ಭಾರತೀಯ ರಸ್ತೆಗಳಿಗೆ ADAS ಸುರಕ್ಷಿತವೇ? ಅತ್ಯಾಧುನಿಕ ತಂತ್ರಜ್ಞಾನಕ್ಕೆ ಸೂಕ್ತವಲ್ಲವೇ ನಮ್ಮ ದೇಶ?

ಆಧುನಿಕ ವಾಹನ ತಂತ್ರಜ್ಞಾನದಲ್ಲಿ ADAS (ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಪ್ರಮುಖ ಪಾತ್ರವಹಿಸುತ್ತಿದೆ. ಈ ತಂತ್ರಜ್ಞಾನವು ಚಾಲಕರಿಗೆ ನೆರವಾಗುವುದರ ಮೂಲಕ ಅಪಘಾತಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಪ್ರೀಮಿಯಂ ಕಾರುಗಳಲ್ಲಿ ಈಗಾಗಲೇ ADAS ಇದೆ. ಭಾರತಕ್ಕೆ ಹೊಂದಿಕೊಳ್ಳುವಂತೆ ಈ ತಂತ್ರಜ್ಞಾನವನ್ನು ಹೊಂದಾಣಿಕೆ ಮಾಡಲಾಗುತ್ತಿದೆ. ಆದರೆ ಪ್ರಸ್ತುತ ಭಾರತದಲ್ಲಿ ವಿಶೇಷವಾಗಿ ನಮ್ಮ ರಸ್ತೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡರೆ, ADAS ಪ್ರಾಯೋಗಿಕವಾಗಿ ಎಷ್ಟು ಪರಿಣಾಮಕಾರಿ? ಈ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಎಷ್ಟು ಸುರಕ್ಷಿತವಾಗಿದೆ ಎಂಬುದು ಪ್ರಶ್ನೆಯಾಗಿದೆ.

ADAS ಒಳಗೊಂಡಿರುವ ತಂತ್ರಜ್ಞಾನಗಳಲ್ಲಿ ಲೇನ್ - ಕೀಪಿಂಗ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಪೆಡೆಸ್ಟ್ರಿಯನ್ ಡಿಟೆಕ್ಷನ್ ಮುಂತಾದವುಗಳಿವೆ. ಇವು ಕ್ಯಾಮೆರಾ, ಸೆನ್ಸರ್ ಮತ್ತು ರಾಡಾರ್ ಮೂಲಕ ಕೆಲಸ ಮಾಡುತ್ತವೆ. ಚಾಲಕನ ಸಹಾಯವಿಲ್ಲದೆ ಕಾರು ನಿಯಂತ್ರಣಗೊಳ್ಳುತ್ತದೆ. ಹಾಗೆಯೇ ಸಂಭವನೀಯ ಅಪಾಯಗಳನ್ನು ತಪ್ಪಿಸಲು ಸಹಕರಿಸುತ್ತದೆ.

does-adas-safe-for-indian-roads-real-world-challenges

ಇದು ಸಂಪೂರ್ಣ AI ಆಧಾರಿತ ತಂತ್ರಜ್ಞಾನವಾಗಿರುವುದರಿಂದ ಇದಕ್ಕೆ ತಕ್ಕಂತೆ ಭಾರತದ ರಸ್ತೆಗಳು ಶೇ100 ರಷ್ಟು ಸ್ಪಷ್ಟ ರಸ್ತೆ ಚಿಹ್ನೆಗಳು, ಟ್ರಾಫಿಕ್ ಸಿಗ್ನಲ್‌ಗಳು ಇರಬೇಕು. ಜೊತೆಗೆ ಸುತ್ತಮುತ್ತಲಿನ ಇತರ ವಾಹನ ಸವಾರರು ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು. ಆದರೆ ಭಾರತದಲ್ಲಿ ಸ್ಪಷ್ಟ ಲೇನ್ ಗುರುತುಗಳ ಕೊರತೆ, ಅಡ್ಡದಿಡ್ಡಿ ಹೋಗುವ ವಾಹನಗಳು, ಮನಬಂದಂತೆ ರಸ್ತೆ ದಾಟುವ ಜನರು ಮತ್ತು ಸರಿಯಾದ ರಸ್ತೆ ಮಾರ್ಗವಿಲ್ಲದ ಹಲವು ಸಮಸ್ಯೆಗಳಿವೆ.

ಉದಾಹರಣೆಗೆ, ಲೇನ್-ಕೀಪಿಂಗ್ ಅಸಿಸ್ಟ್ ಸರಿಯಾಗಿ ಕೆಲಸ ಮಾಡಲು ಸ್ಪಷ್ಟ ಲೇನ್ ಗುರುತುಗಳು ಬೇಕು. ಆದರೆ ಬಹುತೇಕ ಭಾರತೀಯ ರಸ್ತೆಗಳಲ್ಲಿ ಇವು ಕಾಣುವುದಿಲ್ಲ. ಹಾಗೆಯೇ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಟ್ರಾಫಿಕ್‌ನಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಕಷ್ಟವಾಗುತ್ತದೆ. ಭಾರತೀಯ ನಗರ ರಸ್ತೆಗಳು ಹಾಗೂ ಗ್ರಾಮಾಂತರ ರಸ್ತೆಗಳನ್ನು ಹೊರತುಪಡಿಸಿ ಎಕ್ಸ್‌ಪ್ರೆಸ್ ವೇಗಳಲ್ಲಿ ಈ ತಂತ್ರಜ್ಞಾನ ಸುರಕ್ಷಿತವಾಗಿದೆ.

does-adas-safe-for-indian-roads-real-world-challenges

ಬಹಳ ಉಪಯುಕ್ತವಾದ ಫೀಚರ್ ADAS

ಕಾರಿನಲ್ಲಿ ಸರಿಯಾಗಿ ಹೊಂದಿಸಿರುವ ADAS ವೈಶಿಷ್ಟ್ಯವು ಅತ್ಯಂತ ವಿಶ್ವಾಸಾರ್ಹ ಭದ್ರತಾ ವೈಶಿಷ್ಟ್ಯವಾಗಿದೆ. ಘರ್ಷಣೆಯ ಎಚ್ಚರಿಕೆ, ಸ್ವಯಂ - ತುರ್ತು ಬ್ರೇಕಿಂಗ್, ಲೇನ್ - ಕೀಪ್ ಅಸಿಸ್ಟ್, ಬ್ಲೈಂಡ್ - ಸ್ಪಾಟ್ ಮಾನಿಟರಿಂಗ್ ಮತ್ತು ಕ್ರಾಸ್ - ಟ್ರಾಫಿಕ್ ಎಚ್ಚರಿಕೆಯಂತಹ ವೈಶಿಷ್ಟ್ಯಗಳು ಕಾರಿಗೆ ಆಗುವ ಅಪಾಯವನ್ನು ಕಡಿಮೆ ಮಾಡುತ್ತವೆ.

ADAS ನೊಂದಿಗೆ ಕಾರುಗಳು ರಸ್ತೆಯ ಲೇನ್‌ಗಳನ್ನು ಬದಲಾಯಿಸಬಹುದು, ವೇಗವನ್ನು ನಿಯಂತ್ರಿಸಬಹುದು ಅಥವಾ ಹೆಚ್ಚಿಸಬಹುದು, ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ಸಂಪೂರ್ಣವಾಗಿ ನಿಲ್ಲಿಸಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯು ಅಪಘಾತಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುವ ಒಂದು ಸಾಧನವಾಗಿದೆ. ಆದರೆ ಮೊದಲೇ ಹೇಳಿದಂತೆ ಈ ತಂತ್ರಜ್ಞಾನಕ್ಕೆ ತಕ್ಕಂತೆ ಉತ್ತಮ ರಸ್ತೆಗಳಿರಬೇಕು.

does-adas-safe-for-indian-roads-real-world-challenges

ADAS ಹೇಗೆ ಬಳಸಬೇಕು?

ಪ್ರಸ್ತುತ, ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯು ಭಾರತೀಯ ರಸ್ತೆಗಳಲ್ಲಿ ಹೆಚ್ಚು ಪ್ರಾಯೋಗಿಕವಾಗಿಲ್ಲ. ಸಾಮಾನ್ಯ ಭಾರತೀಯ ನಗರದ ರಸ್ತೆಗಳು ಈ ವೈಶಿಷ್ಟ್ಯವನ್ನು ಅವಲಂಬಿಸುವಂತಿಲ್ಲ. ಕಾರಣ ಏನೆಂದರೆ, ಭಾರತದ ಹೆದ್ದಾರಿಗಳನ್ನು ಹೊರತುಪಡಿಸಿ ಸಿಟಿ ರೋಡ್‌ಗಳು ಇದಕ್ಕೆ ಸೂಕ್ತವಲ್ಲ. ಹಾಗಾಗಿ ADAS ಅನ್ನು ಚಾಲಕರಿಗೆ ಸಹಾಯಕವಾದ ಉಪಕರಣವಾಗಿ ನೋಡಬೇಕೇ ಹೊರತು, ಚಾಲಕರಿಗೆ ಬದಲಿ ಆಗಿ ಅಲ್ಲ.

ಸರಿಯಾದ ಅಭ್ಯಾಸ, ರಸ್ತೆಗಳ ಸುಧಾರಣೆ ಮತ್ತು ತಂತ್ರಜ್ಞಾನದ ಸ್ಥಳೀಕರಣದಿಂದ ADAS ಭಾರತದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಸಹಾಯವಾಗಬಹುದು. ಆದರೆ ನೀವು ADAS ಅನ್ನು ಹೊಂದಿರುವ ಕಾರಣಕ್ಕೆ ಮಾತ್ರ ಕಾರನ್ನು ಖರೀದಿಸಿದರೆ, ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗಿಲ್ಲ. ನೀಡಿದರೂ ಸಂಪೂರ್ಣ ಅದರ ಮೇಲೆ ಅವಲಂಭಿತವಾಗುವುದು ತುಂಬಾ ಅಪಾಯಕಾರಿ ಎಂಬುದನ್ನು ನೆನಪಿಡಿ.

Article Published On: Tuesday, June 24, 2025, 12:25 [IST]
English summary
Does adas safe for indian roads real world challenges
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+