ನಾಳೆ ಹೊಸ ಹ್ಯುಂಡೈ ಕಾರು ಬಿಡುಗಡೆ: ಕ್ರೆಟಾ ತಮ್ಮನಾಗಿ ಮಿಂಚಲು ಸಜ್ಜಾದ ಆಕರ್ಷಕ SUV

ಹೊಸ ಕ್ರೆಟಾ ಇವಿ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈನ ಪ್ರಮುಖ ಎಲೆಕ್ಟ್ರಿಕ್ ಕಾರಾಗಿದ್ದು, ನಾಳೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇಂಧನ ಚಾಲಿತ ಕ್ರೆಟಾ ಕಾರಿನ ಅದೇ ಪ್ಲಾಟ್‌ ಫಾರ್ಮ್‌ನಲ್ಲಿ ಇದು ಕೂಡ ನಿರ್ಮಾಣವಾಗಲಿದೆ. ಹೊಸ ಹ್ಯುಂಡೈ ಕ್ರೆಟಾ ಇವಿ ಕಾರು ಭಾರತದ ಎಕ್ಸ್ ಶೋರೂಂ ದರದಂತೆ ರೂ.20 ಲಕ್ಷಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ವೆಚ್ಚವನ್ನು ನಿಯಂತ್ರಣದಲ್ಲಿಡಲು ಸಾಕಷ್ಟು ಒಳಾಂಗಣ ಸ್ವಿಚ್ ಗೇರ್, ಡ್ಯಾಶ್ ಬೋರ್ಡ್ ಮತ್ತು ಕೆಲವು ಬಾಹ್ಯ ಭಾಗಗಳನ್ನು ಸಾಮಾನ್ಯ ಕ್ರೆಟಾದಂತೆಯೇ ಇದರಲ್ಲೂ ಬಳಸಲಾಗಿದೆ. ಹೊಸ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿದೆ.

ನಾಳೆಯಿಂದ ಆರಂಭವಾಗಲಿರುವ 2025ರ ಆಟೋ ಎಕ್ಸ್‌ಪೋ (ಜನವರಿ 17) ದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಇದು ಮಾರುತಿ ಇ ವಿಟಾರಾ ಮತ್ತು ಟಾಟಾ ಕರ್ವ್ ಇವಿಗೆ ಪೈಪೋಟಿ ನೀಡಲಿದೆ. ವಿಶಿಷ್ಟ ಹ್ಯುಂಡೈ ಕ್ರೆಟಾ ಇವಿ ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೇ ಬಾಹ್ಯಾ ವಿನ್ಯಾಸ ಥೇಟ್ ಇಂಧನ ಚಾಲಿತ ಕ್ರೆಟಾ ಕಾರಿನಂತೆ ಕಂಡರು ಕೆಲ ವಿನ್ಯಾಸ ಬದಲಾವಣೆಗಳನ್ನು ಹೊಂದಿದೆ.

auto-expo-2025-hyundai-creta-ev-launch-tommorow-at-bharat-mobility-global-expo-2025

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು 42KWh ಮತ್ತು 51.4kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಚಿಕ್ಕ ಬ್ಯಾಟರಿ ಪ್ಯಾಕ್ 390 ಕಿ.ಮೀ ರೇಂಜ್ ಹಾಗೂ ದೊಡ್ಡದು MIDC ಪರೀಕ್ಷೆಯಲ್ಲಿ 473 ಕಿ.ಮೀ ರೇಂಜ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಬ್ಯಾಟರಿ ಪ್ಯಾಕ್‌ಗಳನ್ನು ಮುಂಭಾಗದ ಆಕ್ಸಲ್‌ಗೆ ಲಿಂಕ್ ಮಾಡಲಾದ ಒಂದೇ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ.

ಇದು 133bhp (42kWh ಬ್ಯಾಟರಿ ಪ್ಯಾಕ್) ಮತ್ತು ದೊಡ್ಡ 51.2kWh ಬ್ಯಾಟರಿ ಪ್ಯಾಕ್‌ನೊಂದಿಗೆ 169bhp ಅನ್ನು ಉತ್ಪಾದಿಸುತ್ತದೆ. ಕ್ರೆಟಾದ ಈ ಹೆಚ್ಚು ಶಕ್ತಿಶಾಲಿ ದೀರ್ಘ-ಶ್ರೇಣಿಯ ಆವೃತ್ತಿಯು 7.9 ಸೆಕೆಂಡುಗಳಲ್ಲಿ 0-100km/h ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಕ್ರೆಟಾದ ಬ್ಯಾಟರಿ ಪ್ಯಾಕ್ ಕೇವಲ 58 ನಿಮಿಷಗಳಲ್ಲಿ ಶೇ80 ರಷ್ಟು ಚಾರ್ಜ್ ಮಾಡಬಹುದು ಎಂದು ಹ್ಯುಂಡೈ ಹೇಳಿಕೊಂಡಿದೆ.

auto-expo-2025-hyundai-creta-ev-launch-tommorow-at-bharat-mobility-global-expo-2025

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು 10 ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗುತ್ತಿದ್ದು, ಮೂರು ಮ್ಯಾಟ್ ಬಣ್ಣಗಳನ್ನು ಹೊಂದಿದೆ. ಒಳಗೆ ಡ್ಯಾಶ್‌ ಬೋರ್ಡ್‌ನಲ್ಲಿ ಟ್ವಿನ್ 10.25 ಇಂಚಿನ ಸ್ಕ್ರೀನ್‌ಗಳನ್ನು ನೀಡಲಾಗಿದ್ದು, ಒಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಮತ್ತೊಂದು ಇನ್ಫೋಟೈನ್‌ಮೆಂಟ್ ಸೆಟಪ್‌ಗಾಗಿ ಟಚ್‌ಸ್ಕ್ರೀನ್ ನೀಡಲಾಗಿದೆ. ಎರಡೂ ಸ್ಕ್ರೀನ್‌ಗಳು ದೊಡ್ಡದಾಗಿದ್ದು, ಬಳಸಲು ತುಂಬಾ ಸುಲಭ ಎನ್ನಿಸುತ್ತವೆ.

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಬೋಸ್‌ನಿಂದ 8-ಸ್ಪೀಕರ್ ಪ್ರೀಮಿಯಂ ಸೌಂಡ್ ಸಿಸ್ಟಮ್‌, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಸೌಂಡ್ ಸಿಸ್ಟಮ್‌ಗಾಗಿ ಕಂಟ್ರೋಲ್‌ಗಳು, USB A ಮತ್ತು C ಪೋರ್ಟ್‌ಗಳು, ಜೊತೆಗೆ 12V ಚಾರ್ಜಿಂಗ್ ಪೋರ್ಟ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಪ್ರಮುಖ ಫೀಚರ್ಸ್ ನೀಡಲಾಗಿದೆ.

auto-expo-2025-hyundai-creta-ev-launch-tommorow-at-bharat-mobility-global-expo-2025

ಇವಿಷ್ಟೇ ಅಲ್ಲದೆ ದೊಡ್ಡ ಸನ್‌ರೂಫ್, ಡಿಜಿಟಲ್ ಕೀ, ಕೂಲ್ಡ್ ಗ್ಲೋವ್‌ಬಾಕ್ಸ್, ವೆಹಿಕಲ್ 2 ಲೋಡ್ (V2L0), ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಹೊಸ 3-ಸ್ಪೋಕ್ ಸ್ಟೀರಿಂಗ್ ವೀಲ್ ನೀಡಲಾಗಿದೆ. ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, EBD ಜೊತೆಗೆ ABS, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ಗಳು (EPB) ಇವೆ.

ಹಾಗೆಯೇ ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC) ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ (HDC), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್‌ನೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಚೈಲ್ಡ್ ಸೀಟ್ ಆಂಕರ್ (ISOFIX) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಸೇರಿದಂತೆ 19 ವೈಶಿಷ್ಟ್ಯಗಳೊಂದಿಗೆ LEVEL-2 ADAS ಸೆಟಪ್ ಒಳಗೊಂಡಿದೆ.

More from DriveSpark

Article Published On: Thursday, January 16, 2025, 16:52 [IST]
English summary
Auto expo 2025 hyundai creta ev launch tommorow at bharat mobility global expo 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+