Best hybrid car: ಮಾರುತಿಯ ಬೆಸ್ಟ್ ಹೈಬ್ರಿಡ್ ಕಾರು: ಹೆಚ್ಚು ಮೈಲೇಜ್, ಆರಾಮ ಪ್ರಯಾಣ!

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಕಾಂಪ್ಯಾಕ್ಟ್ ಎಸ್‌ಯುವಿಯಾಗಿದ್ದು, ಇದು ಬೆಸ್ಟ್‌ ಹೈಬ್ರಿಡ್ ಕಾರಾಗಿದೆ (Best hybrid car). ಮಾರುತಿ ಸುಜುಕಿ ಕಂಪನಿಯು ಟೊಯೊಟಾ ಜೊತೆಗೂಡಿ ಈ ಕಾರನ್ನು ಅಭಿವೃದ್ಧಿಪಡಿಸಿದೆ. ತನ್ನ ಸ್ಟ್ಯಾಂಡರ್ಡ್ ಪೆಟ್ರೋಲ್ ಎಂಜಿನ್ ಜೊತೆಗೆ ಗ್ರ್ಯಾಂಡ್ ವಿಟಾರಾ ಆಟೋ-ಚಾರ್ಜಿಂಗ್ ಸ್ಟ್ರಾಂಗ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಮೂಲಕ ಇದು ಭಾರತದ ಅತ್ಯಂತ ಹೆಚ್ಚಿನ ಮೈಲೇಜ್ ನೀಡುವ ಕಾರುಗಳಲ್ಲಿ ಒಂದಾಗಿದೆ. ಗ್ರ್ಯಾಂಡ್ ವಿಟಾರಾ ಆಲ್-ವೀಲ್ ಡ್ರೈವ್ ಆಯ್ಕೆಯನ್ನು ಸಹ ಒದಗಿಸುತ್ತದೆ. ಇದು ವೈವಿಧ್ಯಮಯ ಚಾಲನಾ ಆದ್ಯತೆಗಳನ್ನು ಪೂರೈಸುತ್ತದೆ.

ಮಾರುತಿ ಗ್ರ್ಯಾಂಡ್ ವಿಟಾರಾ ಬೆಲೆಯು ರೂ.11.19 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಪ್ ಎಂಡ್ ಮಾದರಿಯ ಬೆಲೆಯು ರೂ.20.09 ಲಕ್ಷಗಳವರೆಗೆ (ಎಕ್ಸ್‌ ಶೋರೂಂ ಬೆಲೆಗಳು) ಇದೆ. ಗ್ರ್ಯಾಂಡ್ ವಿಟಾರಾವನ್ನು 17 ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದ್ದು, ಗ್ರ್ಯಾಂಡ್ ವಿಟಾರಾದ ಬೇಸ್ ಮಾದರಿ ಸಿಗ್ಮಾ ಮತ್ತು ಟಾಪ್ ಮಾದರಿ ಮಾರುತಿ ಗ್ರ್ಯಾಂಡ್ ವಿಟಾರಾ ಆಲ್ಫಾ ಪ್ಲಸ್ ಹೈಬ್ರಿಡ್ ಸಿವಿಟಿ ಡಿಟಿ ಆಗಿದೆ.

best-hybrid-car-maruti-suzuki-grand-vitara-details

ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ 9-ಇಂಚಿನ ಇನ್ಫೋಟೈನ್ ಮೆಂಟ್ ನೀಡಲಾಗಿದ್ದು ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, 6-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಉತ್ತಮ ಅನಿಮೇಷನ್‌ಗಳೊಂದಿಗೆ ಸಾಕಷ್ಟು ವಾಹನ ಮಾಹಿತಿಯನ್ನು ಒದಗಿಸುತ್ತದೆ. ಈ ಕಾರು ಆಟಫಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಮತ್ತು ಬೃಹತ್ ಪನೋರಮಿಕ್ ಸನ್ ರೂಫ್ ಅನ್ನು ಸಹ ಹೊಂದಿದೆ.

ಕೆಲವು ಪ್ರೀಮಿಯಂ ವೈಶಿಷ್ಟ್ಯಗಳು ಸ್ಟ್ರಾಂಗ್ ಹೈಬ್ರಿಡ್‌ಗೆ ಸೀಮಿತವಾಗಿವೆ. ಅವುಗಳೆಂದರೆ, 7 ಇಂಚಿನ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕಲ್ಷ್ಟರ್ ಸ್ಪಷ್ಟ ಗ್ರಾಫಿಕ್ಸ್ ನೊಂದಿಗೆ ಸಾಕಷ್ಟು ಮಾಹಿತಿಯೊಂದಿಗೆ ಬರುತ್ತದೆ. ಹೆಡ್ಸ್-ಅಪ್ ಡಿಸ್ಪ್ಲೇ ಬ್ಯಾಟರಿ ಮಾಹಿತಿ ಮತ್ತು ನ್ಯಾವಿಗೇಷನ್ ಅನ್ನು ಸಹ ತೋರಿಸುತ್ತದೆ. ವೆಂಟಿಲೇಟೆಡ್ ಫ್ರಂಟ್ ಸೀಟುಗಳನ್ನು ಸಹ ನೀಡಲಾಗಿದೆ.

best-hybrid-car-maruti-suzuki-grand-vitara-details

ಗ್ರ್ಯಾಂಡ್ ವಿಟಾರಾ ಬ್ರೆಝಾ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದ್ದು, ಇದು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 4-ಸ್ಟಾರ್‌ಗಳನ್ನು ಗಳಿಸಿದೆ. ಹಾಗಾಗಿ ಗ್ರ್ಯಾಂಡ್ ವಿಟಾರಾ ಕೂಡ ಕನಿಷ್ಠ 4-ಸ್ಟಾರ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಜೊತೆಗೆ ಆರು ಏರ್ ಬ್ಯಾಗ್‌ಗಳು, 360 ವ್ಯೂ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್ ನೀಡಲಾಗಿದೆ.

ಎಂಜಿನ್ ವಿಷಯಕ್ಕೆ ಬಂದರೆ ಗ್ರ್ಯಾಂಡ್ ವಿಟಾರಾ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೈಲ್ಡ್-ಹೈಬ್ರಿಡ್ ಸಿಸ್ಟಮ್‌ನೊಂದಿಗೆ 1.5 ಲೀಟರ್ ಪೆಟ್ರೋಲ್ ಎಂಜಿನ್ 103.06 ಪಿಎಸ್ ಪವರ್ ಹಾಗೂ 136.8 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಅಲ್ಲದೆ, ಮ್ಯಾನುವಲ್‌ನೊಂದಿಗೆ, ನೀವು ಸುಜುಕಿಯ ಆಲ್ ಗ್ರಿಪ್ ಎಡಬ್ಲ್ಯುಡಿ ಸಿಸ್ಟಮ್ ಸಹ ಖರೀದಿಸಬಹುದು.

best-hybrid-car-maruti-suzuki-grand-vitara-details

ಇನ್ನೊಂದು ಹೊಸ ಸ್ಟ್ರಾಂಗ್-ಹೈಬ್ರಿಡ್ ಆಗಿದ್ದು, ಇದು 1.5 ಲೀಟರ್ ಮೂರು ಸಿಲಿಂಡರ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿದ್ದು, 115.56 ಪಿಎಸ್ ಪವರ್‌ ಹೊರಹಾಕುತ್ತದೆ. ಇದು ಎಲೆಕ್ಟ್ರಿಕ್ ಮೋಡ್‌ನಲ್ಲಿ 100 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಕಂಪನಿಯ ಪ್ರಕಾರ ಈ ಕಾರು ಮ್ಯಾನುವಲ್‌ನಲ್ಲಿ 21.11 ಕಿ.ಮೀ ಮೈಲೇಜ್, ಆಟೋಮ್ಯಾಟಿಕ್ ನಲ್ಲಿ 20.58 ಕಿ.ಮೀ ಮತ್ತು ಎಡಬ್ಲ್ಯುಡಿ ಮ್ಯಾನುವಲ್‌ನಲ್ಲಿ 19.38 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, March 14, 2025, 12:16 [IST]
English summary
Best hybrid car maruti suzuki grand vitara details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+