Citroen: ಅಗ್ಗದ ಬೆಲೆಗೆ ಇತ್ತೀಚೆಗೆ ಬಿಡುಗಡೆಯಾದ ಸಿಟ್ರನ್ C3 ಸ್ಪೋರ್ಟ್ ಎಡಿಷನ್ ವಿಶೇಷತೆಗಳು!

ಸಿಟ್ರನ್ (Citroen) ಕಂಪನಿಯು ತನ್ನ ಜನಪ್ರಿಯ C3 ಲಿಮಿಟೆಡ್ ಸ್ಪೋರ್ಟ್ ಎಡಿಷನ್ ಕಾರನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಸಾಮಾನ್ಯ ಸಿಟ್ರನ್ ಸಿ3 ಬೆಲೆಯು ರೂ.6.23 ಲಕ್ಷವಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಸಿಟ್ರನ್ ಸಿ3 ಸ್ಪೋರ್ಟ್ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.6.44 ಲಕ್ಷದಿಂದ ಪ್ರಾರಂಭವಾಗುತ್ತದೆ. ಕಂಪನಿಯು ಇದನ್ನು ಸ್ಪೋರ್ಟಿ ಪರ್ಫಾಮೆನ್ಸ್ ಬಯಸುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಲಿಮಿಟೆಡ್ ಕಾರುಗಳನ್ನು ಮಾರಾಟ ಮಾಡಲು ಯೋಜಿಸಲಾಗಿದ್ದು, ಹೊಸ ಸ್ಪೋರ್ಟ್ ಎಡಿಷನ್‌ಗಾಗಿ 21,000 ರೂ.ಗಳ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಸಿಟ್ರನ್ C3 ಕಾರು ಈಗಾಗಲೇ ತನ್ನ ದಿಟ್ಟ ವಿನ್ಯಾಸ ಮತ್ತು ರೈಡ್ ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ಇದೀಗ ಸ್ಪೋರ್ಟ್ ಎಡಿಷನ್ ಈ ಕಾರಿಗೆ ಹೆಚ್ಚಿನ ಪವರ್, ತಂತ್ರಜ್ಞಾನ ಮತ್ತು ಥ್ರಿಲ್ ಅನ್ನು ತರುತ್ತದೆ. ಈ ಹೊಸ ಆವೃತ್ತಿಯು C3 ನ ದಿಟ್ಟ ವಿನ್ಯಾಸ ಮತ್ತು ಚಾಲನಾ ಅನುಭವವನ್ನು ವಿಶೇಷ ವೈಶಿಷ್ಟ್ಯಗಳು ಮತ್ತು ವಿಭಾಗ-ಪ್ರಮುಖ ಸಾಮರ್ಥ್ಯದೊಂದಿಗೆ ಹೆಚ್ಚಿಸಿರುವುದಾಗಿ ಸಿಟ್ರನ್ ಕಂಪನಿ ತಿಳಿಸಿದೆ.

citroen-c3-sport-edition-price-features-engine-details

ಸಿಟ್ರನ್ C3 ಎಂಜಿನ್ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದ್ರೆ, 1.2L ಟರ್ಬೊ ಪ್ಯೂರ್‌ಟೆಕ್ ಎಂಜಿನ್ ಹೊಂದಿರುವ ಈ ಕಾರು 110 PS ಪವರ್ ಮತ್ತು 205 Nm ಟಾರ್ಕ್ ಹೊರಹಾಕುತ್ತದೆ. ಈ ಮೂಲಕ ಅತ್ಯುತ್ತಮ ವೇಗವರ್ಧನೆಯೊಂದಿಗೆ ಕೇವಲ 10 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಈ ಲಿಮಿಟೆಡ್ ಸ್ಪೋರ್ಟ್ ಎಡಿಷನ್ ಈಗ ಭಾರತದ ಎಲ್ಲಾ ಸಿಟ್ರನ್ ಡೀಲರ್‌ಶಿಪ್‌ಗಳಲ್ಲಿ ಸಾಮಾನ್ಯ ಆವೃತ್ತಿಗಳಿಗಿಂತ ರೂ. 21,000 ಹೆಚ್ಚುವರಿ ಬೆಲೆಯಲ್ಲಿ ಲಭ್ಯವಿದೆ. ಡ್ಯಾಶ್‌ಕ್ಯಾಮ್ ಮತ್ತು ವೈರ್‌ಲೆಸ್ ಚಾರ್ಜರ್ ಅನ್ನು ಒಳಗೊಂಡಿರುವ ಆಪ್ಷನಲ್ ಟೆಕ್ ಕಿಟ್ ಅನ್ನು ರೂ15,000 ಕ್ಕೆ ಪಡೆಯಬಹುದು. ವಿಭಾಗದಲ್ಲಿ ಸಾಮಾನ್ಯವಾಗಿ ಕಂಡುಬರುವ AMT ಗಳಿಗಿಂತ ಭಿನ್ನವಾಗಿ, ಸುಗಮ 6-ಸ್ಪೀಡ್ ಟಾರ್ಕ್ ಕನ್ವರ್ಟರ್ AT ಯೊಂದಿಗೆ ನೀಡಲಾಗಿದೆ.

citroen-c3-sport-edition-price-features-engine-details

"ಸಿಟ್ರನ್ C3 ಯಾವಾಗಲೂ ತನ್ನ ವಿಶಿಷ್ಟ ಶೈಲಿ ಮತ್ತು ಕಾರ್ಯಕ್ಷಮತೆಯೊಂದಿಗೆ ಬೆಸೆದುಕೊಂಡಿರುವ ಪ್ಲಶ್ ರೈಡ್ ಗುಣಮಟ್ಟದೊಂದಿಗೆ ಎದ್ದು ಕಾಣುವ ಕಾರಾಗಿದೆ. ಇದು ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಒಂದು ಆಕರ್ಷಕ ಆಯ್ಕೆಯಾಗಿದೆ. ಗಾರ್ನೆಟ್ ರೆಡ್ ಮತ್ತು ಸ್ಪೋರ್ಟಿ ವರ್ಧನೆಗಳ ಸೇರ್ಪಡೆಯೊಂದಿಗೆ, ಪ್ರತ್ಯೇಕತೆ, ವರ್ಗ - ಪ್ರಮುಖ ಪರ್ಫಾಮೆನ್ಸ್ ನೀಡುತ್ತದೆ.

ಅಲ್ಲದೇ ಸಾಟಿಯಿಲ್ಲದ ಸೌಕರ್ಯ ಮತ್ತು ದೈನಂದಿನ ಪ್ರಾಯೋಗಿಕತೆಯನ್ನು ಬಯಸುವ ಖರೀದಿದಾರರ ಆಕಾಂಕ್ಷೆಗಳನ್ನು ಪೂರೈಸುತ್ತದೆ. ಸದ್ಯ ಹ್ಯಾಚ್‌ಬ್ಯಾಕ್‌ ವಿಭಾದಲ್ಲಿ ಸ್ಪೋರ್ಟಿ ಪರ್ಫಾಮೆನ್ಸ್ ಹೊಂದಿರುವ ಕಾರುಗಳಲ್ಲಿ ಸಿಟ್ರನ್ C3 ಅಗ್ರಸ್ಥಾನಕ್ಕೇರುವ ವಿಶ್ವಾಸವಿದೆ ಎಂದು ಸ್ಟೆಲಾಂಟಿಸ್ ಇಂಡಿಯಾದ ಆಟೋಮೋಟಿವ್ ಬ್ರಾಂಡ್‌ಗಳ ವ್ಯವಹಾರ ಮುಖ್ಯಸ್ಥ ಮತ್ತು ನಿರ್ದೇಶಕ ಕುಮಾರ್ ಪ್ರಿಯೇಶ್ ಹೇಳಿದರು.

ಸಿಟ್ರನ್ C3 ಸ್ಪೋರ್ಟ್ ಆವೃತ್ತಿಯ ಒಳಗೆ, ಕ್ಯಾಬಿನ್ ಕಸ್ಟಮ್ ಸೀಟ್ ಕವರ್‌ಗಳು, ಸೀಟ್‌ಬೆಲ್ಟ್ ಕುಶನ್‌ಗಳು ಮತ್ತು ಕಾರ್ಪೆಟ್ ಮ್ಯಾಟ್‌ಗಳೊಂದಿಗೆ ವಿಭಿನ್ನವಾಗಿ ಡಿಸೈನ್ ಮಾಡಲಾಗಿದೆ. ದಿಟ್ಟ 'ಸ್ಪೋರ್ಟ್' ಡೆಕಲ್‌ಗಳು, ಆಂಬಿಯೆಂಟ್ ಲೈಟಿಂಗ್ ಮತ್ತು ಪ್ರತಿ ಡ್ರೈವ್‌ಗೆ ಪವರ್‌ ತರುವ ಸ್ಪೋರ್ಟಿ ಪೆಡಲ್‌ಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಹೊಸ ಬಾಡಿ ಕಲರ್ - ಗಾರ್ನೆಟ್ ರೆಡ್ - ಅನ್ನು C3 ರೇಂಜ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದೆ.

C3 ಲಿಮಿಟೆಡ್ ಸ್ಪೋರ್ಟ್ಸ್ ಆವೃತ್ತಿಯ ಪ್ರಮುಖ ಮುಖ್ಯಾಂಶಗಳು: ವಿಶೇಷ 'ಸ್ಪೋರ್ಟ್' ಥೀಮ್ ಡೆಕಲ್, ಹೊಂದಾಣಿಕೆಯ ಕಾರ್ಪೆಟ್ ಮ್ಯಾಟ್‌ಗಳು ಮತ್ತು ಸೀಟ್‌ಬೆಲ್ಟ್ ಕುಶನ್‌ಗಳು, ಐಚ್ಛಿಕ ವೈರ್‌ಲೆಸ್ ಚಾರ್ಜರ್ ಮತ್ತು ಡ್ಯಾಶ್ ಕ್ಯಾಮ್, ಆಂಬಿಯೆಂಟ್ ಕ್ಯಾಬಿನ್ ಲೈಟಿಂಗ್, ಸ್ಪೋರ್ಟಿ ಪೆಡಲ್ ಕಿಟ್, ಕಸ್ಟಮ್ ಸ್ಪೋರ್ಟ್-ಥೀಮ್ ಸೀಟ್ ಕವರ್‌ಗಳು, ನೀಡಲಾಗಿದೆ.

Article Published On: Thursday, June 19, 2025, 14:35 [IST]
English summary
Citroen c3 sport edition price features engine details
Read more on citroen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+