Hero: ಕೇವಲ 20 ದಿನ ಬಾಕಿ: ಜುಲೈ 1 ರಂದು ಎರಡು ಹೀರೋ ಸ್ಕೂಟರ್‌ಗಳು ಬಿಡುಗಡೆಗೆ ಸಜ್ಜು

ಹೀರೋ (Hero) ಕಂಪನಿಯು ಭಾರತದಲ್ಲಿ ತನ್ನ ವೇಗವನ್ನು ಹೆಚ್ಚಿಸಿದೆ. ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ, ಪ್ರತಿಸ್ಪರ್ಧಿಗಳ ಪೈಪೋಟಿ ಎದುರಿಸಲು ಆಧುನಿಕ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಜುಲೈ 1 ರಂದು ವಿಡಾ ಝಡ್ ಮತ್ತು ವಿಡಾ ವಿಎಕ್ಸ್ 2 ಎಂಬ ಎರಡು ಹೊಸ ಮಾಡಲ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗುತ್ತಿರುವುದು ತಿಳಿದುಬಂದಿದೆ. ಈ ಹೊಸ ಸ್ಕೂಟರ್‌ಗಳ ರೇಂಜ್, ಫೀಚರ್ಸ್ ಮತ್ತು ಬೆಲೆ ಬಗ್ಗೆ ನಮಗಿರುವ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಮೇ ತಿಂಗಳಲ್ಲಿ, ಹೀರೋ ಕಂಪನಿಯು 7,165 ವಿಡಾ ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಉತ್ತಮ ಫೀಚರ್ಸ್ ಹಾಗೂ ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ಕಾರಣ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 74,000 ರೂ.ಗಳಿಂದ 1.20 ಲಕ್ಷರೂ.ಗಳ (ಎಕ್ಸ್‌ ಶೋರೂಂ ಬೆಲೆಗಳು) ನಡುವೆ ಬೆಲೆಯನ್ನು ಹೊಂದಿರುವ ವಿಡಾ ವಿ2 ಶ್ರೇಣಿಯು ಗ್ರಾಹಕರ ಆಸಕ್ತಿಯನ್ನು ಆಕರ್ಷಿಸಿದೆ. ಹಾಗಾಗಿಯೇ ಗ್ರಾಹಕರಿಗೆ ಮತ್ತಷ್ಟು ಹೊಸ ಇವಿಗಳನ್ನು ಪರಿಚಯಿಸಲು ಸಿದ್ಧವಾಗಿದೆ.

hero-planning-to-launch-2-new-electric-scooters-on-july-1st

ಜುಲೈ 1 ರಂದು ಹೊಸ ಸ್ಕೂಟರ್‌ಗಳ ಬಿಡುಗಡೆ

ಹೀರೋ ಜುಲೈ 1 ರಂದು ವಿಡಾ ಬ್ರಾಂಡ್ ಅಡಿಯಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಅಧಿಕೃತವಾಗಿ ಘೋಷಣೆ ಮಾಡದಿದ್ದರೂ, ಮಾಧ್ಯಮ ವರದಿಗಳು ಈ ಹೊಸ ಮಾದರಿಗಳನ್ನು ವಿಡಾ ಝಡ್ ಮತ್ತು ವಿಡಾ ವಿಎಕ್ಸ್ 2 ಎಂದು ಹೆಸರಿಸಬಹುದು ಎಂದು ಹೇಳಲಾಗುತ್ತಿದೆ. ಇವು ಹೈ - ಪರ್ಫಾಮೆನ್ಸ್‌ಗಾಗಿ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್ ಸಹ ಹೊಂದಿರಲಿವೆ ಎಂದು ನಿರೀಕ್ಷಿಸಲಾಗಿದೆ.

ಹೊಸ ಸ್ಕೂಟರ್‌ಗಳು ದೊಡ್ಡ 4.4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಉತ್ತಮ ಪರ್ಫಾಮೆನ್ಸ್ ಮತ್ತು ದೀರ್ಘ ಪ್ರಯಾಣದ ಭರವಸೆ ನೀಡಲಿವೆ. ಆಕರ್ಷಕ ಬಣ್ಣಗಳ ಆಯ್ಕೆಯೊಂದಿಗೆ ಈ ಬಾರಿ ಯುವ ಖರೀದಿದಾರರನ್ನು ಮತ್ತಷ್ಟು ಆಕರ್ಷಿಸಲಿವೆ. ಸ್ಟೈಲಿಶ್ ಡಿಸೈನ್, ಹೆಚ್ಚಿನ ಪರ್ಫಾಮೆನ್ಸ್ ಮತ್ತು ಕೈಗೆಟುಕುವ ಇವಿಗಳನ್ನು ಬಯಸುವ ವ್ಯಾಪಕ ಶ್ರೇಣಿಯ ಗ್ರಾಹಕರಿಗೆ ಇವು ಸೂಕ್ತವಾಗಿರಲಿವೆ.

hero-planning-to-launch-2-new-electric-scooters-on-july-1st

ಹೀರೋ ವಿಡಾ ವಿಎಕ್ಸ್ 2 ಅನೇಕ ವೇರಿಯೆಂಟ್‌ಗಳಲ್ಲಿ ಬರುವ ನಿರೀಕ್ಷೆಯಿದೆ, ಬೆಲೆ ಸುಮಾರು 1 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಹಾಗೆಯೇ ವಿಡಾ ಝಡ್ ಕೂಡ ಹೆಚ್ಚು ಕೈಗೆಟುಕುವ ಆವೃತ್ತಿಯಾಗಿರಲಿದೆ ಎಂದು ವರದಿಗಳು ತಿಳಿಸಿವೆ. ಈ ಸ್ಕೂಟರ್, ಪ್ರಸ್ತುತ ಮಾರಾಟದಲ್ಲಿರುವ ವಿ 2 ಸರಣಿಯ ಮೂಲ ಮಾದರಿಗಿಂತ ಕಡಿಮೆ ಬೆಲೆಯನ್ನು ಹೊಂದಿರುವ ಸಾಧ್ಯತೆ ಇದೆ.

ಸದ್ಯ ಮಾರಾಟದಲ್ಲಿರುವ ವಿಡಾ ವಿ 2 ಸ್ಕೂಟರ್ ಗಳು 2.2 ಕಿಲೋವ್ಯಾಟ್ ನಿಂದ 3.94 ಕಿಲೋವ್ಯಾಟ್ ವರೆಗಿನ ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತವೆ. ಪೂರ್ಣ ಚಾರ್ಜ್ ನಲ್ಲಿ 94 ಕಿ.ಮೀ ನಿಂದ 165 ಕಿ.ಮೀ ರೇಂಜ್ ನೀಡುತ್ತವೆ. ಮುಂಬರಲಿರುವ ಹೊಸ ಸ್ಕೂಟರ್‌ಗಳನ್ನು ಇನ್ನೂ ಹೆಚ್ಚಿನ ರೇಂಜ್ ಮತ್ತು ಅತ್ಯಾಧುನಿಕ ಫೀಚರ್ಸ್ ನೀಡುವತ್ತ ಹೀರೋ ಗಮನಹರಿಸಿದೆ.

hero-planning-to-launch-2-new-electric-scooters-on-july-1st

ಈ ಪ್ರವೃತ್ತಿಯು ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡುವ ಮೂಲಕ, ಗ್ರಾಹಕರ ವಿಕಸನಗೊಳ್ಳುತ್ತಿರುವ ನಿರೀಕ್ಷೆಗಳನ್ನು ಪೂರೈಸುವ ಗುರಿಯನ್ನು ಹೀರೋ ಹೊಂದಿದೆ. ಅಲ್ಲದೇ ಹೊಸ ಇವಿ ಪೈಪೋಟಿದಾರರಿಗಿಂತ ಉತ್ತಮ ಆಯ್ಕೆಯಾಗಲು ತಮ್ಮ ಸ್ಕೂಟರ್‌ಗಳನ್ನು ಇನ್ನಷ್ಟು ಆಧುನಿಕವಾಗಿ ನೀಡಲು ಹೀರೋ ಪ್ರಯತ್ನಿಸುತ್ತರುವುದಾಗಿ ತಿಳಿದುಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, June 11, 2025, 13:16 [IST]
English summary
Hero planning to launch 2 new electric scooters on july 1st
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+