ಅತಿಹೆಚ್ಚು ಮಾರಾಟ ಕಾಣುವ 4 ಬೆಸ್ಟ್ ಫ್ಯಾಮಿಲಿ 7-ಸೀಟರ್ ಕಾರುಗಳು: ನಿಮ್ಮ ವಶವಾಗಲು 10 ಲಕ್ಷ ಸಾಕು!

ಭಾರತದಲ್ಲಿ 7-ಸೀಟರ್ ಕಾರುಗಳು ಸಾಕಷ್ಟು ಜನಪ್ರಿಯವಾಗಿವೆ. ಜನಸಾಮಾನ್ಯರು, ಫ್ಲೀಟ್ ಆಪರೇಟರ್‌ಗಳು ಕೈಗೆಟುಕುವ ಏಳು ಆಸನಗಳ ಎಸ್‌ಯುವಿಗಳನ್ನು ಹೆಚ್ಚಾಗಿ ಪರಿಗಣಿಸುತ್ತಾರೆ. ಪ್ರಸ್ತುತ, ಭಾರತದಲ್ಲಿ ಅತ್ಯಂತ ಕೈಗೆಟುಕುವ ಏಳು ಆಸನಗಳ ಕಾರು ರೆನಾಲ್ಟ್ ಟ್ರೈಬರ್ ಆಗಿದೆ. ಇದರ ನಂತರ ಮಾರುತಿ, ಮಹೀಂದ್ರಾ ಬ್ರಾಂಡ್‌ಗಳ ಕಾರುಗಳು ಕೂಡ ಉತ್ತಮ 7-ಸೀಟರ್ ಕಾರುಗಳನ್ನು ನೀಡುತ್ತಿವೆ. ಬೆಲೆ ಏರಿಕೆಯಾದಷ್ಟು ಫಿಚರ್‌ಗಳು ಹಾಗೂ ಅದರ ಗುಣಮಟ್ಟ ಹೆಚ್ಚುತ್ತದೆ ಎಂಬುದನ್ನು ಗಮನಿಸಬೇಕು. ಬನ್ನಿ ಹಾಗಾದ್ರೆ ಭಾರತಲ್ಲಿ ಕೈಗೆಟುಕುವ ಬೆಲೆಯ ಬೆಸ್ಟ್ 7-ಸೀಟರ್ ಕಾರುಗಳನ್ನು ಪರಿಶೀಲಿಸೋಣ.

ರೆನಾಲ್ಟ್ ಟ್ರೈಬರ್: ಮೊದಲೇ ಹೇಳಿದಂತೆ ರೆನಾಲ್ಟ್ ಟ್ರೈಬರ್ ಭಾರತದಲ್ಲಿ ಅತ್ಯಂತ ಕೈಗೆಟುಕುವ 7-ಸೀಟರ್ ಕಾರಾಗಿದೆ. ಇದರ ಬೇಸ್‌ ವೇರಿಯೆಂಟ್ RXE ವೇರಿಯೆಂಟ್ ಬೆಲೆಯು ರೂ.5.99 ಲಕ್ಷಗಳಿಂದ ಟಾಪ್ ವೇರಿಯೆಂಟ್‌ಗೆ ರೂ.8.97 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್ ಹಾಗೂ ಆರ್‌ಎಕ್ಸ್‌ಟಿ ಎಂಬ ನಾಲ್ಕು ವೇರಿಯೆಂಟ್‌ಗಳನ್ನು ಹೊಂದಿದೆ.

best-selling-7-seater-cars-maruti-ertiga-renault-triber-mahindra-bolero

ಈ ಕಾರು, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಚಾರ್ಜರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಎಸಿ ವೆಂಟ್ಸ್, ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್, ಕೂಲ್ಡ್ ಸ್ಟೋರೇಜ್ & ಏರ್ ಫಿಲ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ರೆನಾಲ್ಟ್ ಟ್ರೈಬರ್ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. 4 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TCS (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ರೇರ್ ವ್ಯೂ ಕ್ಯಾಮೆರಾ, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), HSA (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ಪಡೆದಿದೆ.

best-selling-7-seater-cars-maruti-ertiga-renault-triber-mahindra-bolero

ರೆನಾಲ್ಟ್ ಟ್ರೈಬರ್, 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72 ಪಿಎಸ್ ಗರಿಷ್ಠ ಪವರ್ ಮತ್ತು 96 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. 18.2 ರಿಂದ 20 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಎರ್ಟಿಗಾ: ಕೈಗೆಟುಕುವ ಬೆಲೆ, ಮೈಲೇಜ್ ಮತ್ತು ವಿಶಾಲತೆಗೆ ಹೆಸರುವಾಸಿಯಾದ ಜನಪ್ರಿಯ 7 ಸೀಟರ್ ಕಾರು ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga), ಸದ್ಯ ಭಾರತದ ಬೆಸ್ಟ್ ಫ್ಯಾಮಿಲಿ ಕಾರಾಗಿದೆ. ಮಾರುತಿ ಎರ್ಟಿಗಾ ಬೆಲೆ ರೂ. 8.69 ಲಕ್ಷದಿಂದ ರೂ. 13.03 ಲಕ್ಷದವರೆಗೆ (ಎಕ್ಸ್‌ ಶೋರೂಂ) ಇದೆ.

best-selling-7-seater-cars-maruti-ertiga-renault-triber-mahindra-bolero

ಮಾರುತಿ ಎರ್ಟಿಗಾ ಫೀಚರ್ಸ್ ವಿಷಯಕ್ಕೆ ಬಂದರೆ ಇದು ತನ್ನ ಪ್ರತಿಸ್ಪರ್ಧಿಗಳಲ್ಲಿ ಹೆಚ್ಚು ವೈಶಿಷ್ಟ್ಯ-ಸಮೃದ್ಧವಾಗಿಲ್ಲದಿರಬಹುದು ಆದರೆ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಬೆಸ್ಟ್ ಎನ್ನಿಸಿಕೊಂಡಿದೆ. ಇದರಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್ ಮಾಡುವ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ.

ಎಂಜಿನ್ ವಿಷಯಕ್ಕೆ ಬಂದರೆ, ಮಾರುತಿ ಸುಜುಕಿ ಎರ್ಟಿಗಾ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5 - ಲೀಟರ್ ಪೆಟ್ರೋಲ್ ಎಂಜಿನ್‌ ಹೊಂದಿದೆ. ಇದನ್ನು 5-ಸ್ಪೀಡ್ MT ಅಥವಾ 6 - ಸ್ಪೀಡ್ AT ಯೊಂದಿಗೆ ಜೋಡಿಸಲಾಗಿದೆ. CNG ನಿಂದ ಚಾಲಿತವಾದಾಗ ಎಂಜಿನ್‌ 5 - ಸ್ಪೀಡ್ MT ನೊಂದಿಗೆ ಪ್ರತ್ಯೇಕವಾಗಿ ಲಭ್ಯವಿದೆ. ಎರ್ಟಿಗಾದ ಮೈಲೇಜ್ ಲೀಟರ್‌ಗೆ 22 ಕಿ.ಮೀ ಆಗಿದ್ದು, ತನ್ನ ವಿಭಾಗದ ಇತರ ಕಾರುಗಳಿಗೆ ಹೋಲಿಸಿದರೆ ಹೆಚ್ಚು ಮೈಲೇಜ್ ನೀಡುತ್ತದೆ.

ಕಂಪನಿಯ ಪ್ರಕಾರ, ಪೆಟ್ರೋಲ್ MT ನಲ್ಲಿ ಪ್ರತಿ ಲೀಟರ್‌ಗೆ 20.51 ಕಿ.ಮೀ, ಪೆಟ್ರೋಲ್ AT ನಲ್ಲಿ ಪ್ರತಿ ಲೀಟರ್‌ಗೆ 20.3 ಕಿ.ಮೀ ಹಾಗೂ CNG MT ನಲ್ಲಿ ಪ್ರತಿ ಕೆ.ಜಿಗೆ ಬರೋಬ್ಬರಿ 26.11 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಇದು LXi, VXi, ZXi, ಮತ್ತು ZXi+ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಬರುತ್ತದೆ. ಅವುಗಳಲ್ಲಿ ಎರಡು VXi ಮತ್ತು ZXi ಐಚ್ಛಿಕ CNG ಕಿಟ್‌ನೊಂದಿಗೆ ಬರುತ್ತವೆ.

ಮಹೀಂದ್ರಾ ಬೊಲೆರೋ: ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮಹೀಂದ್ರಾ ಬೊಲೆರೊ ಮತ್ತು ಬೊಲೆರೊ ನಿಯೋ ಇವೆ. ಮಹೀಂದ್ರಾ ಬೊಲೆರೊ ಬೇಸ್‌ ವೇರಿಯೆಂಟ್ ಬಿ6 ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 9.79 ಲಕ್ಷಗಳಾಗಿದೆ. ಇದು ಮೂರು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಮಹೀಂದ್ರಾದ ಮತ್ತೊಂದು ಆವೃತ್ತಿಯಾಗಿರುವ ಬೊಲೆರೊ ನಿಯೋ ಬೇಸ್‌ ವೇರಿಯೆಂಟ್ ಎನ್4 ವೇರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 9.94 ಲಕ್ಷಗಳಾಗಿದೆ. ಇದು ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಮಹೀಂದ್ರಾ ಬೊಲೆರೊ 1.5-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, ಇದು 75 ಬಿಹೆಚ್ ಪವರ್ ಮತ್ತು 210 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮಹೀಂದ್ರಾ ಬೊಲೆರೊ ನಿಯೋ ಎಂಪಿವಿ 1.5 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 98 ಬಿಹೆಚ್ ಪವರ್ ಮತ್ತು 260 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್‌ನ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಕಿಯಾ ಕ್ಯಾರೆನ್ಸ್: ಕಿಯಾ ಏಳು ಆಸನಗಳ ಸೆಗ್ಮೆಂಟಿನಲ್ಲಿ ಕ್ಯಾರೆನ್ಸ್ ಅನ್ನು ನೀಡುತ್ತದೆ. ಇದರ ಬೇಸ್‌ ವೇರಿಯೆಂಟ್ ಪ್ರೀಮಿಯಂ ಪ್ಲಸ್ ಬೆಲೆಯು ರೂ.10.51 ಲಕ್ಷಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಕಿಯಾ ಕ್ಯಾರೆನ್ಸ್ ಪ್ರಸ್ತುತ 10 ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ವೇರಿಯೆಂಟ್‌ಗಳ ವಾರು ಬೆಲೆ ಏರಿಕೆ ಆಗುತ್ತದೆ.

ಇದು ಸನ್ ರೂಫ್, 10.25-ಇಂಚಿನ ಇನ್ಫೋಟೈನ್ ಮೆಂಟ್ ಸ್ಕ್ರೀನ್, ಫ್ರಂಟ್-ವೆಂಟಿಲೇಟೆಡ್ ಸೀಟುಗಳು ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಕಿಯಾ ಕ್ಯಾರೆನ್ಸ್ ಅನ್ನು 1.5-ಲೀಟರ್ ಟರ್ಬೊ ಪೆಟ್ರೋಲ್ ನೊಂದಿಗೆ ನೀಡುತ್ತದೆ, ಇದು 158 ಬಿಹೆಚ್ ಪಿ ಮತ್ತು 260 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

1.5 ಲೀಟರಿನ ಡೀಸೆಲ್ ಎಂಜಿನ್ 115 ಬಿ ಹೆಚ್ ಪಿ ಪವರ್ ಹಾಗೂ 253 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. 1.5 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ 115 ಬಿ ಹೆಚ್ ಪಿ ಪವರ್ ಹಾಗೂ 144 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.

Article Published On: Sunday, April 13, 2025, 1:00 [IST]
English summary
Best selling 7 seater cars maruti ertiga renault triber mahindra bolero
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+