Maruti: ಬಜೆಟ್ ಬೆಲೆಯ ಪ್ರೀಮಿಯಂ ಮಾರುತಿ ಕಾರು: ದೊಡ್ಡ ಕುಟುಂಬಕ್ಕೆ ಬೆಸ್ಟ್: 26 ಕಿ.ಮೀ ಮೈಲೇಜ್
ಮಾರುತಿ ಸುಜುಕಿ ಸದ್ಯ ಭಾರತದ ನಂ.1 ಕಾರ್ ಬ್ರಾಂಡ್ ಆಗಿ ಮುಂದುವರಿಯುತ್ತಿದೆ. ಗ್ರಾಹಕರ ಬಜೆಟ್ ಆಧರಿಸಿ ಕೈಗೆಟುಕುವ ಕಾರುಗಳನ್ನು ನೀಡುವ ಮೂಲಕ ಎಲ್ಲಾ ವರ್ಗದ ಜನರನ್ನು ಆಕರ್ಷಿಸಿದೆ. ಮಾರುತಿ ಸುಜುಕಿ ಕೇವಲ ಮಧ್ಯಮ ವರ್ಗದ ಕಾರುಗಳನ್ನು ಮಾತ್ರವಲ್ಲದೆ, ಪ್ರೀಮಿಯಂ ಕಾರುಗಳನ್ನು ಕೂಡ ನೀಡುತ್ತಿದ್ದು ಇವುಗಳನ್ನು ತನ್ನ ನೆಕ್ಸಾ ಡೀಲರ್ ಮೂಲಕ ಮಾರಾಟ ಮಾಡುತ್ತದೆ. ಉತ್ತಮ ಸೌಕರ್ಯಗಳೊಂದಿಗೆ ದೊಡ್ಡ ಕುಟುಂಬ ಪ್ರಯಾಣಿಸಲು ಬಜೆಟ್ ಬೆಲೆಯಲ್ಲಿ ಪ್ರೀಮಿಯಂ ಕಾರನ್ನು ಹುಡುಕುತ್ತಿರುವವರಿಗೆ ಕಂಪನಿಯ ಪ್ರಮುಖ ಪ್ರೀಮಿಯಂ ಕಾರಾಗಿರುವ ಮಾರುತಿ ಎಕ್ಸ್‌ಎಲ್ (Maruti XL6) ಬೆಸ್ಟ್ ಆಯ್ಕೆಯಾಗಿದೆ.
6-ಸೀಟುಗಳ MUV/MPV (ಬಹು ಉಪಯುಕ್ತ ವಾಹನ) ಆಗಿರುವ ಮಾರುತಿ XL6 ಬೆಲೆಯು ರೂ. 11.71 ದಿಂದ 14.87 (ಎಕ್ಸ್ ಶೋರೂಂ) ಲಕ್ಷದವರೆಗೆ ಇದೆ. ಇದು 9 ವೇರಿಯೆಂಟ್‌ಗಳು ಹಾಗೂ 10 ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 1462 cc ಎಂಜಿನ್ ಹೊಂದಿರುವ ಈ ಕಾರು 2 ಎಂಜಿನ್ ಆಯ್ಕೆಯೊಂದಿಗೆ ಖರೀದಿಸಬಹುದು. ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿದೆ.

ಹಾಗೆಯೇ ಸಿಎನ್‌ಜಿ ಆಯ್ಕೆಯಲ್ಲೂ ಸಿಗಲಿದ್ದು, ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಮಾತ್ರ ಹೊಂದಿದೆ. ಮೈಲೇಜ್ ವಿಷಯಕ್ಕೆ ಬಂದರೆ CNG - ಮ್ಯಾನುವಲ್‌ನಲ್ಲಿ 26.32 ಕಿ.ಮೀ ಹಾಗೂ ಪೆಟ್ರೋಲ್ - ಮ್ಯಾನುವಲ್‌ನಲ್ಲಿ 20.97 ಕಿ.ಮೀ. ಹಾಗೂ ಪೆಟ್ರೋಲ್ - ಆಟೋಮ್ಯಾಟಿಕ್‌ನಲ್ಲಿ 20.27 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಮಾರುತಿ ಸುಜುಕಿ ಕಂಪನಿಯು XL6 ಕಾರನ್ನು NCAP (ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ) ಮೂಲಕ ಸೇಫ್ಟಿ ರೇಟಿಂಗ್ ಕೂಡ ಪಡೆದುಕೊಂಡಿದೆ. ಈ ಸುರಕ್ಷತಾ ಪರೀಕ್ಷೆಯಲ್ಲಿ ಎಕ್ಸ್‌ಎಲ್ -6 ಕಾರು 3 ಸ್ಟಾರ್‌ಗಳ ಎನ್‌ಸಿಎಪಿ ರೇಟಿಂಗ್ ಪಡೆದುಕೊಂಡಿದೆ. ಈ ಕಾರು 4 ಏರ್ ಬ್ಯಾಗ್‌ಗಳೊಂದಿಗೆ ಬರುತ್ತದೆ.

ಯಾವುದೇ ಟ್ರಿಮ್ ಆರಿಸಿಕೊಂಡರೂ, ಎಕ್ಸ್‌ಎಲ್ 6 ಒಳಗೆ ಆಲ್-ಬ್ಲ್ಯಾಕ್ ಇಂಟಿರಿಯರ್‌ನೊಂದಿಗೆ ಬರುತ್ತದೆ. ಎಂಟ್ರಿ-ಲೆವೆಲ್ ಝೀಟಾ ಟ್ರಿಮ್ ಹೊರತುಪಡಿಸಿ, ಟಾಪ್-ಸ್ಪೆಕ್ ಆಲ್ಫಾ ಮತ್ತು ಆಲ್ಫಾ + ವೇರಿಯೆಂಟ್‌ಗಳು ಲೆದರ್ ಸ್ಟೀರಿಂಗ್ ವೀಲ್ ಮತ್ತು ಲೆದರೆಟ್ ಸೀಟುಗಳನ್ನು ಹೊಂದಿವೆ. ಎಲ್ಲಾ ವೇರಿಯೆಂಟ್‌ಗಳು ಒನ್-ಟಚ್ ರೆಕ್ಲೈನ್ ಮತ್ತು ಸ್ಲೈಡ್ ಹೊಂದಿರುವ ಎರಡನೇ ಸಾಲಿನ ಕ್ಯಾಪ್ಟನ್ ಸೀಟುಗಳನ್ನು ಹೊಂದಿವೆ.
ಮೂರನೇ ಸಾಲಿನ ಸೀಟ್‌ಗಳನ್ನು ಸಹ 50:50 ವಿಭಜಕದೊಂದಿಗೆ ಮಡಚಬಹುದು, ಬೂಟ್ ನಲ್ಲಿ ಹೆಚ್ಚಿನ ಸ್ಥಳಾವಕಾಶಕ್ಕಾಗಿ ಇವುಗಳನ್ನು ಸಮತಟ್ಟಾಗಿ ಮಡಚಬಹುದು. ಕ್ವಾಡ್ ಏರ್‌ಬ್ಯಾಗ್ ಸೆಟಪ್ ಇದ್ದು, ಇದರಲ್ಲಿ ಎರಡು ಫ್ರಂಟ್ ಮತ್ತು ಎರಡು ಫ್ರಂಟ್ ಸೀಟ್ ಸೈಡ್ ಏರ್ ಬ್ಯಾಗ್‌ಗಳಿವೆ. ನಂತರ, ಎರಡನೇ ಸಾಲಿನಲ್ಲಿ ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳಿವೆ.

ಇವಿಷ್ಟೇ ಅಲ್ಲದೇ ಟಿಪಿಎಂಎಸ್, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಹಿಲ್-ಹೋಲ್ಡ್ ಅಸಿಸ್ಟ್, ಇಬಿಡಿಯೊಂದಿಗೆ ಎಬಿಎಸ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಇವೆ. ಫೀಚರ್ಸ್ ವಿಷಯಕ್ಕೆ ಬಂದರೆ, 7-ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಮುಂಭಾಗದ ಸೀಟ್ಗಳು, 360 ಡಿಗ್ರಿ ಕ್ಯಾಮೆರಾ, ಕ್ರೂಸ್ ಕಂಟ್ರೋಲ್ ನೀಡಲಾಗಿದೆ.
ಇವು ಮಾತ್ರವಲ್ಲದೆ ಕಾರಿನಲ್ಲಿ ಆಟೋಮ್ಯಾಟಿಕ್ ಎಸಿ, ಎತ್ತರ-ಸರಿಹೊಂದಿಸಬಹುದಾದ ಡ್ರೈವರ್ ಸೀಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಏರ್ ಕೂಲ್ಡ್ ಟ್ವಿನ್ ಕಪ್ ಹೋಲ್ಡರ್, ಎಲ್ಲಾ ಮೂರು ಸಾಲುಗಳಲ್ಲಿ 12V ಅಕ್ಸೆಸೊರಿ ಸಾಕೆಟ್‌ಗಳನ್ನು ನೀಡಲಾಗಿದೆ. ಇವೆಲ್ಲವು ಮಾರುತಿ XL6 ಕಾರಿನಲ್ಲಿ ನೀಡಲಾಗುವ ಬೆಸ್ಟ್ ಫಿಚರ್ಸ್ ಆಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications