Best 7-seater cars: ಮಾರುತಿ ಇನ್ವಿಕ್ಟೋಗೆ ಸೆಡ್ಡು ಹೊಡೆಯಬಲ್ಲ ಬೆಸ್ಟ್ 7-ಸೀಟರ್ ಕಾರುಗಳು!
ಭಾರತದಲ್ಲಿ ಪ್ರತಿ ಕಾರು ಖರೀದಿದಾರು ಮೈಲೇಜ್, ವಿಶ್ವಾಸಾರ್ಹತೆ, ಕೈಗೆಟುಕುವ ಬೆಲೆ ಮತ್ತು ಸೇವಾ ಬೆಂಬಲವನ್ನು ಹೆಚ್ಚಾಗಿ ಪರಿಗಣಿಸುತ್ತಾರೆ. ಗ್ರಾಹಕರ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಏಕೈಕ ಬ್ರಾಂಡ್ ಎಂದರೆ ಅದು ಮಾರುತಿ ಸುಜುಕಿ ಎಂದು ಹೇಳಬಹುದು. ಆದರೆ ಒಂದಷ್ಟು ಮಂದಿಗೆ ಮಾರುತಿ ಕಾರುಗಳನ್ನು ಬಿಟ್ಟು ಪರ್ಯಾಯ ಆಯ್ಕೆಗಳನ್ನು ಹುಡುಕುತ್ತಾರೆ. ಹಾಗೆಯೇ ಮಾರುತಿಯ ಪ್ರೀಮಿಯಂ 7 ಸೀಟರ್ ಕಾರಾಗಿರುವ ಇನ್ವಿಕ್ಟೋ ಪ್ರತಿ ಲೀಟರ್ ಗೆ 23.24 ಕಿ.ಮೀ ಮೈಲೇಜ್ ನೀಡುತ್ತದೆ. ಈ ಕಾರು ಕುಟುಂಬಗಳಿಗೆ ಸೂಕ್ತವಾದ ಕಾರಾಗಿದ್ದು, ಇಂತಹ ಬೆಸ್ಟ್ 7 ಸೀಟರ್ ಕಾರಿಗೆ ಪರ್ಯಾಯ ಆಯ್ಕೆಗಳಿವೆ.
ಒಂದು ವೇಳೆ ಪ್ರೀಮಿಯಂ ಮಾರುತಿ ಸುಜುಕಿ ಇನ್ವಿಕ್ಟೋ ಕಾರನ್ನು ಖರೀದಿಸಲು ನೀವು ಬಯಸಿದರೆ, ಈ ಕಾರಿನ ಬೆಲೆಯು ರೂ.25.51 ಲಕ್ಷದಿಂದ ರೂ.29.22 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಮಾರುತಿಯಿಂದ ಝೀಟಾ + ಮತ್ತು ಆಲ್ಫಾ + ಎಂಬ ಎರಡು ಇನ್ವಿಕ್ಟೋ ಮಾದರಿಗಳು ಲಭ್ಯವಿದೆ. 2.0-ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಟಾಟಾ ಸಫಾರಿ: ಟಾಟಾ ಸಫಾರಿಯ ಬೆಲೆಗಳು ರೂ. 15.50 ಲಕ್ಷದಿಂದ ಪ್ರಾರಂಭವಾಗಿ ರೂ. 27 (ಎಕ್ಸ್-ಶೋರೂಂ) ಲಕ್ಷದವರೆಗೆ ಇದೆ. ಸಫಾರಿಗೆ ಪ್ರಸ್ತುತ ಲಭ್ಯವಿರುವ ಏಕೈಕ ಡೀಸೆಲ್ ಎಂಜಿನ್ ಹೆಕ್ಟರ್‌ನೊಂದಿಗೆ ಹಂಚಿಕೊಳ್ಳಲಾದ 2.0-ಲೀಟರ್ ಮಾದರಿಯಾಗಿದೆ. ಗ್ರಾಹಕರು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಅಥವಾ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನಡುವೆ ಆಯ್ಕೆ ಮಾಡಬಹುದು.
ಟೊಯೊಟಾ ಇನ್ನೋವಾ ಹೈಕ್ರಾಸ್: ಟೊಯೊಟಾ ಇನ್ನೋವಾ ಹೈಕ್ರಾಸ್ ಬೆಲೆಯು ರೂ.19.94 ಲಕ್ಷದಿಂದ ರೂ.31.34 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಇನ್ನೋವಾ ಹೈಕ್ರಾಸ್ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ಎರಡರೊಂದಿಗೂ ಬರುತ್ತದೆ. ಇದು ಆರು ವಿಭಿನ್ನ ಆವೃತ್ತಿಗಳಲ್ಲಿ ಬರುತ್ತದೆ. ಮೈಲೇಜ್ ವಿಷಯಕ್ಕೆ ಬಂದರೆ ಇದರ ಹೈಬ್ರಿಡ್ ಸಿಸ್ಟಮ್‌ನಿಂದಾಗಿ ಬರೋಬ್ಬರಿ 23.24 ಕಿ.ಮೀ ನೀಡುತ್ತದೆ.

ಹ್ಯುಂಡೈ ಅಲ್ಕಾಜಾರ್: ಹುಂಡೈ ಅಲ್ಕಾಜರ್ ಬೆಲೆಯು ರೂ. 14.99 ಲಕ್ಷದಿಂದ ರೂ. 21.70 ಲಕ್ಷ (ಎಕ್ಸ್-ಶೋರೂಂ) ವರೆಗೆ ಇದೆ. ಅಲ್ಕಾಜರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡರಲ್ಲೂ ಲಭ್ಯವಿದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, ಡೀಸೆಲ್ ಎಂಜಿನ್‌ಗೆ ಟಾರ್ಕ್ ಕನ್ವರ್ಟರ್ ಮತ್ತು ಪೆಟ್ರೋಲ್ ಎಂಜಿನ್‌ಗೆ DCT ಘಟಕವನ್ನು ಆಯ್ಕೆ ಮಾಡಬಹುದು. 6-ಸೀಟರ್ ಮತ್ತು 7-ಸೀಟರ್ ವಿನ್ಯಾಸದಲ್ಲಿ ಲಭ್ಯವಿದೆ.
ಮಹೀಂದ್ರಾ ಎಕ್ಸ್ ಯುವಿ 700: ಭಾರತೀಯ ಕಾರು ಉದ್ಯಮದಲ್ಲಿ XUV700 ಒಂದು ಬೆಸ್ಟ್ ಎಸ್‌ಯುವಿಯಾಗಿದೆ. ಬೆಲೆಗಳು 13.99 ಲಕ್ಷ ರೂ.ಗಳಿಂದ 24.99 ಲಕ್ಷ ರೂ. (ಎಕ್ಸ್-ಶೋರೂಂ)ಗಳವರೆಗೆ ಇದೆ. 5-ಸೀಟರ್ ಮತ್ತು 7-ಸೀಟರ್ ಎರಡನ್ನೂ ನೀಡಲಾಗುತ್ತದೆ. ಪ್ರಸ್ತುತ, ಯಾವುದೇ ಕ್ಯಾಪ್ಟನ್ ಸೀಟುಗಳು ಲಭ್ಯವಿಲ್ಲ. ಮಹೀಂದ್ರಾ ಪೆಟ್ರೋಲ್ ಎಂಜಿನ್, ಡೀಸೆಲ್ ಎಂಜಿನ್ ಮತ್ತು ಆಲ್-ವೀಲ್ ಡ್ರೈವ್ ವ್ಯವಸ್ಥೆಯನ್ನು ಹೊಂದಿದೆ.

ಎಂಜಿ ಹೆಕ್ಟರ್ ಪ್ಲಸ್: ಹೆಕ್ಟರ್ ಪ್ಲಸ್ ಬೆಲೆ 17.50 ಲಕ್ಷ ರೂ.ಗಳಿಂದ 23.67 ಲಕ್ಷ (ಎಕ್ಸ್ ಶೋರೂಂ) ರೂ.ಗಳವರೆಗೆ ಇದೆ. ಡೀಸೆಲ್ ಮತ್ತು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಎರಡರಲ್ಲೂ ಲಭ್ಯವಿದೆ. ಪೆಟ್ರೋಲ್ ಎಂಜಿನ್ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೊಂದಿಗೆ ಎರಡೂ ಎಂಜಿನ್ ಗಳು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಸ್ಟ್ಯಾಂಡರ್ಡ್ ಆಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications