Auto Expo 2025: ಒಂದೇ ಸೂರಿನಡಿ ಎಲ್ಲ ವಾಹನಗಳು..ಇಂದಿನಿಂದ ಆಟೋ ಎಕ್ಸ್‌ಪೋ 2025ಕ್ಕೆ ಚಾಲನೆ

ವಾಹನ ಪ್ರಿಯರು ಕಾತರದಿಂದ ಕಾಯುತ್ತಿದ್ದ ಆಟೋ ಎಕ್ಸ್‌ಪೋ ಇಂದಿನಿಂದ ಆರಂಭವಾಗಲಿದ್ದು, ಜನವರಿ 22 ರವರೆಗೆ ನಡೆಯಲಿದೆ. ಈ ಬಾರಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ - 2025 (Bharat Mobility Global Expo - 2025) ಹೆಸರಿನಲ್ಲಿ ಬೃಹತ್ ವಾಹನಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM), ಈ ಆಟೋ ಎಕ್ಸ್‌ಪೋದ ಸಂಪೂರ್ಣವಾದ ಜವಾಬ್ದಾರಿಯನ್ನು ಹೊತ್ತಿದೆ.

ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ್ ಮಂಟಪದಲ್ಲಿ ಈ ಆಟೋ ಎಕ್ಸ್‌ಪೋ ನಡೆಯಲಿದ್ದು, ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ಅದ್ದೂರಿ ವಾಹನ ಪ್ರದರ್ಶನಕ್ಕೆ ಚಾಲನೆ ನೀಡುವ ಸಾಧ್ಯತೆಯಿದೆ. ಇದೇ ಸಮಾರಂಭದಲ್ಲಿ ಬೈಕ್, ಸ್ಕೂಟರ್, ಕಾರು ಮತ್ತು ಬಸ್ ತಯಾರಕರು ಸೇರಿದಂತೆ ಸರಿ ಸುಮಾರು 30ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನೀರಿಕ್ಷೆಯಿದೆ.

Auto Expo 2025 Starts Today You Should Must Know

ವಿಶೇಷವಾಗಿ ಆಟೋ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಮಹೀಂದ್ರಾ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್, ಹ್ಯುಂಡೈ ಮೋಟಾರ್ ಇಂಡಿಯಾ ಹಾಗೂ ಕಿಯಾ ಮೋಟಾರ್ಸ್, ಬಿವೈಡಿ, ವಿನ್‌ಫಾಸ್ಟ್, ಲೆಕ್ಸಸ್ ಮತ್ತು ಬಿಎಂಡಬ್ಲ್ಯೂ ಒಳಗೊಂಡಂತೆ 14 ಕಾರು ತಯಾರಕ ಕಂಪನಿಗಳು ಭಾಗವಹಿಸಲಿವೆ. ಈ ಸಮಾರಂಭದಲ್ಲಿ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾದರೆ, ಟಾಟಾ ಹ್ಯಾರಿಯರ್ ಇವಿ ಹಾಗೂ ಮಾರುತಿ ಸುಜುಕಿ ಇ ವಿಟಾರಾ ಕಾರುಗಳು ಅನಾವರಣಗೊಳ್ಳಲಿವೆ.

ಇದೇ ಆಟೋ ಎಕ್ಸ್‌ಪೋದಲ್ಲಿ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಟಿವಿಎಸ್ ಮೋಟಾರ್, ಹೀರೋ ಮೋಟೊಕಾರ್ಪ್, ಬಜಾಜ್ ಆಟೋ, ಎಥರ್ ಎನರ್ಜಿ, ಓಲಾ ಎಲೆಕ್ಟ್ರಿಕ್ ಒಳಗೊಂಡನಂತೆ ಹಲವು ವಾಹನ ತಯಾರಕ ಕಂಪನಿಗಳು ಸಹ ಭಾಗವಹಿಸಲಿವೆ. ಜೊತೆಗೆ ವಿವಿಧ ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸಿಲಿದ್ದು, ಸುಜುಕಿ ಆಕ್ಸೆಸ್ ಇವಿ ಹಾಗೂ ಟಿವಿಎಸ್ ಜುಪಿಟರ್ ಇವಿಗಳು ಅನಾವರಣಗೊಳ್ಳಲಿವೆ ಎನ್ನಲಾಗಿದೆ.

ಯಾವುದೇ ಶುಲ್ಕವಿಲ್ಲ: ಈ ಆಟೋ ಎಕ್ಸ್‌ಪೋಗೆ ಸಾರ್ವಜನಿಕರು ಕೂಡ ಸುಲಭವಾಗಿ ಭೇಟಿ ನೀಡಬಹುದು. ಇದಕ್ಕಾಗಿ ಆಯೋಜಕರು ಯಾವುದೇ ರೀತಿಯ ಪ್ರತ್ಯೇಕ ಶುಲ್ಕ ವಿಧಿಸಿರುವುದಿಲ್ಲ. ನೀವು ಎಕ್ಸ್‌ಪೋ ವೀಕ್ಷಿಸಲು ಭಾರತ್ ಮೊಬಿಲಿಟಿ ಎಕ್ಸ್‌ಪೋ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಗತ್ಯವಿರುವ ಎಲ್ಲ ವಿವರಗಳನ್ನು ನಮೂದಿಸಿ ನೋಂದಣಿ ಮಾಡಬಹುದು.

ನಮ್ಮ ಕನ್ನಡ ಡ್ರೈವ್‌ಸ್ಪಾರ್ಕ್ ತಂಡವು ಆಟೋ ಎಕ್ಸ್‌ಪೋದ ಕ್ಷಣಕ್ಷಣದ ಮಾಹಿತಿ ಒದಗಿಸಲಿದೆ. ತ್ವರಿತ ವಿವರಗಳಿಗಾಗಿ ನಮ್ಮ ಎಲ್ಲಾ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ಫಾಲೋ ಮಾಡಿ...

More from DriveSpark

Article Published On: Friday, January 17, 2025, 7:42 [IST]
English summary
Auto expo 2025 starts today you should must know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+