33 ಕಿ.ಮೀ ಮೈಲೇಜ್.. 5-ಸೀಟರ್, 3.50 ಲಕ್ಷ.. ಈ ಮಾರುತಿ ಕಾರಿನ ಹೊಸ ದರವೆಷ್ಟು, EMI ಏನು?

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್ ಆಗಿದೆ. ಸೆ.22 ರಿಂದ ಜಿಎಸ್‌ಟಿ ಪರಿಷ್ಕರಣೆಗೊಂಡಿದೆ. ಈ ಕಾರಿನ ಬೆಲೆ ರೂ.1.29 ಲಕ್ಷ ಇಳಿಕೆಯಾಗಿದೆ. ಕನಿಷ್ಠ ರೂ.3.50 ಲಕ್ಷ ಹಾಗೂ ಗರಿಷ್ಠ ರೂ.5.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, 'ಎಸ್-ಪ್ರೆಸ್ಸೊ' ಅತ್ಯುತ್ತಮ ಆಯ್ಕೆಯಾಗಲಿದೆ. ನಾವಿಲ್ಲಿ ಇದೇ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಕುರಿತಂತೆ ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ನೂತನ 'ಎಸ್-ಪ್ರೆಸ್ಸೊ' ಹ್ಯಾಚ್‌ಬ್ಯಾಕ್ ವಿವಿಧ ರೂಪದಲ್ಲಿ ಖರೀದಿದಾರರಿಗೆ ಲಭ್ಯವಿದೆ. ಇದರ ಸ್ಟ್ಯಾಂಡರ್ಡ್ (ಪೆಟ್ರೋಲ್) ರೂಪಾಂತರ ರೂ.4.16 ಲಕ್ಷವರೆಗೆ ಆನ್-ರೋಡ್ ದರವನ್ನು ಪಡೆದಿದೆ. ರೂ.1 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ರೂ.3.16 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.6,000 ವರೆಗೆ ಇಎಂಐ ಕಟ್ಟಬೇಕು.

Best Mileage Car Maruti Suzuki S-Presso On-Road Price And Emi Details

ಇನ್ನೊಂದು ಎಲ್ಎಕ್ಸ್ಐ (ಪೆಟ್ರೋಲ್) ರೂಪಾಂತರ ರೂ.4.50 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ರೂ.1 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಮನೆಗೆ ತಂದರೆ, ರೂ.3.50 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ಹಾಕಿ, 5 ವರ್ಷಗಳಿಗೆ ಮಾಸಿಕ ರೂ.7,000 ವರೆಗೆ ಇಎಂಐ ಪಾವತಿ ಮಾಡಬೇಕು.

ಮತ್ತೊಂದು ವಿಎಕ್ಸ್ಐ (ಪೆಟ್ರೋಲ್) ರೂಪಾಂತರ ರೂ.5.09 ಲಕ್ಷವರೆಗೆ ಆನ್-ರೋಡ್ ದರವನ್ನು ಹೊಂದಿದೆ. ರೂ.1 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ತೆಗೆದುಕೊಂಡರೆ, ರೂ.4.09 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.8,000 ವರೆಗೆ ಇಎಂಐ ಕಟ್ಟಬೇಕು.

Best Mileage Car Maruti Suzuki S-Presso On-Road Price And Emi Details

ಇದೇ ಕಾರಿನ ಎಲ್ಎಕ್ಸ್ಐ (ಸಿಎನ್‌ಜಿ) ರೂಪಾಂತರ ರೂ.5.46 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಪಡೆದಿದೆ. ರೂ.1 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಖರೀದಿ ಮಾಡಿದರೆ, ರೂ.4.46 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ಹಾಕಿ, 5 ವರ್ಷಗಳಿಗೆ ಮಾಸಿಕ ರೂ.9,000 ವರೆಗೆ ಇಎಂಐ ಪಾವತಿಸಬೇಕು.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ವಿಶೇಷತೆಗಳೇನು:

ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸಿಗ್ನೇಚರ್ ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ 14 ಇಂಚಿನ ವೀಲ್‌ಗಳನ್ನು ಪಡೆದಿದೆ. ಮೆಟಾಲಿಕ್ ಗ್ರಾನೈಟ್ ಗ್ರೇ, ಸಾಲಿಡ್ ಫೈರ್ ರೆಡ್, ಬ್ಲೂಯಿಶ್ ಬ್ಲ್ಯಾಕ್, ಮೆಟಾಲಿಕ್ ಸಿಲ್ಕಿ ಸಿಲ್ವರ್ ಹಾಗೂ ಪರ್ಲ್ ಸ್ಟಾರ್ರಿ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಇದು ಕೊಂಚ ಮಟ್ಟಿಗೆ ವಿಶಾಲ ಗಾತ್ರದಲ್ಲಿದೆ. 3,565 ಎಂಎಂ ಉದ್ದ, 1,520 ಎಂಎಂ ಅಗಲ ಮತ್ತು 1,553 ಎಂಎಂ ಎತ್ತರವಿದೆ. ಜೊತೆಗಿದು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,380 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಪ್ರವಾಸಕ್ಕೆ ತೆರಳುವಾಗ ಹಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 270 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.

ಹೊಸ ಎಸ್-ಪ್ರೆಸ್ಸೊ 1-ಲೀಟರ್ ಪೆಟ್ರೋಲ್ ಮತ್ತು 1-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 24 ರಿಂದ 33 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 148 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಏರ್ ಕಂಡೀಷನ್ ಸಿಸ್ಟಮ್, ಕೀಲೆಸ್ ಎಂಟ್ರಿ ಮತ್ತು ಯುಎಸ್‌ಬಿ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 2 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ತನ್ನದಾಗಿಸಿಕೊಂಡಿದೆ.

ನಿಮ್ಮ ಗಮನಕ್ಕೆ.. ಇಲ್ಲಿ ನೂತನ 'ಎಸ್-ಪ್ರೆಸ್ಸೊ' ಕಾರಿನ ಕೆಲವೇ ರೂಪಾಂತರಗಳ (ವೇರಿಯೆಂಟ್) ಆನ್-ರೋಡ್ ಬೆಲೆ ಮತ್ತು ಇಎಂಐ ಆಯ್ಕೆಯ ಕುರಿತಂತೆ ಮಾತ್ರ ವಿವರಿಸಿದ್ದೇವೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

More from DriveSpark

Article Published On: Monday, September 29, 2025, 8:31 [IST]
English summary
Best mileage car maruti suzuki s presso on road price and emi details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+