Best mileage cars: 7 ಲಕ್ಷಕ್ಕಿಂತ ಕಡಿಮೆ ಬೆಲೆ... ಲೀ. ಪೆಟ್ರೋಲ್‌ಗೆ 24 ಕಿ.ಮೀ ಓಡಿಸಿ

ಪ್ರತಿ ಲೀಟರ್‌ಗೆ 20 ಕಿ.ಮೀ ಮೈಲೇಜ್ ಹೊಂದಿರುವ ಏಳು ಲಕ್ಷಕ್ಕಿಂತ ಕಡಿಮೆ ಬೆಲೆಯ ಅಗ್ರ ಐದು ಕಾರುಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ. ಇದರಿಂದ ಕಾಲಕಾಲಕ್ಕೆ ನಿಮ್ಮ ಕಾರಿನಲ್ಲಿ ಇಂಧನವನ್ನು ಮರುಭರ್ತಿ ಮಾಡುವ ಒತ್ತಡವಿಲ್ಲದೆ ಆರಾಮದಾಯಕ ಚಾಲನಾ ಅನುಭವ ಪಡೆಯಬಹುದು. ಟಾಟಾ ಹಾಗೂ ಮಾರುತಿ ಸುಜುಕಿ ಕಂಪನಿಗಳ ಆಯ್ದ ಕಾರುಗಳು ಲೀಟರ್‌ಗೆ 20.52 ಕಿ.ಮೀ ನಿಂದ 24.80 ಕಿ.ಮೀ ಮೈಲೇಜ್ ಅನ್ನು ನೀಡುತ್ತವೆ. ಬನ್ನಿ ಹಾಗಾದ್ರೆ ಭಾರತದಲ್ಲಿ ಕಡಿಮೆ ಬೆಲೆಗೆ ಸಿಗುವ ಬೆಸ್ಟ್ ಮೈಲೇಜ್ ಕಾರುಗಳನ್ನು ಇಲ್ಲಿ ನೋಡೋಣ.

ಮಾರುತಿ ಸುಜುಕಿ ವ್ಯಾಗನ್ ಆರ್: ವ್ಯಾಗನ್ ಆರ್ ಒಂದು ಬಹುಮುಖ ಹ್ಯಾಚ್‌ಬ್ಯಾಕ್ ಆಗಿದ್ದು, ಇದು ಭಾರತದ ಅತ್ಯಂತ ಜನಪ್ರಿಯ ಕೈಗೆಟುಕುವ ಮೈಲೇಜ್ ಕಾರಾಗಿದೆ. ಇದರ ಬೆಲೆ ರೂ. 4.99 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. 1.2-ಲೀಟರ್ AMT ಪೆಟ್ರೋಲ್ ವೇರಿಯೆಂಟ್ ಪ್ರತಿ ಲೀಟರ್‌ಗೆ 19.31kmpl (ಸಿಟಿ) ಮತ್ತು 22.34kmpl (ಹೆದ್ದಾರಿ) ಮೈಲೇಜ್ ಅನ್ನು ಹಿಂದಿರುಗಿಸುತ್ತದೆ.

best-mileage-cars-under-7-lakh-in-india-tata-maruti-suzuki

ಮಾರುತಿ ಸುಜುಕಿ ಸೆಲೆರಿಯೊ: ಮಾರುತಿ ಸುಜುಕಿ ಸೆಲೆರಿಯೊ ಬೆಲೆಯು ರೂ. 4.70 (ಎಕ್ಸ್‌ ಶೋರೂಂ)ಇದೆ. ಈ ಕಾರಿನಲ್ಲಿ 1.0-ಲೀಟರ್ ಎಂಜಿನ್ ಒದಗಿಸಲಾಗಿದ್ದು, ಇದು ಪ್ರತಿ ಲೀಟರ್‌ಗೆ ಪ್ರಭಾವಶಾಲಿ 18.42kmpl (ಸಿಟಿ) ಮತ್ತು 23.18kmpl (ಹೆದ್ದಾರಿ) ಮೈಲೇಜ್ (CNG ವೇರಿಯೆಂಟ್‌ಗಳು ಇನ್ನೂ ಹೆಚ್ಚಿನ ಮೈಲೇಜ್ ಒದಗಿಸುತ್ತವೆ) ಅನ್ನು ಹಿಂದಿರುಗಿಸುತ್ತದೆ. ಇದು ತನ್ನ ವಿಭಾಗದಲ್ಲಿ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್ ಆಗಿದ್ದು, 313-ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ.

ಮಾರುತಿ ಸುಜುಕಿ ಡಿಜೈರ್: ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್, ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಪಡೆಯುತ್ತದೆ. ಇದು BNCAP ಮತ್ತು GNCAP ಕ್ರ್ಯಾಶ್ ಸುರಕ್ಷತಾ ಪರೀಕ್ಷೆಗಳಲ್ಲಿ 5-ಸ್ಟಾರ್ ಸುರಕ್ಷತೆಯನ್ನು ಗಳಿಸಿದೆ. ಬೆಲೆ ರೂ. 6.26 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಪೆಟ್ರೋಲ್ ವೇರಿಯೆಂಟ್ ಲೀಟರ್‌ಗೆ 24.77 ಕಿ.ಮೀ ಮೈಲೇಜ್ ನೀಡುತ್ತದೆ.

best-mileage-cars-under-7-lakh-in-india-tata-maruti-suzuki

ಟಾಟಾ ಪಂಚ್: ಟಾಟಾ ಪಂಚ್ ಅತ್ಯಂತ ಕಾಂಪ್ಯಾಕ್ಟ್ SUV ಕೊಡುಗೆಯಾಗಿದ್ದು, 5-ಸ್ಟಾರ್ GNCAP ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ. ಇದರ 1.2 - ಪೆಟ್ರೋಲ್ ಎಂಜಿನ್ ಲೀಟರ್‌ಗೆ 18.82 ಕಿ.ಮೀ ಮೈಲೇಜ್ ನೀಡಿದರೆ, ಮ್ಯಾನುವಲ್ ವೇರಿಯೆಂಟ್ ಲೀಟರ್‌ಗೆ 20.1 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಆರಂಭಿಕ ಬೆಲೆ ರೂ. 5.9 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ.

ಆಲ್ಟೊ ಕೆ 10: ಮಾರುತಿ ಸುಜುಕಿ ಆಲ್ಟೊ ಕೆ10 ಆರಂಭಿಕ ಬೆಲೆಯು 3.6 ಲಕ್ಷ (ಎಕ್ಸ್-ಶೋರೂಂ) ರೂ.ಗಳನ್ನು ಹೊಂದಿದೆ. ಇದು 1.0 ಪೆಟ್ರೋಲ್ ಎಂಜಿನ್ ಹೊಂದಿದ್ದು, ಪ್ರತಿ ಲೀಟರ್‌ಗೆ 24.9 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಸಾಕಷ್ಟು ಕಾರ್ಯಕ್ಷಮತೆ ಮತ್ತು ಉತ್ತಮ ಚಾಲನಾ ಸಾಮರ್ಥ್ಯವು ಇದನ್ನು ಅತ್ಯುತ್ತಮ ಆರಂಭಿಕ ಮಟ್ಟದ ಹ್ಯಾಚ್‌ಬ್ಯಾಕ್ ಆಯ್ಕೆಗಳಲ್ಲಿ ಒಂದಾಗಿದೆ.

best-mileage-cars-under-7-lakh-in-india-tata-maruti-suzuki

ಮೇಲಿನ ಈ ಕಾರುಗಳಲ್ಲಿ, ಮಾರುತಿ ಸುಜುಕಿ ಸ್ವಿಫ್ಟ್, ವ್ಯಾಗನ್ ಆರ್, ಸೆಲೆರಿಯೊ ಮತ್ತು ಡಿಜೈರ್ ಸುಮಾರು 25 ಕಿ.ಮೀ/ಲೀ ನಷ್ಟು ಮೈಲೇಜ್ ನೀಡುತ್ತವೆ. ಇವು ರೂ. 7 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಇಂಧನ-ಸಮರ್ಥ ಆಯ್ಕೆಗಳಲ್ಲಿ ಬೆಸ್ಟ್ ಆಯ್ಕೆಯಾಗಿವೆ. ಟಾಟಾ ಪಂಚ್ SUV ಗುಣಮಟ್ಟದಲ್ಲಿ ಉತ್ತಮವಾಗಿದ್ದು, ಆದರೆ ಸ್ವಲ್ಪ ಕಡಿಮೆ ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, October 13, 2025, 10:20 [IST]
English summary
Best mileage cars under 7 lakh in india tata maruti suzuki
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+