Maruti Suzuki: 26.11 ಕಿ.ಮೀ ಮೈಲೇಜ್ ನೀಡುವ ಬೆಸ್ಟ್ 7-ಸೀಟರ್ ಎಂಪಿವಿ: ಫುಲ್ ಡಿಮ್ಯಾಂಡ್!
ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಭಾರತದಲ್ಲಿ ನಂ.1 7-ಸೀಟರ್ ಎಂಪಿವಿ ಆಗಿದ್ದು, ಬೆಲೆಗೆ ತಕ್ಕ ಮೌಲ್ಯವನ್ನು ನೀಡುವ ಕಾರಾಗಿದೆ. ಈ ಕಾರು ಹೆಚ್ಚಾಗಿ ದೊಡ್ಡ ಕುಟುಂಬಗಳ ಫೇವರೆಟ್ ಆಯ್ಕೆಯಾಗಿದ್ದು, ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಈ ಎಂಪಿವಿ ಅತಿ ಕಡಿಮೆ ಬೆಲೆಯಲ್ಲಿಯೂ ಲಭ್ಯವಿದ್ದು, ಇದರ ಬೆಲೆಗೆ ತಕ್ಕಂತೆ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. 7 ಆಸನಗಳ ಈ ಕಾರಿನಲ್ಲಿ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣ ಮಾಡಬಹುದು. ಹೊಸ ಮಾರುತಿ ಎರ್ಟಿಗಾ ಬೆಲೆ, ಫೀಚರ್ಸ್, ಎಂಜಿನ್, ಮೈಲೇಜ್ ಕುರಿತ ಮಾಹಿತಿ ಇಲ್ಲಿದೆ.
ಮಾರುತಿ ಎರ್ಟಿಗಾ MPV ಕಾರು ಸಾಕಷ್ಟು ಸ್ಥಳಾವಕಾಶ, ಹಗುರವಾದ ಸ್ಟೀರಿಂಗ್, ಮೂರು-ಸಾಲುಗಳ ಸಂರಚನೆ ಮತ್ತು 550-ಲೀಟರ್ ಬೂಟ್ ಸ್ಥಳಾವಕಾಶದಿಂದಾಗಿ ಜನಪ್ರಿಯತೆ ಗಳಿಸಿದೆ. ಇವೆಲ್ಲವೂ ಲಾಭದಾಯಕ ಆರಂಭಿಕ ಬೆಲೆ ರೂ. 8.80-ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಸಿಗುತ್ತವೆ. ಹೌದು, ಬೇಸ್ ವೇರಿಯೆಂಟ್ ಈಗ ಕೇವಲ 8.80 ಲಕ್ಷಕ್ಕೆ (ಎಕ್ಸ್ ಶೋರೂಂ) ಸಿಗುತ್ತದೆ. ಟಾಪ್ ವೇರಿಯೆಂಟ್ 12.94 (ಎಕ್ಸ್ ಶೋರೂಂ) ಲಕ್ಷ ಬೆಲೆಯಿದೆ.

ಈ ಕಾರು 4,395 ಎಂಎಂ ಉದ್ದ, 1,735 ಅಗಲ ಹಾಗೂ 1,690 ಎಂಎಂ ಎತ್ತರವಿದೆ. ಜೊತೆಗೆ 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,740 ವೀಲ್‌ಬೇಸ್ ಇದೆ. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ (ಒ) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್ನೈಟ್ ಬ್ಲಾಕ್, ಪರ್ಲ್ ಆರ್ಕ್ಟಿಕ್ ವೈಟ್ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಹೊಸ ಎರ್ಟಿಗಾ ಎಂಪಿವಿ ಕಾರನ್ನು 1.5-ಲೀ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಗಳಲ್ಲಿ ಗ್ರಾಹಕರು ಖರೀದಿಸಬಹುದು. ವೇರಿಯೆಂಟ್‌ಗಳಿಗೆ ಅನುಗುಣವಾಗಿ 6-ಸ್ಪೀಡ್ ಆಟೋಮೆಟಿಕ್ ಹಾಗೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಮೈಲೇಜ್ ವಿಷಯಕ್ಕೆ ಬಂದರೆ, ಪೆಟ್ರೋಲ್ MT ನಲ್ಲಿ 20.51 ಕಿ.ಮೀ, ಪೆಟ್ರೋಲ್ AT ನಲ್ಲಿ 20.3 ಕಿ.ಮೀ ಹಾಗೂ CNG MT ನಲ್ಲಿ ಪ್ರತಿ ಕೆ.ಜಿಗೆ ಬರೋಬ್ಬರಿ 26.11 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಹೊಸ ಮಾರುತಿ ಸುಜುಕಿ ಎರ್ಟಿಗಾ ಫೀಚರ್ಸ್ ವಿಷಯಕ್ಕೆ ಬಂದರೆ, ವೇರಿಯೆಂಟ್ಸ್‌ಗೆ ಅನುಗುಣವಾಗಿ ಪ್ಯಾಡಲ್ ಶಿಫ್ಟರ್ಸ್, ಕೀಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಒಳಗೊಂಡಂತೆ ವಿವಿಧ ಫೀಚರ್ಸ್ ಹೊಂದಿದೆ.
ಸೇಫ್ಟಿ ವಿಷಯಕ್ಕೆ ಬಂದರೆ ಈ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರೇರ್ ಪಾರ್ಕಿಂಗ್ ಸೇನಾರ್ಸ್ ಹಾಗೂ ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್)ನಂತಹ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಪ್ರಯಾಣಿಕರಿಗೆ ಗರಿಷ್ಟ ಸುರಕ್ಷತೆ ಒದಗಿಸುತ್ತದೆ.

ಇದು ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಹೆಚ್ಚು ವೈಶಿಷ್ಟ್ಯ - ಸಮೃದ್ಧವಾಗಿಲ್ಲದಿರಬಹುದು ಆದರೆ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಗ್ರಾಹಕರ ಉದ್ದೇಶವನ್ನು ಪೂರೈಸುತ್ತದೆ. ಈ ಬೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಕೈಗೆಟುಕುವ 7-ಸೀಟರ್ ಕಾರಾಗಿದ್ದು, ಹಣಕ್ಕೆ ತಕ್ಕ ಮೌಲ್ಯವನ್ನು ನೀಡುವ ಎಂಪಿವಿ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಮಾರುತಿ ಸುಜುಕಿ ಎರ್ಟಿಗಾದಲ್ಲಿ ಆರಾಮದಾಯಕ ಆಸನಗಳು, ಅಗತ್ಯ ವೈಶಿಷ್ಟ್ಯಗಳು, ಸುಗಮ ಚಾಲನಾ ಸಾಮರ್ಥ್ಯ, ಬ್ರ್ಯಾಂಡ್‌ನ ವಿಶ್ವಾಸಾರ್ಹತೆ ಮತ್ತು ಬಲವಾದ ಮಾರಾಟದ ನಂತರದ ಜಾಲವನ್ನು ಪರಿಗಣಿಸಿ ಇದು ಹಣಕ್ಕೆ ತಕ್ಕ ಮೌಲ್ಯದ ಕಾರು ಎಂದು ಹೇಳಬಹುದು. ಅಲ್ಲದೆ ಇದನ್ನು ಟೊಯೋಟಾ ಇನ್ನೋವಾ ಕ್ರಿಸ್ಟಾಗೆ ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು.


Click it and Unblock the Notifications








