ಟಾಟಾ ಗ್ರಾಹಕರಿಗೆ ವಿನಾಯಿತಿ: ಮಹೀಂದ್ರಾ ಕಾರು ಮಾಲೀಕರಿಗೆ ಶೇ10 ತೆರಿಗೆ... ಇಲ್ಲಿದೆ ಅಸಲಿ ಕಾರಣ!

ಮಹೀಂದ್ರಾ XEV 9e (Mahindra XEV 9e) ಮತ್ತು ಟಾಟಾ ಹ್ಯಾರಿಯರ್ EV (Tata Harrier EV) ಎಲೆಕ್ಟ್ರಿಕ್ ಎಸ್‌ಯುವಿ ವಿಭಾಗದಲ್ಲಿ ಇತ್ತೀಚಿನ ಬಹುನಿರೀಕ್ಷಿತ ಪ್ರತಿಸ್ಪರ್ಧಿಗಳಾಗಿದ್ದು, ಇತ್ತೀಚೆಗಷ್ಟೆ ಬಿಡುಗಡೆಯಾಗಿವೆ. ಇವುಗಳಲ್ಲಿ ಟಾಟಾ ಹ್ಯಾರಿಯರ್ ಇವಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಮಹೀಂದ್ರಾ XEV 9e ಎಸ್‌ಯುವಿಗೆ ಶೇ10 ರಷ್ಟು ತೆರಿಗೆ ವಿಧಿಸಲಾಗಿದೆ. ಇದೇಕೆ ಹೀಗೆ, ಟಾಟಾ ಕಾರುಗಳಲ್ಲಿ ಇರೋದಾದರೂ ಏನು? ತೆರಿಗೆ ವಿನಾಯಿತಿ ನೀಡಲು ಕಾರಣವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲದೆ.

ಕರ್ನಾಟಕದಲ್ಲಿ ರಸ್ತೆ ತೆರಿಗೆ ನೀತಿಗೆ ಮಾಡಲಾದ ಇತ್ತೀಚಿನ ಪರಿಷ್ಕರಣೆಯ ಪ್ರಕಾರ, 25 ಲಕ್ಷ ರೂ.ಗಿಂತ (ಎಕ್ಸ್ - ಶೋರೂಂ ಬೆಲೆ) ಹೆಚ್ಚಿನ ಬೆಲೆಯ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇ10 ರಷ್ಟು ತೆರಿಗೆ ಮೊತ್ತವನ್ನು ಪಾವತಿಸಬೇಕು. ಹಾಗೆಯೇ ಪೂರ್ಣ ರಸ್ತೆ ತೆರಿಗೆ ವಿನಾಯಿತಿ ಕರ್ನಾಟಕದಲ್ಲಿ ರೂ. 25 ಲಕ್ಷ (ಎಕ್ಸ್ - ಶೋರೂಂ ಬೆಲೆ) ಕ್ಕಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ.

exemption-for-tata-customers-10-percent-road-tax-for-mahindra-evs

ಟಾಟಾ ಹ್ಯಾರಿಯರ್ EV ಯ ಫಿಯರ್‌ಲೆಸ್+ 75kWh ವೇರಿಯೆಂಟ್ ಬೆಲೆ ರೂ. 24.99 ಲಕ್ಷ (ಎಕ್ಸ್ - ಶೋರೂಂ), ಈ ಮಾಡಲ್‌ಗೆ ಶೇ10 ರಸ್ತೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಮತ್ತೊಂದೆಡೆ, ಅದರ ಹತ್ತಿರದ ಪ್ರತಿಸ್ಪರ್ಧಿ ಮಹೀಂದ್ರಾ XEV 9e ಪ್ಯಾಕ್ TWO 79kWh ವೇರಿಯೆಂಟ್ ಬೆಲೆ ರೂ. 26.50 ಲಕ್ಷ (ಎಕ್ಸ್-ಶೋರೂಂ) ಇರುವ ಕಾರಣ ಶೇ10 ರಸ್ತೆ ತೆರಿಗೆ ಪಾವತಿಸಬೇಕಾಗುತ್ತದೆ.

ಹಾಗಾಗಿ ಇಲ್ಲಿ ಯಾವುದೇ ಬ್ರಾಂಡ್‌ ಮೇಲೆ ಸರ್ಕಾರಕ್ಕೆ ಅಕ್ಕರೆಯಿಲ್ಲ, ನಿಯಮಗಳ ಅನ್ವಯ ಎಲ್ಲಾ ಬ್ರಾಂಡ್‌ ಕಾರುಗಳು ತೆರಿಗೆ ನೀತಿಗೆ ಒಳಪಟ್ಟಿರುತ್ತವೆ. ರೂ. 25 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಇವಿ ಕಾರುಗಳನ್ನು ತಯಾರಿಸುವ ಕಂಪನಿ ಯಾವುದೇ ಇರಲಿ ಶೇ10 ರಷ್ಟು ರಸ್ತೆ ತೆರಿಗೆಯನ್ನು ಎದುರಿಸುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವು ಬ್ರಾಂಡ್‌ಗಳು ರೂ. 25 ಲಕ್ಷದೊಳಗೆ ಕಾರುಗಳನ್ನು ನಿರ್ಮಿಸುತ್ತವೆ.

exemption-for-tata-customers-10-percent-road-tax-for-mahindra-evs

ಉದಾಹರಣೆಗೆ ಟಾಟಾ ಎಲೆಕ್ಟ್ರಿಕ್ ಮಾಡಲ್‌ಗಳಾದ ನೆಕ್ಸಾನ್ ಇವಿ, ಟಿಯಾಗೊ ಇವಿ, ಟಿಗೋರ್ ಇವಿ, ಪಂಚ್ ಇವಿ ರೂ. 25 ಲಕ್ಷಕ್ಕಿಂತ ಕಡಿಮೆ ಎಕ್ಸ್ - ಶೋರೂಂ ಬೆಲೆಯನ್ನು ಹೊಂದಿವೆ. ಆದ್ದರಿಂದ ಇವು ಪೂರ್ಣ ರಸ್ತೆ ತೆರಿಗೆ ವಿನಾಯಿತಿಗೆ ಅರ್ಹತೆ ಪಡೆದಿದ್ದು, ಟಾಟಾ ಖರೀದಿದಾರರು ಯಾವುದು ರಸ್ತೆ ತೆರಿಗೆ ನೋಡುವುದಿಲ್ಲ, ಆದರೆ ಹೆಚ್ಚಿನ ಬೆಲೆಯ ಮಾದರಿಗಳ ಮಹೀಂದ್ರಾ ಖರೀದಿದಾರರು ಶೇ 10 ತೆರಿಗೆಯನ್ನು ನೋಡುತ್ತಾರೆ.

ಉದಾಹರಣೆಗೆ ಭಾರತದಲ್ಲಿ ಮಹೀಂದ್ರಾ ಮಾತ್ರವಲ್ಲದೆ ಬಿವೈಡಿ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಟೆಸ್ಲಾನಂತಹ ಬ್ರಾಂಡ್‌ಗಳು ರೂ. 25 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಇವಿಗಳನ್ನು ನೀಡುತ್ತಿದ್ದು, ಇವೆಲ್ಲವು ಕರ್ನಾಟಕದಲ್ಲಿ ಶೇ10 ತೆರಿಗೆಯನ್ನು ಎದುರಿಸುತ್ತವೆ. ಶ್ರೀಮಂತ ಖರೀದಿದಾರರಿಗಾಗಿಯೇ ಕೆಲ ಬ್ರಾಂಡ್‌ಗಳು ಐಷಾರಾಮಿ ಫೀಚರ್ಸ್ ನೀಡಿ ರೂ. 25 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಇವಿಗಳನ್ನು ಬಿಡುಗಡೆ ಮಾಡುತ್ತವೆ.

exemption-for-tata-customers-10-percent-road-tax-for-mahindra-evs

ತೆರಿಗೆ ವ್ಯತ್ಯಾಸವು ಬ್ರ್ಯಾಂಡ್ ಅನ್ನು ಆಧರಿಸಿಲ್ಲ, ಆದರೆ ನಿರ್ದಿಷ್ಟ EV ಮಾದರಿಯು ಕರ್ನಾಟಕದ ಹೊಸ ನೀತಿಯಿಂದ ನಿಗದಿಪಡಿಸಲಾದ ರೂ. 25 ಲಕ್ಷ ಮಿತಿಗಿಂತ ಹೆಚ್ಚಿದೆಯೇ ಅಥವಾ ಕಡಿಮೆಯಿದೆಯೇ ಎಂಬುದನ್ನು ಆಧರಿಸಿದೆ. ಟಾಟಾದ ಸಾಮೂಹಿಕ - ಮಾರುಕಟ್ಟೆ EVಗಳು ಸಾಮಾನ್ಯವಾಗಿ ಈ ಮಿತಿಯ ಅಡಿಯಲ್ಲಿವೆ, ಆದರೆ ಮಹೀಂದ್ರಾದ ಹೊಸ ಅಥವಾ ಪ್ರೀಮಿಯಂ EVಗಳು ಹೆಚ್ಚಾಗಿ ಇದನ್ನು ಮೀರುತ್ತವೆ.

ನೀವು ರೂ. 25 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಎಲೆಕ್ಟ್ರಿಕ್ ವಾಹನವನ್ನು ಹುಡುಕುತ್ತಿದ್ದರೆ, ನಿಮ್ಮ ಆಯ್ಕೆಗಳು ಹೆಚ್ಚಾಗಿ ಪ್ರೀಮಿಯಂ SUV ಗಳು ಮತ್ತು ಸುಧಾರಿತ ತಂತ್ರಜ್ಞಾನ, ದೀರ್ಘ ಶ್ರೇಣಿ ಮತ್ತು ಉನ್ನತ ಮಟ್ಟದ ಫೀಚರ್ಸ್ ಗಳನ್ನು ಹೊಂದಿರುವ ಆಮದು ಮಾಡಿಕೊಂಡ ಮಾದರಿಗಳಾಗಿರುತ್ತವೆ. ಹಾಗಾಗಿಯೇ ಸರ್ಕಾರ ಕೂಡ ಈ ಮಾಡಲ್‌ಗಳಿಗೆ ಶೇ10 ರಷ್ಟು ತೆರಿಗೆ ವಿಧಿಸಿದೆ.

Article Published On: Wednesday, July 16, 2025, 16:56 [IST]
English summary
Exemption for tata customers 10 percent road tax for mahindra evs
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+