ಮಳೆಗಾಲದ ಅತ್ಯುತ್ತಮ ಆಯ್ಕೆಯಾಗಲ್ಲ 'ಪಂಚ' SUVಗಳಿವು.. ಯಾವುವು, ಬೆಲೆ ಎಷ್ಟು.. ವಿಶೇಷತೆಗಳೇನು?
ರಾಜ್ಯಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದೆ. ರಸ್ತೆಯಲ್ಲಿ ಓಡಾಟ ನಡೆಸುವುದೇ ಕಷ್ಟ ಸಾಧ್ಯವಾಗಿದೆ. ಅದರಲ್ಲೂ ಊರಿಗೆ ಹೋಗಬೇಕಾದರೆ ತುಂಬಾ ಪ್ರಯಾಸ ಪಡಬೇಕಾಗುತ್ತದೆ. ಹಾಗೆಯೇ ಮಳೆಯಲ್ಲಿ ತೆರಳಲು ಒಂದು ಕಾರಿದ್ದರೆ ಎಷ್ಟು ಚೆಂದ ಎಂದು ಹಲವಾರು ಅಂದುಕೊಳ್ಳುತ್ತಾರೆ. ನಾವಿಲ್ಲಿ ಮಳೆಗಾಲದಲ್ಲಿ ಸಾಮಾನ್ಯ ರಸ್ತೆ ಅಥವಾ ಕಚ್ಚಾ ರಸ್ತೆಯೇ ಇರಲಿ.. ಅಲ್ಲಿ ಸುಲಭವಾಗಿ ಚಲಿಸಬಲ್ಲ 5 ಪ್ರಮುಖ ಎಸ್‌ಯುವಿಗಳ (SUVs) ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx): ಇದು ಪ್ರಮುಖ ಆಫ್-ರೋಡ್ ಎಸ್‌ಯುವಿಯಾಗಿದ್ದು, ಎಂತಹ ರಸ್ತೆಯ ಮೇಲೆ ಬೇಕಾದರೂ ಲೀಲಾಜಾಲವಾಗಿ ಓಡಬಲ್ಲದು. ಇದರ ಗ್ರೌಂಡ್ ಕ್ಲಿಯರೆನ್ಸ್ 225 ಎಂಎಂ ಇದ್ದು, ಒಂದೊಮ್ಮೆ ರಸ್ತೆಯಲ್ಲಿ ನೀರು ಹರಿಯುತ್ತಿದ್ದರೂ ಚಲಾಯಿಸಬಹುದು. ಈ ಕಾರು ಕನಿಷ್ಠ ರೂ.12.99 ಲಕ್ಷ ಮತ್ತು ಗರಿಷ್ಠ ರೂ.23.39 (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ನೂತನ ಥಾರ್ ರಾಕ್ಸ್ ಎಸ್‌ಯುವಿ, 2.0-ಲೀ. ಟರ್ಬೊ ಪೆಟ್ರೋಲ್ & 2.0-ಲೀ. ಡೀಸೆಲ್ ಎಂಜಿನ್‌ನ್ನು ಹೊಂದಿದೆ. 12 ರಿಂದ 15.2 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಆಸನ ವ್ಯವಸ್ಥೆಯಿದ್ದು, ಪ್ರಯಾಣಿಕರು ಸುಲಭವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.
ಫೋರ್ಸ್ ಗೂರ್ಖಾ (Force Gurkha): ಈ ಎಸ್‌ಯುವಿ ರೂ.16.75 ಲಕ್ಷದಿಂದ ರೂ.18 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. ರಸ್ತೆಯ ಮೇಲೆ ನೀರಿದ್ದರೂ ಕೂಡ ಚಲಿಸಲು ಸಾಧ್ಯವಾಗುವಂತೆ 233 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಒಳಗೊಂಡಿದೆ. ಇದು ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 4 ಹಾಗೂ 7 ಆಸನದೊಂದಿಗೆ ಸಿಗುತ್ತದೆ.

ಹೊಸ ಗೂರ್ಖಾ ಎಸ್‌ಯುವಿ 2.6-ಲೀ. ಡೀಸೆಲ್ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 9.5 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಹೊಂದಿದೆ.
ಮಾರುತಿ ಸುಜುಕಿ ಜಿಮ್ನಿ (Maruti Suzuki Jimny): ಈ ಎಸ್‌ಯುವಿ ರೂ.12.76 ಲಕ್ಷದಿಂದ ರೂ.14.96 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಎತ್ತರವಿರುವ 'ಗ್ರೌಂಡ್ ಕ್ಲಿಯರೆನ್ಸ್'ನ್ನು ಪಡೆದಿದೆ. 1.5-ಲೀ. ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 5-ಸ್ಪೀಡ್ ಮ್ಯಾನುವಲ್/ 4-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 16 ರಿಂದ 17 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ & ಆಟೋಮೆಟಿಕ್ - ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟಾಟಾ ಹ್ಯಾರಿಯರ್ (Tata Harrier): ಇದು ಕೂಡ ಜನಪ್ರಿಯ ಎಸ್‌ಯುವಿಯಾಗಿದ್ದು, ಗ್ರೌಂಡ್ ಕ್ಲಿಯರೆನ್ಸ್ 205 ಎಂಎಂ ಇದೆ. ರೂ.15 ಲಕ್ಷದಿಂದ ರೂ.26.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2-ಲೀ. ಡೀಸೆಲ್ ಎಂಜಿನ್‌ನ್ನು ಹೊಂದಿದೆ. 14 ರಿಂದ 16 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ & ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಹೊಂದಿದೆ.
ಕಿಯಾ ಸೆಲ್ಟೋಸ್ (Kia Seltos): ಈ ಎಸ್‌ಯುವಿಯು ತುಂಬಾ ಎತ್ತರವಿರುವ 'ಗ್ರೌಂಡ್ ಕ್ಲಿಯರೆನ್ಸ್'ನ್ನು ಒಳಗೊಂಡಿದೆ. ಇದು ರೂ.11.19 ಲಕ್ಷದಿಂದ ರೂ.20.56 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1.5-ಲೀ. ಪೆಟ್ರೋಲ್, 1.5-ಟರ್ಬೊ ಪೆಟ್ರೋಲ್ ಮತ್ತು 1.5-ಲೀ. ಡೀಸೆಲ್ ಎಂಜಿನ್‌ನ್ನು ಪಡೆದಿದೆ. 17 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications