Best CNG cars: ಕೇವಲ 9 ಲಕ್ಷದೊಳಗೆ ಸಿಗುವ ಬೆಸ್ಟ್ CNG ಕಾರುಗಳು: 28 ಕಿ.ಮೀ ಮೈಲೇಜ್!
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕಾರು ತಯಾರಕರು ಕೂಡ ಬೇಡಿಕೆಯನ್ನು ಆಧರಿಸಿ ಬಹುತೇಕ ಪೆಟ್ರೋಲ್ ಚಾಲಿತ ಮಾದರಿಗಳನ್ನು ಸಿಎನ್‌ಜಿ ಆವೃತ್ತಿಯಲ್ಲೂ ಬಿಡುಗಡೆ ಮಾಡುತ್ತಿದ್ದಾರೆ. ಪೆಟ್ರೋಲ್ ಮಾದರಿಗಳಿಗೆ ಹೋಲಿಸಿದರೆ ಅವುಗಳ ಸಿಎನ್‌ಜಿ ಮಾಡಲ್‌ಗಳು ತುಸು ದುಬಾರಿಯಾಗಿರುತ್ತವೆ. ಆದರೆ ಮೈಲೇಜ್ ಪರವಾಗಿ ಹಾಗೂ ನಿರ್ವಹಣೆ ವಿಚಾರದಲ್ಲಿ ಹಣ ಉಳಿಸಬಹುದು. ನಿಮ್ಮ ಬಜೆಟ್ 9 ಲಕ್ಷ ರೂ.ಗಿಂತ ಕಡಿಮೆ ಇದ್ದರೆ ನೀವು ಸರಿಯಾದ ಲೇಖನ ಓದುತ್ತಿದ್ದೀರಾ. ಬನ್ನಿ ನಿಮ್ಮ ಬಜೆಟ್‌ನಲ್ಲಿ ಬೆಸ್ಟ್ ಸಿಎನ್‌ಜಿ ಕಾರು (Best CNG cars) ಗಳನ್ನು ನೋಡೋಣ.
1. ಮಾರುತಿ ಸುಜುಕಿ ಫ್ರಾಂಕ್ಸ್: ಮಾರುತಿ ಸುಜುಕಿ ತನ್ನ ಫ್ರಾಂಕ್ಸ್ ಸಿಎನ್‌ಜಿ (Maruti fronx CNG) ಅನ್ನು 1.2 ಸಿಗ್ಮಾ ವೇರಿಯೆಂಟ್‌ನಲ್ಲಿ ನೀಡುತ್ತಿದೆ. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 8.46 ಲಕ್ಷಗಳಾಗಿದೆ. ಇದು ಪ್ರತಿ ಕೆ.ಜಿ ಸಿಎನ್‌ಜಿನಲ್ಲಿ 28.51 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ. ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಲ್ಲಿ ಲಭ್ಯವಿದ್ದು, 6 ಆಕರ್ಷಕ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿ ಫ್ರಾಂಕ್ಸ್ ಸಿಗ್ಮಾ ಸಿಎನ್‌ಜಿ 5 ಸೀಟರ್ ಕಾರಾಗಿದ್ದು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಪವರ್ ವಿಂಡೋಸ್ ರಿಯರ್, ಪವರ್ ವಿಂಡೋಸ್ ಫ್ರಂಟ್, ವ್ಹೀಲ್ ಕವರ್‌ಗಳನ್ನು ಹೊಂದಿದೆ. ಸದ್ಯ ಮಾರುತಿ ಸುಜುಕಿ ನೀಡುತ್ತಿರುವ ಬೆಸ್ಟ್ ಸಿಎನ್‌ಜಿ ಕಾರಾಗಿ ಗುರ್ತಿಸಿಕೊಂಡಿದೆ.
2. ಟಾಟಾ ಪಂಚ್: 5-ಸ್ಟಾರ್ ಗ್ಲೋಬಲ್ ಎನ್‌ಸಿಎಪಿ ಸುರಕ್ಷತಾ ರೇಟಿಂಗ್ ಹೊಂದಿರುವ ಮೈಕ್ರೋ ಎಸ್‌ಯುವಿ ಟಾಟಾ ಪಂಚ್, ಸಿಎನ್‌ಜಿ (tata punch CNG) ಆವೃತ್ತಿಯಲ್ಲೂ ಲಭ್ಯವಿದೆ. ಟಾಟಾ ಪಂಚ್ ಪ್ಯೂರ್ ವೇರಿಯೆಂಟ್ ಸಿಎನ್‌ಜಿ ಆವೃತ್ತಿಯಲ್ಲಿ ಸಿಗಲಿದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.7.23 ಲಕ್ಷಗಳಾಗಿದೆ. ಇದು ಪ್ರತಿ ಕೆ.ಜಿ ಸಿಎನ್‌ಜಿಗೆ 26.99 ಕಿ.ಮೀ ಮೈಲೇಜ್ ನೀಡುತ್ತದೆ.

ಟಾಟಾ ಪಂಚ್ ಪ್ಯೂರ್ ಸಿಎನ್‌ಜಿ 1199 ಸಿಸಿ ಎಂಜಿನ್ ಹೊಂದಿದ್ದು, ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ. ಟಾಟಾ ಪಂಚ್ ಪ್ಯೂರ್ ಸಿಎನ್‌ಜಿ 5 ಸೀಟರ್ ಕಾರಾಗಿದ್ದು, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಪವರ್ ವಿಂಡೋಸ್ ಫ್ರಂಟ್ ಹೊಂದಿದೆ. ನಿಮ್ಮ ಬಜೆಟ್‌ನಲ್ಲಿ ಸಿಗುವ ಅತ್ಯಂತ ಸುರಕ್ಷಿತ ಸಿಎನ್‌ಜಿ ಕಾರಾಗಿದೆ.
3. ಹ್ಯುಂಡೈ ಎಕ್ಸ್ಟರ್: ವಿಶಾಲವಾದ ಕ್ರಾಸ್ ಒವರ್ ಎಸ್‌ಯುವಿಯಾದ ಹ್ಯುಂಡೈ ಎಕ್ಸ್ಟರ್ ಎಸ್ಎಕ್ಸ್ ವೇರಿಯೆಂಟ್ ಅನ್ನು ಸಿಎನ್‌ಜಿ ಆಯ್ಕೆಯಲ್ಲಿ ನೀಡಲಾಗುತ್ತದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.43 ಲಕ್ಷಗಳಾಗಿದೆ. ಹ್ಯುಂಡೈ ಎಕ್ಸ್ಟರ್ ಎಸ್ಎಕ್ಸ್ ಸಿಎನ್‌ಜಿ (hyundai exter CNG) ಪ್ರತಿ ಕೆ.ಜಿ.ಗೆ 27.1 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.

ಹ್ಯುಂಡೈ ಎಕ್ಸ್ಟರ್ ಎಸ್ಎಕ್ಸ್ ಸಿಎನ್‌ಜಿ 5 ಸೀಟರ್ ಕಾರಾಗಿದ್ದು, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟ್ ಮಾಡಬಹುದಾದ ಬಾಹ್ಯ ರಿಯರ್ ವ್ಯೂ ಮಿರರ್, ಟಚ್ ಸ್ಕ್ರೀನ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಪವರ್ ವಿಂಡೋಸ್ ರಿಯರ್, ಪವರ್ ವಿಂಡೋಸ್ ಫ್ರಂಟ್, ವ್ಹೀಲ್ ಕವರ್‌ಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications