Best CNG Cars: 10 ಲಕ್ಷದೊಳಗೆ ಸಿಗುವ ಭಾರತದ ಪ್ರೀಮಿಯಂ CNG ಕಾರುಗಳ ಪಟ್ಟಿ!

Best CNG Cars: ಹೆಚ್ಚಿನ ಮೈಲೇಜ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆ, ಕಡಿಮೆ ಮಾಲಿನ್ಯಕ್ಕೆ ಪರ್ಯಾಯವಾಗಿ ಸಿಎನ್‌ಜಿ ಕಾರುಗಳು ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿವೆ. ಈ ಹಿಂದೆ, ಕಡಿಮೆ ವೆಚ್ಚದ ಕಾರ್ಯಾಚರಣೆಗೆ ಹೆಸರುವಾಸಿಯಾಗಿದ್ದ ಸಿಎನ್‌ಜಿ ಕಾರುಗಳು ಅವುಗಳ ಬೇಸ್‌ ವೇರಿಯೆಂಟ್‌ಗಳಿಗೆ ಮಾತ್ರ ಸೀಮಿತವಾಗಿದ್ದವು. ಸದ್ಯ ಇವು ಜನಪ್ರಿಯವಾಗುತ್ತಿರುವುದರಿಂದ, ಕಾರು ತಯಾರಕರು ಈಗ ತಮ್ಮ ವಾಹನಗಳ ಟಾಪ್‌ ವೇರಿಯೆಂಟ್‌ಗಳಲ್ಲಿಯೂ ಪೆಟ್ರೋಲ್-ಸಿಎನ್‌ಜಿ ದ್ವಿ-ಇಂಧನ ತಂತ್ರಜ್ಞಾನವನ್ನು ನೀಡಲು ಪ್ರಾರಂಭಿಸಿದ್ದಾರೆ. 10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಹಲವಾರು ವೈಶಿಷ್ಟ್ಯಗಳೊಂದಿಗೆ ಸಿಗುವ ಸಿಎನ್‌ಜಿ ಕಾರುಗಳು ಇಲ್ಲಿವೆ.

ಟಾಟಾ ಪಂಚ್: ಟಾಟಾ ಪಂಚ್ 2024 ರಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರಾಗಿದೆ. ಇದು ಮೈಕ್ರೋ SUV ಆಗದ್ದು, ಪೆಟ್ರೋಲ್, ಪೆಟ್ರೋಲ್-CNG ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಲಭ್ಯವಿದೆ. ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸನ್‌ರೂಫ್ ಹೊಂದಿರುವ ಅಕಂಪ್ಲಿಶ್ಡ್ ಪ್ಲಸ್ ವೇರಿಯೆಂಟ್ ಅನ್ನು ಸಿಎನ್‌ಜಿನಲ್ಲಿ ಖರೀದಿಸಬಹುದು. ಇದು ಪೆಟ್ರೋಲ್-CNG ಬೈ-ಫ್ಯೂಲ್ ಪವರ್‌ಟ್ರೇನ್ ಹೊಂದಿದೆ.

best-cng-cars-under-10-lakh-in-india-tata-maruti

ಈ ಟಾಟಾ ಪಂಚ್ ಸಿಎನ್‌ಜಿ ವೆರಿಯೆಂಟ್‌ನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆರು-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋ AC ಹಾಗೂ ಆಟೋ ಹೆಡ್‌ಲ್ಯಾಂಪ್‌ಗಳು ಮತ್ತು ರೈನ್ ಸೆನ್ಸಿಂಗ್ ವೈಪರ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಟಿಗೋರ್: ಪೆಟ್ರೋಲ್-CNG ಬೈ-ಇಂಧನ ಪವರ್‌ಟ್ರೇನ್‌ನೊಂದಿಗೆ ಲಭ್ಯವಿರುವ ಟಾಟಾ ಟಿಗೋರ್ ಬೆಲೆಯು 9.50 ಲಕ್ಷ (ಎಕ್ಸ್-ಶೋರೂಂ) ಇದೆ. ಈ ಬೆಲೆಯಲ್ಲಿ ಟಾಟಾ ಟಿಗೋರ್‌ನ ಟಾಪ್-ಎಂಡ್ ಟ್ರಿಮ್ XZ ಪ್ಲಸ್ ಲಕ್ಸ್ ಪೆಟ್ರೋಲ್-CNG ಬೈ-ಫ್ಯೂಲ್ ಪವರ್‌ಟ್ರೇನ್ ಹೊಂದಿದೆ. ಇದು CNG ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೊತೆಗೆ ಬರುತ್ತದೆ.

best-cng-cars-under-10-lakh-in-india-tata-maruti

ಟಾಟಾ ಟಿಗೋರ್ ಸಿಎನ್‌ಜಿನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಂಟು-ಸ್ಪೀಕರ್ ಸಿಸ್ಟಮ್‌, ಆಟೋ AC, ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ರೈನ್- ಸೆನ್ಸಿಂಗ್ ವೈಪರ್‌ಗಳ ಜೊತೆಗೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿ ಡಿಜೈರ್: ಹೊಸ ಮಾರುತಿ ಸುಜುಕಿ ಡಿಜೈರ್ ಸಬ್-ಕಾಂಪ್ಯಾಕ್ಟ್ ಸೆಡಾನ್ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಗಳಿಸಿದೆ. ಹೊಸ ಡಿಜೈರ್ VXI ಮತ್ತು ZXI ಎಂಬ ಎರಡು ವೇರಿಯೆಂಟ್‌ಗಳಲ್ಲಿ ಸಿಎನ್‌ಜಿ ಪವರ್‌ಟ್ರೇನ್ ಪಡೆಯುತ್ತದೆ. ಇದರ ಬೆಲೆಯು 9.89 ಲಕ್ಷ (ಎಕ್ಸ್-ಶೋರೂಂ) ಇದೆ.

best-cng-cars-under-10-lakh-in-india-tata-maruti

ಇದರ ZXi ವೇರಿಯೆಂಟ್‌ನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಪವರ್ಡ್ ORVM, ವೈರ್‌ಲೆಸ್ ಫೋನ್ ಚಾರ್ಜರ್, ಆರು-ಸ್ಪೀಕರ್ ಸೌಂಡ್ ಸಿಸ್ಟಮ್, ಹಿಂಭಾಗದ ವೆಂಟ್‌ಗಳೊಂದಿಗೆ ಆಟೋ AC ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿ ಸ್ವಿಫ್ಟ್: ಸ್ವಿಫ್ಟ್‌ನ ZXi ವೇರಿಯೆಂಟ್ ಸಿಎನ್‌ಜಿನಲ್ಲಿ ಲಭ್ಯವಿದ್ದು, ಇದರ ಬೆಲೆ ರೂ. 9.20 ಲಕ್ಷ (ಎಕ್ಸ್-ಶೋರೂಂ) ಇದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹಿಂಭಾಗದ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆರು-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್-ಬಟನ್ ಸ್ಟಾರ್ಟ್‌ನೊಂದಿಗೆ ಕೀಲೆಸ್ ಎಂಟ್ರಿ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 19, 2025, 16:21 [IST]
English summary
Best cng cars under 10 lakh in india tata maruti
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+