ಕಾರಿನಂತಹ ಫೀಚರ್ಸ್.. ಈ ಅಗ್ಗದ Hero Scooter ಬಿಡುಗಡೆಯಾಗಿ ಹಲವು ತಿಂಗಳಾಗಿವೆ: ಡೆಲಿವರಿಗೆ ಕಾಲ ಕೂಡಿ ಬಂತು!

ಹೀರೋ ಮೋಟೋಕಾರ್ಪ್ (Hero MotoCorp), ಪ್ರಮುಖ ದ್ವಿಚಕ್ರ ವಾಹನ (Two-Wheeler) ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಹೊಚ್ಚ ಹೊಸ 'ಜೂಮ್ 160' ಸ್ಕೂಟರ್‌ನ್ನು ಅದ್ದೂರಿಯಾಗಿ ಮಾರಾಟಕ್ಕೆ ತಂದಿತ್ತು. ಇದು ಹಲವು ಹೊಸತನಗಳಿಗೆ ಸಾಕ್ಷಿಯಾಗಿದೆ. ಆದರೆ, ಈ ಸ್ಕೂಟರ್ ಬಿಡುಗಡೆಯಾಗಿ ಹಲವು ತಿಂಗಳು ಉರುಳಿದರೂ ಗ್ರಾಹಕರಿಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿರಲಿಲ್ಲ. ಇದೀಗ ಅಂತಿಮವಾಗಿ 'ಜೂಮ್ 160' ಡೆಲಿವರಿಗೆ ಮಹೂರ್ತ ನಿಗದಿಯಾಗಿದೆ.

ಎಲ್ಲವು ಅಂದುಕೊಂಡಂತೆ ನಡೆದರೆ, ನೂತನ ಹೀರೋ ಜೂಮ್ 160 (Hero Xoom 160) ಸ್ಕೂಟರ್‌ನ ವಿತರಣೆಗಳು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಸ್ಕೂಟರ್‌ನ್ನು ಗ್ರಾಹಕರಿಗೆ ತಲುಪಿಸುವ ಕಾರ್ಯಕ್ಕೆ ಏಪ್ರಿಲ್‌ನಲ್ಲೇ ಚಾಲನೆ ನೀಡಬೇಕಾಗಿತ್ತು. ಆದರೆ, ನಾನಾ ಕಾರಣಗಳಿಗೆ ಅದು ತಡವಾಗಿದೆ.

Hero Xoom 160 scooter Deliveries Likely Begin In August Details

ಇವರೆಗೂ 'ಜೂಮ್ 160' ಸ್ಕೂಟರ್‌ನ್ನು ಡೀಲರ್‌ಶಿಪ್‌ಗಳಿಗೂ ಕಂಪನಿ ತಲುಪಿಸಲಾಗಿಲ್ಲ. ಈ ಕಾರಣಕ್ಕೆ ಬುಕ್ಕಿಂಗ್‌ನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ. ಅದರ ಹೊರತಾಗಿಯೂ ಶೋರೂಂ ಸಿಬ್ಬಂದಿಗೆ ನೂತನ ಸ್ಕೂಟರ್‌ನ ಮಾರಾಟ ಸೇವೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ತರಬೇತಿ ನೀಡುವುದಕ್ಕೆ ಪ್ರಾರಂಭ ಮಾಡಲಾಗಿದೆ ಎಂಬ ವಿಚಾರವು ಬಹಿರಂಗಗೊಂಡಿದೆ.

ಬಹುತೇಕ ಆಗಸ್ಟ್ ವೇಳೆಗೆ ಹೊಸ 'ಹೀರೋ ಜೂಮ್ 160' ಸ್ಕೂಟರ್‌, ದೇಶಾದ್ಯಂತ ಡೀಲರ್‌ಶಿಪ್‌ಗಳಿಗೆ ಬರಲಿದೆ. ಅತಿ ಶೀಘ್ರದಲ್ಲೇ ಕಂಪನಿಯು ಮೊದಲ ಬ್ಯಾಚ್‌ನ ಸ್ಕೂಟರ್‌ಗಳ ವಿತರಣೆ ಶುರು ಮಾಡಲಾಗಿದೆ ಎಂದು ಹೇಳಲಾಗಿದೆ. ಆ ಬಳಿಕವಷ್ಟೇ ಬುಕ್ಕಿಂಗ್‌ ಪ್ರಕ್ರಿಯೆ ಪುನರಾರಂಭಗೊಳ್ಳುವ ಸಾಧ್ಯತೆಯಿದೆ.

Hero Xoom 160 scooter Deliveries Likely Begin In August Details

ಹೀರೋ ಜೂಮ್ 160 ವಿಶೇಷತೆಗಳೇನು..

ಇದೊಂದು ಪ್ರೀಮಿಯಂ ಮ್ಯಾಕ್ಷಿ ಸ್ಕೂಟರ್ ಆಗಿದೆ. ಆದರೂ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.1.48 ಲಕ್ಷ (ಎಕ್ಸ್- ಶೋರೂಂ) ದರವನ್ನು ಪಡೆದಿದೆ. ಈ ಸ್ಕೂಟರ್ ಹೆಚ್ಚು ಅತ್ಯುತ್ತಮವಾದ ವಿನ್ಯಾಸ ಹೊಂದಿದೆ. ವಿಂಡ್‌ಸ್ಕ್ರೀನ್‌ ಹಾಗೂ ಸ್ಪ್ಲಿಟ್ ಎಲ್ಇಡಿ ಹೆಡ್‌ಲೈಟ್‌ನ್ನು ಒಳಗೊಂಡಿದೆ.

ನೂತನ 'ಜೂಮ್ 160' ಸ್ಕೂಟರ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. ಇದು 156 ಸಿಸಿ ಸಿಂಗಲ್ - ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 14 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 13.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಸದ್ಯ ಈ ಸ್ಕೂಟರ್‌ನ ಇಂಧನ ದಕ್ಷತೆ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. 40 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ.

Hero Xoom 160 scooter Deliveries Likely Begin In August Details

ಈ ಸ್ಕೂಟರ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್‌, ಐ3ಎಸ್ ಸಿಸ್ಟಮ್, ಸೈಲೆಂಟ್ ಸ್ಟಾರ್ಟರ್, ಕೀ-ಲೆಸ್ ಇಗ್ನಿಷನ್ ಮತ್ತು ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯನ್ನು ಹೊಂದಿದೆ. ಸವಾರರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ & ಹಿಂದೆ (ರೇರ್) ಟ್ವಿನ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಡುಯಲ್ ಡಿಸ್ಕ್ ಬೈಕ್‌ಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, June 8, 2025, 8:54 [IST]
English summary
Hero xoom 160 scooter deliveries likely begin in august details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+