E20 ಪೆಟ್ರೋಲ್‌ನಿಂದ ಗಾಡಿಗಳ ಮೈಲೇಜ್‌ ಕಡಿಮೆಯಾಗುತ್ತಾ.. ಸರ್ಕಾರ ಹೇಳಿದ್ದೇನು? ಇಲ್ಲಿದೆ ಫುಲ್ ಡೀಟೇಲ್ಸ್, ಯಾರು ಹೇಳಲ್ಲ!

ಇತ್ತೀಚೆಗೆ, ಇ20 ಪೆಟ್ರೋಲ್ (ಎಥೆನಾಲ್ ಮಿಶ್ರಿತ) ಉಪಯೋಗದ ಬಗ್ಗೆ ಅನೇಕ ವಾಹನ ಸವಾರರು ಕಳವಳ ವ್ಯಕ್ತಪಡಿಸಿದ್ದರು. ಈ ಕುರಿತಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇದರೊಂದಿಗೆ ಎಲ್ಲ ಗೊಂದಲಗಳಿಗೂ ತೆರೆ ಎಳೆಯುವ ಪ್ರಯತ್ನ ಮಾಡಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್‌ ಉಪಯೋಗದಿಂದ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ. ವಿದೇಶದಿಂದ ಬರುವ ಕಚ್ಚಾ ತೈಲದ ಆಮದಿನ ವೆಚ್ಚವನ್ನು ಉಳಿಸಬಹುದು. ಜೊತೆಗೆ ವಾಹನಗಳ ಸವಾರಿಯ ಗುಣಮಟ್ಟವು (ರೈಡ್ ಕ್ವಾಲಿಟಿ) ಸುಧಾರಿಸುತ್ತದೆ ಎಂದು ಹೇಳಿದೆ.

ಇ20 (E20) ಪೆಟ್ರೋಲ್‌ನಿಂದ ವಾಹನಗಳ ಮೈಲೇಜ್ ಮೇಲೂ ಕೂಡ ಗಂಭೀರ ಪರಿಣಾಮ ಬೀರಲಿದೆ ಎಂಬ ಬಗ್ಗೆ ಹಲವು ಪ್ರಶ್ನೆಗಳನ್ನು ಸವಾರರು ಎತ್ತಬಹುದು ಎಂದು 2020ಕ್ಕಿಂತ ಹಿಂದೆಯೇ ಪೆಟ್ರೋಲಿಯಂ & ನೈಸರ್ಗಿಕ ಅನಿಲ ಸಚಿವಾಲಯ ಊಹಿಸಿತ್ತು. ಮೈಲೇಜ್ ಎಂಬುದು ಚಾಲನಾ ಅಭ್ಯಾಸಗಳು, ವಾಹನ ನಿರ್ವಹಣೆ ಹಾಗೂ ಹವಾಮಾನ ಪರಿಸ್ಥಿತಿ ಸೇರಿದಂತೆ ಇನ್ನೂ ಹಲವು ಅಂಶಗಳನ್ನು ಆಧರಿಸಿರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಮೂಲಕ ಎಥೆನಾಲ್‌ ಮಿಶ್ರಣದ ಪೆಟ್ರೋಲ್‌ನಿಂದ ವಾಹನಗಳ ಮೈಲೇಜ್‌ ಕುಸಿತವಾಗುವುದಿಲ್ಲ ಎಂಬುದನ್ನು ಒಂದರ್ಥದಲ್ಲಿ ದೃಢಪಡಿಸುತ್ತಿದೆ.

E20 petrol Mileage Fears Central Government Clarification Details

ಸದ್ಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, 2070ರ ವೇಳೆಗೆ ದೇಶಾದ್ಯಂತ ನಿವ್ವಳ ಶೂನ್ಯ ಹೊರಸೂಸುವಿಕೆಯ ವಾಹನಗಳು ಇರಬೇಕೆಂದು ಬಯಸಿದೆ. ಆ ಗುರಿ ಸಾಧಿಸಲು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಹತ್ವದ ಪಾತ್ರ ವಹಿಸಲಿದೆ. ವಾಹನಗಳಲ್ಲಿ ಇಂಗಾಲದ ಹೊರಸೂಸುವಿಕೆಯ ಪ್ರಮಾಣ ತೀವ್ರತರದಲ್ಲಿ ಕಡಿಮೆಯಾಗಲಿದೆ ಎಂದು ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರವು 2023ರ ಫೆಬ್ರವರಿಯಲ್ಲಿ 'ಇ20' ಪೆಟ್ರೋಲ್‌ನ್ನು ಪರಿಚಯಿಸಿತ್ತು. ಬೆಂಗಳೂರಿನಲ್ಲಿ ನಡೆದ ಭಾರತ ಇಂಧನ ಸಪ್ತಾಹ ಕಾರ್ಯಕ್ರಮದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಚಾಲನೆ ನೀಡಿದ್ದರು. ಆರಂಭದಲ್ಲಿ 12 ರಾಜ್ಯಗಳು ಹಾಗೂ ಪ್ರಮುಖ ಕೇಂದ್ರಾಡಳಿತ ಪ್ರದೇಶಗಳ 11 ನಗರಗಳಲ್ಲಿ ಈ ಇಂಧನ ವಿತರಣೆನ್ನು ಶುರು ಮಾಡಲಾಗಿತ್ತು.

ಎಥೆನಾಲ್‌ ತಯಾರಿಕೆ ಹೇಗೆ & ವಾಹನಗಳಲ್ಲಿ ಬಳಕೆ ಯಾವ ರೀತಿಯಲ್ಲಿದೆ:

ಎಥೆನಾಲ್‌ನ್ನು ಭತ್ತದ ಹುಲ್ಲು ಹಾಗೂ ಕಬ್ಬು ಸೇರಿದಂತೆ ಇತರೆ ಕೃಷಿ ಉತ್ಪನ್ನಗಳನ್ನು ಬಳಕೆ ಮಾಡಿ ತಯಾರಿಸಲಾಗುತ್ತದೆ. ಈಗಾಗಲೇ, ಒಂದೆರೆಡು ವರ್ಷದಿಂದ ದೇಶೀಯವಾಗಿ ಖರೀದಿಗೆ ಲಭ್ಯವಾಗುವ ಬಹುತೇಕ ಎಲ್ಲ ವಾಹನಗಳು ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಚಾಲನೆಯಾಗಬಲ್ಲವು. ಅಂದರೇ 1 ಲೀಟರ್‌ಗೆ ಶೇಕಡ 80% ಪೆಟ್ರೋಲ್ ಹಾಗೂ ಶೇಕಡ 20% ಎಥೆನಾಲ್‌ನ್ನು ಬೆರೆಸಲಾಗುತ್ತದೆ.

ಹಳೆಯ ವಾಹನಗಳಿಗೂ ಎಥೆನಾಲ್‌ ಸೂಕ್ತವಾಗಬಲ್ಲದು:

ಹಳೆಯ ವಾಹನಗಳಿಗೂ ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇ20) ಸೂಕ್ತವಾಗಬಲ್ಲದು ಎಂದು ಸರ್ಕಾರ ಹೇಳಿದೆ. 20,000 ರಿಂದ 30,000 ಕಿ.ಮೀ ವಾಹನಗಳನ್ನು ಓಡಿಸಿದ ನಂತರ, ಕೆಲವೊಂದು ಸಣ್ಣ - ಪುಟ್ಟ ಬಿಡಿಭಾಗಗಳು ಹಾಳಾಗಿರುತ್ತದೆ. ಅದನ್ನು ಬದಲಾಯಿಸಿದರೆ, ಯಾವುದೇ ಸಮಸ್ಯೆ ಬರುವುದಿಲ್ಲ ಎಂದಿದೆ.

ಸದ್ಯ ದೇಶದಲ್ಲಿ ಎಥೆನಾಲ್ ಉತ್ಪಾದನಾ ಸಾಮರ್ಥ್ಯ ಎಷ್ಟಿದೆ:

ದೇಶದಲ್ಲಿ 1,700 ಕೋಟಿ ಲೀಟರ್ ಎಥೆನಾಲ್‌ನ್ನು ಉತ್ಪಾದನೆ ಮಾಡಲಾಗುತ್ತಿದೆ. ಇದರಲ್ಲಿ ಪೆಟ್ರೋಲ್‌ನೊಂದಿಗೆ 1,500 ಲೀಟರ್ ಮಿಶ್ರಣ ಮಾಡಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರೇ ಈ ಹಿಂದೆ ಹೇಳಿದ್ದರು. ಇದು ಮಾತ್ರವಲ್ಲದೆ, 2026ರೊಳಗೆ ಪೆಟ್ರೋಲ್‌ನಲ್ಲಿ ಶೇಕಡ 20% ಎಥೆನಾಲ್ ಮಿಶ್ರಣದ ಗುರಿ ನಿಗದಿಯಾಗಿತ್ತು. ಪ್ರಸ್ತುತ 19% ಗುರಿ ಸಾಧಿಸಲಾಗಿದೆ. ಪೆಟ್ರೋಲ್‌ ಜೊತೆಗೆ ಶೇಕಡ 20%ಗೂ ಅಧಿಕ ಎಥೆನಾಲ್ ಬೆರೆಸುವ ಸಂಬಂಧವು ಗುರಿ ನಿಗದಿಪಡಿಸಲು ನೀತಿ ಆಯೋಗದಡಿ ಸಮಿತಿಯನ್ನು ರಚಿಸಲಾಗಿದೆ' ಎಂದಿದ್ದರು.

ಎಥೆನಾಲ್ ದರವೆಷ್ಟು:

ಕೃಷಿ ಉತ್ಪನ್ನಗಳನ್ನು ಉಪಯೋಗ ಮಾಡಿ, ಎಥೆನಾಲ್ ತಯಾರಿಸುವ ಹಿನ್ನೆಲೆ, ಅಗ್ಗದ ದರದಲ್ಲಿ ಲಭ್ಯವಿದೆ. ಬಿ-ಹೆವಿ ಮೊಲಾಸಿಸ್ (ಕಾಕಂಬಿ) ಬಳಕೆ ಮಾಡಿ, ಉತ್ಪಾದಿಸಿರುವ 1 ಲೀಟರ್‌ ಎಥೆನಾಲ್‌ಗೆ ರೂ.60.73 ಇದೆ. ಅದೇ ರೀತಿಯಲ್ಲಿ ಕಬ್ಬಿನ ಹಾಲು ಹಾಗೂ ಸಕ್ಕರೆ ಪಾಕದಿಂದ ತಯಾರಿಸುವ ಲೀಟರ್‌ ಎಥೆನಾಲ್‌ಗೆ ರೂ.65.61 ದರವನ್ನು ನಿಗದಿಪಡಿಸಲಾಗಿದೆ.

ರೈತರಿಗೆ ಹೆಚ್ಚಿನ ಅನುಕೂಲ:

ಎಥೆನಾಲ್ ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುಗಳು ಕೃಷಿ ಉತ್ಪನ್ನಗಳೇ ಆಗಿವೆ. ಹೀಗಾಗಿ, ಗ್ರಾಮೀಣ ಭಾಗದ ರೈತರ ಜೀವನ ಗುಣಮಟ್ಟವು ಸುಧಾರಿಸುವುದು ಮಾತ್ರವಲ್ಲದೆ, ಆದಾಯದ ಪ್ರಮಾಣವು ಹೆಚ್ಚಳವಾಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಇದು ರೈತರ ಆತ್ಮಹತ್ಯೆಯನ್ನು ಕಡಿಮೆ ಮಾಡಲು ನೆರವಾಗಬಲ್ಲದು.

ಒಟ್ಟಾರೆಯಾಗಿ, ಎಥೆನಾಲ್ ಬಳಕೆಯಿಂದ ಪರಿಸರ ಮಾಲಿನ್ಯ ಕಡಿಮೆಯಾಗಲಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್‌ನ್ನು ಉಪಯೋಗ ಮಾಡಿದರೆ, ಇಂಧನ ವೆಚ್ಚವು ಕಡಿಮೆಯಾಗಲಿದೆ. ಈ ಮೂಲಕ ವಾಹನ ಸವಾರರು ದೊಡ್ಡ ಮಟ್ಟದಲ್ಲಿ ಹಣವನ್ನು ಸಹ ಉಳಿತಾಯ ಮಾಡಬಹುದು ಎನ್ನಲಾಗಿದೆ.

Article Published On: Wednesday, August 13, 2025, 13:42 [IST]
English summary
E20 petrol mileage fears central government clarification details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+