19 ಕಿ.ಮೀ ಮೈಲೇಜ್.. 5-ಸೀಟರ್, 7.95 ಲಕ್ಷ.. Citroen Basalt X ಕುರಿತ ಟಾಪ್ ಹೈಲೈಟ್‌ಗಳಿವು!

ಇತ್ತೀಚಿಗೆ ಹೊಚ್ಚ ಹೊಸ ಸಿಟ್ರನ್ ಬಸಾಲ್ಟ್ ಎಕ್ಸ್ (Citroen Basalt X) ಕೂಪೆ ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿತ್ತು. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಈ ಕಾರಿಗೆ 'ಟಾಟಾ ಕರ್ವ್' ಪ್ರಬಲವಾದ ಎದುರಾಳಿಯಾಗಿದೆ. ನಾವಿಲ್ಲಿ ಈ ನೂತನ 'ಬಸಾಲ್ಟ್ ಎಕ್ಸ್'ನ ಬೆಲೆ ಮತ್ತು ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ಸಂಪೂರ್ಣವಾಗಿ ವಿವರಿಸಿದ್ದೇವೆ.

ಬೆಲೆ (Price):

ಹೊಸ ಸಿಟ್ರನ್ ಬಸಾಲ್ಟ್ ಎಕ್ಸ್ ಎಸ್‌ಯುವಿಯು ಕನಿಷ್ಠ ರೂ.7.95 ಲಕ್ಷ ಹಾಗೂ ಗರಿಷ್ಠ ರೂ.12.90 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಯು, ಪ್ಲಸ್ ಮತ್ತು ಮ್ಯಾಕ್ಸ್ ಎಂಬ 3 ಆಕರ್ಷಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಕೂಡ ಗ್ರಾಹಕರ ಖರೀದಿಗೆ ಲಭ್ಯವಿದೆ.

Citroen Basalt X Suv Top Highlights

ವಿನ್ಯಾಸ (Design):

ಈ ಕಾರು ಹೊರಭಾಗದಲ್ಲಿ ಉತ್ತಮವಾದ ವಿನ್ಯಾಸವನ್ನು ಪಡೆದಿದೆ. ನೋಡುಗರನ್ನು ಸೆಳೆಯುವಂತಿದೆ. ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಗ್ರಿಲ್‌ನಲ್ಲಿ ಲೈಟಿಂಗ್ ಸ್ಟ್ರಿಪ್‌ಗಳು, ಎಲ್ಇಡಿ ಟೈಲ್ ಲೈಟ್‌ಗಳು, ಟೈಲ್‌ಗೇಟ್‌ನಲ್ಲಿ 'ಬಸಾಲ್ಟ್ ಎಕ್ಸ್' ಬ್ಯಾಡ್ಜಿಂಗ್‌ ಮತ್ತು 16 ಇಂಚಿರುವ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.

ಸುತ್ತಳತೆ (Dimensions):

ನೂತನ ಸಿಟ್ರನ್ ಬಸಾಲ್ಟ್ ಎಕ್ಸ್ ಕಾರು ದೊಡ್ಡ ಗಾತ್ರದಲ್ಲಿದೆ. 4,371 ಎಂಎಂ ಉದ್ದ, 1,907 ಎಂಎಂ ಅಗಲ ಮತ್ತು 1,627 ಎಂಎಂ ಎತ್ತರವಿದೆ. ಇದರೊಂದಿಗೆ 207 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,775 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 1,233 ಕೆಜಿ ತೂಕವು ಇದೆ.

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):

ಇದು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ದೂರದ ಊರುಗಳಿಗೆ ಸುಲಭವಾಗಿ ಸಂಚಾರ ಮಾಡಬಹುದು. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ ದೊಡ್ಡ ಗಾತ್ರದ 470 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಕಾರ್ಯಕ್ಷಮತೆ (Performance):

ಈ ಕಾರು ಹೆಚ್ಚು ಬಲಿಷ್ಠವಾದ 2 ಪವರ್‌ಟ್ರೇನ್‌ನ್ನು ಹೊಂದಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 19 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 45 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ.

ವೈಶಿಷ್ಟ್ಯಗಳು (Features):

ಹೊಸ ಸಿಟ್ರನ್ ಬಸಾಲ್ಟ್ ಎಕ್ಸ್ ಎಸ್‌ಯುವಿಯ ಕ್ಯಾಬಿನ್ ವಿನ್ಯಾಸವು ಸಾಕಷ್ಟು ಚೆನ್ನಾಗಿದೆ. ಬ್ಲ್ಯಾಕ್ & ಟ್ಯಾನ್ ಪೇಂಟ್ ಸ್ಕೀಮ್‌ನ್ನು ಹೊಂದಿದೆ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್ ಬಟನ್ ಸ್ಟಾರ್ಟ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳು ಮತ್ತು ರೇರ್ ಸೆಂಟರ್ ಆರ್ಮ್‌ರೆಸ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features):

ಇದು ಪ್ರಯಾಣಿಕರ ರಕ್ಷಣೆಗಾಗಿ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಅದಕ್ಕಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್ಸ್ ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ.

ಒಟ್ಟಾರೆಯಾಗಿ ನೂತನ 'ಸಿಟ್ರನ್ ಬಸಾಲ್ಟ್ ಎಕ್ಸ್' ಮಾರಾಟಕ್ಕೆ ಬಂದಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಅತ್ಯುತ್ತಮವಾದ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಲಭ್ಯವಿದೆ. ಮುಂಬರುವ ದಿನಗಳಲ್ಲಿ ಈ ಕಾರಿಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Sunday, September 7, 2025, 14:00 [IST]
English summary
Citroen basalt x suv top highlights
Read more on citroen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+