ನಿನ್ನೆಯಷ್ಟೇ ಬಿಡುಗಡೆ.. 11.99 ಲಕ್ಷ.. ಹೊಸ 'ಎಂಜಿ ಹೆಕ್ಟರ್ ಫೇಸ್‌ಲಿಫ್ಟ್‌ಗೆ 3 ಪರ್ಯಾಯ ಕಾರುಗಳಿವು, ಬೆಲೆ ಎಷ್ಟು?
ನಿನ್ನೆಯಷ್ಟೇ ಹೊಚ್ಚ ಹೊಸ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ (MG Hector Facelift) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ. ಇದು ರೂ.11.99 ಲಕ್ಷದಿಂದ ರೂ.19.49 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಸ್ಟ್ಯಾಂಡರ್ಡ್ ಹೆಕ್ಟರ್ ಹಾಗೂ ಹೆಕ್ಟರ್ ಪ್ಲಸ್ ಎಂಬ 2 ರೂಪದಲ್ಲಿ ಗ್ರಾಹಕರಿಗೆ ಲಭ್ಯವಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಪರ್ಲ್ ವೈಟ್, ಗ್ಲೇಜ್ ರೆಡ್, ಅರೋರಾ ಸಿಲ್ವರ್, ಸ್ಟಾರಿ ಬ್ಲ್ಯಾಕ್ ಹಾಗೂ ಸೆಲಾಡಾನ್ ಬ್ಲೂ ಎಂಬ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ. 5 ಮತ್ತು 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ.
ಈ ಕಾರು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 14 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಆಂಬಿಯೆಂಟ್ ಲೈಟಿಂಗ್, ಏರ್ ಪ್ಯೂರಿಫೈಯರ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್ ಹಾಗೂ ಇನ್ಫಿನಿಟಿ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಲೆವೆಲ್-2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ನೀವು ಇದೇ 'ಎಂಜಿ ಹೆಕ್ಟರ್ ಫೇಸ್‌ಲಿಫ್ಟ್'ಗೆ ಬದಲಾಗಿ ಈ 3 ಎಸ್‌ಯುವಿಗಳಾದ ಮಹೀಂದ್ರಾ ಸ್ಕಾರ್ಪಿಯೊ ಎನ್, ಹ್ಯುಂಡೈ ಅಲ್ಕಾಜರ್ ಹಾಗೂ ಟಾಟಾ ಸಫಾರಿಗಳನ್ನು ಖರೀದಿಸಬಹುದು. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N):
ಇದೊಂದು ಜನಪ್ರಿಯ ಎಸ್‌ಯುವಿಯಾಗಿದೆ. 'ಎಂಜಿ ಹೆಕ್ಟರ್ ಫೇಸ್‌ಲಿಫ್ಟ್'ಗೆ ಪರ್ಯಾಯವಾಗಿಯೂ ಕೊಂಡುಕೊಳ್ಳಬಹುದು. ರೂ.13.20 ಲಕ್ಷದಿಂದ ರೂ.24.17 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಮಿಡ್‌ನೈಟ್ ಬ್ಲ್ಯಾಕ್, ಎವರೆಸ್ಟ್ ವೈಟ್, ಸ್ಟೆಲ್ತ್ ಬ್ಲ್ಯಾಕ್, ವ್ಯಾಲಿರಿಯನ್ ಸಿಲ್ವರ್, ಡೀಪ್ ಫಾರೆಸ್ಟ್ ಹಾಗೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 6/ 7 ಆಸನಗಳನ್ನು ಹೊಂದಿದೆ.

ನೂತನ 'ಸ್ಕಾರ್ಪಿಯೋ ಎನ್' 2.2-ಲೀಟರ್ ಡೀಸೆಲ್ ಹಾಗೂ 2.0-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12 ಸ್ಪೀಕರ್ 3ಡಿ ಸೋನಿ ಸೌಂಡ್ ಸಿಸ್ಟಮ್, ಡುಯಲ್ ಝೋನ್ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಸನ್‌ರೂಫ್ ಹಾಗೂ ಪುಶ್-ಬಟನ್ ಸ್ಟಾರ್ಟ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.
ಹ್ಯುಂಡೈ ಅಲ್ಕಾಜರ್ (Hyundai Alcazar):
ಈ ಕಾರನ್ನು 'ಎಂಜಿ ಹೆಕ್ಟರ್ ಫೇಸ್‌ಲಿಫ್ಟ್'ಗೆ ಬದಲಾಗಿ ಮನೆಗೆ ತರಬಹುದು. ರೂ.14.47 ಲಕ್ಷದಿಂದ ರೂ.21.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಬ್ಲ್ಯಾಕ್ ಮ್ಯಾಟ್, ರೇಂಜರ್ ಖಾಕಿ, ಶ್ಯಾಡೋ ಗ್ರೇ ಹಾಗೂ ಸ್ಟಾರಿ ನೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 6/ 7 ಆಸನ ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ.

ಹೊಸ 'ಅಲ್ಕಾಜರ್' 1.5-ಲೀಟರ್ ಜಿಡಿಟಿ ಟರ್ಬೊ ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡಿಸ್‌ಪ್ಲೇಗಳು, ಡುಯಲ್-ಜೋನ್ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ ಮತ್ತು 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಒಳಗೊಂಡಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಟಾಟಾ ಸಫಾರಿ (Tata Safari):
ಇದು ಪ್ರಖ್ಯಾತ ಎಸ್‌ಯುವಿಯಾಗಿದ್ದು, 'ಎಂಜಿ ಹೆಕ್ಟರ್ ಫೇಸ್‌ಲಿಫ್ಟ್'ಗೆ ಪರ್ಯಾಯವಾಗಿ ತೆಗೆದುಕೊಳ್ಳಬಹುದು. ರೂ.14.66 ಲಕ್ಷದಿಂದ ರೂ.25.96 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯಾಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಸೂಪರ್ನೋವಾ ಕಾಪರ್, ಕಾಸ್ಮಿಕ್ ಗೋಲ್ಡ್, ಫ್ರಾಸ್ಟ್ ವೈಟ್, ಫ್ರಾಸ್ಟ್ ರಾಯಲ್ ಬ್ಲೂ, ಪ್ಯೂರ್ ಗ್ರೇ ಹಾಗೂ ಸ್ಟೆಲ್ತ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 6/ 7 ಆಸನಗಳನ್ನು ಒಳಗೊಂಡಿದೆ.

ನೂತನ 'ಸಫಾರಿ' 2-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಜೆಬಿಎಲ್ ಸೌಂಡ್ ಸಿಸ್ಟಮ್, ಸನ್‌ರೂಫ್ & ಆಟೋಮೆಟಿಕ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 7 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.


Click it and Unblock the Notifications








