27 Km ಮೈಲೇಜ್.. 5 ಲಕ್ಷ.. ಜನಪ್ರಿಯ Maruti Eecoಗೆ 3 ಬದಲಿ ಕಾರುಗಳಿವು.. ಬೆಲೆಯೂ ಅಗ್ಗ!

ಮಾರುತಿ ಸುಜುಕಿ ಇಕೋ (Maruti Suzuki Eeco) ಜನಪ್ರಿಯ ವ್ಯಾನ್ ಆಗಿದೆ. ಇದು ರೂ.5.70 ಲಕ್ಷದಿಂದ ರೂ.6.96 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 1.2-ಲೀ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ ಆಯ್ಕೆಯನ್ನು ಒಳಗೊಂಡಿದೆ. 19 ರಿಂದ 27 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 5/ 7 ಆಸನಗಳನ್ನು ಒಳಗೊಂಡಿದೆ. ಸೆಮಿ ಡಿಜಿಟಲ್ ಸ್ಪೀಡೋಮೀಟರ್ ಮತ್ತು ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳನ್ನು ಪಡೆದಿದೆ. ನೀವು 'ಇಕೋ'ಗೆ ಪರ್ಯಾಯವಾಗಿ ಈ 3 ಕಾರುಗಳನ್ನು ಖರೀದಿ ಮಾಡಬಹುದು. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR):

ಇದು ಸ್ವತಃ ಮಾರುತಿ ಕಂಪನಿ ಕಾರಾಗಿದ್ದರೂ 'ಇಕೋ' ವ್ಯಾನ್‌ಗೆ ಅತ್ಯುತ್ತಮವಾದ ಬದಲಿ ಆಯ್ಕೆಯಾಗಲಿದೆ. ಆದರೆ, ಈ ವ್ಯಾಗನ್ಆರ್ 5 ಆಸನದೊಂದಿಗೆ ಮಾತ್ರ ಲಭ್ಯವಿದೆ. ಅದಕ್ಕೆ ತಕ್ಕಂತೆ ಕನಿಷ್ಠ ರೂ.5.79 ಲಕ್ಷ ಹಾಗೂ ಗರಿಷ್ಠ ರೂ.7.62 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಸರಳವಾದ ವಿನ್ಯಾಸವನ್ನು ಹೊಂದಿದೆ. ಪೂಲ್‌ಸೈಡ್ ಬ್ಲೂ, ಸುಪೀರಿಯರ್ ವೈಟ್, ಸಿಲ್ಕಿ ಸಿಲ್ವರ್ & ಮ್ಯಾಗ್ಮಾ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

Best 3 Alternative Cars For Maruti Suzuki Eeco WagonR Triber And Exter

ಈ ಕಾರು 1-ಲೀ. ಪೆಟ್ರೋಲ್, 1.2-ಲೀ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 23 ರಿಂದ 34 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 7-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್ ಹಾಗೂ ಸ್ಟೀರಿಂಗ್ ಮೌಂಟೆಡ್ ಆಡಿಯೋ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿದೆ.

ರೆನಾಲ್ಟ್ ಟ್ರೈಬರ್ (Renault Triber):

ಈ ಎಂಪಿವಿಯು ಮಾರುತಿ ಸುಜುಕಿ ಇಕೋಗೆ ಉತ್ತಮವಾದ ಪರ್ಯಾಯ ಆಯ್ಕೆಯಾಗಲಿದ್ದು, ರೂ.6.15 ಲಕ್ಷದಿಂದ ರೂ.8.98 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಸಿಗುತ್ತದೆ. ಇದು ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಐಸ್ ಕೂಲ್ ವೈಟ್, ಸೀಡರ್ ಬ್ರೌನ್, ಮೂನ್‌ಲೈಟ್ ಸಿಲ್ವರ್ ಹಾಗೂ ಎಲೆಕ್ಟ್ರಿಕ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Best 3 Alternative Cars For Maruti Suzuki Eeco WagonR Triber And Exter

ನೂತನ ಟ್ರೈಬರ್ 1-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 18 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 7 ಆಸನ ಆಯ್ಕೆ ವ್ಯವಸ್ಥೆಯಿದ್ದು, ಒಂದು ತುಂಬು ಕುಟುಂಬ ಸುಲಭವಾಗಿ ಸಂಚರಿಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ ಚಿಕ್ಕ ಗಾತ್ರದ 84 ಲೀಟರ್ ಸಾಮರ್ಥ್ಯದ ಸ್ಪೇಸ್‌ನ್ನು ಒಳಗೊಂಡಿದೆ.

ಇದು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಚಾರ್ಜರ್ ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 4 ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ರೇರ್ ವ್ಯೂ ಕ್ಯಾಮೆರಾವನ್ನು ಒಳಗೊಂಡಿದೆ.

Best 3 Alternative Cars For Maruti Suzuki Eeco WagonR Triber And Exter

ಹ್ಯುಂಡೈ ಎಕ್ಸ್‌ಟರ್ (Hyundai Exter):

ಈ ಎಸ್‌ಯುವಿಯನ್ನು ಮಾರುತಿ ಸುಜುಕಿ ಇಕೋಗೆ ಬದಲಾಗಿ ಕೊಂಡುಕೊಳ್ಳಬಹುದು. ಆದರೆ ಎಕ್ಸ್‌ಟರ್ 5 ಆಸನದೊಂದಿಗೆ ಮಾತ್ರ ಲಭ್ಯವಿದ್ದು, ಕನಿಷ್ಠ ರೂ.6.20 ಲಕ್ಷ ಮತ್ತು ಗರಿಷ್ಠ ರೂ.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹಾಗೆಯೇ ವಿವಿಧ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

Best 3 Alternative Cars For Maruti Suzuki Eeco WagonR Triber And Exter

ಇದು 1.2-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 19 ರಿಂದ 27 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 8-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸೆಮಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ.

Article Published On: Wednesday, June 25, 2025, 8:30 [IST]
English summary
Best 3 alternative cars for maruti suzuki eeco wagonr triber and exter
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+