Best cars: ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಟಾಪ್-5 ಕಾರುಗಳು: ಫುಲ್ ಡಿಮ್ಯಾಂಡ್

Best cars: ಇತ್ತೀಚಿನ ಪೂರ್ಣ - ವರ್ಷ ಮತ್ತು 2025 ರ ಮಧ್ಯದ ಮಾರಾಟದ ಡೇಟಾವನ್ನು ಆಧರಿಸಿ, 2025 ರಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾರುಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ. 2025ರ ಕಾರು ಮಾರಾಟವನ್ನು ಗಮನಿಸದರೆ ಹೆಚ್ಚಾಗಿ SUV ಗಳು ಮತ್ತು ಪ್ರಾಯೋಗಿಕ ಕುಟುಂಬ ವಾಹನಗಳಿಗೆ ಗ್ರಾಹಕರ ಆದ್ಯತೆ ಹೆಚ್ಚುತ್ತಿರುವುದು ಕಂಡುಬಂದಿದೆ. ಬ್ರ್ಯಾಂಡ್ ಮೇಲಿನ ನಂಬಿಕೆ ಮತ್ತು ಹಣಕ್ಕೆ ತಕ್ಕ ಮೌಲ್ಯ ನೀಡುವ ಕಾರುಗಳೇ ಖರೀದಿ ನಿರ್ಧಾರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಈ ನಿಟ್ಟಿನಲ್ಲಿ 2025 ರಲ್ಲಿ ಭಾರತದ ವಾಹನ ಮಾರುಕಟ್ಟೆಯಲ್ಲಿ ಸುಧಾರಿತ ವೈಶಿಷ್ಟ್ಯಗಳು, ಸುರಕ್ಷತೆ ಮತ್ತು ಶೈಲಿಯ ಪ್ರಾಬಲ್ಯದೊಂದಿಗೆ ಅತಿಹೆಚ್ಚು ಡಿಮ್ಯಾಂಡ್ ಪಡೆದಿರುವ ಕಾರುಗಳು ಇಲ್ಲಿವೆ.

ಹುಂಡೈ ಕ್ರೆಟಾ: ಹುಂಡೈ ಕ್ರೆಟಾ ತನ್ನ ಪೆಟ್ರೋಲ್/ಡೀಸೆಲ್ ಮತ್ತು ಹೊಸ ಎಲೆಕ್ಟ್ರಿಕ್ ಆವೃತ್ತಿಗಳಿಗೆ ಬಲವಾದ ಬೇಡಿಕೆಯೊಂದಿಗೆ ನಂ.1 ಸ್ಥಾನಕ್ಕೆ ಏರಿದೆ. ಇದು ಸದ್ಯ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರಾಗಿ ಮುಂದುವರೆಯುತ್ತಿದೆ. ನವೀಕರಿಸಿದ ಹ್ಯುಂಡೈ ಕ್ರೆಟಾ ಎಸ್‌ಯುವಿ 11 ಲಕ್ಷ ರೂ. (ಎಕ್ಸ್‌ ಶೊರೂಂ) ಗಳಿಂದ ಪ್ರಾರಂಭವಾಗುವ ಬೆಲೆಯೊಂದಿಗೆ ಭಾರತೀಯ ಕುಟುಂಬಗಳು ಮತ್ತು ಯುವ ಖರೀದಿದಾರರಿಗೆ ಉನ್ನತ ಆಯ್ಕೆಯಾಗಿದೆ.

best-cars-2025-hyundai-creta-maruti-dzire-brezza-ertiga-tata-nexon

ಮಾರುತಿ ಡಿಜೈರ್: ಸುಜುಕಿ ಪ್ರಾಬಲ್ಯ ಮುಂದುವರಿಸಿದೆ, ಡಿಜೈರ್, ಬ್ರೆಝಾ ಮತ್ತು ಎರ್ಟಿಗಾ ನೇತೃತ್ವದಲ್ಲಿ ಟಾಪ್ 5 ಸ್ಥಾನಗಳಲ್ಲಿ 3 ಸ್ಥಾನಗಳನ್ನು ಪಡೆದುಕೊಂಡಿದೆ. ಹೊಸ ತಲೆಮಾರಿನ ಡಿಜೈರ್ ಕಾರಿನ ಬೆಲೆಯು ರೂ.6 ಲಕ್ಷಗಳಾಗಿದ್ದು, ಸುಧಾರಿತ ಮೈಲೇಜ್‌ನೊಂದಿಗೆ ಪರಿಷ್ಕರಿಸಲಾದ ಎಂಜಿನ್, ಕನೆಕ್ಟೆಡ್ ಕಾರ್ ಟೆಕ್, ನವೀಕರಿಸಿದ ಕ್ಯಾಬಿನ್ ಮತ್ತು ಸುಗಮ ಚಾಲನಾ ಡೈನಾಮಿಕ್ಸ್ ಅನ್ನು ಹೊಂದಿದೆ. ಬಜೆಟ್ ಬೆಲೆಯಲ್ಲಿ ಯುವ ಖರೀದಿದಾರರಿಗೆ ಸ್ವಿಫ್ಟ್ ಬೆಸ್ಟ್ ಆಯ್ಕೆಯಾಗಿದೆ.

ಮಾರುತಿ ಬ್ರೆಝಾ: ಇನ್ನು ಮಾರುತಿ ಬ್ರೆಝಾ ಕಾರಿನ ಮೂಲ ಮಾದರಿಯ ಬೆಲೆ ರೂ. 8.69 ಲಕ್ಷದಿಂದ ಪ್ರಾರಂಭವಾಗಿ ಟಾಪ್ ಮಾದರಿಯ ಬೆಲೆ ರೂ. 14.14 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ. ಮಾರುತಿಯ ಮೊದಲ ಕಾಂಪ್ಯಾಕ್ಟ್ SUV ಆದ ಬ್ರೆಝಾ, ಐದು ಪ್ರಯಾಣಿಕರಿಗೆ ವಿಶಾಲವಾದ ಮತ್ತು ಆರಾಮದಾಯಕವಾದ ಕ್ಯಾಬಿನ್ ಅನ್ನು ಹೊಂದಿದೆ.

best-cars-2025-hyundai-creta-maruti-dzire-brezza-ertiga-tata-nexon

ಹೊಸ ಮಾರುತಿ ಸುಜುಕಿ ಬ್ರೆಝಾ ಹಲವಾರು ಉತ್ತಮ ವೈಶಿಷ್ಟ್ಯಗಳು, ಸಾಕಷ್ಟು ಉತ್ತಮ ಗುಣಮಟ್ಟ ಮತ್ತು ದೊಡ್ಡ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದರ ಪೆಟ್ರೋಲ್ ಎಂಜಿನ್ ಉತ್ತಮ ಇಂಧನ ದಕ್ಷತೆಯನ್ನು ಹೊಂದಿದೆ. ಹಾಗೆಯೇ CNG ಆಯ್ಕೆಯು ಸಹ ಪಡೆಯಬಹುದು. ಈಗ ಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿ ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಪಡೆಯುತ್ತದೆ.

ಮಾರುತಿ ಎರ್ಟಿಗಾ: ಮಾರುತಿ ಎರ್ಟಿಗಾ ಕಾರಿನ ಬೇಸ್ ಬೆಲೆಯು ರೂ. 9.12 ಲಕ್ಷದಿಂದ ಪ್ರಾರಂಭವಾಗಿ ಟಾಪ್ ಮಾದರಿಯ ಬೆಲೆ ರೂ. 13.41 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ. ಈ 7-ಸೀಟರ್ MPV, ಸಾಕಷ್ಟು ಆಧುನಿಕ ವೈಶಿಷ್ಟ್ಯಗಳನ್ನು ಹಣಕ್ಕೆ ಉತ್ತಮ ಮೌಲ್ಯದೊಂದಿಗೆ ಸಂಯೋಜಿಸುತ್ತದೆ. ಇದರ ವಿಶಾಲವಾದ ಮತ್ತು ಪ್ರಾಯೋಗಿಕ ಮೂರು-ಸಾಲಿನ ಕ್ಯಾಬಿನ್ ಬಹುಮುಖತೆಯನ್ನು ಒದಗಿಸುತ್ತದೆ. CNG ಆಯ್ಕೆಯಲ್ಲು ಲಭ್ಯವಿದ್ದು, ಸೌಕರ್ಯ ಮತ್ತು ಕ್ರಿಯಾತ್ಮಕತೆ ಎರಡನ್ನೂ ಬಯಸುವವರಿಗೆ ಸೂಕ್ತ ಆಯ್ಕೆಯಾಗಿದೆ.

best-cars-2025-hyundai-creta-maruti-dzire-brezza-ertiga-tata-nexon

ಟಾಟಾ ಪಂಚ್ ಇವಿ: 11 ಲಕ್ಷ ರೂ. (ಎಕ್ಸ್‌ ಶೊರೂಂ) ಗಳಿಂದ ಪ್ರಾರಂಭವಾಗುವ ಟಾಟಾ ಪಂಚ್ ಇವಿ 300+ ಕಿ.ಮೀ ರೇಂಜ್, ಅದ್ಭುತ ವಿನ್ಯಾಸ ಮತ್ತು ಬ್ರಾಂಡ್‌ನ ವಿಶ್ವಾಸಾರ್ಹ ಜಿಪ್ಟ್ರಾನ್ ತಂತ್ರಜ್ಞಾನವನ್ನು ನೀಡುತ್ತದೆ. ಇದರ 5-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಸಣ್ಣ ಎಸ್‌ಯುವಿ ರೂಪದ ಅಂಶವು ಡಿಸೈನ್ ಹಾಗೂ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳದೆ ಪರಿಸರ ಸ್ನೇಹಿ ಕಾರು ಬಯಸುವ ಖರೀದಿದಾರರಿಗೆ ಪ್ರಾಯೋಗಿಕ ಎಲೆಕ್ಟ್ರಿಕ್ ಕಾರಾಗಿದೆ.

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ: 7.5 ಲಕ್ಷ ರೂ. (ಎಕ್ಸ್‌ ಶೊರೂಂ)ಗಳಿಂದ ಪ್ರಾರಂಭವಾಗುವ ಇದು ಪನೋರಮಿಕ್ ಸನ್‌ರೂಫ್, ಆರು ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ನಯವಾದ ಡಿಜಿಟಲ್ ಕಾಕ್ ಪಿಟ್ ಅನ್ನು ಒಳಗೊಂಡಿದೆ. ಕಾಂಪ್ಯಾಕ್ಟ್ ಪವರ್, ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ವಿಶ್ವಾಸಾರ್ಹ ಬ್ಯಾಡ್ಜ್ ಬಯಸುವ ಖರೀದಿದಾರರಿಗೆ ಇದು ಸೂಕ್ತವಾಗಿದೆ.

Article Published On: Monday, August 4, 2025, 12:03 [IST]
English summary
Best cars 2025 hyundai creta maruti dzire brezza ertiga tata nexon
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+