ನಮ್ಮ ಹಳ್ಳಿಗೂ ಸೈ.. ಬೆಂಗಳೂರು ಸಿಟಿಗೂ ಜೈ.. ಕಡಿಮೆ ಬೆಲೆಯ 3 ಕಾರುಗಳಿವು, 33+ Km ಮೈಲೇಜ್!

ಹೊಸದೊಂದು ಕಾರು ಖರೀದಿ ಮಾಡಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಅದು ಹಳ್ಳಿಯೇ ಇರಲಿ.. ನಗರವೇ ಆಗಿರಲಿ ಎಲ್ಲರಿಗೂ ಕಾರುಗಳು ಬೇಕೇ ಬೇಕು. ಅದರಲ್ಲೂ ಬೆಂಗಳೂರಿನಂತಹ ಬೃಹತ್ ಪಟ್ಟಣಗಳಲ್ಲಿ ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಪಡೆಯಲು ಕಾರುಗಳು ತೀರಾ ಅನಿವಾರ್ಯವಾಗಿವೆ. ಜೊತೆಗೆ ಹಲವು ಕೆಲಸಗಳಿಗೆ ಗ್ರಾಮೀಣ ಭಾಗದಲ್ಲೂ ಕಾರುಗಳನ್ನು ಬಳಕೆ ಮಾಡಲಾಗುತ್ತದೆ. ನೀವು ಸಹ ನೂತನ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಮಾರುತಿ ಸುಜುಕಿ ಆಲ್ಟೊ ಕೆ10, ರೆನಾಲ್ಟ್ ಕ್ವಿಡ್ ಮತ್ತು ಮಾರುತಿ ಸುಜುಕಿ ವ್ಯಾಗನ್ಆರ್ ಕಾರುಗಳು ಅತ್ಯುತ್ತಮ ಆಯ್ಕೆಯಾಗಲಿವೆ.

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10)..

ಇದೊಂದು ಹ್ಯಾಚ್‌ಬ್ಯಾಕ್ ಆಗಿದೆ. ಹಳ್ಳಿ ಹಾಗೂ ನಗರ ಪ್ರದೇಶಕ್ಕೆ ಹೆಚ್ಚು ಸೂಕ್ತವಾಗಿದ್ದು, ಅತಿ ಕಡಿಮೆ ಬೆಲೆಗೂ ಖರೀದಿಗೆ ದೊರೆಯುತ್ತದೆ. ರೂ.4.23 ಲಕ್ಷದಿಂದ ರೂ.6.21 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದೆ. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಧ್ಯವಾಗುವಂತೆ 214 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.

Best 3 Low Price Cars For City And Village Buyers Alto Kwid Wagon R

ಈ ಕಾರು 1-ಲೀ. ಸಾಮರ್ಥ್ಯದ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 24.39 ರಿಂದ 33.85 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ. ಮೆಟಾಲಿಕ್ ಸಿಜ್ಲಿಂಗ್ ರೆಡ್ ಮತ್ತು ಮೆಟಾಲಿಕ್ ಸ್ಪೀಡಿ ಬ್ಲೂ ಸೇರಿದಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ರೆನಾಲ್ಟ್ ಕ್ವಿಡ್ (Renault KWID)..

ಇದು ಕೂಡ ಹ್ಯಾಚ್‌ಬ್ಯಾಕ್ ಆಗಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸುಲಭವಾಗಿ ಬಳಕೆ ಮಾಡಬಹುದು. ಈ ಕಾರು ಕನಿಷ್ಠ ರೂ.4.70 ಲಕ್ಷದಿಂದ ರೂ.6.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ಜೊತೆಗೆ 279 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

Best 3 Low Price Cars For City And Village Buyers Alto Kwid Wagon R

ನೂತನ ಕ್ವಿಡ್ ಕಾರು 1-ಲೀ. ಪೆಟ್ರೋಲ್ ಎಂಜಿನ್‌ ಆಯ್ಕೆಯನ್ನು ಹೊಂದಿದೆ. 21.46 ರಿಂದ 22.3 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀ ಲೆಸ್ ಎಂಟ್ರಿ ಮತ್ತು ಮ್ಯಾನುವಲ್ ಎಸಿ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಹೊಂದಿದೆ.

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR)..

ಈ ಹ್ಯಾಚ್‌ಬ್ಯಾಕ್‌ನ್ನು ಸಣ್ಣ ಹಳ್ಳಿ ಹಾಗೂ ದೊಡ್ಡ ನಗರಗಳಲ್ಲಿ ಉಪಯೋಗ ಮಾಡಬಹುದು. ಇದು ರೂ.5.79 ಲಕ್ಷದಿಂದ ರೂ.7.62 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಹೊಂದಿದ್ದು, ಸುಪೀರಿಯರ್ ವೈಟ್, ಸಿಲ್ಕಿ ಸಿಲ್ವರ್ ಹಾಗೂ ಮ್ಯಾಗ್ಮಾ ಗ್ರೇ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

Best 3 Low Price Cars For City And Village Buyers Alto Kwid Wagon R

ಇದರಲ್ಲಿ 5 ಆಸನಗಳಿವೆ. ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದು. 312 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. 1-ಲೀ. ಪೆಟ್ರೋಲ್, 1.2-ಲೀ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 23 ರಿಂದ 34 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು 6-ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 7, 2025, 22:39 [IST]
English summary
Best 3 low price cars for city and village buyers alto kwid wagon r
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+