Toyota: ಮಾನ್ಸೂನ್‌ಗೆ ಸಿದ್ಧರಾಗಿ: ಸರ್ವಿಸ್ ಸೇರಿದಂತೆ ಹೆಚ್ಚಿನವುಗಳ ಮೇಲೆ ಅತ್ಯಾಕರ್ಷಕ ಆಫರ್!

ಟೊಯೋಟಾ (Toyota) ಈ ಮಾನ್ಸೂನ್ ಋತುವಿನಲ್ಲಿ ತನ್ನ 'ಅದ್ಭುತ ಟೊಯೋಟಾ ಸೇವಾ ಅಭಿಯಾನ'ವನ್ನು ಪ್ರಾರಂಭಿಸಿದೆ. ಇದು ದಕ್ಷಿಣ ಭಾರತದಲ್ಲಿರುವ ಎಲ್ಲಾ ಅಧಿಕೃತ ಟೊಯೋಟಾ ಡೀಲರ್‌ಶಿಪ್‌ಗಳಲ್ಲಿ ಒಂದು ಉಪಕ್ರಮವಾಗಿದೆ. ಮಳೆಗಾಲಕ್ಕೆ ನಿಮ್ಮ ವಾಹನವನ್ನು ಸಿದ್ಧಪಡಿಸುವುದಾಗಲಿ, ಮಾನ್ಸೂನ್ ಆರೈಕೆಯೊಂದಿಗೆ ಒಳಾಂಗಣವನ್ನು ರಿಫ್ರೆಶ್ ಮಾಡುವುದಾಗಲಿ ಅಥವಾ ಟೈರ್ ಮತ್ತು ಬ್ಯಾಟರಿ ಪರಿಶೀಲನೆಗಳೊಂದಿಗೆ ಸುಗಮ ಸವಾರಿಯನ್ನು ಖಚಿತಪಡಿಸಿಕೊಳ್ಳಲು ಈ ಅಭಿಯಾನವು ಗ್ರಾಹಕರಿಗೆ ಸಹಕರಿಸಲಿದೆ. ಅಲ್ಲದೆ ನಿಮ್ಮನ್ನು ಸುರಕ್ಷಿತವಾಗಿ, ಆರಾಮದಾಯಕವಾಗಿರಿಸಲು ಬೇಕಾದ ಎಲ್ಲಾ ಕಾರ್ ಚೆಕಪ್ ಹಾಗೂ ಸರ್ವಿಸ್ ಅನ್ನು ಈ ಅಭಿಯಾನ ಒಳಗೊಂಡಿರುವುದಾಗಿ ಟೊಯೋಟಾ ಹೇಳಿದೆ.

"ಟೊಯೋಟಾ ಸೇವಾ ಅಭಿಯಾನ"ದ ಪ್ರಮುಖ ಮುಖ್ಯಾಂಶಗಳನ್ನು ನೋಡುವುದಾದ್ರೆ, ಟೈರ್ ಮತ್ತು ಬ್ಯಾಟರಿ ಪರೀಕ್ಷೆಯೊಂದಿಗೆ 20 - ಪಾಯಿಂಟ್ ಉಚಿತ ವಾಹನ ತಪಾಸಣೆ, ಲೇಬರ್ ಚಾರ್ಜ್ ಮೇಲೆ ಶೇ 10 ವರೆಗೆ ರಿಯಾಯಿತಿ, ಟಿ ಗ್ಲಾಸ್ - ಶೇ 10 ರಿಯಾಯಿತಿಯನ್ನು ಒಳಗೊಂಡಿದೆ ಎಂದು ಟೊಯೋಟಾ ತಿಳಿಸಿದೆ.

awesome-toyota-service-campaign-across-south-india

ಮಾನ್ಸೂನ್ ಆರೈಕೆ ಪ್ಯಾಕೇಜ್: ಒಳಾಂಗಣ ಶುಚಿಗೊಳಿಸುವಿಕೆ, ವಿಂಡ್‌ಶೀಲ್ಡ್ ಪಾಲಿಶ್, ಹೆಡ್‌ಲ್ಯಾಂಪ್ ಮರುಸ್ಥಾಪನೆ (Restoration) ಮತ್ತು ವಾಸನೆ ತಟಸ್ಥೀಕರಣವನ್ನು ಒಳಗೊಂಡಿದೆ. ಈ ಪ್ಯಾಕೇಜ್ ಮಳೆಗಾಲದಲ್ಲಿ ಸೂಕ್ತ ಗೋಚರತೆ, ನೈರ್ಮಲ್ಯ ಮತ್ತು ಸೌಕರ್ಯವನ್ನು ಖಚಿತಪಡಿಸುತ್ತದೆ. ಹಾಗೆಯೇ ಟೈರ್‌ಗಳು ಮತ್ತು ಬ್ಯಾಟರಿಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಅಭಿಯಾನವು ದಕ್ಷಿಣ ಭಾರತದಾದ್ಯಂತ ನಡೆಯಲಿದ್ದು, ಜುಲೈ 2025 ರವರೆಗೆ ಇರಲಿದೆ.

ಈ ಅಭಿಯಾನದ ಕುರಿತು ಮಾತನಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಮಾರಾಟ ಸೇವೆ ಬಳಸಿದ ಕಾರುಗಳ ದಕ್ಷಿಣ ಪ್ರದೇಶದ ಉಪಾಧ್ಯಕ್ಷೆ, ವೈಸ್‌ಲೈನ್ ಸಿಗಮಣಿ, "ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನಲ್ಲಿ, ತಡೆರಹಿತ ಮಾಲೀಕತ್ವದ ಅನುಭವಕ್ಕೆ ನಮ್ಮ ಬದ್ಧತೆಯು 'ಗ್ರಾಹಕ ಮೊದಲು' ವಿಧಾನದಿಂದ ಮಾರ್ಗದರ್ಶಿಸಲ್ಪಟ್ಟಿದೆ. ದಕ್ಷಿಣ ಭಾರತದಾದ್ಯಂತ ವಿಶೇಷವಾದ 'ಅದ್ಭುತ ಟೊಯೋಟಾ ಸೇವಾ ಅಭಿಯಾನ'ವನ್ನು ಜಾರಿಗೆ ತರಲು ನಾವು ಉತ್ಸುಕರಾಗಿದ್ದೇವೆ.

awesome-toyota-service-campaign-across-south-india

ಇದು ಮಾನ್‌ಸೂನ್ ಉದ್ದಕ್ಕೂ ನಮ್ಮ ಗ್ರಾಹಕರನ್ನು ಪೂರ್ವಭಾವಿ ವಾಹನ ಆರೈಕೆ ಮತ್ತು ಸಕಾಲಿಕ ತಡೆಗಟ್ಟುವ ನಿರ್ವಹಣೆಯೊಂದಿಗೆ ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಉಚಿತ ತಪಾಸಣೆಯಿಂದ ಹಿಡಿದು ಸರ್ವಿಸ್, ಟೈರ್‌ಗಳು ಮತ್ತು ಪರಿಕರಗಳ ಮೇಲಿನ ವಿಶೇಷ ಕೊಡುಗೆಗಳವರೆಗೆ, ಈ ಅಭಿಯಾನವು ಸುರಕ್ಷಿತ, ಸುಗಮ ಮತ್ತು ಚಿಂತೆ - ಮುಕ್ತ ಪ್ರಯಾಣಗಳನ್ನು ಖಚಿತಪಡಿಸಿಕೊಳ್ಳುವುದನ್ನು ಒಳಗೊಂಡಿದೆ ಎಂದರು.

ಈ ಸೇವೆಗಳ ಜೊತೆಗೆ, ಮಾನ್ಸೂನ್ ಚಾಲನೆಗಾಗಿ ಗ್ರಾಹಕರು ಸರಳ ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಳ್ಳಲು ಟೊಯೋಟಾ ಪ್ರೋತ್ಸಾಹಿಸುತ್ತಿರುವುದಾಗಿ ಹೇಳಿದೆ. ತಮ್ಮ ಗ್ರಾಹಕರು ಮಳೆ ಸೀಸನ್‌ನಲ್ಲಿ ಕಾರುಗಳನ್ನು ಹೇಗಿಡಬೇಕು ಹಾಗೂ ಅವುಗಳ ನಿರ್ವಹಣೆಯ ಬಗ್ಗೆ ತಿಳುವಳಿಕೆಯನ್ನು ನೀಡಲು ಗ್ರಾಹಕರಿಗೆ ಹಲವು ಸಲಹೆಗಳನ್ನು ಕೂಡ ನೀಡುತ್ತಿರುವುದಾಗಿ ಹೇಳಿಕೊಂಡಿದೆ.

awesome-toyota-service-campaign-across-south-india

ಉದಾಹರಣೆಗೆ ಅತ್ಯುತ್ತಮ ಟೈರ್ ಒತ್ತಡವನ್ನು (Tyre Pressure) ಕಾಪಾಡಿಕೊಳ್ಳುವುದು, ವೈಪರ್‌ಗಳು ಮತ್ತು ಹೆಡ್‌ ಲೈಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳುವುದು, ನೀರು ತುಂಬಿದ ರಸ್ತೆಗಳನ್ನು ತಪ್ಪಿಸುವುದು ಮತ್ತು ಟಾರ್ಚ್ ‌ಗಳು, ಟವೆಲ್ ‌ಗಳು ಮತ್ತು ಮಳೆ ಉಡುಪುಗಳಂತಹ ಅಗತ್ಯ ವಸ್ತುಗಳನ್ನು ವಾಹನದಲ್ಲಿ ಇಡುವುದಾಗಿದೆ.

ಟೊಯೋಟಾ ಗ್ರಾಹಕರು ಮಾನ್ಸೂನ್‌ಗೆ ಸಿದ್ಧರಾಗಿ ಸರ್ವಿಸ್, ಟೈರ್‌ಗಳು, ಪರಿಕರಗಳು ಮತ್ತು ಇನ್ನೂ ಹೆಚ್ಚಿನವುಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳೊಂದಿಗೆ 'ಅದ್ಭುತ ಟೊಯೋಟಾ ಸೇವಾ ಅಭಿಯಾನ'ವನ್ನು ಬಳಸಿಕೊಳ್ಳಬೇಕು. ಈ ಅಭಿಯಾನವು ಈ ಸೀಸನ್‌ನಲ್ಲಿ ನಿಮ್ಮನ್ನು ಆರಾಮದಾಯಕ ಮತ್ತು ಕಾರನ್ನು ರಸ್ತೆಗೆ ಸಿದ್ಧವಾಗಿಡುವ ಮೂಲಕ ಸುರಕ್ಷಿತ ಪ್ರಯಾಣಕ್ಕೆ ಸಹಕಾರಿಯಾಗಿದೆ ಎಂದು ಟೊಯೋಟಾ ಹೇಳಿದೆ.

More from DriveSpark

Article Published On: Tuesday, July 8, 2025, 10:20 [IST]
English summary
Awesome toyota service campaign across south india
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+