ಗೌರಿ ಗಣೇಶ ಹಬ್ಬ: ನಿಮ್ಮ ಸುಂದರ ಕುಟುಂಬಕ್ಕೆ ಈ ಕಾರುಗಳು ಬೆಸ್ಟ್ ಚಾಯ್ಸ್.. 7-ಸೀಟರ್, ಬೆಲೆಯೂ ತುಂಬಾ ಅಗ್ಗ!
ಇದೇ 27ಕ್ಕೆ ಗೌರಿ ಗಣೇಶ ಹಬ್ಬ (Gowri Ganesha Festival) ಬಂದಿದೆ. ಈ ಶುಭ ಸಂದರ್ಭದಲ್ಲಿ ಹಲವರು ತಮ್ಮ ಸುಂದರ ಕುಟುಂಬಕ್ಕಾಗಿ ಹೊಸ ಕಾರೊಂದನ್ನು ಖರೀದಿಸಬೇಕೆಂದು ಪ್ಲ್ಯಾನ್ ಮಾಡಿರುತ್ತಾರೆ. ಅಂತಹವರಿಗೆ ಟೊಯೊಟಾ ರೂಮಿಯಾನ್, ಮಾರುತಿ ಸುಜುಕಿ ಎರ್ಟಿಗಾ, ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಹಾಗೂ ರೆನಾಲ್ಟ್ ಟ್ರೈಬರ್ ಎಂಪಿವಿಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ನಾವಿಲ್ಲಿ ಈ ಕಾರುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.
ಟೊಯೊಟಾ ರೂಮಿಯನ್ (Toyota Rumion):
ಇದೊಂದು ಎಂಪಿವಿಯಾಗಿದೆ. ವಿಶಾಲವಾದ ಒಳಾಂಗಣ ಹಾಗೂ ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದ್ದು, ದೊಡ್ಡ ಕುಟುಂಬಗಳಿಗೆ ಹೆಚ್ಚು ಸೂಕ್ತವಾಗಿದೆ. ದೂರದ ಊರುಗಳಿಗೆ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ. ಅದಕ್ಕೆ ತಕ್ಕಂತೆ ಕನಿಷ್ಠ ರೂ.10.81 ಲಕ್ಷ ಹಾಗೂ ಗರಿಷ್ಠ ರೂ.14.11 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ಈ ಕಾರು 1.5-ಲೀಟರ್ ಪೆಟ್ರೋಲ್/ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. 20 ರಿಂದ 26 ಕಿ.ಮೀ ವರೆಗೂ ಮೈಲೇಜ್ ಕೊಡುತ್ತದೆ. 7 ಆಸನಗಳನ್ನು ಒಳಗೊಂಡಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮೆಟಿಕ್ ಎಸಿ, ಪುಶ್-ಬಟನ್ ಎಂಜಿನ್ ಸ್ಟಾರ್ಟ್/ ಸ್ಟಾಪ್, 4 ಏರ್‌ಬ್ಯಾಗ್‌ಗಳು ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga)
ಮತ್ತೊಂದು ಜನಪ್ರಿಯ ಎಂಪಿವಿಯಾಗಿದೆ. ವಿಶ್ವಾಸಾರ್ಹತೆ ಹಾಗೂ ಸುಲಭ ನಿರ್ವಹಣೆಯಿಂದಲೇ ಮನೆ ಮಾತಾಗಿದೆ. ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಉತ್ತಮವಾದ ಬೇಡಿಕೆಯನ್ನು ಹೊಂದಿದೆ. ಉತ್ತಮವಾದ ಫ್ಯಾಮಿಲಿ ಕಾರಾಗಿ ಹೊರಹೊಮ್ಮಿದೆ. ರೂ.9.11 ಲಕ್ಷದಿಂದ ರೂ.13.40 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ನೂತನ ಎರ್ಟಿಗಾ .5-ಲೀಟರ್ ಪೆಟ್ರೋಲ್/ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 20 ರಿಂದ 26 ಕಿ.ಮೀ ವರೆಗೂ ಮೈಲೇಜ್ ನೀಡುತ್ತದೆ. 7 ಆಸನಗಳನ್ನು ಪಡೆದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 6-ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಹಾಗೂ ಹಿಲ್ ಹೋಲ್ಡ್ ಅಸಿಸ್ಟ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಹೊಸ ಕಿಯಾ ಕ್ಯಾರೆನ್ಸ್ ಕ್ಲಾವಿಸ್ (Kia Carens Clavis):
ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಹೊಸ ಪೀಳಿಗೆಯ ಫ್ಯಾಮಿಲಿ ಕಾರಾಗಿಯೂ ಗುರುತಿಸಿಕೊಂಡಿದೆ. ಕನಿಷ್ಠ ರೂ.11.50 ಲಕ್ಷ ಹಾಗೂ ಗರಿಷ್ಠ ರೂ.21.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಬೆಲೆಯನ್ನು ಒಳಗೊಂಡಿದೆ.

ಹೊಸ ಕ್ಯಾರೆನ್ಸ್ ಕ್ಲಾವಿಸ್ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 15.95 ರಿಂದ 19.54 ಕಿ.ಮೀ ವರೆಗೂ ಮೈಲೇಜ್ ಕೊಡುತ್ತದೆ. 6/ 7 ಆಸನಗಳನ್ನು ಒಳಗೊಂಡಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ರೆನಾಲ್ಟ್ ಟ್ರೈಬರ್ (Renault Triber):
ಇದು ನಗರ ಪ್ರದೇಶದ ಸಂಚಾರಕ್ಕೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಜೊತೆಗೆ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಸುಲಭವಾಗಿ ಓಡಾಟ ನಡೆಸಬಹುದು. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದ್ದು, ರೂ.6.29 ಲಕ್ಷ ಹಾಗೂ ಗರಿಷ್ಠ ರೂ.9.16 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ಈ ಕಾರು 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 17 ರಿಂದ 20 ಕಿ.ಮೀ ವರೆಗೂ ಮೈಲೇಜ್ ನೀಡತ್ತದೆ. 7 ಆಸನಗಳನ್ನು ಪಡೆದಿದೆ. 8-ಇಂಚಿನ ಪ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಮ್ಯಾನುವಲ್ ಎಸಿ, 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.


Click it and Unblock the Notifications








