Renault: 22 ಕಿ.ಮೀ ಮೈಲೇಜ್.. 4.30 ಲಕ್ಷ! ರೆನಾಲ್ಟ್ ಕ್ವಿಡ್‌ಗೆ 5 ಜನಪ್ರಿಯ ಬದಲಿ ಕಾರುಗಳಿವು.. ಬೆಲೆ ಎಷ್ಟು, ವಿಶೇಷತೆಗಳೇನು?
ರೆನಾಲ್ಟ್ ಕ್ವಿಡ್ (Renault Kwid) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಆಗಿದೆ. ರೂ.4.30 ಲಕ್ಷದಿಂದ ರೂ.5.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್ (ಒ) ಹಾಗೂ ಆರ್‌ಎಕ್ಸ್‌ಟಿ ಎಂಬ ರೂಪಾಂತರಗಳೊಂದಿಗೂ ಲಭ್ಯವಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಐಸ್ ಕೂಲ್ ವೈಟ್, ಔಟ್‌ಬ್ಯಾಕ್ ಬ್ರೊನ್ ಮತ್ತು ಮೂನ್‌ಲೈಟ್ ಸಿಲ್ವರ್ ಸೇರಿದಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 5 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 279 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.
ಇದು 1-ಲೀ. ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 21 ರಿಂದ 22 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕೀ ಲೆಸ್ ಎಂಟ್ರಿ ಹಾಗೂ ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್‌ನ್ನು ಒಳಗೊಂಡಿದೆ.

ನೀವು ಇದೇ 'ರೆನಾಲ್ಟ್ ಕ್ವಿಡ್'ಗೆ ಪರ್ಯಾಯವಾಗಿ 5 ಜನಪ್ರಿಯ ಹ್ಯಾಚ್‌ಬ್ಯಾಕ್‌ಗಳಾದ ಮಾರುತಿ ಸುಜುಕಿ ಎಸ್-ಪ್ರೆಸ್ಸೊ, ಟಾಟಾ ಟಿಯಾಗೊ, ಮಾರುತಿ ಸುಜುಕಿ ಆಲ್ಟೊ ಕೆ10, ಮಾರುತಿ ಸುಜುಕಿ ವ್ಯಾಗನ್ಆರ್ ಹಾಗೂ ಮಾರುತಿ ಸುಜುಕಿ ಇಗ್ನಿಸ್‌ಗಳನ್ನು ಕೊಂಡುಕೊಳ್ಳಬಹುದು. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso):
ಈ ಕಾರನ್ನು 'ರೆನಾಲ್ಟ್ ಕ್ವಿಡ್'ಗೆ ಬದಲಾಗಿ ಖರೀದಿ ಮಾಡಬಹುದು. ಅದಕ್ಕೆ ತಕ್ಕಂತೆ ಕನಿಷ್ಠ ರೂ.3.50 ಲಕ್ಷ & ಗರಿಷ್ಠ ರೂ.5.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1-ಲೀ. ಪೆಟ್ರೋಲ್ ಮತ್ತು 1-ಲೀ. ಪೆಟ್ರೋಲ್+ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 24 ರಿಂದ 33 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಹೊಂದಿದೆ.

ಟಾಟಾ ಟಿಯಾಗೊ (Tata Tiago):
ಇದೊಂದು ಹ್ಯಾಚ್‌ಬ್ಯಾಕ್ ಆಗಿದ್ದು, 'ರೆನಾಲ್ಟ್ ಕ್ವಿಡ್'ಗೆ ಪರ್ಯಾಯವಾಗಿ ಕೊಂಡುಕೊಳ್ಳಬಹುದು. ರೂ.4.57 ಲಕ್ಷದಿಂದ ರೂ.7.82 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀ. ಪೆಟ್ರೋಲ್ ಮತ್ತು 1.2-ಲೀ. ಪೆಟ್ರೋಲ್+ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 19 ರಿಂದ 28 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಹೊಂದಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ತನ್ನದಾಗಿಸಿಕೊಂಡಿದೆ.
ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10):
ಈ ಕಾರನ್ನು 'ರೆನಾಲ್ಟ್ ಕ್ವಿಡ್'ಗೆ ಬದಲಾಗಿ ಮನೆಗೆ ತರಬಹುದು. ಕನಿಷ್ಠ ರೂ.3.70 ಲಕ್ಷ ಮತ್ತು ಗರಿಷ್ಠ ರೂ.5.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1-ಲೀ. ಪೆಟ್ರೋಲ್ ಮತ್ತು 1-ಲೀ. ಪೆಟ್ರೋಲ್+ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 24 ರಿಂದ 34 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ 6 ಏರ್‌ಬ್ಯಾಗ್‌ಗಳನ್ನು ಪಡೆದಿದೆ.
ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR):
ಇದು ಪ್ರಖ್ಯಾತ ಹ್ಯಾಚ್‌ಬ್ಯಾಕ್ ಆಗಿದೆ. 'ರೆನಾಲ್ಟ್ ಕ್ವಿಡ್'ಗೂ ಪರ್ಯಾಯ ಕಾರಾಗಿದೆ. ರೂ.4.99 ಲಕ್ಷದಿಂದ ರೂ.6.95 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1-ಲೀ. ಪೆಟ್ರೋಲ್, 1-ಲೀ. ಪೆಟ್ರೋಲ್+ಸಿಎನ್‌ಜಿ ಮತ್ತು 1.2-ಲೀ. ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 23 ರಿಂದ 34 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ತನ್ನದಾಗಿಸಿಕೊಂಡಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis):
ಈ ಕಾರನ್ನು 'ರೆನಾಲ್ಟ್ ಕ್ವಿಡ್'ಗೆ ಬದಲಾಗಿ ಕೊಂಡುಕೊಳ್ಳಬಹುದು. ಕನಿಷ್ಠ ರೂ.5.35 ಲಕ್ಷ ಹಾಗೂ ಗರಿಷ್ಠ ರೂ.7.55 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.2-ಲೀ. ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 21 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡುಯಲ್ ಏರ್‌ಬ್ಯಾಗ್‌ಗಳನ್ನು ತನ್ನದಾಗಿಸಿಕೊಂಡಿದೆ.


Click it and Unblock the Notifications








