ದಸರಾಗೆ GST ಸುಧಾರಣೆ: ಕಾರುಗಳ ಮೇಲೆ 1.2 ಲಕ್ಷ ಕಡಿತ ಘೋಷಿಸಿದ ಹೋಂಡಾ

ಪ್ರಮುಖ ಕಾರು ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), GST ಸುಧಾರಣೆಗಳು ಇಂದಿನಿಂದ (22 ಸೆಪ್ಟೆಂಬರ್) ಜಾರಿಗೆ ಬರುವ ತನ್ನ ಪರಿಷ್ಕೃತ ಬೆಲೆಗಳನ್ನು ಪ್ರಕಟಿಸಿದೆ. ಇತ್ತೀಚೆಗೆ ಘೋಷಿಸಲಾದ GST ಸುಧಾರಣೆಗಳು 2025 ರ ಸಂಪೂರ್ಣ ಪ್ರಯೋಜನಗಳನ್ನು ತನ್ನ ಗ್ರಾಹಕರಿಗೆ ವರ್ಗಾಯಿಸುವ ಬಗ್ಗೆ ಹೋಂಡಾ ಈ ಹಿಂದಿಯೇ ಘೋಷಿಸಿತ್ತು, ಇದೀಗ ಖಚಿತಪಡಿಸಿರುವುದಾಗಿ ಕಂಪನಿ ಪ್ರಕಟಿಸಿದೆ. ಇದು ಹಬ್ಬದ ಋತುವಿನ ಮೊದಲು ಹೋಂಡಾದ ಮೆಚ್ಚುಗೆ ಪಡೆದ ಕಾರುಗಳನ್ನು ಇನ್ನಷ್ಟು ಆಕರ್ಷಕ ಕೊಡುಗೆಯನ್ನಾಗಿ ಮಾಡಲಿದೆ. ಯಾವ ಹೋಂಡಾ ಕಾರಿನ ಮೇಲೆ ಎಷ್ಟು ಬೆಲೆ ಇಳಿಕೆಯಾಗಿದೆ ಬನ್ನಿ ನೋಡೋಣ.

ಹೋಂಡಾ ಅಮೇಜ್: ಪರಿಷ್ಕೃತ ಬೆಲೆಯು ಜನಪ್ರಿಯ ಹೋಂಡಾ ಅಮೇಜ್‌ನ ಸಂಪೂರ್ಣ ಎಲ್ಲಾ ವೇರಿಯೆಂಟ್‌ಗಳನ್ನು ಈಗ ರೂ. 10 ಲಕ್ಷದೊಳಗೆ ಲಭ್ಯವಿದೆ ಎಂದು ತೋರಿಸುತ್ತದೆ. ಇದರ ಎಕ್ಸ್ - ಶೋರೂಂ ಬೆಲೆಗಳು ಬೇಸ್‌ ವೇರಿಯೆಂಟ್‌ಗೆ ರೂ. 6,97,700 ದಿಂದ ಆರಂಭವಾಗಿ ಟಾಪ್ ವೇರಿಯೆಂಟ್‌ಗೆ ರೂ. 9,99,900 ವರೆಗೆ ಇದೆ. ಈಗ ಹೋಂಡಾ ಅಮೇಜ್ ವ್ಯಾಪಕ ಶ್ರೇಣಿಯ ಗ್ರಾಹಕರಿಗೆ ಆಕರ್ಷಕ ಆಯ್ಕೆಯಾಗಿದೆ.

honda-cars-india-announces-its-car-prices-post-gst-reforms-2025

3ನೇ ತಲೆಮಾರಿನ ಹೋಂಡಾ ಅಮೇಜ್ ಬೇಸ್‌ ವೇರಿಯೆಂಟ್ ಮೇಲೆ ರೂ. 69,100 ದಿಂದ ಟಾಪ್ ವೇರಿಯೆಂಟ್ ಮೇಲೆ ರೂ. 1,20,000 ವರೆಗೆ ಇಳಿಕೆಯಾಗಿದೆ. ಹಾಗೆಯೇ 2ನೇ ತಲೆಮಾರಿನ ಹೋಂಡಾ ಅಮೇಜ್ ಬೇಸ್ ವೇರಿಯೆಂಟ್ ಮೇಲೆ ರೂ. 65,100 ದಿಂದ ಟಾಪ್ ವೇರಿಯೆಂಟ್ ಮೇಲೆ ರೂ. 72,800 ರವರೆಗೆ ಬೆಲೆ ಇಳಿಕೆಯಾಗಿದೆ ಎಂದು ಹೋಂಡಾ ಅಧಿಕೃತವಾಗಿ ಘೋಷಿಸಿದೆ.

ಹೋಂಡಾ ಎಲಿವೇಟ್: ಹೋಂಡಾ ಎಲಿವೇಟ್ ಕೂಡ ಆಕರ್ಷಕ ಬೆಲೆ ಇಳಿಕೆಯಾಗಿದ್ದು, ಈಗ ಬೇಸ್‌ ವೇರಿಯೆಂಟ್ ರೂ. 10,99,900 (ಎಕ್ಸ್ - ಶೋ ರೂಂ) ದಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಟಾಪ್ ವೇರಿಯೆಂಟ್ ಬೆಲೆಯು ರೂ. 16,34,600 (ಎಕ್ಸ್ - ಶೋ ರೂಂ) ಇದೆ. ಈ ಬೆಲೆ ನಿಗದಿಯು ಮಧ್ಯಮ ಗಾತ್ರದ SUV ವಿಭಾಗದಲ್ಲಿ ಎಲಿವೇಟ್ ಅನ್ನು ಅಸಾಧಾರಣವಾದ ಮೌಲ್ಯಕ್ಕೆ ತಕ್ಕ ಕಾರನ್ನಾಗಿ ಮಾಡುತ್ತದೆ.

honda-cars-india-announces-its-car-prices-post-gst-reforms-2025

ಹೋಂಡಾ ಎಲಿವೇಟ್ ಗ್ರಾಹಕರಿಗೆ ದಿಟ್ಟ ವಿನ್ಯಾಸ, ವಿಶಾಲವಾದ ಕ್ಯಾಬಿನ್ ಮತ್ತು ಸುಧಾರಿತ ವೈಶಿಷ್ಟ್ಯಗಳ ಪರಿಪೂರ್ಣ ಸಂಯೋಜನೆಯನ್ನು ನೀಡುತ್ತದೆ. ಹೋಂಡಾ ಎಲಿವೇಟ್ ಬೆಲೆ ಇಳಿಕೆ ವಿಷಯಕ್ಕೆ ಬಂದರೆ, ಬೇಸ್‌ ವೇರಿಯೆಂಟ್ ಮೇಲೆ ರೂ. 42,800 ಕಡಿವಾಗಿದ್ದು, ಟಾಪ್ ವೇರಿಯೆಂಟ್ ಮೇಲೆ ರೂ. 91,100 ವರೆಗೆ ಇಳಿಕೆಯಾಗಿದೆ ಎಂದು ಕಂಪನಿ ಅಧಿಕೃತವಾಗಿ ಘೋಷಿಸಿದೆ.

ಹೋಂಡಾ ಸಿಟಿ: ಜಿಎಸ್‌ಟಿ ಸುಧಾರಣೆಗಳ ಪ್ರಯೋಜನಗಳನ್ನು ಹೋಂಡಾ ಸಿಟಿಗೂ ವಿಸ್ತರಿಸಲಾಗಿದೆ. ಬೇಸ್‌ ವೇರಿಯೆಂಟ್ ಮೇಲೆ ರೂ. 41,790 ರಿಂದ ಟಾಪ್ ವೇರಿಯೆಂಟ್ ಮೇಲೆ ರೂ. 57,500 ವರೆಗಿನ ಬೆಲೆ ಕಡಿತದೊಂದಿಗೆ ಹೋಂಡಾ ಸಿಟಿ ಈಗ ರೂ. 11,95,300 (ಎಕ್ಸ್ - ಶೋರೂಂ) ದಿಂದ ಬೆಲೆಗಳು ಪ್ರಾರಂಭವಾಗುತ್ತವೆ. ಪ್ರೀಮಿಯಂ ವೈಶಿಷ್ಟ್ಯಗಳು, ಅತ್ಯಾಧುನಿಕ ವಿನ್ಯಾಸ ಮತ್ತು ಉಲ್ಲಾಸಕರ ಪರ್ಫಾಮೆನ್ಸ್ ನೀಡುವ ಈ ಕಾರು ಇನ್ನಷ್ಟು ಅಗ್ಗವಾಗಿದೆ.

honda-cars-india-announces-its-car-prices-post-gst-reforms-2025

ಈ ಕುರಿತು ಮಾತನಾಡಿದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಮಾರಾಟದ ಉಪಾಧ್ಯಕ್ಷ ಕುನಾಲ್ ಬೆಹ್ಲ್, "ಜಿಎಸ್‌ಟಿ ಸುಧಾರಣೆಗಳು 2025 ರ ನಂತರ ನಮ್ಮ ಸಂಪೂರ್ಣ ಮಾದರಿ ಶ್ರೇಣಿಗೆ ಹೊಸ ಬೆಲೆಗಳನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಜಿಎಸ್‌ಟಿ ಪ್ರಯೋಜನಗಳ ಜೊತೆಗೆ, ಡಿಸೆಂಬರ್ 25 ರವರೆಗೆ ಸೀಮಿತ ಅವಧಿಗೆ ಮಾಡಲ್‌ಗಳನ್ನು ಹೆಚ್ಚು ಆಕರ್ಷಕವಾಗಿಸಲು ಕಾರ್ಯತಂತ್ರದ ಬೆಲೆಯನ್ನು ನಿಗದಿಪಡಿಸಲಾಗಿದೆ.

ಇದು ಈ ಹಬ್ಬದ ಋತುವಿನಲ್ಲಿ ನಮ್ಮ ಗ್ರಾಹಕರಿಗೆ ಸಾಟಿಯಿಲ್ಲದ ಮೌಲ್ಯವನ್ನು ನೀಡುತ್ತದೆ. ಈ ಕ್ರಮವು ಬಲವಾದ ಬೇಡಿಕೆಗೆ ವೇಗವರ್ಧಕವಾಗಲಿದೆ ಮತ್ತು ಹೆಚ್ಚಿನ ಗ್ರಾಹಕರು ಹೋಂಡಾದ ವಿಶ್ವ ದರ್ಜೆಯ ಗುಣಮಟ್ಟ ಮತ್ತು ಕಾರ್ಯಕ್ಷಮತೆಯನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ ಎಂಬ ನಮಗೆ ವಿಶ್ವಾಸವಿದೆ ಎಂದು ಉಪಾಧ್ಯಕ್ಷ ಕುನಾಲ್ ಬೆಹ್ಲ್ ಹೇಳಿದರು.

More from DriveSpark

Article Published On: Tuesday, September 23, 2025, 16:11 [IST]
English summary
Honda cars india announces its car prices post gst reforms 2025
Read more on honda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+