ಸಿಟ್ರನ್ ಕಾರುಗಳ ಬೆಲೆ ಇಳಿಕೆ ಘೋಷಣೆ: ಬರೋಬ್ಬರಿ 2.7 ಲಕ್ಷ ಕಡಿತ... ಹಬ್ಬಕ್ಕೆ ಭರ್ಜರಿ ಆಫರ್!
ಸಿಟ್ರನ್ ಇಂಡಿಯಾ ಇಂದು ತನ್ನ ಸಂಪೂರ್ಣ ಕಾರುಗಳಾದ್ಯಂತ ಗ್ರಾಹಕರಿಗೆ ಇತ್ತೀಚಿನ ಜಿಎಸ್‌ಟಿ ಕಡಿತದ ಪ್ರಯೋಜನಗಳನ್ನು ಸಂಪೂರ್ಣವಾಗಿ ವರ್ಗಾಯಿಸುವುದಾಗಿ ಘೋಷಿಸಿದೆ. ಈ ಪರಿಷ್ಕೃತ ದರಗಳು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿವೆ. ಬಸಾಲ್ಟ್ ಎಕ್ಸ್ ಮತ್ತು ಸಿ3ಎಕ್ಸ್ ಶ್ರೇಣಿಯ ಅತ್ಯಂತ ಸ್ಪರ್ಧಾತ್ಮಕ ಉಡಾವಣಾ ಬೆಲೆಯ ಹಿನ್ನೆಲೆಯಲ್ಲಿ, ಪ್ರಯಾಣಿಕ ವಾಹನಗಳಾದ್ಯಂತ ತೆರಿಗೆಗಳನ್ನು ತರ್ಕಬದ್ಧಗೊಳಿಸುವ ಹೊಸ ಜಿಎಸ್‌ಟಿ ರಚನೆಯು ಎಲ್ಲಾ ಸಿಟ್ರನ್ ಮಾದರಿಗಳಲ್ಲಿ ಗಣನೀಯ ಬೆಲೆ ಇಳಿಕೆಗಳನ್ನು ಕಾಣಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಸಿಟ್ರನ್ ಸಿ3 ಮತ್ತು ಸಿ3ಎಕ್ಸ್ ಎಸ್‌ಯುವಿಗಳ ಮೇಲೆ ರೂ. 84,000 ವರೆಗೆ ಬೆಲೆ ಇಳಿಕೆಯಾಗಿದ್ದು, ಕೇವಲ ರೂ. 4.80 ಲಕ್ಷದಿಂದ (ಎಕ್ಸ್ - ಶೋರೂಂ) ಈಗ ಬೆಲೆ ಪ್ರಾರಂಭವಾಗುತ್ತದೆ. ಸಿಟ್ರನ್ ಏರ್‌ಕ್ರಾಸ್ ಎಸ್‌ಯುವಿಯ 5 ಮತ್ತು 7 ಆಸನಗಳ ವೇರಿಯೆಂಟ್‌ಗಳ ಮೇಲೆ ರೂ. 50,000 ವರೆಗೆ ಬೆಲೆ ಇಳಿಯಾಗಿದೆ ಎಂದು ಕಂಪನಿ ಘೋಷಿಸಿದೆ.

ಹೊಸ ಸಿಟ್ರನ್ ಬಸಾಲ್ಟ್ ಮತ್ತು ಬಸಾಲ್ಟ್ ಎಕ್ಸ್ ಕಾರುಗಳು CARA# ಸಿಟ್ರನ್ ಇನ್ - ಕಾರ್ ಅಸಿಸ್ಟೆಂಟ್‌ನೊಂದಿಗೆ ಬೋಲ್ಡ್, ಕಂಫರ್ಟಬಲ್, ಕನೆಕ್ಟೆಡ್ ಮತ್ತು ಸುರಕ್ಷತೆಯನ್ನು ಹೊಂದಿರುವ ಈ ಕಾರುಗಳು, ಹೊಸ ಜಿಎಸ್‌ಟಿ ಹೊಂದಾಣಿಕೆಯ ಬೆಲೆಗಳ ನಂತರ ಈಗ ಕೇವಲ ರೂ. 7.95 ಲಕ್ಷ (ಎಕ್ಸ್ - ಶೋರೂಂ) ದಿಂದ ಪ್ರಾರಂಭವಾಗುತ್ತವೆ ಎಂದು ಸಿಟ್ರನ್ ಧೃಡಪಡಿಸಿದೆ.
ಸಿ5 ಏರ್‌ಕ್ರಾಸ್ ಎಸ್‌ಯುವಿ ವಿಷಯಕ್ಕೆ ಬಂದರೆ ಸುಮಾರು ರೂ. 2.7 ಲಕ್ಷ ಕಡಿತವಾಗಿದ್ದು, ಇದರ ಶೈನ್ ವೇರಿಯೆಂಟ್ ಈಗ ರೂ. 37.32 ಲಕ್ಷದಿಂದ (ಎಕ್ಸ್-ಶೋರೂಂ) ದಿಂದ ಬೆಲೆ ಪ್ರಾರಂಭವಾಗುತ್ತದೆ. ಈ ಘೋಷಣೆಯನ್ನು ಮಾಡಿದ ಸ್ಟೆಲ್ಲಾಂಟಿಸ್ ಇಂಡಿಯಾದ ಆಟೋಮೋಟಿವ್ ಬ್ರಾಂಡ್ಸ್ ನಿರ್ದೇಶಕ ಕುಮಾರ್ ಪ್ರಿಯೇಶ್ ಕೇಂದ್ರ ಸರ್ಕಾರದ ಜಿಎಸ್‌ಟಿ ಇಳಿಕೆಯನ್ನು ಪ್ರಶಂಸಿದ್ದಾರೆ.

ಅವರು ಮಾತನಾಡಿ, ಪ್ರಯಾಣಿಕ ವಾಹನಗಳ ಮೇಲಿನ ಜಿಎಸ್‌ಟಿ ಕಡಿತವು ಸ್ವಾಗತಾರ್ಹ ಸುಧಾರಣೆಯಾಗಿದ್ದು, ಇದು ಭಾರತದಾದ್ಯಂತ ಸುರಕ್ಷಿತ, ಆಧುನಿಕ ಮತ್ತು ಪರಿಣಾಮಕಾರಿ ಕಾರುಗಲ ಖರೀದಿಯನ್ನು ಹೆಚ್ಚಿಸುತ್ತದೆ. ಸಿಟ್ರನ್‌ನಲ್ಲಿ, ನಮ್ಮ ಗ್ರಾಹಕರು ಈ ಕಡಿತದ ಸಂಪೂರ್ಣ ಪ್ರಯೋಜನವನ್ನು ಆನಂದಿಸುವಂತೆ ನೋಡಿಕೊಳ್ಳುವ ಮೂಲಕ ಈ ಉಪಕ್ರಮವನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ.
ಉಳಿತಾಯವನ್ನು ಪೂರ್ಣವಾಗಿ ವರ್ಗಾಯಿಸುವ ಮೂಲಕ, ನಮ್ಮ ವಾಹನಗಳನ್ನು ಎಲ್ಲಾ ವಿಭಾಗಗಳಲ್ಲಿ ಹೆಚ್ಚು ಖರೀದಿಸುವಂತೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಅದೇ ಸಮಯದಲ್ಲಿ ಹೊಸ ಖರೀದಿದಾರರನ್ನು ಪ್ರೋತ್ಸಾಹಿಸುತ್ತೇವೆ, ಹಬ್ಬದ ಋತುವಿನಲ್ಲಿ ಹೆಚ್ಚಿನ ಗ್ರಾಹಕರು ಕಾರುಗಳನ್ನು ಖರೀದಿಸುವ ನಿರೀಕ್ಷೆಗಳಿವೆ. ಮಾರಾಟದಲ್ಲಿಯೂ ಉತ್ತಮ ಲಾಭ ತಂದುಕೊಡುವ ವಿಶ್ವಾಸವಿದೆ'' ಎಂದು ಹೇಳಿದರು.

ಓಣಂ, ಅನಂತ ಚತುರ್ದಶಿ, ನವರಾತ್ರಿ, ಈದ್ ಮತ್ತು ದೀಪಾವಳಿಯಿಂದ ಗುರುತಿಸಲ್ಪಟ್ಟ ಹಬ್ಬದ ಅವಧಿಯ ಆರಂಭದೊಂದಿಗೆ ಹೊಂದಿಕೆಯಾಗುವ ಜಿಎಸ್‌ಟಿ ಸುಧಾರಣೆಯು ಗ್ರಾಹಕರಲ್ಲಿ ಬೇಡಿಕೆಯನ್ನು ವೇಗಗೊಳಿಸಲಿದೆ. ಹಿಂದಿನ ಮುನ್ಸೂಚನೆಗಳಿಗಿಂತ ಉದ್ಯಮದ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಒಟ್ಟಾರೆ ಈ ವರ್ಷದ ಜಿಎಸ್‌ಟಿ ಸುಧಾರಣೆ ಆಟೋ ವಲಯಕ್ಕೆ ಉತ್ತಮ ಕೊಡುಗೆಯಾಗಿದೆ.
ಮೇಲೆ ಸೂಚಿಸಲಾದ ಪ್ರಯೋಜನಗಳು ಪರಿಷ್ಕೃತ ಜಿಎಸ್‌ಟಿ ದರಗಳನ್ನು ಆಧರಿಸಿವೆ. ಮಾಡಲ್ ಮತ್ತು ವೇರಿಯೆಂಟ್ ಅನ್ನು ಅವಲಂಬಿಸಿ ನಿಖರವಾದ ಹಣ ಉಳಿತಾಯಗಳು ಬದಲಾಗಬಹುದು. ಹೆಚ್ಚಿನ ಮಾಹಿತಿಗಾಗಿ ಸಿಟ್ರನ್ ವೆಬ್‌ಸೈಟ್ ಅಥವಾ ಹತ್ತಿರದ ಸಿಟ್ರನ್ ಡೀಲರ್‌ಶಿಪ್‌ಗಳಿಗೆ ಭೇಟಿ ನೀಡಬಹುದು. ಹೊಸ ಸಿಟ್ರನ್ ಜಿಎಸ್‌ಟಿ ಕಡಿತದ ಪ್ರಯೋಜನಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








