Maruti: 17 Km ಮೈಲೇಜ್.. 12 ಲಕ್ಷ, ರಣಬೇಟೆಗಾರ ಮಾರುತಿ ಜಿಮ್ನಿಗೆ 3 ಬದಲಿ ಎಸ್‌ಯುವಿಗಳಿವು.. ಬೆಲೆ ಎಷ್ಟು, ಹೇಗಿವೆ?

ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಪ್ರಮುಖ ಆಫ್-ರೋಡ್ ಎಸ್‌ಯುವಿಯಾಗಿದೆ. ರೂ.12.31 ಲಕ್ಷದಿಂದ ರೂ.14.45 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ನೆಕ್ಸಾ ಬ್ಲ್ಯೂ, ಗ್ರಾನೈಟ್ ಗ್ರೇ, ಬ್ಲ್ಯೂಯಿಸ್ ಬ್ಲ್ಯಾಕ್, ಸಿಜ್ಲಿಂಗ್ ರೆಡ್ ಹಾಗೂ ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 210 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,590 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ.

ಈ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 16 ರಿಂದ 17 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 4 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರೇರ್-ವ್ಯೂ ಕ್ಯಾಮೆರಾವನ್ನು ಪಡೆದಿದೆ.

Best 3 Replacement Cars For Maruti Suzuki Jimny Thar Roxx Gurkha Bolero

ನೀವು ಇದೇ 'ಮಾರುತಿ ಸುಜುಕಿ ಜಿಮ್ನಿ'ಗೆ ಪರ್ಯಾಯವಾಗಿ ಈ 3 ಎಸ್‌ಯುವಿಗಳಾದ ಮಹೀಂದ್ರಾ ಥಾರ್ ರಾಕ್ಸ್, ಫೋರ್ಸ್ ಗೂರ್ಖಾ ಹಾಗೂ ಮಹೀಂದ್ರಾ ಬೊಲೆರೊಗಳನ್ನು ಖರೀದಿಸಬಹುದು. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx):

ಇದು ಜನಪ್ರಿಯ ಆಫ್-ರೋಡ್ ಎಸ್‌ಯುವಿಯಾಗಿದೆ. 'ಮಾರುತಿ ಸುಜುಕಿ ಜಿಮ್ನಿ'ಗೆ ಬದಲಿ ಆಯ್ಕೆಯಾಗಲಿದೆ. ರೂ.12.25 ಲಕ್ಷದಿಂದ ರೂ.22.06 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಸ್ಟೆಲ್ತ್ ಬ್ಲ್ಯಾಕ್, ಟ್ಯಾಂಗೋ ರೆಡ್, ಎವರೆಸ್ಟ್ ವೈಟ್, ಡೀಪ್ ಫಾರೆಸ್ಟ್, ನೆಬ್ಯುಲಾ ಬ್ಲೂ, ಬ್ಯಾಟಲ್‌ಶಿಪ್ ಗ್ರೇ ಹಾಗೂ ಬರ್ನ್ಟ್ ಸಿಯೆನ್ನಾ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 226 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ & 2,850 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

Best 3 Replacement Cars For Maruti Suzuki Jimny Thar Roxx Gurkha Bolero

ನೂತನ 'ಥಾರ್ ರಾಕ್ಸ್' 2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಡಿಸೇಲ್ ಎಂಜಿನ್‌ನ್ನು ಹೊಂದಿದೆ. 12.4 ರಿಂದ 15.2 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಪನೋರಮಿಕ್ ಸನ್‌ರೂಫ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು 4 ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಫೋರ್ಸ್ ಗೂರ್ಖಾ (Force Gurkha):

ಈ ಎಸ್‌ಯುವಿಯನ್ನು 'ಮಾರುತಿ ಸುಜುಕಿ ಜಿಮ್ನಿ'ಗೆ ಪರ್ಯಾಯವಾಗಿ ಕೊಂಡುಕೊಳ್ಳಬಹುದು. ರೂ.15.95 ಲಕ್ಷದಿಂದ ರೂ.17.27 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ವೈಟ್, ಬ್ಲ್ಯಾಕ್, ಗ್ರೀನ್, ರೆಡ್ ಮತ್ತು ಆರೆಂಜ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 233 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,400 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

Best 3 Replacement Cars For Maruti Suzuki Jimny Thar Roxx Gurkha Bolero

ಹೊಸ 'ಗೂರ್ಖಾ' 2.6-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 9.5 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 4/ 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಮ್ಯಾನುವಲ್ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ.

ಮಹೀಂದ್ರಾ ಬೊಲೆರೊ (Mahindra Bolero):

ಇದೊಂದು ಪ್ರಖ್ಯಾತ ಎಸ್‌ಯುವಿಯಾಗಿದೆ. ರೂ.7.99 ಲಕ್ಷದಿಂದ ರೂ.9.69 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಸ್ಟೆಲ್ತ್ ಬ್ಲ್ಯಾಕ್, ಡೈಮಂಡ್ ವೈಟ್, ಡಿಸ್ಯಾಟ್ ಸಿಲ್ವರ್ ಮತ್ತು ರಾಕಿ ಬೀಜ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 183 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,680 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

Best 3 Replacement Cars For Maruti Suzuki Jimny Thar Roxx Gurkha Bolero

ನೂತನ 'ಬೊಲೆರೊ' 1.5-ಲೀ. ಡೀಸೆಲ್ ಎಂಜಿನ್‌ನ್ನು ತನ್ನದಾಗಿಸಿಕೊಂಡಿದೆ. 14 ರಿಂದ 16 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 7 ಆಸನಗಳನ್ನು ಹೊಂದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳು ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ನಂತಹ ವಿವಿಧ ವೈಶಿಷ್ಟ್ಯಗಳಿವೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

More from DriveSpark

Article Published On: Saturday, December 27, 2025, 8:30 [IST]
English summary
Best 3 replacement cars for maruti suzuki jimny thar roxx gurkha bolero
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+