26+ Km ಮೈಲೇಜ್, 6ಕ್ಕೂ ಹೆಚ್ಚು ಆಸನಗಳು.. 6 ಲಕ್ಷದಿಂದ ಶುರು.. ಅವಿಭಕ್ತ ಕುಟುಂಬಕ್ಕೆ ಈ ಕಾರುಗಳು ಬೆಸ್ಟ್..!
ಭಾರತದಲ್ಲಿ ವಿಭಕ್ತ ಕುಟುಂಬಗಳಂತೆ ಅವಿಭಕ್ತ ಕುಟುಂಬಗಳ ಸಂಖ್ಯೆಯೂ ಹೆಚ್ಚಿದೆ. ಬಹುತೇಕರು ಹೆಚ್ಚು ಆಸನ ಆಯ್ಕೆ ವ್ಯವಸ್ಥೆಯಿರುವ ಹೊಸ ಕಾರೊಂದನ್ನು ಖರೀದಿ ಮಾಡಲು ಹುಡುಕಾಟ ನಡೆಸುತ್ತಿರುತ್ತಾರೆ. ಆದರೆ, ಹಲವರಿಗೆ ಯಾವ ಕಾರನ್ನು ಖರೀದಿ ಮಾಡಿದರೆ, ಹೆಚ್ಚು ಉತ್ತಮ ಎಂಬ ಗೊಂದಲವಿರುತ್ತದೆ. ನಾವಿಲ್ಲಿ ದೊಡ್ಡ ಕುಟುಂಬಗಳಿಗೆ ಅತ್ಯುತ್ತಮ ಆಯ್ಕೆಯಾಗಬಲ್ಲ ಟಾಟಾ ಸಫಾರಿ, ಮಾರುತಿ ಸುಜುಕಿ ಎರ್ಟಿಗಾ, ರೆನಾಲ್ಟ್ ಟ್ರೈಬರ್, ಟೊಯೊಟಾ ರೂಮಿಯನ್, ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಹಾಗೂ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.
ಟಾಟಾ ಸಫಾರಿ (Tata Safari): ಇದು ಬೃಹತ್ ಗಾತ್ರದ ಫ್ಯಾಮಿಲಿ ಎಸ್‌ಯುವಿಯಾಗಿದ್ದು, ರೂ.15.50 ಲಕ್ಷದಿಂದ ರೂ.27 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 2.0-ಲೀ. ಡೀಸೆಲ್ ಎಂಜಿನ್ ಎಂಜಿನ್ ಹಾಗೂ 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 16.3 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಜೊತೆಗೆ 6/ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ದೊರೆಯುತ್ತದೆ.

ಈ ಸಫಾರಿ ಕಾರು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಡುಯಲ್-ಜೋನ್ ಆಟೋಮೆಟಿಕ್ ಎಸಿ ಮತ್ತು ಸನ್‌ರೂಫ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 7-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) & 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.
ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga): ಈ ಎಂಪಿವಿ ರೂ.8.84 ಲಕ್ಷದಿಂದ ರೂ.13.13 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 1.5-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್ ಪಡೆದಿದ್ದು, 20.3 ರಿಂದ 26.11 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 7 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು.

ನೂತನ ಎರ್ಟಿಗಾ ಕಾರು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪ್ಯಾಡಲ್ ಶಿಫ್ಟರ್, ಕ್ರೂಸ್ ಕಂಟ್ರೋಲ್ ಹಾಗೂ ಆಟೋ ಎಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 4 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಅನ್ನು ಒಳಗೊಂಡಿದೆ.
ರೆನಾಲ್ಟ್ ಟ್ರೈಬರ್ (Renault Triber): ಇದೊಂದು ಎಂಪಿವಿಯಾಗಿದೆ. ರೂ.6 ಲಕ್ಷದಿಂದ ರೂ.8.97 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. 1-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 18.2 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಜೊತೆಗೆ 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ.

ಈ ಟ್ರೈಬರ್ ಕಾರು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 4 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ರೇರ್ ವ್ಯೂ ಕ್ಯಾಮೆರಾವನ್ನು ಒಳಗೊಂಡಿದೆ.
ಟೊಯೊಟಾ ರೂಮಿಯನ್ (Toyota Rumion): ಈ ಎಂಪಿವಿ ರೂ.10.54 ಲಕ್ಷದಿಂದ ರೂ.13.83 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 1.5-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಒಳಗೊಂಡಿದ್ದು, 20.11 ರಿಂದ 26.11 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಸ್ಪಂಕಿ ಬ್ಲೂ, ರಸ್ಟಿಕ್ ಬ್ರೌನ್, ಐಕಾನಿಕ್ ಗ್ರೇ, ಕೆಫೆ ವೈಟ್ & ಎಂಟೈಸಿಂಗ್ ಸಿಲ್ವರ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. ಇದು ಕೂಡ 7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ.

ಹೊಸ ರೂಮಿಯನ್ ಎಂಪಿವಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಎಸಿ, ಕ್ರೂಸ್ ಕಂಟ್ರೋಲ್, ಪುಶ್-ಬಟನ್ ಎಂಜಿನ್ ಸ್ಟಾರ್ಟ್/ ಸ್ಟಾಪ್ ಮತ್ತು ಪ್ಯಾಡಲ್ ಶಿಫ್ಟರ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 4-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ.
ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ (Mahindra Scorpio Classic): ಇದು ಪ್ರಖ್ಯಾತ್ ಎಸ್‌ಯುವಿಯಾಗಿದೆ. ರೂ.13.62 ಲಕ್ಷದಿಂದ ರೂ.17.50 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ದೊರೆಯುತ್ತದೆ. 2.2-ಲೀ. ಡೀಸೆಲ್ ಎಂಜಿನ್ ಹಾಗೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಹೊಂದಿದ್ದು, 16 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 7/9 ಆಸನಗಳನ್ನು ಪಡೆದಿದೆ. ಗ್ಯಾಲಕ್ಸಿ ಗ್ರೇ, ರೆಡ್ ರೇಜ್, ಎವರೆಸ್ಟ್ ವೈಟ್ ಹಾಗೂ ಡೈಮಂಡ್ ವೈಟ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಸ್ಕಾರ್ಪಿಯೋ ಕ್ಲಾಸಿಕ್ ಕಾರು ಎಸ್ ಹಾಗೂ ಎಸ್11 ಎಂಬ ರೂಪಾಂತರಗಳನ್ನು (ವೇರಿಯೆಂಟ್) ಹೊಂದಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಹಾಗೂ ಆಟೋ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಹಾಗೂ ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ.
ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta): ಈ ಎಂಪಿವಿ ರೂ.19.99 ಲಕ್ಷದಿಂದ 26.82 (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. 2.4-ಲೀ. ಡೀಸೆಲ್ ಎಂಜಿನ್ ಹಾಗೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಸರಿ ಸುಮಾರು 12 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 7/ 8 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಜಿಎಕ್ಸ್, ಜಿಎಕ್ಸ್ ಪ್ಲಸ್ ಹಾಗೂ ವಿಎಕ್ಸ್ ಸೇರಿದಂತೆ ರೂಪಾಂತರಗಳೊಂದಿಗೂ (ವೇರಿಯೆಂಟ್) ಲಭ್ಯವಿದೆ.

ಈ ಕಾರು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್ ಹಾಗೂ ರೇರ್ ಎಸಿ ವೆಂಟ್‌ಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 7 ಏರ್‌ಬ್ಯಾಗ್‌ಗಳು, ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಸ್ಟಾರ್ಟ್ ಅಸಿಸ್ಟ್, ಬ್ರೇಕ್ ಅಸಿಸ್ಟ್, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒಳಗೊಂಡಿದೆ.
ಇನ್ನು, ನೂತನ ಸಫಾರಿ, ಎರ್ಟಿಗಾ, ಟ್ರೈಬರ್, ರೂಮಿಯಾನ್, ಸ್ಕಾರ್ಪಿಯೋ ಕ್ಲಾಸಿಕ್ ಮತ್ತು ಇನ್ನೋವಾ ಕ್ರಿಸ್ಟಾ ಕಾರು ಸಾಕಷ್ಟು ಆಕರ್ಷಕವಾಗಿವೆ. ಈ ಹಿನ್ನೆಲೆ, ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಮುಂಬರುವ ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬ ಬರಲಿದ್ದು, ಈ ಕಾರುಗಳಿಗೆ ಭಾರೀ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾದರೂ ಅಚ್ಚರಿಯಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications