ತಿಂಗಳಾರಂಭದ ಮೊದಲ ದಿನವೇ ಶಾಕ್: ಇನ್ನೂ ಹೊಸ ಕಾರುಗಳು ದುಬಾರಿ.. ಕಾರಣವೇನು, ನಾವು ಹೇಳುತ್ತೇವೆ!

ಇಂದಿನಿಂದ 2025 - 26ನೇ ಹಣಕಾಸು ವರ್ಷ ಆರಂಭವಾಗಲಿದೆ. ಪ್ರಮುಖ ವಾಹನ ತಯಾರಕ ಕಂಪನಿಗಳಾದ ಮಾರುತಿ ಸುಜುಕಿ ಇಂಡಿಯಾ, ಹ್ಯುಂಡೈ ಮೋಟಾರ್ ಇಂಡಿಯಾ, ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ ಇಂಡಿಯಾ, ಬಿಎಂಡಬ್ಲ್ಯೂ ಗ್ರೂಪ್ ಇಂಡಿಯಾ ಹಾಗೂ ನಿಸ್ಸಾನ್ ಇಂಡಿಯಾ ವಿವಿಧ ಕಾರುಗಳ ಬೆಲೆಯನ್ನು ಹೆಚ್ಚಿಸಿವೆ. ಬಿಡಿಭಾಗಗಳ ದರ ಏರಿಕೆ, ತಯಾರಿಕಾ ವೆಚ್ಚ ಅಧಿಕಗೊಳ್ಳುವಿಕೆ, ಹಣದುಬ್ಬರ ಹಾಗೂ ಕಾರ್ಯಾಚರಣೆ ವೆಚ್ಚಗಳು ದುಪಟ್ಟುಗೊಂಡಿರುವುದು ಸೇರಿದಂತೆ ಹಲವು ಕಾರಣಗಳಿಗೆ ಈ ಕ್ರಮವನ್ನು ಕೈಗೊಂಡಿವೆ.

ದೇಶೀಯ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ವಾಹನ ತಯಾರಕ ಕಂಪನಿಗಳು, ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಪ್ರತಿ ವರ್ಷ ಎರಡು ಬಾರಿ ದರ ಏರಿಕೆ (Price Hike) ಮಾಡುವುದು ವಾಡಿಕೆ. ಮೊದಲು ಜನವರಿಯಲ್ಲಿ ಹೆಚ್ಚಿಸಿದರೆ, ಈ ನಂತರ ಏಪ್ರಿಲ್‌ನಲ್ಲಿ ಅಧಿಕಗೊಳಿಸುತ್ತವೆ. ಸದ್ಯ ನಂಬರ್ 1 ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ ಶೇಕಡ 4% ವರೆಗೆ ಬೆಲೆ ಏರಿಕೆ ಮಾಡಿದೆ.

Cars Price Hike From Today Tata Maruti Suzuki Hyundai To Mahindra Details

ಅದೇ ರೀತಿಯಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ಶೇಕಡ 3% ವರೆಗೆ ದರ ಹೆಚ್ಚಳ ಮಾಡಿದ್ದು, ಟಾಟಾ ಮೋಟಾರ್ಸ್ ಕೂಡ ಅಧಿಕಗೊಳಿಸಿದೆ. ಆದರೆ, ಈವರೆಗೂ ಬೆಲೆ ಏರಿಕೆ ಪ್ರಮಾಣವನ್ನು ಬಹಿರಂಗಪಡಿಸಿಲ್ಲ. ಶೇಕಡ 4% ಏರಿಕೆಯಾಗಿರುವ ನಿರೀಕ್ಷೆಯಿದೆ. ಮಹೀಂದ್ರಾ & ಮಹೀಂದ್ರಾ, ಕಿಯಾ ಇಂಡಿಯಾ, ಬಿಎಂಡಬ್ಲ್ಯೂ ಗ್ರೂಪ್ ಇಂಡಿಯಾ ಹಾಗೂ ನಿಸ್ಸಾನ್ ಇಂಡಿಯಾ ಕಂಪನಿಗಳು ಸಹ ತಲಾ ಶೇಕಡ 3% ವರೆಗೆ ಬೆಲೆಯನ್ನು ಹೆಚ್ಚಿಸಿದೆ.

ಬೆಲೆ ಏರಿಕೆಗೆ ನಿಖರ ಕಾರಣವೇನು: ಅಮೆರಿಕದ ಡಾಲರ್ ಎದುರಿಗೆ ಭಾರತೀಯ ರೂಪಾಯಿ ಮೌಲ್ಯ ಒಂದಷ್ಟು ಮಟ್ಟಿಗೆ ಕುಸಿತವಾಗಿರುವುದು ಕಾರುಗಳು ಬೆಲೆ ಏರಿಕೆಗೆ ಬಹುಮುಖ್ಯವಾದ ಕಾರಣವೆಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಇದರ ಪರಿಣಾಮ ವಿದೇಶದಿಂದ ಆಮದು ಮಾಡಿಕೊಳ್ಳುವ ಕೆಲವು ಬಿಡಿಭಾಗಗಳು ಹೆಚ್ಚು ದುಬಾರಿಯಾಗಿವೆ. ಕಾರುಗಳಿಗೆ ಬಳಸುವ ಕಚ್ಚಾ ವಸ್ತುಗಳ ದರವು ಏರಿಕೆಯತ್ತ ಮುಖ ಮಾಡಿವೆ.

Cars Price Hike From Today Tata Maruti Suzuki Hyundai To Mahindra Details

ಉದಾಹರಣೆಗೆ ವಾಹನ ತಯಾರಿಕೆಯಲ್ಲಿ ಹೆಚ್ಚಾಗಿ ಬಳಕೆ ಮಾಡುವ ಅಲ್ಯೂಮಿನಿಯಂ ಬೆಲೆಗಳು ವರ್ಷದಿಂದ ವರ್ಷಕ್ಕೆ ಶೇಕಡ 10.6% ಅಧಿಕಗೊಂಡಿದೆ. ರಬ್ಬರ್ ದರ ಕೂಡ ಶೇಕಡ 27% ಹೆಚ್ಚಳಗೊಂಡಿದೆ. ಇದು ವಾಹನ ತಯಾರಕ ಕಂಪನಿಗಳ ಲಾಭಾಂಶದ ಮೇಲೆ ಗಂಭೀರದ ಪರಿಣಾಮ ಬೀರಲಿದೆ. ಇದರಿಂದ ನಾನಾ ಸಮಸ್ಯೆಗಳು (ಹೊಸ ಆವಿಷ್ಕಾರಗಳು) ತಲೆದೂರಬಹುದು ಎಂಬ ಭೀತಿಯಿಂದ ವಾಹನ ತಯಾರಕ ಕಂಪನಿಗಳು, ದರ ಏರಿಕೆ ಮಾಡಿವೆ ಎಂದು ತಜ್ಞರು ಹೇಳುತ್ತಿದ್ದಾರೆ.

ಒಟ್ಟಾರೆ ವಾಹನ ಮಾರಾಟ ಹೇಗಿದೆ: ದೇಶೀಯ ವಾಹನ ಮಾರುಕಟ್ಟೆಯಲ್ಲಿ ಕಾರುಗಳು ಮಾತ್ರವಲ್ಲದೆ, ಬಹುತೇಕ ಎಲ್ಲ ವಾಹನಗಳ ಮಾರಾಟವು ಇಳಿಕೆಯಾಗಿದೆ. ಈ ಫೆಬ್ರವರಿ ಅಂಕಿಅಂಶವನ್ನು ಗಮನಿಸಿದಾಗ ಒಟ್ಟು 18,99,196 ಯುನಿಟ್ ವಾಹನಗಳನ್ನು ಮಾರಾಟ ಮಾಡಲಾಗಿದೆ. 2024ರ ಫೆಬ್ರವರಿಯಲ್ಲಿ 20,46,328 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ 7.19% ಕುಸಿತವಾಗಿದೆ.

Cars Price Hike From Today Tata Maruti Suzuki Hyundai To Mahindra Details

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, April 1, 2025, 9:30 [IST]
English summary
Cars price hike from today tata maruti suzuki hyundai to mahindra details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+