ಡಿಸೆಂಬರ್‌ನಲ್ಲಿ ಎಲ್ಲರ ಗಮನ ಹ್ಯುಂಡೈ ಕಾರುಗಳತ್ತ... ರೂ. 1 ಲಕ್ಷದವರೆಗೆ ಪ್ರಯೋಜನ ಘೋಷಣೆ

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಇಂದು 'ಡಿಸೆಂಬರ್ ಡಿಲೈಟ್' ಅಭಿಯಾನವನ್ನು ಪ್ರಾರಂಭಿಸಿದೆ, ಈ ಅಭಿಯಾನವು ಹುಂಡೈ ಕಾರುಗಳ ಖರೀದಿಯ ಮೇಲೆ ರೂ. 1,00,000 ವರೆಗಿನ ಅತ್ಯಾಕರ್ಷಕ ಪ್ರಯೋಜನ (Benefits) ಗಳನ್ನು ನೀಡುತ್ತದೆ. ಸೀಮಿತ - ಸಮಯದಲ್ಲಿ ಪ್ರಯೋಜನಗಳ ಆಕರ್ಷಣೆಯನ್ನು ಹೆಚ್ಚಿಸುವ ರೋಮಾಂಚಕತೆಯೊಂದಿಗೆ, ವರ್ಷವನ್ನು ಉನ್ನತ ಮಟ್ಟದಲ್ಲಿ ಮುಗಿಸಲು ಬಯಸುವ ಗ್ರಾಹಕರಿಗೆ ಪ್ರತಿ ಖರೀದಿಯು ಹೇಗೆ ಅರ್ಥಪೂರ್ಣ ನಿರ್ಧಾರವಾಗುತ್ತದೆ ಎಂಬುದನ್ನು ಈ ಅಭಿಯಾನವು ಚಿತ್ರಿಸಲಿದೆ ಎಂದು ಹ್ಯುಂಡೈ ಕಂಪನಿ ಹೇಳಿದೆ.

ಡಿಸೆಂಬರ್ ಡಿಲೈಟ್ ಅಭಿಯಾನದ ಕುರಿತು ಮಾತನಾಡಿದ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ತರುಣ್ ಗಾರ್ಗ್, "ಹುಂಡೈ ಡಿಸೆಂಬರ್ ಡಿಲೈಟ್ ಅಭಿಯಾನದೊಂದಿಗೆ, ನಮ್ಮ ಗ್ರಾಹಕರಿಗೆ ಅಸಾಧಾರಣ ವರ್ಷಾಂತ್ಯದ ಉಲ್ಲಾಸವನ್ನು ತರಲು ನಾವು ಉತ್ಸುಕರಾಗಿದ್ದೇವೆ. ಡಿಸೆಂಬರ್ ಆಚರಣೆಯ ಸಮಯ ಮತ್ತು ಈ ಉಪಕ್ರಮವು ಹುಂಡೈ ಕಾರುಗಳ ಖರೀದಿಯನ್ನು ಇನ್ನಷ್ಟು ಪ್ರತಿಫಲದಾಯಕವಾಗಿಸುತ್ತದೆ.

exclusive-year-end-benefits-on-hyundai-vehicles

ನಮ್ಮ ಕಾರು ಮಾದರಿಗಳ ಶ್ರೇಣಿಯಲ್ಲಿ ಅದ್ಭುತ ಪ್ರಯೋಜನಗಳನ್ನು ನೀಡುವ ಮೂಲಕ, ನಮ್ಮ ಗ್ರಾಹಕರ ನಂಬಿಕೆಗೆ ಧನ್ಯವಾದ ಹೇಳಲು ಮತ್ತು ಅವರ ಪಕ್ಕದಲ್ಲಿ ಹ್ಯುಂಡೈ ಕಾರಿನೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಲು ಇನ್ನೂ ಅನೇಕ ಕುಟುಂಬಗಳನ್ನು ಪ್ರೇರೇಪಿಸಲು ನಾವು ಗುರಿ ಹೊಂದಿದ್ದೇವೆ. ನಮ್ಮ ಕಾರುಗಳು ಗ್ರಾಹಕರ ಆದ್ಯತೆಗಳಿಗೆ ತಕ್ಕಂತೆ ನಿರ್ಮಾಣವಾಗಿರುವ ಕಾರಣ ಗ್ರಾಹಕರಿಗೆ ಬೆಸ್ಟ್ ಆಯ್ಕೆಯಾಗಿವೆ" ಎಂದು ಹೇಳಿದರು.

ಈ ಉಪಕ್ರಮದ ಭಾಗವಾಗಿ, ಗ್ರಾಹಕರ ಮಾಲೀಕತ್ವದ ಪ್ರಯಾಣಕ್ಕೆ ಹೆಚ್ಚಿನ ಸಂತೋಷವನ್ನು ಸೇರಿಸಲು ಹ್ಯುಂಡೈ ಕಂಪನಿಯು ಆಕರ್ಷಕ ವಿನಿಮಯ ಕೊಡುಗೆಗಳು, ಕಾರ್ಪೊರೇಟ್ ಮತ್ತು ಸರ್ಕಾರಿ ಉದ್ಯೋಗಿಗಳಿಗೆ ವಿಶೇಷ ಕೊಡುಗೆಗಳು ಇತ್ಯಾದಿಗಳನ್ನು ಒಳಗೊಂಡಂತೆ ವಿಶೇಷ ವರ್ಷಾಂತ್ಯದ ಪ್ರಯೋಜನಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಆಯ್ದ ಕಾರುಗಳ ಮೇಲೆ ಆಕರ್ಷಕ ಮೌಲ್ಯಗಳು, ಅನುಕೂಲಕ್ಕಾಗಿ-ಮೊದಲು ಗ್ರಾಹಕ ಸೇವೆಗಳು ಮತ್ತು ಡೀಲರ್‌ಶಿಪ್‌ಗಳ ಮೂಲಕ ಹೊಸ ತೊಡಗಿಸಿಕೊಳ್ಳುವ ಕಾರ್ಯಕ್ರಮಗಳು ಸೇರಿವೆ ಎಂದು ಹ್ಯುಂಡೈ ತಿಳಿಸಿದೆ.

exclusive-year-end-benefits-on-hyundai-vehicles

ನವೆಂಬರ್‌ನಲ್ಲಿ 66,840 ಕಾರುಗಳ ಮಾರಾಟ: ನವೆಂಬರ್ ತಿಂಗಳಲ್ಲಿ ಹ್ಯುಂಡೈ ಕಾರುಗಳು ಕಂಪನಿಗೆ ಭರ್ಜರಿ ಲಾಭ ತಂದುಕೊಟ್ಟಿವೆ. ಒಟ್ಟು 66,840 ಯುನಿಟ್‌ ಕಾರುಗಳನ್ನು ಖರೀದಿದಾರರಿಗೆ ಡೆಲಿವರಿ ನೀಡಲಾಗಿದೆ. ಸೆಪ್ಟೆಂಬರ್ 22 ರಂದು ಜಿಎಸ್‌ಟಿ ಪರಿಷ್ಕರಣೆಗೊಂಡಿರುವ ಕಾರಣ ಕಾರುಗಳ ಬೆಲೆಯು ಇಳಿಕೆಯಾಗಿದ್ದು, ಕ್ರೆಟಾ ಹಾಗೂ ವೆನ್ಯೂ ಎಸ್‌ಯುವಿಗಳನ್ನು ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸಿದ್ದಾರೆ.

ಹ್ಯುಂಡೈ ವೆನ್ಯೂಗೆ ಉತ್ತಮ ಬೇಡಿಕೆ: ಇದೇ ನವೆಂಬರ್ 4 ರಂದು ಭಾರತದಲ್ಲಿ ಹೊಸ ತಲೆಮಾರಿನ 'ಹ್ಯುಂಡೈ ವೆನ್ಯೂ' ಎಸ್‌ಯುವಿ ಬಿಡುಗಡೆಯಾಗಿತ್ತು. ಈ ಕಾರು ಬಿಡುಗಡೆಯಾಗಿ 1 ತಿಂಗಳು ಕಳೆಯುವ ಮೊದಲೇ, 32,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ಈ ಎಸ್‌ಯುವಿಯ ಆರಂಭಿಕ ಬೆಲೆಯು ರೂ.7.89 ಲಕ್ಷವಿದ್ದು ಟಾಪ್ ವೇರಿಯೆಂಟ್ ಬೆಲೆ ರೂ.15.48 ಲಕ್ಷ (ಎರಡು ಎಕ್ಸ್-ಶೋರೂಂ) ಇದೆ.

exclusive-year-end-benefits-on-hyundai-vehicles

ಹೊಸ 'ಹ್ಯುಂಡೈ ವೆನ್ಯೂ' 1.2 - ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5 - ಲೀ. ಡಿಸೇಲ್ ಹಾಗೂ 1.0 - ಲೀ. ಟರ್ಬೊ ಪೆಟೋಲ್ ಎಂಜಿನ್‌ ಆಯ್ಕೆಯನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 5 - ಸ್ಪೀಡ್ ಮ್ಯಾನುವಲ್, 6 - ಸ್ಪೀಡ್ ಮ್ಯಾನುವಲ್ ಮತ್ತು 7 - ಸ್ಪೀಡ್ (ಡುಯಲ್ - ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ.

ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್),ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಇಂಟೀರಿಯರ್‌ನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ - ಡ್ರೈವರ್ ಡಿಸ್‌ಪ್ಲೇಗಾಗಿ 12.3 ಇಂಚಿನ ಡುಯಲ್ ಸ್ಕ್ರೀನ್‌ಗಳು, 8-ಸ್ಪೀಕರ್ ಬೋಸ್ ಮ್ಯೂಸಿಕ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ಸನ್‌ರೂಫ್ ಒಳಗೊಂಡಿದೆ.

More from DriveSpark

Article Published On: Tuesday, December 2, 2025, 14:04 [IST]
English summary
Exclusive year end benefits on hyundai vehicles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+