Ertiga Vs Triber: ಕೇವಲ 6 ಲಕ್ಷಕ್ಕೆ 7-ಸೀಟರ್: ಮಾರುತಿ ಎರ್ಟಿಗಾಗೆ ನಿದ್ದೆ ಗೆಡಿಸಿದೆ ಹೊಸ ಫ್ಯಾಮಿಲಿ ಕಾರು!
Ertiga Vs Triber: ಭಾರತದಲ್ಲಿ 7-ಸೀಟರ್ ಕಾರುಗಳಿಗೆ ಭಾರೀ ಡಿಮ್ಯಾಂಡ್ ಇದೆ, ಈ ವಿಭಾಗದಲ್ಲಿ ಮಾರುತಿ ಎರ್ಟಿಗಾ (Maruti Ertiga) ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿದೆ. ಬೆಲೆ, ಫೀಚರ್ಸ್, ಆರಾಮ ಸೇರಿದಂತೆ ಮೈಲೇಜ್ ವಿಷಯದಲ್ಲೂ ಎರ್ಟಿಗಾ ಗ್ರಾಹಕರ ಬೆಸ್ಟ್ ಆಯ್ಕೆಯಾಗಿದ್ದು, ಪ್ರತಿಸ್ಪರ್ಧಿ ಕಾರುಗಳು ಹಿಂದುಳಿದಿವೆ. ಆದರೆ ಈಗ ರೆನಾಲ್ಟ್ ತನ್ನ ಬ್ರಹ್ಮಾಸ್ತ್ರವಾದ ಟ್ರೈಬರ್ (Renault Triber) ಅನ್ನು ಇತ್ತೀಚೆಗೆ ಹೊಸ ನವೀಕರಣಗಳೊಂದಿಗೆ ಬಿಡುಗಡೆ ಮಾಡಿದೆ. ಇದು ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಎರ್ಟಿಗಾಗೆ ಭಾರೀ ಪೈಪೋಟಿ ನೀಡಲು ಸಜ್ಜಾಗಿದೆ. ಈ ಎರಡೂ ಕಾರುಗಳನ್ನು ಇಲ್ಲಿ ಹೋಲಿಕೆ ಮಾಡಿದ್ದೇವೆ.
ಬೆಲೆ: ರೆನಾಲ್ಟ್ ಟ್ರೈಬರ್ ಬೇಸ್ ವೇರಿಯೆಂಟ್ ಬೆಲೆಯು ರೂ. 6.29 ಲಕ್ಷ (ಎಕ್ಸ್-ಶೋರೂಂ)ದಿಂದ ಪ್ರಾರಂಭವಾಗಿ ಟಾಪ್ ವೇರಿಯೆಂಟ್ ರೂ. 9.16 ಲಕ್ಷ (ಎಕ್ಸ್-ಶೋರೂಂ) ದವರೆಗೆ ಇದೆ. ಮಾರುತಿ ಸುಜುಕಿ ಎರ್ಟಿಗಾ ಬೇಸ್ ವೇರಿಯೆಂಟ್ ಬೆಲೆಯು 8.97 ಲಕ್ಷದಿಂದ ಪ್ರಾರಂಭವಾಗಿ ಟಾಪ್ ವೇರಿಯೆಂಟ್ ಬೆಲೆಯು 13.26 ಲಕ್ಷ (ಎಕ್ಸ್-ಶೋರೂಂ) ಇದೆ. ಟ್ರೈಬರ್ ಹೆಚ್ಚು ಕೈಗೆಟುಕುವ ಬೆಲೆಯಲ್ಲಿದ್ದು, ಬಜೆಟ್‌ನಲ್ಲಿ ಖರೀದಿದಾರರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಎರ್ಟಿಗಾ ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. 1.5-ಲೀ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ವೇರಿಯೆಂಟ್‌ಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಇದು ಪೆಟ್ರೋಲ್‌ನಲ್ಲಿ 20.3 ಕಿ.ಮೀ ಮೈಲೇಜ್ ಹಾಗೂ ಸಿಎನ್‌ಜಿನಲ್ಲಿ 26.11 ಕಿ.ಮೀ ಮೈಲೇಜ್ ನೀಡುತ್ತದೆ.
1.ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ರೆನಾಲ್ಟ್ ಟ್ರೈಬರ್, ಸರ್ಕಾರಿ ಅನುಮೋದಿತ ಸಿಎನ್‌ಜಿ ರೆಟ್ರೋಫಿಟ್‌ಮೆಂಟ್ ಕಿಟ್‌ಗಳೊಂದಿಗೂ ಲಭ್ಯವಿದೆ. ಎಲ್ಲಾ ವೇರಿಯೆಂಟ್‌ಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹಾಗೂ ಟಾಪ್-ಎಂಡ್ ಎಮೋಷನ್ ವೇರಿಯೆಂಟ್ ಸುಧಾರಿತ Easy-R AMTಯನ್ನು ಹೊಂದಿದೆ. ಪೆಟ್ರೋಲ್‌ನಲ್ಲಿ 17 ಕಿ.ಮೀ ಮೈಲೇಜ್ ಹಾಗೂ ಸಿಎನ್‌ಜಿನಲ್ಲಿ 20 ಕಿ.ಮೀ ಮೈಲೇಜ್ ನೀಡುತ್ತದೆ.

ಫೀಚರ್ಸ್: ರೆನಾಲ್ಟ್ ಟ್ರೈಬರ್‌ನಲ್ಲಿ 8-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, 7-ಇಂಚಿನ LED ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಾಡ್ಯುಲರ್ ಆಸನ - 5/6/7 ಆಸನಗಳು, 2 ನೇ ಸಾಲು ಸ್ಲೈಡ್‌ಗಳು, 3 ನೇ ಸಾಲು ಈಸಿ-ಫಿಕ್ಸ್, LED ಇಲ್ಯುಮಿನೇಷನ್, ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್, ವೈರ್‌ಲೆಸ್ ಚಾರ್ಜರ್ (ಟಾಪ್ ರೂಪಾಂತರಗಳು), 2ನೇ ಹಾಗೂ 3ನೇ ಸಾಲಿಗೆ AC ವೆಂಟ್‌ಗಳು ಇವೆ.
ಮಾರುತಿ ಸುಜುಕಿ ಎರ್ಟಿಗಾದಲ್ಲಿ 7-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ಸಂಪರ್ಕಿತ ಕಾರು ವೈಶಿಷ್ಟ್ಯಗಳು, 3ನೇ ಸಾಲಿನ ಸೌಕರ್ಯಕ್ಕಾಗಿ ಸುಧಾರಿತ ವಿನ್ಯಾಸದೊಂದಿಗೆ 3-ಸಾಲಿನ AC ವೆಂಟ್‌ಗಳು, ಪ್ರೀಮಿಯಂ ಡ್ಯುಯಲ್-ಟೋನ್ ಒಳಾಂಗಣ, ಕ್ರೂಸ್ ಕಂಟ್ರೋಲ್, ಆಟೋ ಕ್ಲೈಮೆಟ್ ಕಂಟ್ರೋಲ್, ಪಾರ್ಕಿಂಗ್ ಕ್ಯಾಮೆರಾ, ವಿಶಾಲವಾದ ಹಿಂಭಾಗದ ಸೀಟ್ ಸೌಕರ್ಯ ಹೊಂದಿದೆ.

ಸುರಕ್ಷತೆ: ರೆನಾಲ್ಟ್ ಟ್ರೈಬರ್‌ನಲ್ಲಿ 6 ಏರ್‌ಬ್ಯಾಗ್‌ಗಳು, ABS (ಆ್ಯಾಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರೂಬಿಷನ್), ESC (ಎಲೆಕ್ಟ್ರಾನಿಕ್ ಸ್ಪೀಡ್ ಕಂಟ್ರೋಲ್), ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್, ಫ್ರಂಟ್/ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು, ರಿಯರ್ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೋಲ್ ಇವೆ.
ಎರ್ಟಿಗಾದಾಲ್ಲಿ 6 ಏರ್‌ಬ್ಯಾಗ್‌ಗಳು, ABS (ಆ್ಯಾಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರೂಬಿಷನ್), ಹಿಲ್ ಹೋಲ್ಡ್ ಅಸಿಸ್ಟ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರಿಯರ್ ಕ್ಯಾಮೆರಾ, TPMS (ಟಾಪ್ ರೂಪಾಂತರಗಳು), ವೇಗ-ಸೂಕ್ಷ್ಮ ಲಾಕ್‌ಗಳು, ISOFIX ಮೌಂಟ್‌ಗಳು, ಸುಧಾರಿತ ಕ್ರ್ಯಾಶ್ ರೇಟಿಂಗ್ ಫೋಕಸ್ ಇವೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಮಾಡ್ಯುಲರ್ ಆಸನಗಳು ಮತ್ತು ಬೆಲೆಗೆ ತಕ್ಕ ಉತ್ತಮ ವೈಶಿಷ್ಟ್ಯಗಳೊಂದಿಗೆ ನಗರ ಚಾಲನೆಗೆ ಬಹುಮುಖ ಮತ್ತು ಕೈಗೆಟುಕುವ MPV ನಿಮಗೆ ಬೇಕಾದರೆ ರೆನಾಲ್ಟ್ ಟ್ರೈಬರ್ ಖರೀದಿಸಿ. ಅಥವಾ ನೀವು ಹೆಚ್ಚು ಪವರ್‌ಫುಲ್ ಎಂಜಿನ್, ವಿಶಾಲವಾದ ಕ್ಯಾಬಿನ್, ಉತ್ತಮ ಹೆದ್ದಾರಿ ಪರ್ಫಾಮೆನ್ಸ್ ಮತ್ತು ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಬಯಸಿದರೆ ಮತ್ತು ಹೆಚ್ಚಿನ ಬಜೆಟ್ ಇದ್ದರೆ ಮಾರುತಿ ಸುಜುಕಿ ಎರ್ಟಿಗಾವನ್ನು ಖರೀದಿಸಿ.


Click it and Unblock the Notifications