Vinfast: ಬೆಲೆಯೂ ಅಗ್ಗ.. ಆದರೂ ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್‌ನ VF6ಗೆ ಬದಲಿ ಆಯ್ಕೆಯಾಗಬಲ್ಲ 3 ಪ್ರಮುಖ ಕಾರುಗಳಿವು!
ಇತ್ತೀಚೆಗೆ ಹೊಚ್ಚ ಹೊಸ ವಿನ್‌ಫಾಸ್ಟ್ ವಿಎಫ್6 (VinFast VF6) ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಇದು ಆಕರ್ಷಕವಾದ ವಿನ್ಯಾಸ ಹೊಂದಿದ್ದು, ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 59.6 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದ್ದು, ಭರ್ತಿ ಚಾರ್ಜ್‌ನಲ್ಲಿ 463 ರಿಂದ 468 ಕಿಲೋಮೀಟರ್ ಕ್ರಮಿಸುತ್ತದೆ. 5 ಆಸನಗಳನ್ನು ಹೊಂದಿದೆ. 12.9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, ಲೆವೆಲ್ 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ. ನೀವು 'ವಿಎಫ್6 'ಗೆ ಪರ್ಯಾಯವಾಗಿ ಈ 3 ಜನಪ್ರಿಯ ಕಾರುಗಳನ್ನು ತೆಗೆದುಕೊಳ್ಳಬಹುದು. ಬನ್ನಿ, ಇವುಗಳ ಬೆಲೆ & ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ (Hyundai Creta Electric):
ಇದು ಎಲೆಕ್ಟ್ರಿಕ್ ಚಾಲಿತ ಎಸ್‌ಯುವಿಯಾಗಿದೆ. ವಿನ್‌ಫಾಸ್ಟ್ ವಿಎಫ್6ಗೆ ಬದಲಾಗಿ ಖರೀದಿ ಮಾಡಬಹುದು. ಅದಕ್ಕೆ ತಕ್ಕಂತೆ ಕನಿಷ್ಠ ರೂ.17.99 ಲಕ್ಷ ಹಾಗೂ ಗರಿಷ್ಠ ರೂ.24.55 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಓಷನ್ ಬ್ಲೂ ಮ್ಯಾಟ್, ಟೈಟಾನ್ ಗ್ರೇ ಮ್ಯಾಟ್, ಸ್ಟಾರಿ ನೈಟ್, ಅಬಿಸ್ ಬ್ಲ್ಯಾಕ್, ಫಿಯರಿ ರೆಡ್, ಅಟ್ಲಾಸ್ ವೈಟ್ ಹಾಗೂ ಓಷನ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಈ ಕಾರು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 42 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 51.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 390 ರಿಂದ 473 ಕಿಲೋಮೀಟರ್ ಓಡುತ್ತದೆ. ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ.
ನೂತನ ಕ್ರೆಟಾ ಎಲೆಕ್ಟ್ರಿಕ್ 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡುಯಲ್ ಸ್ಕ್ರೀನ್, ಪನೋರಮಿಕ್ ಸನ್‌ರೂಫ್, ಡುಯಲ್ ಜೋನ್ ಆಟೋ ಎಸಿ ಮತ್ತು ಕೀಲೆಸ್ ಎಂಟ್ರಿ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.

ಟಾಟಾ ಕರ್ವ್ ಇವಿ (Tata Curvv EV):
ಇದೊಂದು ಕೂಪೆ ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದು, ವಿನ್‌ಫಾಸ್ಟ್ ವಿಎಫ್6ಗೆ ಪರ್ಯಾಯವಾಗಿ ಕೊಂಡುಕೊಳ್ಳಬಹುದು. ಈ ಕಾರು ರೂ.17.49 ಲಕ್ಷದಿಂದ ರೂ.22.24 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಈ ಕಾರು ಅತ್ಯಾಧುನಿಕವಾದ ವಿನ್ಯಾಸವನ್ನು ಪಡೆದಿದ್ದು, ಹಲವು ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. 45 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 55 (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 430 ರಿಂದ 502 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.
ನೂತನ ಕರ್ವ್ ಇವಿ 5 ಆಸನಗಳನ್ನು ಒಳಗೊಂಡಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಪನೊರೊಮಿಕ್ ಸನ್‌ರೂಫ್ ಮತ್ತು 9-ಸ್ಪೀಕರ್ ಜೆಬಿಎಲ್-ಸೌಂಡ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ಎಂಜಿ ಝಡ್ಎಸ್ ಇವಿ (MG ZS EV):
ಈ ಎಲೆಕ್ಟ್ರಿಕ್ ಎಸ್‌ಯುವಿಯು ವಿನ್‌ಫಾಸ್ಟ್ ವಿಎಫ್6ಗೆ ಬದಲಿ ಆಯ್ಕೆಯಾಗಲಿದೆ. ಅದಕ್ಕೆ ಅನುಗುಣವಾಗಿ ಕನಿಷ್ಠ ರೂ.17.99 ಲಕ್ಷ ಮತ್ತು ಗರಿಷ್ಠ ರೂ.20.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಅರೋರಾ ಸಿಲ್ವರ್, ಸ್ಟಾರಿ ಬ್ಲ್ಯಾಕ್, ಕ್ಯಾಂಡಿ ವೈಟ್ ಹಾಗೂ ಡಾರ್ಕ್ ಗ್ರೀನ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

ಇದು 50.3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 461 ಕಿಲೋಮೀಟರ್ ಓಡುತ್ತದೆ. 5 ಆಸನಗಳನ್ನು ಪಡೆದಿದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್, ಆಟೋ ಎಸಿ ಹಾಗೂ 6-ಸ್ಪೀಕರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ.


Click it and Unblock the Notifications