Citroen: ಕೇವಲ ರೂ.6.44 ಲಕ್ಷ ಬೆಲೆ: ಹೊಸ ಸಿಟ್ರನ್ C3 ಸ್ಪೋರ್ಟ್ ಎಡಿಷನ್ ಬಿಡುಗಡೆ
ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಸಿಟ್ರನ್ (Citroen), ತನ್ನ ಜನಪ್ರಿಯ C3 ಲಿಮಿಟೆಡ್ ಸ್ಪೋರ್ಟ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಇದು ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್‌ನ ಕ್ರಿಯಾತ್ಮಕ ಮತ್ತು ವಿಶಿಷ್ಟವಾದ ವೇರಿಯೆಂಟ್ ಆಗಿದ್ದು, ಸ್ಪೋರ್ಟಿ ಪರ್ಫಾಮೆನ್ಸ್ ಬಯಸುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಲಿಮಿಟೆಡ್ ಕಾರುಗಳನ್ನು ಮಾರಾಟ ಮಾಡಲು ಯೋಜಿಸಲಾಗಿದ್ದು, ಈ ಹೊಸ ಆವೃತ್ತಿಯು C3 ನ ದಿಟ್ಟ ವಿನ್ಯಾಸ ಮತ್ತು ಚಾಲನಾ ಅನುಭವವನ್ನು ವಿಶೇಷ ವೈಶಿಷ್ಟ್ಯಗಳು ಮತ್ತು ವಿಭಾಗ-ಪ್ರಮುಖ ಸಾಮರ್ಥ್ಯದೊಂದಿಗೆ ಹೆಚ್ಚಿಸಿರುವುದಾಗಿ ಸಿಟ್ರನ್ ಕಂಪನಿ ತಿಳಿಸಿದೆ.
ಸಾಮಾನ್ಯ ಸಿಟ್ರನ್ ಸಿ3 ಬೆಲೆಯು ರೂ.6.23 ಲಕ್ಷವಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಸಿಟ್ರನ್ ಸಿ3 ಸ್ಪೋರ್ಟ್ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.6.44 ಲಕ್ಷದಿಂದ ಪ್ರಾರಂಭವಾಗುತ್ತದೆ. ಈ ಸೀಮಿತ ರನ್ ಮಾದರಿಯು 21,000 ರೂ.ಗಳ ಹೆಚ್ಚುವರಿ ವೆಚ್ಚದಲ್ಲಿ ಸಾಕಷ್ಟು ಬಾಹ್ಯ ಮತ್ತು ಒಳಾಂಗಣ ವರ್ಧನೆಗಳೊಂದಿಗೆ ಬರುತ್ತದೆ.

ಸಿಟ್ರನ್ C3 ಸ್ಪೋರ್ಟ್ ಆವೃತ್ತಿಯು ದಿಟ್ಟ 'ಸ್ಪೋರ್ಟ್' ಡೆಕಲ್‌ಗಳು, ಆಂಬಿಯೆಂಟ್ ಲೈಟಿಂಗ್ ಮತ್ತು ಪ್ರತಿ ಡ್ರೈವ್‌ಗೆ ಪವರ್ ತರುವ ಸ್ಪೋರ್ಟಿ ಪೆಡಲ್‌ಗಳನ್ನು ಒಳಗೊಂಡಿದೆ. ಒಳಗೆ, ಕ್ಯಾಬಿನ್ ಕಸ್ಟಮ್ ಸೀಟ್ ಕವರ್‌ಗಳು, ಸೀಟ್‌ಬೆಲ್ಟ್ ಕುಶನ್‌ಗಳು ಮತ್ತು ಕಾರ್ಪೆಟ್ ಮ್ಯಾಟ್‌ಗಳೊಂದಿಗೆ ವಿಭಿನ್ನವಾಗಿ ಡಿಸೈನ್ ಮಾಡಲಾಗಿದೆ. ಹೆಚ್ಚುವರಿಯಾಗಿ, ಹೊಸ ಬಾಡಿ ಕಲರ್ - ಗಾರ್ನೆಟ್ ರೆಡ್ - ಅನ್ನು C3 ರೇಂಜ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದೆ.
ಸಿಟ್ರನ್ C3 ಎಂಜಿನ್ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದ್ರೆ, 110 PS ಪವರ್ ಮತ್ತು 205 Nm ಟಾರ್ಕ್ ನೀಡುವ ಅತ್ಯಂತ ಪವರ್‌ಫುಲ್ 1.2L ಟರ್ಬೊ ಪ್ಯೂರ್‌ಟೆಕ್ ಎಂಜಿನ್ ಹೊಂದಿದೆ. ಅತ್ಯುತ್ತಮ ವೇಗವರ್ಧನೆಯೊಂದಿಗೆ ಕೇವಲ 10 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ವಿಭಾಗದಲ್ಲಿ ಸಾಮಾನ್ಯವಾಗಿ ಕಂಡುಬರುವ AMT ಗಳಿಗಿಂತ ಭಿನ್ನವಾಗಿ, ಸುಗಮ 6-ಸ್ಪೀಡ್ ಟಾರ್ಕ್ ಕನ್ವರ್ಟರ್ AT ಯೊಂದಿಗೆ ನೀಡಲಾಗಿದೆ. ಈ ಲಿಮಿಟೆಡ್ ಸ್ಪೋರ್ಟ್ ಎಡಿಷನ್ ಈಗ ಭಾರತದ ಎಲ್ಲಾ ಸಿಟ್ರನ್ ಡೀಲರ್‌ಶಿಪ್‌ಗಳಲ್ಲಿ ಸಾಮಾನ್ಯ ಆವೃತ್ತಿಗಳಿಗಿಂತ ರೂ. 21,000 ಹೆಚ್ಚುವರಿ ಬೆಲೆಯಲ್ಲಿ ಲಭ್ಯವಿದೆ. ಡ್ಯಾಶ್‌ಕ್ಯಾಮ್ ಮತ್ತು ವೈರ್‌ಲೆಸ್ ಚಾರ್ಜರ್ ಅನ್ನು ಒಳಗೊಂಡಿರುವ ಆಪ್ಷನಲ್ ಟೆಕ್ ಕಿಟ್ ಅನ್ನು ರೂ15,000 ಕ್ಕೆ ಪಡೆಯಬಹುದು.
C3 ಲಿಮಿಟೆಡ್ ಸ್ಪೋರ್ಟ್ಸ್ ಆವೃತ್ತಿಯ ಪ್ರಮುಖ ಮುಖ್ಯಾಂಶಗಳು: ವಿಶೇಷ 'ಸ್ಪೋರ್ಟ್' ಥೀಮ್ ಡೆಕಲ್, ಆಂಬಿಯೆಂಟ್ ಕ್ಯಾಬಿನ್ ಲೈಟಿಂಗ್, ಸ್ಪೋರ್ಟಿ ಪೆಡಲ್ ಕಿಟ್, ಕಸ್ಟಮ್ ಸ್ಪೋರ್ಟ್-ಥೀಮ್ ಸೀಟ್ ಕವರ್‌ಗಳು, ಹೊಂದಾಣಿಕೆಯ ಕಾರ್ಪೆಟ್ ಮ್ಯಾಟ್‌ಗಳು ಮತ್ತು ಸೀಟ್‌ಬೆಲ್ಟ್ ಕುಶನ್‌ಗಳು, ಐಚ್ಛಿಕ ವೈರ್‌ಲೆಸ್ ಚಾರ್ಜರ್ ಮತ್ತು ಡ್ಯಾಶ್ ಕ್ಯಾಮ್ ನೀಡಲಾಗಿದೆ.
ಸ್ಟೆಲಾಂಟಿಸ್ ಇಂಡಿಯಾದ ಆಟೋಮೋಟಿವ್ ಬ್ರಾಂಡ್‌ಗಳ ವ್ಯವಹಾರ ಮುಖ್ಯಸ್ಥ ಮತ್ತು ನಿರ್ದೇಶಕ ಕುಮಾರ್ ಪ್ರಿಯೇಶ್ ಮಾತನಾಡಿ "ಸಿಟ್ರನ್ C3 ಯಾವಾಗಲೂ ತನ್ನ ವಿಶಿಷ್ಟ ಶೈಲಿ ಮತ್ತು ಕಾರ್ಯಕ್ಷಮತೆಯೊಂದಿಗೆ ಬೆಸೆದುಕೊಂಡಿರುವ ಪ್ಲಶ್ ರೈಡ್ ಗುಣಮಟ್ಟದೊಂದಿಗೆ ಎದ್ದು ಕಾಣುವ ಕಾರಾಗಿದೆ. ಇದು ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಒಂದು ಆಕರ್ಷಕ ಆಯ್ಕೆಯಾಗಿದೆ.
C3 ಸ್ಪೋರ್ಟ್ ಆವೃತ್ತಿಯು ಈಗಾಗಲೇ ತನ್ನ ದಿಟ್ಟ ವಿನ್ಯಾಸ ಮತ್ತು ರೈಡ್ ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ಇದೀಗ ಸ್ಪೋರ್ಟ್ ಎಡಿಷನ್ ಈ ಕಾರಿಗೆ ಹೆಚ್ಚಿನ ಪವರ್, ತಂತ್ರಜ್ಞಾನ ಮತ್ತು ಥ್ರಿಲ್ ಅನ್ನು ತರುತ್ತದೆ. ಗಾರ್ನೆಟ್ ರೆಡ್ ಮತ್ತು ಸ್ಪೋರ್ಟಿ ವರ್ಧನೆಗಳ ಸೇರ್ಪಡೆಯೊಂದಿಗೆ, ಪ್ರತ್ಯೇಕತೆ, ವರ್ಗ - ಪ್ರಮುಖ ಪರ್ಫಾಮೆನ್ಸ್, ಸಾಟಿಯಿಲ್ಲದ ಸೌಕರ್ಯ ಮತ್ತು ದೈನಂದಿನ ಪ್ರಾಯೋಗಿಕತೆಯನ್ನು ಬಯಸುವ ಖರೀದಿದಾರರ ಆಕಾಂಕ್ಷೆಗಳನ್ನು ಪೂರೈಸುತ್ತದೆ ಎಂದರು.


Click it and Unblock the Notifications








