ಮಾರುಕಟ್ಟೆ ಶೇಕ್ ಮಾಡಿದ ಹೋಂಡಾ ಕಾರುಗಳು... ಸೇಫ್ಟಿಗೂ ಸೈ, ಮೈಲೇಜ್‌ಗೂ ಸೈ: ಮುಗಿಬಿದ್ದು ಖರೀದಿ

ಭಾರತದಲ್ಲಿ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), ನವೆಂಬರ್ 2025 ರಲ್ಲಿ ದೇಶೀಯವಾಗಿ 5,204 ಯುನಿಟ್‌ ಕಾರುಗಳ ಮಾರಾಟವನ್ನು ದಾಖಲಿಸಿದೆ. ಕಂಪನಿಯು 1,984 ಯುನಿಟ್‌ ಕಾರುಗಳನ್ನು ಹೊರ ದೇಶಗಳಿಗೆ ರಫ್ತು ಮಾಡಿದೆ, ಇದರಿಂದಾಗಿ ತಿಂಗಳ ಒಟ್ಟು ಮಾರಾಟವು 7,188 ಯುನಿಟ್‌ ಕಾರುಗಳಿಗೆ ತಲುಪಿದೆ. ಮುಂಬರುವ ದಿನಗಳಲ್ಲಿ ವರ್ಷಾಂತ್ಯದ ಮಾರಾಟದ ಉತ್ತೇಜನವನ್ನು ಲಾಭ ಮಾಡಿಕೊಳ್ಳುವ ಗುರಿಯನ್ನು ಹೋಂಡಾ ಹೊಂದಿದೆ. ಡಿಸೆಂಬರ್ ತಿಂಗಳಿನಲ್ಲಿ ಕಾರುಗಳ ಉತ್ತಮ ಮಾರಾಟ ಕಾಣುವ ನಿರೀಕ್ಷೆಯಲ್ಲಿದೆ.

ಹೋಂಡಾದ ಕಾರುಗಳು ಬಾಳಿಕೆ, ವಿಶ್ವಾಸಾರ್ಹತೆ, ಸುರಕ್ಷತೆ ಮತ್ತು ಇಂಧನ - ದಕ್ಷತೆಯ ಸ್ಥಾಪಿತ ಗುಣಗಳನ್ನು ಹೊಂದಿವೆ. ಆಕರ್ಷಕ ವಿನ್ಯಾಸ ಮತ್ತು ತಂತ್ರಜ್ಞಾನದೊಂದಿಗೆ ಭಾರತದಲ್ಲಿ ಬಲವಾದ ಬೇಡಿಕೆ ಪಡೆದಿವೆ. ಜೊತೆಗೆ ಕಂಪನಿಯು ದೇಶಾದ್ಯಂತ ಬಲವಾದ ಮಾರಾಟ ಮತ್ತು ವಿತರಣಾ ಜಾಲವನ್ನು ಹೊಂದಿದೆ. ಹಾಗಾಗಿ ಕಂಪನಿಯ ಕಾರುಗಳು ದೇಶದಲ್ಲಿ ಉತ್ತಮ ಮಾರಾಟ ಕಾಣುತ್ತವೆ.

honda-cars-india-registers-total-sales-of-7188-units-in-november-2025

ನವೆಂಬರ್ 2025 ರಲ್ಲಿ ಹೋಂಡಾ ಅಮೇಜ್, ಸಿಟಿ ಮತ್ತು ಎಲಿವೇಟ್‌ನಂತಹ ಜನಪ್ರಿಯ ಮಾಡಲ್‌ಗಳು ಪ್ರಾಬಲ್ಯವನ್ನು ತೋರಿಸಿವೆ, ಇವು ಒಟ್ಟಾರೆಯಾಗಿ ಮಾರಾಟದ ಪ್ರಮಾಣದಲ್ಲಿ ಪ್ರಮುಖ ಪಾಲನ್ನು ನೀಡಿವೆ. ಕಾಂಪ್ಯಾಕ್ಟ್ ಸೆಡಾನ್‌ಗಳು ಮತ್ತು SUV ಗಳ ಮೇಲೆ ಹೋಂಡಾದ ಕಾರ್ಯತಂತ್ರದ ಗಮನವು ವಿಶ್ವಾಸಾರ್ಹತೆ, ದಕ್ಷತೆ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ಹುಡುಕುತ್ತಿರುವ ಭಾರತೀಯ ಗ್ರಾಹಕರೊಂದಿಗೆ ಚೆನ್ನಾಗಿ ಪ್ರತಿಧ್ವನಿಸಿದೆ.

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಮಾರಾಟ ವಿಭಾಗದ ಉಪಾಧ್ಯಕ್ಷ ಕುನಾಲ್ ಬೆಹ್ಲ್ ಮಾತನಾಡಿ, "ನವೆಂಬರ್ ತಿಂಗಳಿನಲ್ಲಿ ಸಕಾರಾತ್ಮಕ ಬೇಡಿಕೆಯ ವೇಗವು ಇತ್ತೀಚಿನ GST ಸುಧಾರಣೆಗಳಿಂದ ಬೆಂಬಲಿತವಾದ ಬಲವಾದ ಗ್ರಾಹಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಮುಂಬರುವ ತಿಂಗಳುಗಳಲ್ಲಿ ಈ ಪ್ರವೃತ್ತಿ ಮುಂದುವರಿಯುತ್ತದೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು.

honda-cars-india-registers-total-sales-of-7188-units-in-november-2025

ಹೋಂಡಾ ಅಮೇಜ್‌ಗೆ 5 - ಸ್ಟಾರ್ ರೇಟಿಂಗ್: "ನವೆಂಬರ್‌ನಲ್ಲಿ ಹೋಂಡಾ ಅಮೇಜ್ ಭಾರತ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆಯಲ್ಲಿ 32ಕ್ಕೆ 28.33 ಅಂಕಗಳನ್ನು ಪಡೆದಿದೆ. ಇದರೊಂದಿಗೆ ಈ ವಿಭಾಗದಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆದಿದೆ. ಮಕ್ಕಳ ರಕ್ಷಣೆಯಲ್ಲಿ 49ಕ್ಕೆ 40.81 ಅಂಕಗಳನ್ನು ಗಳಿಸಿದ್ದು, 4 - ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆದುಕೊಂಡಿದೆ.

ಹೋಂಡಾ ಅಮೇಜ್ ಸಹ ಪ್ರಯಾಣಿಕರಿಗೂ ಹೆಚ್ಚಿನ ರಕ್ಷಣೆ ಒದಗಿಸಬಲ್ಲದು. 6 ಏರ್‌ಬ್ಯಾಗ್‌ಗಳು, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 3 - ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಒಳಗೊಂಡಿದೆ. ಈ ಮೂಲಕ 3ನೇ ತಲೆಮಾರಿನ ಹೋಂಡಾ ಅಮೇಜ್ 5 - ಸ್ಟಾರ್ BNCAP ರೇಟಿಂಗ್ ಅನ್ನು ಪಡೆದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದೇವೆ.

honda-cars-india-registers-total-sales-of-7188-units-in-november-2025

ಹೋಂಡಾ ಅಮೇಜ್ ಉನ್ನತ ಸುರಕ್ಷತಾ ಮಾನದಂಡಗಳಿಗೆ ಕಂಪನಿಯ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ಪ್ರಮಾಣೀಕರಣ ಮತ್ತು ನಮ್ಮ ವಿಭಾಗ - ಶ್ರೇಷ್ಠ ಹೋಂಡಾ ಸೆನ್ಸಿಂಗ್ (ADAS) ನೊಂದಿಗೆ, ಅಮೇಜ್ ಸುರಕ್ಷಿತ ಮತ್ತು ವಿಶ್ವಾಸಾರ್ಹ ಕುಟುಂಬ ಕಾರು ಎಂಬ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ. ಮುಂಬರುವ ದಿನಗಳಲ್ಲಿ ಕಂಪನಿಯ ಮಾರಾಟದಲ್ಲಿ ಉತ್ತಮ ಲಾಭ ತಂದುಕೊಡುವ ನಿರೀಕ್ಷೆಯಿದೆ ಎಂದು ಹೋಂಡಾ ಹೇಳಿದೆ.

ಹೋಂಡಾ ಬಗ್ಗೆ: ಭಾರತದಲ್ಲಿ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾಗಿ ಗುರ್ತಿಸಿಕೊಂಡಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), ಡಿಸೆಂಬರ್ 1995 ರಲ್ಲಿ ಹೋಂಡಾದ ಪ್ರಯಾಣಿಕ ಕಾರುಗಳು ಮತ್ತು ತಂತ್ರಜ್ಞಾನಗಳನ್ನು ಭಾರತೀಯ ಗ್ರಾಹಕರಿಗಾಗಿ ಪರಿಚಯಿಸಲಾಯಿತು. HCIL ನ ಕಾರ್ಪೊರೇಟ್ ಕಚೇರಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿದೆ. ಅದರ ಅತ್ಯಾಧುನಿಕ ಉತ್ಪಾದನಾ ಸೌಲಭ್ಯವು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತಪುಕಾರದಲ್ಲಿದೆ.

More from DriveSpark

Article Published On: Tuesday, December 2, 2025, 18:16 [IST]
English summary
Honda cars india registers total sales of 7188 units in november 2025
Read more on honda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+