ಟೊಯೊಟಾ ಇನ್ನೋವಾ ಹೈಕ್ರಾಸ್ vs ಟಾಟಾ ಸಫಾರಿ: ಅತ್ಯಂತ ಸುರಕ್ಷಿತ ಕಾರುಗಳಿವು.. ಆದರೂ ಯಾವುದು ಬೆಸ್ಟ್?

ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆಯಾಗಿ ಭಾರತ್ ಎನ್‌ಸಿಎಪಿ (Bharat NCAP) ಗುರುತಿಸಿಕೊಂಡಿದೆ. ಇದು ಟೊಯೊಟಾ ಇನ್ನೋವಾ ಹೈಕ್ರಾಸ್ ಹಾಗೂ ಟಾಟಾ ಸಫಾರಿಯನ್ನು ಅತ್ಯಂತ ಸುರಕ್ಷಿತ ಕಾರುಗಳೆಂದು ನಿರ್ಣಯಿಸಿದ್ದು, 5 ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ನೀಡಿದೆ. ನಾವಿಲ್ಲಿ ಇವೆರೆಡು ಕಾರುಗಳು ಗಳಿಸಿರುವ ಸುರಕ್ಷತಾ ಅಂಕಗಳ ಹೋಲಿಕೆ ಮಾಡಿದ್ದೇವೆ. ಬನ್ನಿ, ಆ ಕುರಿತಂತೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಭಾರತ್ ಎನ್‌ಸಿಎಪಿ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection), ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಎಂಪಿವಿ 32ಕ್ಕೆ 30.47 ಅಂಕಗಳನ್ನು ಗಳಿಸಿದೆ. ಟಾಟಾ ಸಫಾರಿ (Tata Safari) ಎಸ್‌ಯುವಿಯು 32ಕ್ಕೆ 30.08/ ಅಂಕಗಳನ್ನು ಪಡೆದಿದೆ. ಇದರೊಂದಿಗೆ ಇನ್ನೋವಾಗೆ ಹೋಲಿಸಿದರೆ, ಸಫಾರಿಯೇ ಕೊಂಚ ಕಡಿಮೆ ಅಂಕಗಳನ್ನು ಗಳಿಸಿದೆ.

Bharat NCAP Crash Test Toyota Innova Hycross and Tata Safari Gets 5 Star Safety Rating Comparison

ಅದೇ ರೀತಿಯಲ್ಲಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection), ಟೊಯೊಟಾ ಇನ್ನೋವಾ ಹೈಕ್ರಾಸ್ 49ಕ್ಕೆ 45 ಅಂಕಗಳನ್ನು ಪಡೆದಿದೆ. ಟಾಟಾ ಸಫಾರಿಯು 49ಕ್ಕೆ 44.54 ಅಂಕಗಳನ್ನು ಗಳಿಸಿದೆ. ಈ ಮೂಲಕ ಸಫಾರಿಯು ಇನ್ನೋವಾಗಿಂತ ಸ್ವಲ್ಪ ಮಟ್ಟಿಗೆ ಕಮ್ಮಿ ಅಂಕಗಳನ್ನು ಪಡೆದಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿಯಲ್ಲಿ ಪ್ರಯಾಣಿಕರ ರಕ್ಷಣೆಗಾಗಿ ಏನಿದೆ:

ಇದು ಪ್ರಯಾಣಿಕರ ರಕ್ಷಣೆಗಾಗಿ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ 6 - ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಎಡಿಎಎಸ್ (ಅಡ್ವಾನ್ಸ್ಡ್ - ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ - ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ - ಸ್ಟಾರ್ಟ್ ಅಸಿಸ್ಟ್‌ ಹಾಗೂ 360 - ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

Bharat NCAP Crash Test Toyota Innova Hycross and Tata Safari Gets 5 Star Safety Rating Comparison

ಟಾಟಾ ಸಫಾರಿ ಒಳಗೊಂಡಿರುವ ಸುರಕ್ಷತಾ ವೈಶಿಷ್ಟ್ಯಗಳೇನು:

ಈ ಕಾರು ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 7 - ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ - ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ - ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ - ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಅಸಿಸ್ಟ್ ಮತ್ತು 360 - ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ & ಟಾಟಾ ಸಫಾರಿ ವಿಶೇಷತೆಗಳೇನು:

ಟೊಯೊಟಾ ಇನ್ನೋವಾ ಹೈಕ್ರಾಸ್ ಜನಪ್ರಿಯ ಎಂಪಿವಿಯಾಗಿ ಹೊರಹೊಮ್ಮಿದೆ. ಇದು ರೂ.19.94 ಲಕ್ಷದಿಂದ ರೂ.32.58 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 2.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ & 2.0-ಲೀಟರ್ ಹೈಬ್ರಿಡ್ (ಎಲೆಕ್ಟ್ರಿಕ್+ಪೆಟ್ರೋಲ್) ಎಂಜಿನ್ ಪಡೆದಿದ್ದು, 23 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಈ ಕಾರು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಪ್ಲಾಟಿನಂ ವೈಟ್ ಪರ್ಲ್, ಅಟಿಟ್ಯೂಡ್ ಬ್ಲ್ಯಾಕ್ ಮೈಕಾ ಹಾಗೂ ಸಿಲ್ವರ್ ಮೆಟಾಲಿಕ್ ಒಳಗೊಂಡಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 7/ 8 ಆಸನಗಳನ್ನು ಒಳಗೊಂಡಿದೆ. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡುಯಲ್-ಜೋನ್ ಆಟೋ ಎಸಿ, ಸನ್‌ರೂಫ್ ಮತ್ತು 9 ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಟಾಟಾ ಸಫಾರಿ ಎಸ್‌ಯುವಿಯು ರೂ.15.50 ಲಕ್ಷದಿಂದ ರೂ.27.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯನ್ನು ಒಳಗೊಂಡಿದೆ. 14 ರಿಂದ 16 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ. ಜೊತೆಗೆ ಅತ್ಯುತ್ತಮ ವಿನ್ಯಾಸವನ್ನು ಪಡೆದುಕೊಂಡಿದ್ದು, ಸ್ಟಾರ್‌ಡಸ್ಟ್ ಆಶ್, ಸ್ಟೆಲ್ಲರ್ ಫ್ರಾಸ್ಟ್, ಸೂಪರ್‌ನೋವಾ ಕಾಪರ್ & ಲೂನಾರ್ ಸ್ಲೇಟ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಇದರಲ್ಲಿ 6/ 7 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದು. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, 10 ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಡುಯಲ್ ಜೋನ್ ಆಟೋಮೆಟಿಕ್ ಎಸಿ ಹಾಗೂ ಸನ್‌ರೂಫ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Article Published On: Wednesday, July 2, 2025, 18:54 [IST]
English summary
Bharat ncap crash test toyota innova hycross and tata safari gets 5 star safety rating comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+