Maruti eVitara: ಬೆಂಗಳೂರು ಡೀಲರ್‌ ತಲುಪಿದ ಮೊದಲ ಮಾರುತಿ ಎಲೆಕ್ಟ್ರಿಕ್ ಕಾರು: ಮುಗಿಬಿದ್ದ ಜನ!

ಕೊನೆಗೂ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಡೀಲರ್‌ಶಿಪ್‌ಗೆ ಎಂಟ್ರಿಕೊಟ್ಟಿದೆ. ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋ 2025ರಲ್ಲಿ ಅನಾವರಣಗೊಂಡ ಮಾರುತಿ ಸುಜುಕಿ ಎಲೆಕ್ಟ್ರಿಕ್ ಇ-ವಿಟಾರಾ (Maruti eVitara), ಶೀಘ್ರದಲ್ಲೆ ಬಿಡುಗಡೆಯಾಗಲಿದೆ. ಇದು ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ಆಗಿರುವುದರಿಂದ ನೆಕ್ಸಾ ಡೀಲರ್‌ಶಿಪ್‌ನಲ್ಲಿ ಮಾತ್ರ ಮಾರಾಟವಾಗಲಿದೆ. ಇದೀಗ ಬಿಡುಗಡೆ ಮುನ್ನವೆ ದೇಶಾದ್ಯಂತ ಮಾರುತಿ ಸುಜುಕಿ ತನ್ನ ಇ-ವಿಟಾರವನ್ನು ಪ್ರದರ್ಶನಕ್ಕಿಡಲು ಡೀಲರ್‌ಗಳಿಗೆ ಕಳುಹಿಸುತ್ತಿದೆ. ಬೆಂಗಳೂರಿನ ಶೋರೂಂ ಒಂದರಲ್ಲಿ ಹೊಸ ಮಾರುತಿ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಲಾಗಿದೆ. ಸದ್ಯ ಅನೇಕ ಗ್ರಾಹಕರನ್ನು ಈ ಕಾರು ಡೀಲರ್‌ಶಿಪ್‌ಗೆ ಆಕರ್ಷಿಸುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಇತ್ತೀಚಿನ ವರದಿಗಳ ಪ್ರಕಾರ, ಮಾರುತಿ ಇ-ವಿಟಾರಾ ಎಸ್‌ಯುವಿಯನ್ನು ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಈ ಎಲೆಕ್ಟ್ರಿಕ್ ಕಾರು ಇಂಧನ ಚಾಲಿತ ಗ್ರಾಂಡ್‌ ವಿಟಾರಾದ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ಹೆಸರಿನ ಹೋಲಿಕೆಯನ್ನು ಹೊರತುಪಡಿಸಿ, ಇ-ವಿಟಾರಾ ಕಾರು ಗ್ರ್ಯಾಂಡ್ ವಿಟಾರಾಕ್ಕಿಂತ ತುಂಬಾ ಭಿನ್ನವಾಗಿದೆ.

first-maruti-electric-car-evitara-reaches-dealerships-in-bengaluru

ಎರಡು ಆವೃತ್ತಿಗಳು ವಿಭಿನ್ನ ಪ್ಲಾಟ್ ಫಾರ್ಮ್‌ಗಳನ್ನು ಆಧರಿಸಿವೆ. ಇ-ವಿಟಾರಾವನ್ನು ಮಾರುತಿ ಸುಜುಕಿ ಕಂಪನಿಯು ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಕೇಟ್ ಬೋರ್ಡ್ ಪ್ಲಾಟ್ಫಾರ್ಮ್‌ನಲ್ಲಿ ಬರುವ ಹಾರ್ಟೆಕ್ಟ್-ಇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಈ ಎಸ್‌ಯುವಿಯು ವಿಶಿಷ್ಟವಾದ ವೈ ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

ಮಾರುತಿ ಸುಜುಕಿ ಇ-ವಿಟಾರಾವನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡುತ್ತಿದ್ದು, ಒಂದು 49 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದರೇ ಮತ್ತೊಂದು 61 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಜೊತೆಗೆ ಬರುತ್ತದೆ. ಬಿವೈಡಿಯಿಂದ ಪಡೆದ ಎಲ್‌ಎಫ್‌ಪಿ ಬ್ಯಾಟರಿಗಳನ್ನು ಈ ಕಾರುಗಳಲ್ಲಿ ಬಳಸುತ್ತಿರುವುದಾಗಿ ತಿಳಿದುಬಂದಿದೆ. ಪ್ರಸ್ತುತ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಆದರೆ ಅಂದಾಜು 17 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳ ನಡುವೆ ಇರಬಹುದು.

first-maruti-electric-car-evitara-reaches-dealerships-in-bengaluru

ವಿಶೇಷತೆಗಳು: ಇ-ವಿಟಾರಾದಲ್ಲಿ ಸಮತಟ್ಟಾಗಿ ಕಾಣುವ ಹೊಸ ಸ್ಟೀರಿಂಗ್ ವೀಲ್ ನೀಡಲಾಗಿದ್ದು, ಡ್ರೈವರ್ ಸೀಟ್‌ಗೆ 10-ವೇ ಎಲೆಕ್ಟ್ರಿಕ್ ಅಡ್ಜಸ್ಟಬಲ್ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಹೊಂದಿದೆ. ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್‌ಗಳು, ನಾಲ್ಕು ವೀಲ್‌ಗಳಲ್ಲಿ ಡಿಸ್ಕ್ ಬ್ರೇಕ್ ಮತ್ತು ಲೆವೆಲ್ 2 ADAS ಸೇರಿದಂತೆ ಸ್ಪೋರ್ಟ್, ಇಕೋ ಮತ್ತು ನಾರ್ಮಲ್ ಎಂಬ ಮೂರು ಡ್ರೈವ್ ಮೋಡ್‌ಗಳನ್ನು ಹೊಂದಿದೆ.

ಇಂಟೀರಿಯರ್ ವಿಷಯಕ್ಕೆ ಬಂದರೆ ಮಾರುತಿ ಸುಜುಕಿ ಇ-ವಿಟಾರಾ ಹೊಸ ಕ್ಯಾಬಿನ್ ಅನ್ನು ಸಹ ಹೊಂದಿದೆ. ಇದು ಪ್ರಸ್ತುತ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವ ಇತರ ಎಲ್ಲಾ ಮಾರುತಿ ಕಾರುಗಳಿಗಿಂತ ಭಿನ್ನವಾಗಿದೆ. ಇದು ಫಾಗ್‌ಲ್ಯಾಂಪ್‌ಗಳೊಂದಿಗೆ ಮಸ್ಕುಲರ್ ಆಗಿ ಕಾಣುವ ಮುಂಭಾಗ, ಮುಚ್ಚಿದ ಗ್ರಿಲ್, ಪಾರ್ಕಿಂಗ್ ಸೆನ್ಸಾರ್‌ಗಳು, ಕ್ಯಾಮೆರಾದೊಂದಿಗೆ ಬರುತ್ತದೆ.

ಸಿಲ್ವರ್ ಡಿಸೈನ್‌ನೊಂದಿಗೆ ಚೌಕಾಕಾರದ ಎಸಿ ವೆಂಟ್‌ಗಳು, ಕೆಳಗೆ ಸ್ಟೋರೇಜ್ ಹೊಂದಿರುವ ಟ್ವಿನ್-ಡೆಕ್ ಫ್ಲೋಟಿಂಗ್-ಟೈಪ್ ಸೆಂಟರ್ ಕನ್ಸೋಲ್, ರೋಟರಿ ಗೇರ್ ನಾಬ್, ಎಲೆಕ್ಟ್ರಿಕ್ ಸನ್‌ರೂಫ್, ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಎಸ್‌ಯುವಿ ದೊಡ್ಡ ವೀಲ್ ಆರ್ಚ್‌ಗಳು ಮತ್ತು ದಪ್ಪವಾದ ಕ್ಲಾಡಿಂಗ್‌ಗಳೊಂದಿಗೆ ಬಾಕ್ಸಿ ವಿನ್ಯಾಸವನ್ನು ಹೊಂದಿದೆ. ಹಿಂಭಾಗದ ಡೋರ್ ಹ್ಯಾಂಡಲ್‌ಗಳನ್ನು ಸಿ-ಪಿಲ್ಲರ್‌ಗೆ ಸಂಯೋಜಿಸಲಾಗಿದ್ದು, ಒಟ್ಟಾರೆ ಎಸ್‌ಯುವಿ ಲುಕ್‌ ಅನ್ನು ಹೆಚ್ಚಿಸುತ್ತದೆ. ಹಿಂಭಾಗದ ಡಿಸೈನ್ ವಿಷಯಕ್ಕೆ ಬಂದರೆ ಇ-ವಿಟಾರಾ ಕನೆಕ್ಟಿಂಗ್ ಎಲ್ಇಡಿ ಬಾರ್, ಮಸ್ಕುಲರ್ ಬಂಪರ್, ಇಂಟಿಗ್ರೇಟೆಡ್ ರೂಫ್ ಸ್ಪಾಯ್ಲರ್, ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, February 4, 2025, 13:03 [IST]
English summary
First maruti electric car evitara reaches dealerships in bengaluru
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+