ಭಾರತದಲ್ಲಿ ಕಡಿಮೆ ಬೆಲೆಗೆ ಸಿಗುವ ಅತ್ಯುತ್ತಮ ಮೈಲೇಜ್ ಕಾರುಗಳು: ಬೆಲೆ ಇಷ್ಟೆನಾ?
2025 ರಲ್ಲಿ ಭಾರತದಲ್ಲಿ ರೂ.7 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಕಾರುಗಳಲ್ಲಿ ಮಾರುತಿ ಸುಜುಕಿ ಹಾಗೂ ಟಾಟಾನ ಜನಪ್ರಿಯ ಕಾರುಗಳುಗಳು ಪ್ರಮುಖ ಪಾತ್ರ ವಹಿಸುತ್ತವೆ. ಮುಖ್ಯವಾಗಿ ಹ್ಯಾಚ್‌ಬ್ಯಾಕ್ ಮತ್ತು ಕಾಂಪ್ಯಾಕ್ಟ್ ಸೆಡಾನ್ ವಿಭಾಗಗಳಲ್ಲಿ ಇವು ಹೆಚ್ಚಿನ ಇಂಧನ ದಕ್ಷತೆ ಮತ್ತು ಕೈಗೆಟುಕುವ ಬೆಲೆಯನ್ನು ಹೊಂದಿವೆ. ಲೀಟರ್‌ಗೆ ಕನಿಷ್ಟ 20.52 ಕಿ.ಮೀ ಮೈಲೇಜ್ ನೀಡುತ್ತವೆ. ಭಾರತದಲ್ಲಿ ಪ್ರಸ್ತುತ ನಮಗೆ ಲಭ್ಯವಿರುವ ಕಡಿಮೆ ಬೆಲೆಗೆ ಸಿಗುವ ಬೆಸ್ಟ್ ಮೈಲೇಜ್ ಕಾರುಗಳ ಪಟ್ಟಿ ಇಲ್ಲಿದೆ.
ಆಲ್ಟೊ ಕೆ 10: ಮಾರುತಿ ಸುಜುಕಿ ಆಲ್ಟೊ ಕೆ10 ಸಾಕಷ್ಟು ಕಾರ್ಯಕ್ಷಮತೆ ಮತ್ತು ಉತ್ತಮ ಚಾಲನಾ ಸಾಮರ್ಥ್ಯವು ಇದನ್ನು ಅತ್ಯುತ್ತಮ ಆರಂಭಿಕ ಮಟ್ಟದ ಹ್ಯಾಚ್ ಬ್ಯಾಕ್ ಆಯ್ಕೆಗಳಲ್ಲಿ ಒಂದಾಗಿದೆ. ಇದರ ಆರಂಭಿಕ ಬೆಲೆಯು 3.6 ಲಕ್ಷ (ಎಕ್ಸ್-ಶೋರೂಂ) ರೂ.ಗಳನ್ನು ಹೊಂದಿದೆ. ಇದು 1.0 ಪೆಟ್ರೋಲ್ ಎಂಜಿನ್ ಹೊಂದಿದ್ದು, ಪ್ರತಿ ಲೀಟರ್‌ಗೆ 24.9 ಕಿ.ಮೀ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ವ್ಯಾಗನ್ ಆರ್: ಮಾರುತಿ ಸುಜುಕಿ ವ್ಯಾಗನ್ ಆರ್ ಬೆಲೆಯು ಬೆಲೆ ರೂ. 4.99 ಲಕ್ಷ (ಎಕ್ಸ್ - ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಇದು ಭಾರತದ ಅತ್ಯಂತ ಜನಪ್ರಿಯ ಕೈಗೆಟುಕುವ ಮೈಲೇಜ್ ಕಾರಾಗಿದ್ದು, 1.2-ಲೀಟರ್ AMT ಪೆಟ್ರೋಲ್ ವೇರಿಯೆಂಟ್ ಪ್ರತಿ ಲೀಟರ್‌ಗೆ 19.31kmpl (ಸಿಟಿ) ಮತ್ತು 22.34kmpl (ಹೆದ್ದಾರಿ) ಮೈಲೇಜ್ ನೀಡುತ್ತದೆ. ವಿಶಾಲವಾದ ಒಳಾಂಗಣದೊಂದಿಗೆ ಪ್ರಯಾಣಿಕರಿಗೆ ಆರಾಮ ಪ್ರಯಾಣ ನೀಡುತ್ತದೆ.
ಮಾರುತಿ ಸುಜುಕಿ ಸೆಲೆರಿಯೊ: ಮಾರುತಿ ಸುಜುಕಿ ಸೆಲೆರಿಯೊ ಬೆಲೆಯು ತನ್ನ ವಿಭಾಗದಲ್ಲಿ ಅತ್ಯುತ್ತಮವಾದ ಹ್ಯಾಚ್ ಬ್ಯಾಕ್ ಆಗಿದ್ದು, 313-ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ. ಈ ಕಾರಿನಲ್ಲಿ 1.0 - ಲೀಟರ್ ಎಂಜಿನ್ ಒದಗಿಸಲಾಗಿದ್ದು, ಬೆಲೆ ರೂ. 4.70 (ಎಕ್ಸ್ ಶೋರೂಂ)ಇದೆ. ಇದು ಪ್ರತಿ ಲೀಟರ್‌ಗೆ 18.42kmpl (ಸಿಟಿ) ಮತ್ತು 23.18kmpl (ಹೆದ್ದಾರಿ) ಮೈಲೇಜ್ ನೀಡುತ್ತದೆ. ಇದು ತನ್ನ ವಿಭಾಗದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ.

ಟಾಟಾ ಪಂಚ್: ಟಾಟಾ ಪಂಚ್ ಬ್ರಾಂಡ್‌ನ ಕಾಂಪ್ಯಾಕ್ಟ್ SUV ಕೊಡುಗೆಯಾಗಿದ್ದು, ಇದರ ಆರಂಭಿಕ ಬೆಲೆ ರೂ. 5.9 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಇದರ 1.2 - ಪೆಟ್ರೋಲ್ ಎಂಜಿನ್ ಲೀಟರ್‌ಗೆ 18.82 ಕಿ.ಮೀ ಮೈಲೇಜ್ ನೀಡುತ್ತದೆ. 5-ಸ್ಟಾರ್ GNCAP ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ. ತನ್ನ ವಿಭಾಗದಲ್ಲಿಯೇ ಅತ್ಯಂತ ಸುರಕ್ಷಿತ ಕಾರಾಗಿದೆ.
ಮಾರುತಿ ಸುಜುಕಿ ಡಿಜೈರ್: ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್, ಬೆಲೆ ರೂ. 6.26 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಪೆಟ್ರೋಲ್ ವೇರಿಯೆಂಟ್ ಲೀಟರ್‌ಗೆ 24.77 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು BNCAP ಮತ್ತು GNCAP ಕ್ರ್ಯಾಶ್ ಸುರಕ್ಷತಾ ಪರೀಕ್ಷೆಗಳಲ್ಲಿ 5 - ಸ್ಟಾರ್ ಸುರಕ್ಷತೆಯನ್ನು ಗಳಿಸಿದೆ. ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಪಡೆಯುತ್ತದೆ.

ಮೇಲಿನ ಈ ಕಾರುಗಳು ರೂ. 7 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಇಂಧನ-ಸಮರ್ಥ ಆಯ್ಕೆಗಳಲ್ಲಿ ಬೆಸ್ಟ್ ಆಯ್ಕೆಯಾಗಿವೆ. ಮಾರುತಿ ಸುಜುಕಿ ಸ್ವಿಫ್ಟ್, ವ್ಯಾಗನ್ ಆರ್, ಸೆಲೆರಿಯೊ ಮತ್ತು ಡಿಜೈರ್ ಸುಮಾರು 25 ಕಿ.ಮೀ/ಲೀ ನಷ್ಟು ಮೈಲೇಜ್ ನೀಡುತ್ತವೆ. ಟಾಟಾ ಪಂಚ್ SUV ಗುಣಮಟ್ಟದಲ್ಲಿ ಉತ್ತಮವಾಗಿದ್ದು, ಆದರೆ ಸ್ವಲ್ಪ ಕಡಿಮೆ ಮೈಲೇಜ್ ನೀಡುತ್ತದೆ.
ಏಳು ಲಕ್ಷಕ್ಕಿಂತ ಕಡಿಮೆ ಬೆಲೆಯ ಅಗ್ರ ಐದು ಕಾರುಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ. ಇದರಿಂದ ಕಾಲಕಾಲಕ್ಕೆ ನಿಮ್ಮ ಕಾರಿನಲ್ಲಿ ಇಂಧನವನ್ನು ಮರುಭರ್ತಿ ಮಾಡುವ ಒತ್ತಡವಿಲ್ಲದೆ ಆರಾಮದಾಯಕ ಚಾಲನಾ ಅನುಭವ ಪಡೆಯಬಹುದು. ಟಾಟಾ ಹಾಗೂ ಮಾರುತಿ ಸುಜುಕಿ ಕಂಪನಿಗಳ ಆಯ್ದ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.


Click it and Unblock the Notifications








