ನಿಮ್ಮ CNG ಕಾರಿನ ಮೈಲೇಜ್ ಹೆಚ್ಚಿಸಬೇಕೆ? ಈ 5 ಡ್ರೈವಿಂಗ್ ಟಿಪ್ಸ್ ಸಾಕು, ಕಂಪನಿ ಕೂಡ ಹೇಳುವುದಿಲ್ಲ!

ದೇಶದಲ್ಲಿ ಇತ್ತೀಚೆಗೆ ಸಿಎನ್‌ಜಿ ಕಾರುಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಆದರೆ ಜನರು ತಮ್ಮ ಸಿಎನ್‌ಜಿ ಕಾರುಗಳನ್ನು ಖರೀದಿಸಿದ ಬಳಿಕ ಅವುಗಳ ಬಗ್ಗೆ ಸರಿಯಾದ ಕಾಳಜಿ ವಹಿಸದಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಸರಿಯಾದ ನಿರ್ವಹಣೆ ಇಲ್ಲದಿರುವ ಕಾರಣ ಕಳಪೆ ಪರ್ಫಾಮೆನ್ಸ್ ಹಾಗೂ ಕಡಿಮೆ ಮೈಲೇಜ್‌ನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಸಹ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನೀವು ಈ 5 ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ನಾವು ಹೇಳುವ ಈ ವಿಷಯಗಳನ್ನು ಪರಿಶೀಲಿಸಿ ನಿರ್ವಹಣೆ ಮಾಡಿದರೆ ನಿಮ್ಮ ಸಿಎನ್‌ಜಿ ಕಾರು ಉತ್ತಮ ಮೈಲೇಜ್ ಹಾಗೂ ಪರ್ಫಾಮೆನ್ಸ್ ನೀಡುತ್ತದೆ.

ಸೋರಿಕೆಗಳನ್ನು ಪರಿಶೀಲಿಸಿ: ಸಿಎನ್‌ಜಿ ಸಿಲಿಂಡರ್ ಮತ್ತು ಅದರ ಪೈಪ್ ಅನ್ನು ಸರಿಯಾಗಿ ಪರಿಶೀಲಿಸಿ, ಏಕೆಂದರೆ ಅವುಗಳಲ್ಲಿ ಸೋರಿಕೆ ಸಮಸ್ಯೆ ಇರಬಹುದು, ಇದರಿಂದಾಗಿ ಅನಿಲವು ನಿಧಾನವಾಗಿ ಸೋರಿಕೆಯಾಗುತ್ತದೆ. ಈ ಬಗ್ಗೆ ಹಲವರಿಗೆ ತಿಳಿದಿರುವುದಿಲ್ಲ, ಈ ಕಾರಣದಿಂದಾಗಿ ವಾಹನದ ಮೈಲೇಜ್ ಕಡಿಮೆಯಾಗುತ್ತಲೇ ಇರುತ್ತದೆ. ಇದರ ಬಗ್ಗೆ ಎಚ್ಚರ ವಹಿಸಿದರೆ ನಿಮ್ಮ ಕಾರು ಉತ್ತಮ ಕಂಡಿಷನ್‌ನಲ್ಲಿ ಇರುತ್ತದೆ.

cng-car-driving-tips-for-better-performance-and-higher-mileage

ವಾಲ್ವ್ ಪರಿಶೀಲನೆ: ಕಾರಿನಲ್ಲಿ ಅಳವಡಿಸಲಾದ ಸಿಎನ್‌ಜಿ ಕಿಟ್‌ನ ವಾಲ್ವ್ ಅನ್ನು ಪರಿಶೀಲಿಸಿ, ಆಗಾಗ್ಗೆ ನಿಮಗೆ ತಿಳಿಯದೇ ಸಮಸ್ಯೆಗೆ ಗುರಿಯಾಗುತ್ತದೆ. ಇದರಿಂದಾಗಿ ಅನಿಲ ಸೋರಿಕೆಯಾಗುವ ಬಗ್ಗೆ ಹಲವರು ಹೇಳುತ್ತಿರುತ್ತಾರೆ. ಇದು ಕೂಡ ಮೈಲೇಜ್ ಕಡಿಮೆಯಾಗಲು ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ, ಖಂಡಿತವಾಗಿಯೂ ವಾಲ್ವ್ ಅನ್ನು ಪರಿಶೀಲಿಸಿ ಮತ್ತು ಅದು ಹಾನಿಗೊಳಗಾಗಿದ್ದರೆ ಕೂಡಲೇ ಸರಿಪಡಿಸಬೇಕು.

ಸಮಯಕ್ಕೆ ಸರಿಯಾಗಿ ಸರ್ವಿಸ್: ನೀವು ಯಾವಾಗಲೂ ನಿಮ್ಮ ಸಿಎನ್‌ಜಿ ಕಾರನ್ನು ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡಿಸಬೇಕು, ಹೀಗೆ ಮಾಡಿದಾಗ ಮಾತ್ರ ಕಾರಿನ ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಸರಿಯಾದ ಸಮಯಕ್ಕೆ ಸರ್ವಿಸ್ ಆದಾಗ ಮಾತ್ರ, ಉತ್ತಮ ಕಂಡಿಷನ್‌ನಲ್ಲಿರುವ ಕಾರು ಸರಿಯಾದ ಮೈಲೇಜ್ ನೀಡುತ್ತದೆ. ಕಾರನ್ನು ಅಧಿಕೃತ ಸೇವಾ ಕೇಂದ್ರದಿಂದ ಮಾತ್ರ ಸರ್ವಿಸ್ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.

cng-car-driving-tips-for-better-performance-and-higher-mileage

ವೇಗ ಮಿತಿಯಾಗಿರಲಿ: ಕ್ಲಚ್ ಬಳಕೆ ಉತ್ತಮವಾಗಿರಬೇಕು ಹಾಗೂ ಸರಿಯಾಗಿ ವೇಗವನ್ನು ಹೆಚ್ಚಿಸುವುದನ್ನು ತಿಳಿದಿರಬೇಕು. ನೀವು 30 ಸೆಕೆಂಡುಗಳಿಗಿಂತ ಹೆಚ್ಚು ಕಾಲ ನಿಲ್ಲಿಸಬೇಕಾದರೆ, ಎಂಜಿನ್ ಅನ್ನು ಆಫ್ ಮಾಡಿ, ಇದು ಅನಿಲವನ್ನು ಉಳಿಸುತ್ತದೆ. ನಿಮ್ಮ ಸಿಎನ್‌ಜಿ ಕಾರಿನ ವೇಗವನ್ನು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಇರಿಸಿ, ಹೀಗೆ ಮಾಡುವುದರಿಂದ ಮೈಲೇಜ್ ಹೆಚ್ಚಾಗುವುದರ ಜೊತೆಗೆ ಕಾರ್ಯಕ್ಷಮತೆಯೂ ಉತ್ತಮವಾಗಿರುತ್ತದೆ.

ಟೈರ್‌ಗಳಲ್ಲಿ ಸರಿಯಾದ ಗಾಳಿಯ ಒತ್ತಡ: CNG ಕಾರಿನ ಎಲ್ಲಾ ಟೈರ್‌ಗಳಲ್ಲಿ ಸರಿಯಾದ ಗಾಳಿಯ ಒತ್ತಡವಿರಬೇಕು. ಹೀಗೆ ಮಾಡುವುದರಿಂದ, ವಾಹನದ ಕಾರ್ಯಕ್ಷಮತೆ ಹೆಚ್ಚು ಉತ್ತಮವಾಗಿರುತ್ತದೆ ಮತ್ತು ಮೈಲೇಜ್ ಸಹ ಹೆಚ್ಚಾಗುತ್ತದೆ. ವಾರಕ್ಕೊಮ್ಮೆಯಾದರೂ ಕಂಪನಿ ಶಿಫಾರಸು ಮಾಡಿದ ಅದೇ ಪ್ರಮಾಣದ ಗಾಳಿಯಿಂದ ಕಾರಿನ ಎಲ್ಲಾ ಟೈರ್ ಗಳನ್ನು ತುಂಬಿಸಿ.

cng-car-driving-tips-for-better-performance-and-higher-mileage

ಭಾರತದಲ್ಲಿ ಸಿಎನ್‌ಜಿ ಕಾರು ಗ್ರಾಹಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಪೆಟ್ರೋಲ್‌ಗೆ ಹೋಲಿಸಿದರೆ ಇದು ಮಿತವ್ಯಯಕಾರಿಯಾಗಿದೆ. ಆದ್ದರಿಂದ, ಪ್ರತಿದಿನ ದೂರ ಪ್ರಯಾಣಿಸುವವರು ಸಿಎನ್‌ಜಿ ಕಾರುಗಳನ್ನು ಆರಾಮವಾಗಿ ಬಳಸಬಹುದು. ಆದರೆ ಜನರು ತಮ್ಮ ಸಿಎನ್‌ಜಿ ಕಾರಿನ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ಈ ಮೇಲೆ ತಿಳಿಸಿದ ಅಂಶಗಳನ್ನು ಪಾಲಿಸುವುದರಿಂದ ಉತ್ತಮ ನಿರ್ವಹಣೆ ಮಾಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, March 31, 2025, 16:01 [IST]
English summary
Cng car driving tips for better performance and higher mileage
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+