆಸ್ಪೋಕ್ ಸ್ಟೈಲಿಂಗ್ ಅಪ್‌ಡೇಗಳನ್ನು ನೀಡಲಾಗಿದೆ. ಆಡಿ ರಿಂಗ್ಸ್ ಎಂಟ್ರಿ ಎಲ್ಇಡಿ ಲ್ಯಾಂಪ್‌ಗಳು ವೆಲ್‌ಕಮ್ ಲೈಟ್ ಪ್ರೊಜೆಕ್ಷನ್ ನೀಡುತ್ತವೆ. ವೀಲ್ ಚಲನೆಯನ್ನು ಲೆಕ್ಕಿಸದೆ ಪರಿಪೂರ್ಣ ಆಡಿ ಲೋಗೋ ದೃಷ್ಟಿಕೋನವನ್ನು ನಿರ್ವಹಿಸುವ ಹೊಸ ಡೈನಾಮಿಕ್ ವೀಲ್ ಹಬ್ ಕ್ಯಾಪ್‌ಗಳನ್ನು ಒದಗಿಸಲಾಗಿದೆ.
ಎಸ್ಪ್ರೆಸೊ ಮೊಬೈಲ್ ಕಾಫಿ ಸಿಸ್ಟಮ್, ಆಡಿ ಸಾರ್ವತ್ರಿಕ ಟ್ರಾಫಿಕ್ ರೆಕಾರ್ಡರ್ ಹೊಂದಿರುವ ಆಡಿ ಡ್ಯಾಶ್‌ಕ್ಯಾಮ್ ಕೂಡ ನೀಡಲಾಗಿದ್ದು, ಇದು ಚಾಲನೆ ಮಾಡುವಾಗ ಮತ್ತು ನಿಲ್ಲಿಸಿದಾಗಲೂ ಹೆಚ್ಚುವರಿ ರಕ್ಷಣೆ ನೀಡುತ್ತದೆ. ವಾಹನಕ್ಕೆ ಪ್ರವೇಶಿಸುವ ವೇಳೆ ಪ್ರೀಮಿಯಂ ಸ್ಪರ್ಶಕ್ಕಾಗಿ ಲೋಹೀಯ ಕೀ ಕವರ್ ಹಾಗೂ ಸ್ಟೇನ್‌ಲೆಸ್ ಸ್ಟೀಲ್ ಪೆಡಲ್ ಕವರ್‌ಗಳು ಸ್ಪೋರ್ಟಿ ಇಂಟೀರಿಯರ್ ಅನ್ನು ನೀಡುತ್ತವೆ.
ಆಡಿ Q7 ಸಿಗ್ನೇಚರ್ ಎಡಿಷನ್ ಉತ್ತಮ ಪರ್ಫಾಮೆನ್ಸ್ ಮತ್ತು ದಕ್ಷತೆಗಾಗಿ 48V ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿದೆ. ಇದು 340 hp ಪವರ್ ಮತ್ತು 500 Nm ಟಾರ್ಕ್ ಅನ್ನು ಹೊರಹಾಕುವ ದೃಢವಾದ 3.0L V6 TFSI ಎಂಜಿನ್ ಹೊಂದಿದೆ. ಕೇವಲ 5.6 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ತಲುಪಬಲ್ಲದು. 250 ಕಿಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications








