ಆಟೋ ಎಕ್ಸ್ ಪೋದಲ್ಲಿ ಅನಾವರಣವಾಗಲಿದೆ ಹೊಸ ಕಿಯಾ ಕಾರುಗಳು: ಜನಸಾಮಾನ್ಯರ ಅಂಬಾರಿ ಅಗುತ್ತಾ?

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ (kia) ತನ್ನ ಸರಣಿಯಲ್ಲಿರುವ ಹೊಸ ಅತ್ಯಾಕರ್ಷಕ ಕಾರುಗಳನ್ನು 2025ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲು ಸಜ್ಜಾಗಿದ. 2025ರ ಆಟೋ ಎಕ್ಸ್‌ಪೋದಲ್ಲಿ ಕಿಯಾ ಪ್ರದರ್ಶಿಸುವ ಮಾದರಿಗಳಲ್ಲಿ ಎರಡೂ ಹೊಸ ಕಾರುಗಳು ಕಿಯಾ ಸೈರಸ್ ಮತ್ತು ಕಿಯಾ ಇವಿ6 ಫೇಸ್‌ಲಿಫ್ಟ್ ಆಗಿದೆ. ಇದರ ಜೊತೆ ಇವಿ9 ಎಲೆಕ್ಟ್ರಿಕ್ ಕಾರ್ ಸೇರಿದಂತೆ ಪ್ರಸ್ತುತ ಮಾರಾಟ ಮಾಡುವ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. ಇನ್ನು ಕಿಯಾ ಕಂಪನಿಯ ಆವಿಷ್ಕಾರಗಳ ಸಮಗ್ರ ನೋಟವನ್ನು ನೀಡುತ್ತದೆ.

ಕಿಯಾ ಸೈರಸ್: 2025ರ ಆಟೋ ಎಕ್ಸ್‌ಪೋದಲ್ಲಿ ಕಿಯಾ ಪ್ರದರ್ಶಿಸುವ ಸೈರಸ್ ಕಾರಿನ ಬಗ್ಗೆ ಹೇಳುವುದಾದರೆ, ಈ ಸೈರಸ್ ಎಸ್‌ಯುವಿ ಹೆಚ್‌ಟಿಕೆ, ಹೆಚ್‌ಟಿಕೆ (ಒ), ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್ ಹಾಗೂ ಹೆಚ್‌ಟಿಎಕ್ಸ್ ಪ್ಲಸ್ (ಒ) ಎಂಬ ಆಕರ್ಷಕ ರೂಪಾಂತರಗಳ (ವೇರಿಯೆಂತ್) ಆಯ್ಕೆಯನ್ನು ಹೊಂದಿದೆ. ಕಿಯಾ ಸೈರಸ್ ಎಸ್‌ಯುವಿ ಹೊರಭಾಗದಲ್ಲಿ ಅತ್ಯಾಧುನಿಕವಾದ ವಿನ್ಯಾಸ ಹೊಂದಿದೆ.

Kia

ಈ ಎಸ್‍ಯುವಿಯು 3-ಪಾಡ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, 'ಎಲ್' ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಟೈಲ್ ಲೈಟ್‌ಗಳು, ಫ್ಲಾಟ್ ಟೈಲ್‌ಗೇಟ್, 17-ಇಂಚಿನ ಅಲಾಯ್ ವೀಲ್‌ಗಳು, ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು ಮತ್ತು ಪನೊರೊಮಿಕ್ ಸನ್‌ರೂಫ್ ಅನ್ನು ಪಡೆದುಕೊಂಡಿದೆ. ಸೈರಸ್ ಎರಡು ಪವರ್‌ಟ್ರೇನ್ ಲಭ್ಯವಿದೆ. ಇದರಲ್ಲಿ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 ಪಿಎಸ್ ಪವರ್ ಹಾಗೂ 172 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ. ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ ಆಗಿದೆ. ಈ ಎಂಜಿನ್ 116 ಪಿಎಸ್ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಎಂಟಿ ಹಾಗೂ 6-ಸ್ಪೀಡ್ ಎಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಇನ್ನು ಈ ಎಸ್‍ಯುವಿಯ ಮೈಲೇಜ್ ಕುರಿತಂತೆ ಯಾವುದೇ ವಿವರಗಳನ್ನು ಕಂಪನಿಯು ಬಹಿರಂಗಪಡಿಸಿಲ್ಲ.

Kia

ಕಿಯಾ ಇವಿ6 ಫೇಸ್‌ಲಿಫ್ಟ್: ಕಳೆದ ಮೇ ತಿಂಗಳಲ್ಲಿ ಜಾಗತಿಕವಾಗಿ ಅನಾವರಣಗೊಂಡ ಕಿಯಾ ಇವಿ6 ಫೇಸ್‌ಲಿಫ್ಟ್ ಸಹ 2025ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಸಲಿದೆ. ಈ ಕಿಯಾ ಇವಿ6 ಫೇಸ್‌ಲಿಫ್ಟ್ ಮಾದರಿಯಲ್ಲಿ ಮುಂಭಾಗವನ್ನು ಮತ್ತು ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು ಗ್ರಿಲ್ ಅನ್ನು ಒಳಗೊಂಡಿದೆ. ಒಳಗೆ, ತಂತ್ರಜ್ಞಾನದ ನವೀಕರಣಗಳಲ್ಲಿ ಡಿಜಿಟಲ್ ರೇರ್ ವ್ಯೂ ಮೀರರ್, ಹೆಡ್-ಅಪ್ ಡಿಸ್ಪ್ಲೇ, AI- ಆಧಾರಿತ ನ್ಯಾವಿಗೇಷನ್ ಮತ್ತು ಹೊಸ ಸ್ಟೀರಿಂಗ್ ವೀಲ್ ಸೇರಿವೆ.

ಇನ್ನು ಫೇಸ್‌ಲಿಫ್ಟ್ 84kWh ಬ್ಯಾಟರಿಯು 494km ರೇಂಜ್ ಅನ್ನು ನೀಡುತ್ತದೆ. ಈ ಇವಿ6 ಫೇಸ್‌ಲಿಫ್ಟ್ ಹಿಂದಿನ 77.4 kWh ಪ್ಯಾಕ್ ಅನ್ನು ಬದಲಿಸುವ ಅದರ ದೊಡ್ಡ ಬ್ಯಾಟರಿಯೊಂದಿಗೆ ಸುಧಾರಿತ ಮೆಕ್ಯಾನಿಕಲ್‌ಗಳನ್ನು ಹೊಂದಿದೆ. RWD ಆವೃತ್ತಿಯು 229hp ಮತ್ತು 350Nm ಟಾರ್ಕ್ ಅನ್ನು ಉತ್ಪಾದಿಸುವ ಸಿಂಗಲ್ ಮೋಟರ್ ಅನ್ನು ಹೊಂದಿದೆ, ಆದರೆ ಡ್ಯುಯಲ್-ಮೋಟರ್ ರೂಪಾಂತರಗಳು 325hp ಮತ್ತು 605Nm ಟಾರ್ಕ್ ಅನ್ನು ನೀಡುತ್ತವೆ.

ಕಿಯಾ ಇವಿ9: ಈ ಕಿಯಾ ಇವಿ9 ಎಸ್‍ಯುವಿ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ನಂತರ ಎಕ್ಸ್‌ಪೋದಲ್ಲಿ 1.30 ಕೋಟಿ ರೂ. ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಿಯಾದ ಜಾಗತಿಕ ಫ್ಲ್ಯಾಗ್‌ಶಿಪ್ ಆಗಿ, ಇದು ಐದು ಮೀಟರ್‌ಗಿಂತಲೂ ಹೆಚ್ಚು ಉದ್ದದ ಭವ್ಯವಾದ ಉಪಸ್ಥಿತಿಯೊಂದಿಗೆ CBU ಆಮದು ಆಗಿ ಭಾರತಕ್ಕೆ ಆಗಮಿಸುತ್ತದೆ. ಒಳಗೆ, ಇದು ಎರಡನೇ ಸಾಲಿಗೆ ಕ್ಯಾಪ್ಟನ್ ಸೀಟುಗಳೊಂದಿಗೆ ಆರು ಸೀಟುಗಳ ವಿನ್ಯಾಸವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 16, 2025, 15:40 [IST]
English summary
Auto expo 2025 kia syros to be showcased with ev6 facelift details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+