ಯಾರಿಗೂ ತಿಳಿಯದ ಬೆಸ್ಟ್ ಮೈಲೇಜ್ ಡೀಸೆಲ್ ಕಾಂಪ್ಯಾಕ್ಟ್ ಎಸ್‌ಯುವಿಗಳು!

ಭಾರತದಲ್ಲಿ ಬಹುತೇಕ ಕಂಪನಿಗಳು ಡೀಸೆಲ್ ಎಂಜಿನ್‌ ಕಾರುಗಳನ್ನು ಸ್ಥಗಿತಗೊಳಿಸಿವೆ. ಆದರೂ ಟಾಟಾ ಮೋಟಾರ್ಸ್, ಮಹೀಂದ್ರಾದಂತಹ ದೇಶೀಯ ಬ್ರಾಂಡ್‌ಗಳು ಸೇರಿದಂತೆ ಒಂದೆರಡು ವಿದೇಶಿ ಕಂಪನಿಗಳು ಡೀಸೆಲ್ ಎಂಜಿನ್‌ಗಳನ್ನು ಮುಂದುವರೆಸುತ್ತಿವೆ. ಪ್ರಸ್ತುತ ಭಾರತದಲ್ಲಿ ಡೀಸೆಲ್ ಎಂಜಿನ್‌ ಹೊಂದಿರುವ ಬೆಸ್ಟ್ ಕಾಂಪ್ಯಾಕ್ಟ್ ಎಸ್‌ಯುವಿಗಳಿವೆ. ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈ ಇಲ್ಲಿ ನೆಕ್ಸಾನ್ ಮತ್ತು ವೆನ್ಯೂನಂತಹ ಕಾರುಗಳನ್ನು ಹೊಂದಿದ್ದರೆ, ಮಹೀಂದ್ರಾ ಎರಡು ಡೀಸೆಲ್ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ನೀಡುತ್ತಿದೆ. ಮಾರಾಟದಲ್ಲಿರುವ ಡೀಸೆಲ್ ಕಾಂಪ್ಯಾಕ್ಟ್ ಎಸ್‌ಯುವಿಗಳ ಬೆಲೆ ಹಾಗೂ ಮೈಲೇಜ್ ವಿವರಗಳನ್ನು ನೋಡೋಣ.

ಟಾಟಾ ನೆಕ್ಸಾನ್: ಟಾಟಾ ನೆಕ್ಸಾನ್ ಡೀಸೆಲ್ ಶ್ರೇಣಿಯ ಬೆಲೆ ಈಗ 11.30 ಲಕ್ಷದಿಂದ 15.60 ಲಕ್ಷ ರೂ.ವರೆಗೆ ಇದೆ. ಇದು 1.5-ಲೀಟರ್ ಎಂಜಿನ್, ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ನೆಕ್ಸಾನ್ ಅನ್ನು 24.08 ಕಿ.ಮೀ ARAI ಮೈಲೇಜ್‌ನೊಂದಿಗೆ ಅತ್ಯಂತ ಮಿತವ್ಯಯದ ಡೀಸೆಲ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನಾಗಿ ಮಾಡುತ್ತದೆ. ಮ್ಯಾನುವಲ್‌ನಲ್ಲಿ ನೆಕ್ಸಾನ್ ಡೀಸೆಲ್ 23.23 ಕಿ.ಮೀ ಮೈಲೇಜ್ ಹೊಂದಿದೆ.

best-mileage-diesel-compact-suvs-in-india

ಹ್ಯುಂಡೈ ವೆನ್ಯೂ: ಹ್ಯುಂಡೈ ವೆನ್ಯೂ 1.5-ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, ಕೇವಲ ಮ್ಯಾನುವಲ್‌ನಲ್ಲಿ ಮಾತ್ರ ಲಭ್ಯವಿದೆ. ವೆನ್ಯೂ ಡೀಸೆಲ್ ಪ್ರಸ್ತುತ 10.80 ಲಕ್ಷದಿಂದ 13.53 ಲಕ್ಷ ರೂ. ಬೆಲೆಯಿದೆ. ವೆನ್ಯೂ ಡೀಸೆಲ್ 23.7 ಕಿ.ಮೀ ARAI ಮೈಲೇಜ್ ಹೊಂದಿದೆ. ಮುಂದಿನ ತಲೆಮಾರಿನ ವೆನ್ಯೂ ಪ್ರಸ್ತುತ ಈ ಹಬ್ಬದ ಸೀಸನ್‌ನಲ್ಲಿ ಬಿಡುಗಡೆಯಾಗುವ ಸಜ್ಜಾಗುತ್ತಿದೆ.

ಕಿಯಾ ಸೊನೆಟ್: ಕಿಯಾ ಸೊನೆಟ್ ತನ್ನ ಡೀಸೆಲ್ ಎಂಜಿನ್ ಅನ್ನು ಹೊಸ ಸೈರಸ್‌ನೊಂದಿಗೆ ಹಂಚಿಕೊಳ್ಳುತ್ತದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್‌ನಲ್ಲಿ ಸ್ವಲ್ಪ ಹೆಚ್ಚಿನ ARAI ಮೈಲೇಜ್ ನೀಡುತ್ತದೆ. ಕ್ರಮವಾಗಿ 22.3 ಕಿ.ಮೀ ಮತ್ತು 18.6 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯ ಬೆಲೆಯು ರೂ.10 ಲಕ್ಷದಿಂದ ರೂ.13.34 ಲಕ್ಷಗಳಾಗಿದೆ.

best-mileage-diesel-compact-suvs-in-india

ಮಹೀಂದ್ರಾ xuv 3XO: ಮಹೀಂದ್ರಾ xuv 3XO 1.5-ಲೀಟರ್ ಎಂಜಿನ್ ನೊಂದಿಗೆ ಬರುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಆಯ್ಕೆಗಳನ್ನು ನೀಡಲಾಗುತ್ತದೆ. ಡೀಸೆಲ್ ಶ್ರೇಣಿಯ ಬೆಲೆಯು ರೂ.10 ಲಕ್ಷದಿಂದ ರೂ.14.49 ಲಕ್ಷಗಳಾಗಿದೆ. ಇದು ಕ್ರಮವಾಗಿ 20.6 ಕಿ.ಮೀ ಮತ್ತು 21.2 ಕಿ.ಮೀ ಮೈಲೇಜ್ ಅಂಕಿಅಂಶಗಳನ್ನು ಹೊಂದಿದೆ.

ಕಿಯಾ ಸಿರೋಸ್: ಕಿಯಾ ಸೈರಸ್ ಬೆಲೆಗಳನ್ನು ಇನ್ನೂ ಬಹಿರಂಗಪಡಿಸಿಲ್ಲ, ಇದು 1.5-ಲೀಟರ್ ಎಂಜಿನ್ ನೊಂದಿಗೆ ಬರುತ್ತದೆ. ಮ್ಯಾನುವಲ್ 20.75 ಕಿ.ಮೀ ಮತ್ತು ಆಟೋಮ್ಯಾಟಿಕ್ 17.65 ಕಿ.ಮೀ ಮೈಲೇಜ್ ಹೊಂದಿದೆ. ಫೆಬ್ರವರಿ 1 ರಂದು ಬೆಲೆಗಳನ್ನು ಬಹಿರಂಗಪಡಿಸಲಾಗುವುದು. ಎಚ್‌ಟಿಎಕ್ಸ್ + ಮತ್ತು ಎಚ್ ಟಿಎಕ್ಸ್ + (ಒ) ಆಟೋಮ್ಯಾಟಿಕ್ ಟ್ರಿಮ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಡೀಲರ್‌ಗಳು ಹೇಳುತ್ತಾರೆ.

best-mileage-diesel-compact-suvs-in-india

ಮಹೀಂದ್ರಾ ಬೊಲೆರೊ ನಿಯೋ: ಮಹೀಂದ್ರಾ ಬೊಲೆರೊ ನಿಯೋ ಭಾರತದಲ್ಲಿ ಮಾರಾಟವಾಗುತ್ತಿರುವ ಏಕೈಕ ಲ್ಯಾಡರ್ ಫ್ರೇಮ್ ಮತ್ತು ರಿಯರ್ ವೀಲ್ ಡ್ರೈವ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಇದು 1.5-ಲೀಟರ್ ಎಂಜಿನ್ ಮತ್ತು 5-ಸ್ಪೀಡ್ ಮ್ಯಾನುವಲ್ ನೊಂದಿಗೆ ಬರುತ್ತದೆ. 18.04 ಕಿ.ಮೀ ಮೈಲೇಜ್ ನೀಡುವುದಾಗಿ ಹೇಳಲಾಗಿದೆ. ಬೆಲೆಯು 9.95 ಲಕ್ಷದಿಂದ 12.15 ಲಕ್ಷ ರೂ.ಗಳ ನಡುವೆ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 30, 2025, 11:33 [IST]
English summary
Best mileage diesel compact suvs in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+