ಒಂದೇ ಚಾರ್ಜ್‌ನಲ್ಲಿ ಬೆಂಗಳೂರಿನಿಂದ ತಮಿಳುನಾಡಿಗೆ ತಲುಪಿ ದಾಖಲೆ ನಿರ್ಮಿಸಿದ ಆಟೋ

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (GEML), ತನ್ನ ಎಲೆಕ್ಟ್ರಿಕ್ 3-ಚಕ್ರ ಪ್ರಯಾಣಿಕ ವಾಹನವಾದ ಎಲ್ಟ್ರಾ ಸಿಟಿ ಎಕ್ಸ್‌ಟ್ರಾ (Eltra City XTRA) ದೊಂದಿಗೆ ಹೊಸ ದಾಖಲೆ ನಿರ್ಮಿಸಿದೆ. ನವೀಕರಿಸಿದ ಎಲ್ಟ್ರಾ ಕರ್ನಾಟಕದ ಬೆಂಗಳೂರಿನಿಂದ ತಮಿಳುನಾಡಿನ ರಾಣಿಪೇಟೆಗೆ ಒಂದೇ ಚಾರ್ಜ್‌ನಲ್ಲಿ 324 ಕಿಲೋಮೀಟರ್ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸಿಂಗಲ್ ಚಾರ್ಜ್‌ನಲ್ಲಿ ಇಷ್ಟು ದೂರ ಪ್ರಯಾಣಿಸಿದ ಎಲೆಕ್ಟ್ರಿಕ್ 3-ಚಕ್ರ ವಾಹನವಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ರೈಡ್ ಅನ್ನು ಬೆಂಗಳೂರಿನ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಟೆಕ್ ಸೆಂಟರ್‌ನಿಂದ ಆರಂಭಿಸಿ ರಾಣಿಪೇಟೆಯಲ್ಲಿರುವ ಕಂಪನಿಯ ಆಂಪಿಯರ್ ಕಾರ್ಖಾನೆಯಲ್ಲಿ ಮುಕ್ತಾಯಗೊಂಡಿತು. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಎಲ್ಟ್ರಾ ಸಿಟಿ XTRA ವಾಹನವು, ಈ ಹಿಂದೆ 2024 ರಲ್ಲಿ ಬೆಂಗಳೂರಿನಿಂದ ಮೈಸೂರಿಗೆ 225 ಕಿ.ಮೀ ಸವಾರಿಯನ್ನು ಪೂರ್ಣಗೊಳಿಸಿದ ದಾಖಲೆ ಕೂಡ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

greaves-electric-eltra-city-xtra-3-wheeler-sets-new-national-record

"ಇತ್ತೀಚಿನ ತಂತ್ರಜ್ಞಾನ, ಅತ್ಯಂತ ವಿಶ್ವಾಸಾರ್ಹ"ತೆಯೊಂದಿಗೆ ವಿನ್ಯಾಸಗೊಳಿಸಲಾದ ಎಲ್ಟ್ರಾ ಸಿಟಿ XTRA, ಅತ್ಯುತ್ತಮ - ದರ್ಜೆಯ ಘಟಕಗಳು, ಪವರ್‌ಫುಲ್ LFP ಬ್ಯಾಟರಿ ಮತ್ತು ಬುದ್ಧಿವಂತ ಡಿಜಿಟಲ್ ಇಂಟರ್ಫೇಸ್ ಅನ್ನು ಒಳಗೊಂಡಿದೆ. ಹೆಚ್ಚಿನ ಗಳಿಕೆ, ಕಡಿಮೆ ಚಾಲನಾ ವೆಚ್ಚಗಳು, ಚಾಲಕರು ಮತ್ತು ಫ್ಲೀಟ್ ಮಾಲೀಕರಿಗೆ ಹೆಚ್ಚಿನ ಲಾಭವನ್ನು ತಂದುಕೊಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಈ ವಾಹನವು 60 ಕಿ.ಮೀ ಟಾಪ್ ಸ್ಪೀಡ್ ಮತ್ತು ಒಂದೇ ಚಾರ್ಜ್‌ನಲ್ಲಿ 170 ಕಿ.ಮೀ (ಡ್ರೈವರ್+3 ಪ್ರಯಾಣಿಕರು) ನಿಜವಾದ ರೇಂಜ್‌ನೊಂದಿಗೆ, ನಗರ ಮತ್ತು ಅರೆ-ನಗರ ಪ್ರಯಾಣ ಎರಡಕ್ಕೂ ವಿಶ್ವಾಸಾರ್ಹ ದೈನಂದಿನ ಕಾರ್ಯಾಚರಣೆಗಳನ್ನು ಖಚಿತಪಡಿಸುತ್ತದೆ. 330 ಕೆ.ಜಿ ವರೆಗಿನ ಪೇಲೋಡ್ ಕೆಪಾಸಿಟಿ ಮತ್ತು 12° ವರೆಗಿನ ಕ್ಲೈಂಬಿಂಗ್ ಇಳಿಜಾರುಗಳಲ್ಲಿ ಮುನ್ನುಗ್ಗುವಂತಹ ದೃಢವಾದ ಸಾಮರ್ಥ್ಯವನ್ನು ಹೊಂದಿದೆ.

greaves-electric-eltra-city-xtra-3-wheeler-sets-new-national-record

12 ಇಂಚಿನ ರೇಡಿಯಲ್ ಟೈರ್‌ಗಳನ್ನು ಹೊಂದಿದ್ದು, ಸವಾರಿ ಗುಣಮಟ್ಟವನ್ನು ಹೆಚ್ಚಿಸುತ್ತವೆ. BLE ಸಂಪರ್ಕದೊಂದಿಗೆ 6.2 ಇಂಚಿನ PMVA ಡಿಜಿಟಲ್ ಕ್ಲಸ್ಟರ್ ಚಾಲಕರಿಗೆ ರಿಯಲ್-ಟೈಮ್ ಎಚ್ಚರಿಕೆಗಳು, ಸಂಚರಣೆ ಮತ್ತು ಬ್ಯಾಟರಿ ಖಾಲಿಯಾಗುವ ಇಂಡಿಕೇಷನ್‌ಗಳೊಂದಿಗೆ ಮಾಹಿತಿಯನ್ನು ನೀಡುತ್ತದೆ. ಗರಿಷ್ಠ 9.5 kW ಮೋಟಾರ್ ಮತ್ತು 10.75 kWh IP67-ರೇಟೆಡ್ LFP ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ.

ಪೂರ್ಣ ಚಾರ್ಜ್ ಆಗಲು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. 5 ವರ್ಷ ಅಥವಾ 1.2 ಲಕ್ಷ ಕಿಲೋಮೀಟರ್ ಬ್ಯಾಟರಿ ವಾರೆಂಟಿ, 3 ವರ್ಷ ಅಥವಾ 80,000 ಕಿಲೋಮೀಟರ್ ವಾಹನ ವಾರೆಂಟಿಯಿಂದ ಬೆಂಬಲಿತವಾದ ಎಲ್ಟ್ರಾ ಸಿಟಿ XTRA ಅನ್ನು ದೀರ್ಘಾವಧಿಯ ವಿಶ್ವಾಸಾರ್ಹತೆ ಮತ್ತು ಚಿಂತೆಯಿಲ್ಲದ EV ಮಾಲೀಕತ್ವದ ಪ್ರಯಾಣಕ್ಕಾಗಿ ನಿರ್ಮಿಸಲಾಗಿದೆ ಎಂದು ಕಂಪನಿ ಹೇಳಿದೆ.

greaves-electric-eltra-city-xtra-3-wheeler-sets-new-national-record

ವಾಹನದ 324 ಕಿಲೋಮೀಟರ್ ಯಶಸ್ವಿ ಪ್ರಯಾಣದ ಬಗ್ಗೆ ಮಾತನಾಡಿದ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿಯ ಮುಖ್ಯ ವ್ಯವಹಾರ ಅಧಿಕಾರಿ ಮನೋಜ್ ಎಂ.ಪಿ "ಇದು ದಾಖಲೆಗಿಂತ ಹೆಚ್ಚಿನದು - ದೈನಂದಿನ ಉದ್ಯಮಿಗಳಿಗೆ ವಿಶ್ವಾಸಾರ್ಹ, ಹೆಚ್ಚಿನ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುವ ನಮ್ಮ ಬದ್ಧತೆಯ ಪುನರುಚ್ಚರಣೆಯಾಗಿದೆ." "ನಾವೀನ್ಯತೆ, ಸುರಕ್ಷತೆ ಮತ್ತು ಕೈಗೆಟುಕುವಿಕೆಯ ಭರವಸೆ ಹೆಚ್ಚಿಸುತ್ತಿದ್ದೇವೆ" ಎಂದು ಹೇಳಿದರು.

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿಯ ಎಂಡಿ ವಿಕಾಸ್ ಸಿಂಗ್ ಮಾತನಾಡಿ " ಇದು ದೂರದ ಬಗ್ಗೆ ಅಲ್ಲ - ಇದು ಪ್ರಭಾವದ ಬಗ್ಗೆ. ಭಾರತದ ಹಸಿರು ಗುರಿಗಳನ್ನು ಬೆಂಬಲಿಸುವ ನಮ್ಮ ವಾಹನಗಳು ಜೀವನೋಪಾಯವನ್ನು ಹೇಗೆ ಸಬಲೀಕರಣಗೊಳಿಸುತ್ತಿವೆ ಎಂಬುದನ್ನು ತೋರಿಸುತ್ತದೆ. ಎಲ್ಟ್ರಾ ಸಿಟಿ XTRA ವಾಹನವನ್ನು ನಾಳೆಯ ರಸ್ತೆಗಳಿಗಾಗಿ ಇಂದೇ ನಿರ್ಮಿಸಲಾಗಿದೆ" ಎಂದರು.

More from DriveSpark

Article Published On: Wednesday, July 23, 2025, 18:17 [IST]
English summary
Greaves electric eltra city xtra 3 wheeler sets new national record
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+