ಎರಡು ಕುಟುಂಬ ಹೋಗಬಹುದಾದ ಕಾರುಗಳಿವು: 10 ಲಕ್ಷಕ್ಕಿಂತ ಕಡಿಮೆ ಬೆಲೆ.. 7 ಸೀಟರ್, ಮೈಲೇಜ್ ಸೂಪರ್!

ಭಾರತದಲ್ಲಿ ಸಾಮಾನ್ಯ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಕುಟುಂಬಕ್ಕಾಗಿ ಹೊಚ್ಚ ಹೊಸ ಫ್ಯಾಮಿಲಿ ಕಾರನ್ನು ಖರೀದಿಸಬೇಕೆಂಬ ಬಹುದೊಡ್ಡ ಆಸೆಯನ್ನು ಹೊಂದಿರುತ್ತಾರೆ. ನೀವು ಹೆಚ್ಚಿನ ಆಸನವಿರುವ ನೂತನ ಕಾರನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ, ಮಾರುತಿ ಸುಜುಕಿ ಇಕೋ, ರೆನಾಲ್ಟ್ ಟ್ರೈಬರ್, ಮಾರುತಿ ಸುಜುಕಿ ಎರ್ಟಿಗಾ, ಟೊಯೊಟಾ ರೂಮಿಯಾನ್, ಮಹೀಂದ್ರಾ ಬೊಲೆರೊ ನಿಯೋ ಕಾರುಗಳು ಹೆಚ್ಚು ಸೂಕ್ತವಾಗಲಿವೆ. ಬನ್ನಿ.. ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ.

ಮಾರುತಿ ಸುಜುಕಿ ಇಕೋ (Maruti Suzuki Eeco): ಇದೊಂದು ವ್ಯಾನ್ ಆಗಿದ್ದು, ರೂ.5.44 ಲಕ್ಷದಿಂದ ರೂ.6.70 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ತುಂಬಾ ಸರಳವಾದ ವಿನ್ಯಾಸವನ್ನು ಪಡೆದಿರುವ ಈ ಕಾರು, ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಮಿಡ್‌ನೈಟ್‌ ಬ್ಲ್ಯಾಕ್ ಹಾಗೂ ಮೆಟಾಲಿಕ್ ಬ್ರಿಸ್ಕ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Best 5 Family Cars Under Rs 10 Lakh Eeco Triber Ertiga Rumion Bolero Neo

ಈ ಮಾರುತಿ ಇಕೋ ವ್ಯಾನ್ ಶಕ್ತಿಯುತವಾದ 1.2-ಲೀ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಖರೀದಿಗೆ ದೊರೆಯುತ್ತದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 19.71 ರಿಂದ 26.78 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ನೂತನ ಮಾರುತಿ ಸುಜುಕಿ ಇಕೋ 5/ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಲಭ್ಯವಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 275 ರಿಂದ 540 ಲೀ. ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಸೆಮಿ ಡಿಜಿಟಲ್ ಸ್ಪೀಡೋಮೀಟರ್, ಮ್ಯಾನುವಲ್ ಎಸಿ & 12ವಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಹೊಂದಿದೆ.

Best 5 Family Cars Under Rs 10 Lakh Eeco Triber Ertiga Rumion Bolero Neo

ರೆನಾಲ್ಟ್ ಟ್ರೈಬರ್ (Renault Triber): ಇದು ಜನಪ್ರಿಯ ಎಂಪಿವಿಯಾಗಿ ಹೊರಹೊಮ್ಮಿದೆ. ರೂ.6 ಲಕ್ಷದಿಂದ ರೂ.8.97 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್ ಹಾಗೂ ಆರ್‌ಎಕ್ಸ್‌ಟಿ ಒಳಗೊಂಡಂತೆ ಹಲವು ರೂಪಾಂತರಗಳನ್ನು (ವೇರಿಯೆಂಟ್) ಹೊಂದಿದೆ. ಐಸ್ ಕೂಲ್ ವೈಟ್, ಸೀಡರ್ ಬ್ರೌನ್, ಮೂನ್‌ಲೈಟ್ ಸಿಲ್ವರ್ & ಎಲೆಕ್ಟ್ರಿಕ್ ಬ್ಲೂ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಹೊಸ ರೆನಾಲ್ಟ್ ಟ್ರೈಬರ್ ಕಾರು 1-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ ಹೊಂದಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆದಿದೆ. 18.2 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 7 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ನಡೆಸಬಹುದು.

Best 5 Family Cars Under Rs 10 Lakh Eeco Triber Ertiga Rumion Bolero Neo

ಈ ಟ್ರೈಬರ್ ಎಂಪಿವಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಚಾರ್ಜರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್ ಬಟನ್ ಮತ್ತು ಕೂಲ್ಡ್ ಸ್ಟೋರೇಜ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 4 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಾಗೂ ರೇರ್ ವ್ಯೂ ಕ್ಯಾಮೆರಾವನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga): ಈ ಪ್ರಖ್ಯಾತ ಎಂಪಿವಿ, ಕನಿಷ್ಠ ರೂ.8.84 ಲಕ್ಷ ಮತ್ತು ಗರಿಷ್ಠ ರೂ.13.13 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ & ಝಡ್ಎಕ್ಸ್ಐ ಪ್ಲಸ್ ಎಂಬ ರೂಪಾಂತರಗಳನ್ನು ಪಡೆದಿದೆ. ಇದರೊಟ್ಟಿಗೆ ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್‌ನೈಟ್ ಬ್ಲ್ಯಾಕ್, ಪರ್ಲ್ ಆರ್ಕ್ಟಿಕ್ ವೈಟ್, ಡಿಗ್ನಿಟಿ ಬ್ರೌನ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ.

Best 5 Family Cars Under Rs 10 Lakh Eeco Triber Ertiga Rumion Bolero Neo

ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರು 1.5-ಲೀ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಒಳಗೊಂಡಿದೆ. 20.3 ರಿಂದ 26.11 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಡಲು ಸಾಧ್ಯವಾಗಲಿದೆ.

ಈ ಕಾರು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪ್ಯಾಡಲ್ ಶಿಫ್ಟರ್‌, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆ ಒದಗಿಸಲು ಸುರಕ್ಷತೆಯ ದೃಷ್ಟಿಯಿಂದ 4 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಹಾಗೂ ಹಿಲ್-ಹೋಲ್ಡ್ ಅಸಿಸ್ಟ್ ಆಯ್ಕೆಯನ್ನು ಪಡೆದಿದೆ.

Best 5 Family Cars Under Rs 10 Lakh Eeco Triber Ertiga Rumion Bolero Neo

ಟೊಯೊಟಾ ರೂಮಿಯನ್ (Toyota Rumion): ಇದೊಂದು ಎಂಪಿವಿಯಾಗಿದ್ದು, ರೂ.10.54 ಲಕ್ಷದಿಂದ ರೂ.13.83 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಎಸ್, ಜಿ & ವಿ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ. ಐಕಾನಿಕ್ ಗ್ರೇ, ಸ್ಪಂಕಿ ಬ್ಲೂ ಹಾಗೂ ಕೆಫೆ ವೈಟ್ ಒಳಗೊಂಡಂತೆ ವಿವಿಧ ಬಣ್ಣಗಳನ್ನು ಪಡೆದಿದೆ.

ನೂತನ ರೂಮಿಯನ್ ಎಂಪಿವಿ 1.5-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆದಿದೆ. 20.11 ರಿಂದ 26.11 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿಯೂ 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ.

ಈ ಕಾರು ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 209 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಆಪಲ್ ಕಾರ್‌ಪ್ಲೇ, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಎಸಿ & ಪುಶ್-ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 4 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆದಿದೆ.

ಮಹೀಂದ್ರಾ ಬೊಲೆರೊ ನಿಯೋ (Mahindra Bolero Neo): ಈ ಎಸ್‌ಯುವಿ ರೂ.9.95 ಲಕ್ಷದಿಂದ ರೂ.12.15 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಎನ್4, ಎನ್8, ಎನ್10 ಮತ್ತು ಎನ್10 (ಒ) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಈ ಕಾರಿನಲ್ಲಿ 7 ಜನರು ಸುಲಭವಾಗಿ ಓಡಾಟ ನಡೆಸಬಹುದು.

ನೂತನ ಬೊಲೆರೊ ನಿಯೋ 1.5-ಲೀ. ಡೀಸೆಲ್ ಎಂಜಿನ್‌ನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 17.29 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, April 4, 2025, 14:22 [IST]
English summary
Best 5 family cars under rs 10 lakh ertiga triber eeco rumion bolero neo
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+