Best 7-seater: ದೊಡ್ಡ ಕುಟುಂಬಕ್ಕೆ ಬೆಸ್ಟ್ 7-ಸೀಟರ್: 26.11 ಕಿ.ಮೀ ಮೈಲೇಜ್: ಫುಲ್ ಡಿಮ್ಯಾಂಡ್!

ಭಾರತದಲ್ಲಿ ಕೆಲವೇ ಜನಪ್ರಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಟೊಯೋಟಾ ತನ್ನ ಪ್ರಮುಖ MPV ಯೊಂದನ್ನು ಮಾರುಕಟ್ಟೆಗೆ ಪರಿಚಯಿಸಿದಾಗಿನಿಂದ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಈ ಕಾರು ಜನಪ್ರಿಯ ಮಾರುತಿ ಎರ್ಟಿಗಾದ ರೀಬ್ಯಾಡ್ಜ್ ಆವೃತ್ತಿಯಾಗಿದ್ದರೂ ತನ್ನದೇ ಪ್ರತ್ಯೇಕ ಗುರುತನ್ನು ಪಡೆದುಕೊಂಡಿದೆ. ಅದೇ ಟೊಯೋಟಾ ರೂಮಿಯನ್ ಇದು ಸದ್ಯ ಕೈಗೆಟುಕುವ ಬೆಸ್ಟ್ 7 - ಸೀಟರ್ (Best 7-seater) ಎಂಪಿವಿಯಾಗಿದೆ. ಟೊಯೋಟಾ ಇನ್ನೋವಾವನ್ನು ಖರೀದಿಸಲು ಸಾಧ್ಯವಾಗದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮಿಡಿಲ್‌ಕ್ಲಾಸ್ ಫ್ಯಾಮಿಲಿ ಕಾರಾಗಿದೆ. ಈ ಎಂಪಿವಿಯ ಪ್ರಮುಖ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಹೊಸ ಟೊಯೋಟಾ ರೂಮಿಯಾನ್ ಡ್ಯುಯಲ್ - ಟೋನ್ ಅಲಾಯ್ ವೀಲ್‌ಗಳು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಹೊಸ ಮುಂಭಾಗದ ಗ್ರಿಲ್, ಲಂಬವಾಗಿ ಜೋಡಿಸಲಾದ LED ಟೈಲ್ ಲ್ಯಾಂಪ್‌ಗಳು, ಕ್ರೋಮ್ ಇನ್ಸರ್ಟ್‌ಗಳೊಂದಿಗೆ ಆಕರ್ಷಕ ಡಿಸೈನ್ ಹೊಂದಿದೆ. ಸ್ಪಂಕಿ ಬ್ಲೂ, ರಸ್ಟಿಕ್ ಬ್ರೌನ್, ಐಕಾನಿಕ್ ಗ್ರೇ, ಕೆಫೆ ವೈಟ್, ಎಂಟೈಸಿಂಗ್ ಸಿಲ್ವರ್ ಎಂಬ ಬಹು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

best-7-seater-toyota-rumion-price-mileage-features-details

ಈ ಕಾರು ಪೆಟ್ರೋಲ್ ಮ್ಯಾನುಯಲ್, ಪೆಟ್ರೋಲ್ ಆಟೋಮ್ಯಾಟಿಕ್, ಸಿಎನ್‌ಜಿ ಮ್ಯಾನುಯಲ್ ಒಳಗೊಂಡಂತೆ ಒಟ್ಟು 7 ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಬೇಸ್‌ ವೇರಿಯೆಂಟ್ ಬೆಲೆಯು ರೂ. 10.82 (ಎಕ್ಸ್ - ಶೋರೂಂ) ಲಕ್ಷದಿಂದ ಆರಂಭವಾಗಿ ರೂ. 14.11 (ಎಕ್ಸ್ - ಶೋರೂಂ) ಲಕ್ಷದವರೆಗೆ ಇದೆ. ಎಂಜಿನ್ ವಿಷಯಕ್ಕೆ ಬಂದರೆ 1.5 ಲೀಟರ್, 4 - ಸಿಲಿಂಡರ್, ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

ಇದರ ಪೆಟ್ರೋಲ್ ಎಂಜಿನ್ 102 ಬಿಎಚ್ ಪವರ್ ಹಾಗೂ 137 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಸಿಎನ್‌ಜಿನಲ್ಲಿ 87 ಬಿಎಚ್ ಪವರ್ ಹಾಗೂ 121 ಎನ್ಎಂ ಟಾರ್ಕ್ ಹೊರಹಾಕುತ್ತದೆ. 5 - ಸ್ಪೀಡ್ ಮ್ಯಾನುವಲ್ ಮತ್ತು 6 - ಸ್ಪೀಡ್ ಆಟೋಮ್ಯಾಟಿಕ್ (ಪೆಟ್ರೋಲ್), 5 - ಸ್ಪೀಡ್ ಮ್ಯಾನುವಲ್ (ಸಿಎನ್‌ಜಿ) ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿದೆ.

best-7-seater-toyota-rumion-price-mileage-features-details

ಮೈಲೇಜ್ ವಿಷಯಕ್ಕೆ ಬಂದರೆ ಪೆಟ್ರೋಲ್ ಮ್ಯಾನುವಲ್‌ - 20.51 ಕಿ.ಮೀ, ಪೆಟ್ರೋಲ್ ಆಟೋಮ್ಯಾಟಿಕ್ - 20.11 ಕಿ.ಮೀ ಹಾಗೂ ಸಿಎನ್‌ಜಿ ಮ್ಯಾನುವಲ್ - 26.11 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಕ್ಲೈಮ್ ಮಾಡಿದೆ. 45 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ಉದ್ದಳತೆಗಳ ವಿಷಯಕ್ಕೆ ಬಂದರೆ 4,420 ಮಿ.ಮೀ ಉದ್ದ, 1,735 ಮಿ.ಮೀ ಅಗಲ, 1,690 ಮಿ.ಮೀ ಎತ್ತರವಿದೆ.

ಒಳಾಂಗಣದಲ್ಲಿ 7 - ಆಸನಗಳ ಸಂರಚನೆ, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ (ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ), ಕೂಲ್ಡ್ ಕಪ್ ಹೋಲ್ಡರ್‌ಗಳು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಹಿಂಭಾಗದಲ್ಲಿ AC ವೆಂಟ್‌ಗಳು, ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಟಂಬಲ್ ಫೋಲ್ಡ್ ಸೀಟ್‌ಗಳು, ಹಿಂಭಾಗದ ಸೀಟ್ ಆರ್ಮ್‌ರೆಸ್ಟ್ ಇದೆ.

best-7-seater-toyota-rumion-price-mileage-features-details

ಸುರಕ್ಷತೆ ಹಾಗೂ ಇತರ ಪ್ರಮುಖ ಫೀಚರ್ಸ್ ವಿಷಯಕ್ಕೆ ಬಂದರೆ, 6 - ಏರ್‌ಬ್ಯಾಗ್‌ಗಳು (ವೇರಿಯೆಂಟ್ ಅವಲಂಬಿಸಿ ಬದಲಾಗುತ್ತದೆ), ಟೊಯೋಟಾ ಐ - ಕನೆಕ್ಟ್, ಪಾರ್ಕಿಂಗ್ ಸೆನ್ಸರ್‌ಗಳು, ಹಿಂಬದಿಯ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ಕೀಲೆಸ್ ಎಂಟ್ರಿ, ಪುಶ್ - ಬಟನ್ ಸ್ಟಾರ್ಟ್, ಕ್ರೂಸ್ ಕಂಟ್ರೋಲ್, ಪಾರ್ಕಿಂಗ್ ಸೆನ್ಸರ್‌ಗಳು, ರಿವರ್ಸ್ ಕ್ಯಾಮೆರಾ ಇದೆ.

ಸದ್ಯ ಬಹುಬೇಡಿಕೆಯೊಂದಿಗೆ ಭಾರತದಲ್ಲಿ ಮುನ್ನುಗ್ಗುತ್ತಿರುವ ಟೊಯೋಟಾ ರೂಮಿಯನ್, ಉತ್ತಮ ಇಂಧನ ದಕ್ಷತೆ, ಹೊಂದಿಕೊಳ್ಳುವ ಆಸನ ವ್ಯವಸ್ಥೆ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ನೀಡುವ ಕೈಗೆಟುಕುವ, ಕುಟುಂಬ ಸ್ನೇಹಿ MPV ಆಗಿ ಸ್ಥಾನ ಪಡೆದಿದೆ. ಇದು ಭಾರತದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಮತ್ತು ಕಿಯಾ ಕ್ಯಾರೆನ್ಸ್‌ಗಳೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ. ಈ ಕಾರನ್ನು ಈಗಾಗಲೇ ನೀವು ಬಳಸುತ್ತಿದ್ದರೇ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

Article Published On: Tuesday, August 19, 2025, 15:29 [IST]
English summary
Best 7 seater toyota rumion price mileage features details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+